Stock Market News: ಭಾರತೀಯ ಷೇರು ಮಾರುಕಟ್ಟೆಯು ಗುರುವಾರ ಅಂದ್ರೆ ಮೇ 22ರಂದು ಭಾರೀ ನಷ್ಟದೊಂದಿಗೆ ಶುರುವಾಗಿದೆ. ಜಾಗತಿಕ ದುರ್ಬಲ ಸೂಚನೆಗಳಿಂದಾಗಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಆರಂಭಿಕ ವಹಿವಾಟಿನಲ್ಲಿ ರೆಡ್ ಮಾರ್ಕ್‌ನಲ್ಲಿ ಶುರುವಾಗಿದೆ. ಸೆನ್ಸೆಕ್ಸ್ 850 ಪಾಯಿಂಟ್ಸ್ ನಷ್ಟಗೊಂಡಿದ್ದು, ನಿಫ್ಟಿ ಸೂಚ್ಯಂಕವು 24600ರ ಗಡಿಯಿಂದ ಕೆಳಕ್ಕೆ ಜಾರಿದೆ. ಇಂಡಸ್‌ಇಂಡ್ ಬ್ಯಾಂಕ್ ದಿನದ ಇಂಟ್ರಾಡೇ ವಹಿವಾಟಿನಲ್ಲಿ ನಷ್ಟದಿಂದ ರಿಬೌಂಡ್ ಆಗಿದೆ.
ಜಾಗತಿಕ ದುರ್ಬಲ ಸೂಚನೆಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆಯು ನಷ್ಟಕ್ಕೆ ಸಾಕ್ಷಿಯಾಗಿದ್ದು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೆನ್ಸೆಕ್ಗ್ 850 ಪಾಯಿಂಟ್ಸ್ ನಷ್ಟಗೊಂಡಿದ್ದು, ನಿಫ್ಟಿ ಸೂಚ್ಯಂಕವು 24600ರ ಗಡಿಯಿಂದ ಕೆಳಕ್ಕೆ ಕುಸಿದಿದೆ.
ಉತ್ತರ ಕನ್ನಡ ಸೇರಿ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ 5 ದಿನ ಭಾರೀ ಮಳೆ ಎಚ್ಚರಿಕೆ..!
ಮೇ 22ರಂದು ಗುರುವಾರ ಬಿಎಸ್‌ಇ ಸೆನ್ಸೆಕ್ಸ್ 850 ಪಾಯಿಂಟ್‌ಗಳಷ್ಟು ಕುಸಿದಿದೆ, ಅದು 80,750 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ 24,550 ಮಟ್ಟದಲ್ಲಿ 250 ಪಾಯಿಂಟ್‌ಗಳ ಕುಸಿತ ಕಂಡಿದೆ.
ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 27 ಕುಸಿದಿವೆ. ಪವರ್ ಗ್ರಿಡ್, ಟೆಕ್ ಮಹೀಂದ್ರಾ ಮತ್ತು ಎಚ್‌ಸಿಎಲ್ ಟೆಕ್ ಸೇರಿದಂತೆ ಒಟ್ಟು 17 ಷೇರುಗಳು ಸುಮಾರು 2.5% ರಷ್ಟು ಕುಸಿದಿವೆ. ಅದಾನಿ ಪೋರ್ಟ್ಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಸೇರಿದಂತೆ ಒಟ್ಟು 17 ಷೇರುಗಳು ಸ್ವಲ್ಪ ಏರಿಕೆಯಾಗಿವೆ.
Police News:ರಾಜ್ಯದ ಪ್ರಭಾರ ಡಿಜಿ-ಐಜಿಪಿಯಾಗಿ ಡಾ.ಎಂ.ಎ. ಸಲೀಂ ನೇಮಕ..!
ನಿಫ್ಟಿಯ 50 ಷೇರುಗಳಲ್ಲಿ 45 ಕುಸಿತ ಮತ್ತು 5 ಏರಿಕೆಯಾಗಿವೆ. ಎನ್‌ಎಸ್‌ಇಯ ಆಟೋ ಸೂಚ್ಯಂಕ 1.12%, ಐಟಿ 1.52%, ಎಫ್‌ಎಂಸಿಜಿ 1.46% ಮತ್ತು ಬ್ಯಾಂಕಿಂಗ್ ಷೇರುಗಳು 1% ರಷ್ಟು ಕುಸಿದಿವೆ.