ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೋವಾ ಮತ್ತು ಕಾರವಾರವನ್ನು ಸಂಪರ್ಕಿಸುವ ಕಾಳಿ ನದಿ ಸೇತುವೆ ಕುಸಿದು ಬಿದ್ದಿರುವ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಎಲ್ಲ ಸೇತುವೆಗಳು, ರಸ್ತೆಗಳ ಸುರಕ್ಷತೆಯ ಕುರಿತು ಖಾತರಿಪಡಿಸುವಂತೆ ಹಾಗೂ ಯಾವುದೇ ಜೀವಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಘಟನೆಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಸೇತುವೆ ಕುಸಿದ ಸಂದರ್ಭದಲ್ಲಿ ಗಾಯಗೊಂಡ ಲಾರಿ ಚಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಕಾರ್ಯಚರಣೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್ಚುವರಿಯಾಗಿ, ಸೇತುವೆಯ ಬಲವತ್ತತೆಯ ಪರಿಶೀಲನೆಗಾಗಿ ಮತ್ತು ಪ್ರದೇಶದಲ್ಲಿನ ಎಲ್ಲಾ ಸೇತುವೆಗಳ ಸುರಕ್ಷತೆಯನ್ನು ಖಚಿತಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಅಧಿಕೃತ ಪತ್ರವನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು..
Top Stories
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!
ಕಾರವಾರ ಕೋಡಿಭಾಗದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ..!
ಕಾರವಾರದ ಕೋಡಿಭಾಗನಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರೋ ಸೇತುವೆ ಕುಸಿದು ಬಿದ್ದಿದೆ. ಪರಿಣಾಮ ಅದೇ ವೇಳೆ ಸಂಚರಿಸುತ್ತಿದ್ದ ಲಾರಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಹೀಗಾಗಿ, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಲಾರಿ ಚಾಲಕನ ರಕ್ಷಣೆ ಮಾಡಲಾಗಿದೆ. ಅಂದಹಾಗೆ, ಕಾರವಾರ ನಗರದ ಕೋಡಿಭಾಗ್ ನಲ್ಲಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಿಸಿದ್ದ ಸುಮಾರು 50 ವರ್ಷ ಹಳೆಯದಾದ ಸೇತುವೆ ಏಕಾ ಏಕಿ ಕುಸಿದು ಬಿದ್ದಿದೆ. ಸದ್ಯ ನದಿಗೆ ನಿರ್ಮಿಸಿರುವ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ- ಅಪಾರ ಹಾನಿ, ಒಟ್ಟೂ ಹಾನಿಯ ವಿವರ ಇಲ್ಲಿದೆ ನೋಡಿ..!
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಜುಲೈ ಮಾಹೆಯಲ್ಲಿ ವಾಡಿಕೆ ಮಳೆಗಿಂತ ಶೇ. 81 ರಷ್ಟು ಅತ್ಯಧಿಕ ಮಳೆಯಾಗಿದ್ದು, ಜಿಲ್ಲೆಯಲ್ಲಿ ಜೂನ್ ನಿಂದ ಇದುವರೆಗೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಜುಲೈ ಮಾಹೆಯಲ್ಲಿ ವಾಡಿಕೆ ಮಳೆಯ ಪ್ರಮಾಣ 993. 4 ಮಿಮಿ ಆಗಿದ್ದು, ಈ ಬಾರಿ 1798.2 ಮಿಮೀ ಮಳೆ ಬೀಳುವ ಮೂಲಕ ಶೇ.81 ರಷ್ಟು ಅತ್ಯಧಿಕ ಮಳೆ ದಾಖಲಾಗಿದ್ದು, ಜನವರಿ 2024 ರಿಂದ ಇಲ್ಲಿಯವರೆಗೆ 1882.3 ಮಿಮಿ ವಾಡಿಕೆ ಮಳೆ ಇದ್ದು, 2745.7 ಮಿಮೀ ಮಳೆ ಸುರಿಯುವ ಮೂಲಕ ಶೇ.46 ರಷ್ಟು ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಇದುವರೆಗೆ 13 ಜೀವ ಹಾನಿ ಪ್ರಕರಣಗಳಿಗೆ 65 ಲಕ್ಷ ರೂ ಪರಿಹಾರ ನೀಡಲಾಗಿದ್ದು, ತೀವ್ರ ಮತ್ತು ಸಂಪೂರ್ಣ ಹಾನಿಯಾದ 211 ಮನೆಗಳಲ್ಲಿ 148 ಮನೆಗಳಿಗೆ 1,52,40,000 ರೂ ಗಳ ಪರಿಹಾರ ಹಾಗೂ ಭಾಗಶಃ ಹಾನಿಯಾದ 724 ಮನೆಗಳಲ್ಲಿ 449 ಮನೆಗಳಿಗೆ 24,44,000 ರೂ ಗಳ ನೆರವು ನೀಡಲಾಗಿದ್ದು, 22...
ಉ. ಕನ್ನಡ ಜಿಲ್ಲೆಯಲ್ಲಿ ನಾಳೆ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶನಿವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಜೋಯಿಡಾ, ದಾಂಡೇಲಿ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಶನಿವಾರ ಅಗಷ್ಟ 3 ರಂದು ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದಿನ ಮಳೆಯ ಹಾನಿ..! ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 4 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಅಂಕೋಲ ದ 1, ಹೊನ್ನಾವರ ದ 9 ಮತ್ತು ಕುಮಟಾ ದ 2 ಸೇರಿದಂತೆ ಒಟ್ಟು 14 ಕಾಳಜಿ ಕೇಂದ್ರಗಳಲ್ಲಿ 503 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ನಾಳೆ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶುಕ್ರವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಜೋಯಿಡಾ ಹಾಗೂ ದಾಂಡೇಲಿ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಶುಕ್ರವಾರ ಅಗಷ್ಟ 2 ರಂದು ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದಿನ ಮಳೆಯ ಹಾನಿ..! ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 13 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಅಂಕೋಲ ದ 1, ಹೊನ್ನಾವರ ದ 9,ಜೋಯಿಡಾ ದ 1 ಮತ್ತು ಕುಮಟಾ ದ 1 ಸೇರಿದಂತೆ ಒಟ್ಟು 14 ಕಾಳಜಿ ಕೇಂದ್ರಗಳಲ್ಲಿ 550 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಇಂದು ಗುರುವಾರ ಶಾಲಾ ಕಾಲೇಜುಗಳಿಗೆ ಮಳೆಯ ರಜೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ಗುರುವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ ಹಾಗೂ ಜೋಯಿಡಾ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ಇಂದು ಗುರುವಾರ ಅಗಷ್ಟ 1 ರಂದು ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಮಳೆಯ ಅಬ್ಬರ ಹಿನ್ನೆಲೆ, ಇಂದು ಬುಧವಾರ ಶಾಲಾ ಕಾಲೇಜುಗಳಿಗೆ ರಜೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧ್ಯಂತ ಅವಾಂತರಗಳು ಸೃಷ್ಟಿಯಾಗಿವೆ. ಹೀಗಾಗಿ, ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ಬುಧವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ಇಂದು ಬುಧವಾರ ದಿನಾಂಕ: 31 ರಂದು ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಯರೇಬೈಲಿನ ಬೇಡ್ತಿ ಹಳ್ಳದಲ್ಲಿ ಹೆಚ್ಚಾದ ನೀರಿನ ಪ್ರಮಾಣ, ತಹಶೀಲ್ದಾರ್ ಹಾಗೂ ಜಿಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ..!
ನಿರಂತರ ಮಳೆ ಹಿನ್ನೆಲೆಯಲ್ಲಿ, ಮುಂಡಗೋಡ ತಾಲೂಕಿನ ಯರೆಬೈಲು ಬೇಡ್ತಿ ಹಳ್ಳದಲ್ಲಿ ನೀರಿನ ಪ್ರಮಾಣ ಕೊಂಚ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಡಗೋಡ ತಹಶಿಲ್ದಾರ ಶಂಕರ್ ಗೌಡಿ ಹಾಗೂ ಜಿಪಂ ಇಂಜಿನಿಯರ್ ಪ್ರದೀಪ್ ಭಟ್ಟ ಯರೆಬೈಲಿನ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡ್ರು. ಇನ್ನು, ಸ್ಥಳೀಯರಿಗೆ ಈ ಬಗ್ಗೆ ಸೂಚನೆ ನೀಡಿದ ತಹಶೀಲ್ದಾರರು, ನೀರಿನ ಪ್ರಮಾಣ ಹೆಚ್ಚಾದರೆ ತಾಲೂಕಾಡಳಿತಕ್ಕೆ ಮಾಹಿತಿ ನೀಡುವಂತೆ ತಿಳಿಸಿದ್ರು. ದನಕರುಗಳನ್ನು ಹಳ್ಳದ ನೀರಲ್ಲಿ ಬಿಡದಂತೆ ಹಾಗೂ ಜನರು ಹಳ್ಳದಲ್ಲಿ ಇಳಿಯದಂತೆ ಸೂಚಿಸಿದ್ರು. ಸ್ಥಳೀಯ ಪಿಡಿಓ ಸೇರಿದಂತೆ ಹಲವರಿಗೆ ಎಚ್ಚರ ವಹಿಸಲು ಖಡಕ್ ಸೂಚನೆ ನೀಡಿದ್ರು.
ಶಿರಸಿ ನಗರ ಠಾಣೆ ASI ಅಶೋಕ್ ರಾಥೋಡ್ ಗೆ ಪದೋನ್ನತಿ, PSI ಆಗಿ ಚಿಕ್ಕಮಗಳೂರಿಗೆ ವರ್ಗಾವಣೆ..!
ಶಿರಸಿ ನಗರ ಠಾಣೆಯ ASI ಆಗಿ ಕಾರ್ಯನಿರ್ವಹಿಸುತ್ತಿದ್ದ, ಅಶೋಕ ರಾಥೋಡ ಇವರು ಪದೋನ್ನತಿಯೊಂದಿಗೆ PSI ಆಗಿ ಚಿಕ್ಕಮಗಳೂರಿನ ಜೈಪುರ್ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಈ ಮೊದಲು ಅಶೋಕ್ ರಾಥೋಡ್ ಮುಂಡಗೋಡ ಪೊಲೀಸ್ ಠಾಣೆಯಲ್ಲಿಯೂ ASI ಆಗಿ ಕಾರ್ಯನಿರ್ವಹಿಸಿದ್ದರು.
ಚಿಗಳ್ಳಿಯ ಸಂಗೂರಮಠರ ಮನೆಗೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಆರೋಗ್ಯ ವಿಚಾರಣೆ..!
ಮುಂಡಗೋಡ ತಾಲೂಕಿನ ಚಿಗಳ್ಳಿಗೆ ಇಂದು ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ ನೀಡಿದ್ರು. ಹಿರಿಯ ರಾಜಕೀಯ ಧುರೀಣ ಪಿ.ಎಸ್.ಸಂಗೂರ್ ಮಠ್ ಅವರ ನಿವಾಸಕ್ಕೆ ಭೇಟಿ ನೀಡಿದ ಹೆಬ್ಬಾರ್, ಸಂಗೂರಮಠರ ಆರೋಗ್ಯ ವಿಚಾರಿಸಿದ್ರು. ಈ ವೇಳೆ ಎಚ್.ಎಂ.ನಾಯ್ಕ್, ಸಿದ್ದಪ್ಪ ಹಡಪದ, ಫಣಿರಾಜ್ ಹದಳಗಿ, ಗುಡ್ಡಪ್ಪ ಕಾತೂರು ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ರು.