ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕೊರೋನಾ ಸೋಂಕಿನ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೇ SSLC ಪರೀಕ್ಷೆ ನಡೆಯಲಿದೆ. 120 ಅಂಕಗಳಿಗೆ 3 ಗಂಟೆಯ ಪರೀಕ್ಷೆ ನಡೆಸಲಾಗುವುದು. ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಹು ಆಯ್ಕೆ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಕನ್ನಡ , ಇಂಗ್ಲೀಷ್, ಹಿಂದಿಗೆ 1 ಪರೀಕ್ಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಒಂದು ಪರೀಕ್ಷೆ ನಡೆಸಲಾಗುವುದು. ಯಾರನ್ನೂ ಫೇಲ್ ಮಾಡುವುದಿಲ್ಲ. ವ್ಯಾಕ್ಸಿನೇಟೆಡ್ ಟೀಚರ್ಸ್ ಗಳಿಗೆ ಮಾತ್ರ ಎಕ್ಸಾಂ ಡ್ಯೂಟಿ ಇರಲಿದೆ ಎಂದು ಹೇಳಿದ್ದಾರೆ. ವಲಸೆ ಹೋಗಿರುವ ವಿದ್ಯಾರ್ಥಿಗಳಿಗೆ ಇರುವಲ್ಲೇ ಪರೀಕ್ಷೆ ಬರೆಯುವ ಅವಕಾಶ ಕೊಡಲಾಗುವುದು. ಜುಲೈ ಮೂರನೇ ವಾರದಲ್ಲಿ ಪರೀಖ್ಷೆ ನಡೆಸಲಾಗುವುದು. 20 ದಿನದ ಮುಂಚೆ ಪರೀಕ್ಷಾ ದಿನಾಂಕ ತಿಳಿಸಲಾಗುವುದು ಎಂದರು. ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ...
Top Stories
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?
ಮಾ.21 ರಿಂದ SSLC ಪರೀಕ್ಷೆ, ಸುಸೂತ್ರವಾಗಿ ನಡೆಸಲು ಸನ್ನದ್ಧ- ಡಿಸಿ ಲಕ್ಷ್ಮೀ ಪ್ರಿಯ
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಸರ್ಕಾರಿ ಅಧಿಕಾರಿ ಭಾಗಿ ಕೇಸ್, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಿಇಓ..!
ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅರೇಸ್ಟ್..
ಪೊಲೀಸ್ ಠಾಣೆಯಲ್ಲಿ ಇಸ್ಪೀಟ್ ಆಟ.. ಐವರು ಪೋಲೀಸರು ಅಮಾನತು..!
ಆಹಾರ ಸಂಸ್ಕರಣಾ ಉದ್ಯಮದ ಬಗ್ಗೆ ಅರಿವು ಮೂಡಿಸಿ : ಈಶ್ವರ ಕಾಂದೂ
ಬನವಾಸಿ ಕದಂಬೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಿ : ಅಧಿಕಾರಿಗಳಿಗೆ ಸೂಚಿಸಿದ ಕೆ.ಲಕ್ಷ್ಮೀಪ್ರಿಯ
ಯಲ್ಲಾಪುರ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ಸಚಿವ ಹೆಬ್ಬಾರ್..!
ಯಲ್ಲಾಪುರ:ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಇಂದು ತಾಲೂಕಿನ ದೇಹಳ್ಳಿ, ಆನಗೋಡ ಹಾಗೂ ಕಣ್ಣಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳ, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ,ಗ್ರಾಮಗಳಲ್ಲಿ ಕೊರೊನಾ ಸೋಂಕನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮಸ್ಥರನ್ನು ಭೇಟಿಯಾಗಿ ಕೋವಿಡ್ 19 ಸೋಂಕಿನ ಕುರಿತು ಜಾಗೃತಿ ಮೂಡಿಸಿ,ಕೋವಿಡ್ ನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಜಿ ಗಾಂವ್ಕರ್, ಯುವ ನಾಯಕ ವಿವೇಕ್ ಹೆಬ್ಬಾರ್, ಪ್ರಮುಖರಾದ ವಿಜಯ ಮಿರಾಶಿ, ಗಣಪತಿ ಮುದ್ದೆಪಾಲ ಹಾಗೂ ತಹಶೀಲ್ದಾರರಾದ ಕೃಷ್ಣ ಕಾಮ್ಕರ್ ಹಾಗೂ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಎಂ ಘೋಷಿಸಿದ ವಿಶೇಷ ಪ್ಯಾಕೇಜ್ ನಲ್ಲಿ ಯಾರಿಗೇಷ್ಟು..? ಇಲ್ಲಿದೆ ಫುಲ್ ಡೀಟೇಲ್ಸ್..!
ಕರ್ನಾಟಕದಲ್ಲಿ 2ನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಮಾಡಿದ್ದು ಇದರಿಂದ ಸಂಕಷ್ಟಕ್ಕೊಳಗಾಗಿರೋ ವಿವಿಧ ವರ್ಗಗಳಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಆರ್ಥಿಕ ಹಿಂಜರಿತದ ನಡುವೆಯೂ ಕೂಡ ಸಂಕಷ್ಟಕ್ಕಿಡಾಗಿರುವ ವರ್ಗಗಳಿಗೆ ಸಿಎಂ ಯಡಿಯೂರಪ್ಪ ಇಂದು ಮತ್ತೆ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಇವತ್ತು ಘೋಷಣೆ ಮಾಡಿರೋ ಪ್ಯಾಕೇಜ್ ನಲ್ಲಿ ಯಾರ್ಯಾರ ಪಾಲು ಎಷ್ಟು..? ಇಲ್ಲಿದೆ ಫುಲ್ ಡೀಟೇಲ್ಸ್. 1. ಪವರ್ ಲೂಮ್ ನೇಕಾರರು ಪ್ರತಿ ಪವರ್ ಲೂಮ್ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ ರೂ 3,000ದಂತೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸುಮಾರು 59 ಸಾವಿರ ಪವರ್ ಲೂಮ್ಗಳಿಗೆ 35 ಕೋಟಿ ವೆಚ್ಚವಾಗಲಿದೆ. 2. ಚಲನಚಿತ್ರ ಮತ್ತುದೂರದರ್ಶನ ಮಾಧ್ಯಮದಲ್ಲಿನ ಅಸಂಘಟಿತ ಕಾರ್ಮಿಕರು ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು ರೂ 6.6 ಕೋಟಿ ವೆಚ್ಚವಾಗಲಿದೆ....
ನಕ್ಕು ನಗಿಸಿದ್ದ ಹಿರಿಯ ಪೋಷಕ ನಟಿ ಬಿ.ಜಯಾ ವಿಧಿವಶ..! ಕಂಬನಿ ಮಿಡಿದ ಚಿತ್ರರಂಗ..!!
ಬೆಂಗಳೂರು: ಕನ್ನಡ ಚಿತ್ರರಂಗ ಹಿರಿಯ ಪೋಷಕ ನಟಿ ಬಿ.ಜಯಾ ಇಂದು ಕೊನೆಯುಸಿರು ಎಳೆದಿದ್ದಾರೆ. ಅನೇಕ ಹಿರಿಯ ನಟರೊಂದಿಗೆ ನಟಿಸಿದ್ದ ನಟಿಯ ನಿಧನಕ್ಕೆ ಚಿತ್ರರಂಗವೇ ಕಣ್ಣೀರು ಸುರಿಸಿದೆ. ಎತ್ತರದಲ್ಲಿ ಕೊಂಚ ಕುಳ್ಳಗಿದ್ದ ಜಯಾ ಅವರು ಕುಳ್ಳಿ ಜಯಾ ಎಂದೇ ಜನಪ್ರಿಯರಾಗಿದ್ದರು. ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸು ಗೆದ್ದಿದ್ದರು. ಹಾಸ್ಯಮಯ ಪಾತ್ರಗಳಲ್ಲೂ ಕಾಣಿಸಿಕೊಂಡು ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದ್ದರು. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಜಯಾ ಇತ್ತೀಚಿನ ದಿನಗಳಲ್ಲಿ ಕೆಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. 1944ರಲ್ಲಿ ಜನಿಸಿದ್ದ ಜಯಾ 1958ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಣ್ಣಾವ್ರ ಅತೀ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. 6 ದಶಕಗಳ ಕಾಲ ಸಿನಿರಂಗದಲ್ಲಿ ನಿರಂತರವಾಗಿಿ ಸೇವೆ ಸಲ್ಲಿಸಿದ ಹಿರಿಮೆ ಅವರಿಗಿದೆ. ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಹಲವಾರು ದಿಗ್ಗಜ ನಟರ ಜತೆ ಅಭಿನಯಸಿದ್ದ ಹಿರಿಯ ನಟಿಯನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ.
ಬೀಜ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ-ಕೃಷಿ ಸಚಿವ ಬಿ.ಸಿ.ಪಾಟೀಲ್
ಹಾವೇರಿ: : ಕಳಪೆ ಬಿತ್ತನೆ ಬೀಜ ದಾಸ್ತಾನು, ಮಾರಾಟ ಹಾಗೂ ಅನಧಿಕೃತವಾಗಿ ಬಿತ್ತನೆ ಬೀಜ ಗೊಬ್ಬರ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಕುರಿತಂತೆ ರಾಜ್ಯಾದ್ಯಂತ ವಿಶೇಷ ಅಭಿಯಾನ ಕೈಗೊಂಡು ಅಕ್ರಮಕ್ಕೆ ಕಡಿವಾಣ ಹಾಕಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು. ಹಾವೇರಿ ಪ್ರವಾಸಿ ಮಂದಿರದಲ್ಲಿ ಮುಂಗಾರು ಬಿತ್ತನೆ ಬೀಜ ಹಾಗೂ ಗೊಬ್ಬರದ ದಾಸ್ತಾನು ವ್ಯವಸ್ಥೆ ಕುರಿತಂತೆ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಕಳಪೆ ಬೀಜ ಕುರಿತಂತೆ ರಾಜ್ಯ ಸರ್ಕಾರ ದಿಟ್ಟ ಕ್ರಮಕೈಗೊಳ್ಳಲಾಗಿದೆ. ಹಾವೇರಿ, ರಾಣೇಬೆನ್ನೂರ, ಕೊಪ್ಪಳ, ಬೀದರಗಳಲ್ಲಿ ಬಿಡಿ ಬಿತ್ತನೆ ಬೀಜ ಮಾರಾಟ, ಅನಧಿಕೃತ ಬಿತ್ತನೆ ಬೀಜಗಳ ದಾಸ್ತಾನು, ನಕಲಿ ಬಿತ್ತನೆ ಬೀಜ ಹಾಗೂ ನಕಲಿ ಗೊಬ್ಬರಗಳ ಪತ್ತೆಮಾಡಿ ಕಠಿಣ ಕ್ರಮಕೈಗೊಳ್ಳಲಾಗಿದೆ. ಈ ವರ್ಷವೂ ಈ ಅಭಿಯಾನ ಮುಂದುವರೆದಿದೆ ಎಂದು ಹೇಳಿದರು. ಬಿಡಿ ಬಿತ್ತನೆ ಬೀಜಗಳ ಮಾರಾಟ, ಅಕ್ರಮ ದಾಸ್ತಾನುಗಳ ಕುರಿತಂತೆ ಮಾಹಿತಿಗಳು ಬರುತ್ತಿವೆ. ದೂರುಗಳನ್ನು ಆಧರಿಸಿ...
ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ: ಜೊತೆಗೆ 500 ಕೋಟಿ ಪ್ಯಾಕೇಜ್ ಘೋಷಣೆ..!!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಮಾರ್ಗಸೂಚಿ ಒಂದು ವಾರಗಳ ಕಾಲ ಮುಂದುವರಿಯಲಿದೆ. ಹೋಟೆಲ್ ಗಳಲ್ಲಿ ಸಂಜೆಯ ವರೆಗೂ ಪಾರ್ಸೆಲ್ ಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಲಾಕ್ ಡೌನ್ ಘೋಷಣೆಯ ಜೊತೆಗೆ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಲಾಕ್ ಡೌನ್: ಅಮ್ಮಾಜಿ ಕೆರೆ ಹತ್ತಿರ ಪೊಲೀಸರ ಕಣ್ಗಾವಲು..!
ಮುಂಡಗೋಡ: ಪಟ್ಟಣದ ಅಮ್ಮಾಜಿ ಕೆರೆ ಹತ್ತಿರ, ಇಂದು ಕಠಿಣ ಲಾಕ್ ಡೌನ್ ಹಿನ್ನೆಲೆಯಲ್ಲಿ 12 ಗಂಟೆ ನಂತರ ಪಟ್ಟಣದ ಒಳಗೆ ಅನಗತ್ಯವಾಗಿ ಪ್ರವೇಶಿಸುವ ವಾಹನ ಸವಾರರಿಗೆ ಪೊಲೀಸ್ರು ಬಿಸಿ ಮುಟ್ಟಿಸುತ್ತಿದ್ದಾರೆ. ಅನಗತ್ಯವಾಗಿ ಸಂಚರಿಸುವ ವಾಹನ ಸವಾರರನ್ನು ತಡೆದು ಕೋವಿಡ್ನಿ ನಿಯಮಗಳನ್ನು ತಿಳಿ ಹೇಳಿದರು. ಹಾಗೆ ಸಂಚಾರ ನಿಯಮ ಪಾಲಿಸಲು ಸಾರ್ವಜನಿಕರಿಗೆ ಪೊಲೀಸ್ ಪೇದೆಗಳು ಎಚ್ಚರಿಸಿದರು.
12 ಗಂಟೆ ನಂತರವೂ ತೆರೆದಿದ್ದ ದಿನಸಿ ಅಂಗಡಿಗಳು: ಪೊಲೀಸರಿಂದ ಕ್ರಮ..!
ಮುಂಡಗೋಡ: ಪಟ್ಟಣದಲ್ಲಿ ಇಂದು ಲಾಕ್ ಡೌನ್ ಸಡಿಲಿಕೆಯ ವಾರದ ಕೊನೆಯ ದಿನ ಅಗತ್ಯ ವಸ್ತುಗಳ ಖರೀಧಿಯಲ್ಲಿ ತೊಡಗಿದ್ದ ಜನ್ರು 12 ಗಂಟೆಯ ನಂತರವೂ ಅನಗತ್ಯ ತಿರುಗಾಡುತ್ತಿದ್ದ ದೃಷ್ಯ ಕಂಡು ಬಂತು. ದಿನಸಿ ಅಂಗಡಿಗಳು ಕೂಡ 12 ಗಂಟೆ ನಂತರವೂ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದರು. ಹೀಗಾಗಿ, ಮುಂಡಗೋಡ ಪ್ರೊಬೇಷನರಿ ಪಿಎಸ್ ಐ ಕುಮಾರಿ ಕಸ್ತೂರಿ, ಅಂಗಡಿಕಾರರಿಗೆ ಎಚ್ಚರಿಸಿ ಅಂಗಡಿ ಮುಂಗಟ್ಟು ಮುಚ್ಚಿಸಿದರು. ಗುಂಪು ಗುಂಪಾಗಿ ನಿಂತಿದ್ದ ಜನರನ್ನು ಎಚ್ಚರಿಸಿ ಕಳಿಸಿದ್ರು.
ಟಾಟಾ ಏಸ್ ಗಳ ಚಾಲಕರನ್ನ ಬೆದರಿಸಿ ಹಣ ದರೋಡೆ: ಆರೋಪಿಗಳ ಬಂಧನ..!
ಹುಬ್ಬಳ್ಳಿ: ನಗರದ ಗದಗ ರಿಂಗ್ ರೋಡಲ್ಲಿ ಎರಡು ಟಾಟಾ ಏಸ್ ಗಳ ಚಾಲಕರನ್ನ ಬೆದರಿಸಿ, ದರೋಡೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನ ಹುಬ್ಬಳ್ಳಿ ಸೆಟ್ಲಮೆಂಟ್ ಗಂಗಾಧರನಗರದ ವಿಶಾಲ ಕಾಶಿನಾಥ ಬಿಜವಾಡ ಹಾಗೂ ಕರ್ಣ ಮುಂಡಗೋಡ ಎಂದು ಗುರುತಿಸಲಾಗಿದ್ದು, ಪಲ್ಸರ್ ಬೈಕಿನಲ್ಲಿ ಹೋಗಿ ವಾಹನ ಚಾಲಕರನ್ನು ಬೆದರಿಕೆ ಹಾಕಿ ಹಣ ದೋಚುತ್ತಿದ್ದರು ಎನ್ನಲಾಗಿದೆ. ರಿಂಗ್ ರೋಡಲ್ಲಿ ಹೋಗುತ್ತಿದ್ದ ಕೃಷ್ಣಾ ಹಾಗೂ ಫಾರೂಕ ಎಂಬುವವರ ಟಾಟಾ ಏಸ್ ವಾಹನಗಳನ್ನ ನಿಲ್ಲಿಸಿ, 38 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದರು. ಇನ್ನು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು, ಐಟಿಸಿ ಗೋಡೌನ ಬಳಿಯಿರುವ ಸಿಸಿಟಿವಿ ಕ್ಯಾಮರಾಗಳ ಸಾಕ್ಷಿ ಹಿಡಿದು ಹಳಿಯಾಳ ರಸ್ತೆಯಲ್ಲಿ ಸಂಜೆ ಪಾರ್ಟಿ ಮಾಡುತ್ತ ಕುಳಿತ ಸಮಯದಲ್ಲಿ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರವಾರ ಡಿಸಿ ಕಛೇರಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಸಚಿವ ಹೆಬ್ಬಾರ್ ಸಭೆ..!
ಕಾರವಾರ: ಕಾರ್ಮಿಕ ಖಾತೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಶಿವರಾಮ ಹೆಬ್ಬಾರ್ ಇಂದು ಕಾರವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಕೋವಿಡ್ – 19 ನಿರ್ವಹಣೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯ ಸದ್ಯದ ಸ್ಥಿತಿಗಳ ಕುರಿತು ಮಾಹಿತಿ ಪಡೆದು, ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು,ಸೊಂಕಿತರಿಗೆ ಚಿಕಿತ್ಸೆ, ವೈದ್ಯಕೀಯ ಸೌಕರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ, ಎಂ.ಪಿ. ಮುಲೈ ಮುಹಿಲನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.