ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ  ವಾಹನ ನಿಲ್ಲಿಸುವಂತಿಲ್ಲ, ನದಿಗೆ ಇಳಿಯುವಂತಿಲ್ಲ ಪ್ರತಿಬಂಧಕಾಜ್ಞೆ ಹೊರಡಿಸಿದ ಡಿಸಿ..!

DC Order News: ಕಾರವಾರ: 2024 ನೇ ಸಾಲಿನಲ್ಲಿ ದಿನಾಂಕ 19-07-2024 ರಂದು ಅಂಕೋಲಾ ತಾಲೂಕಿನ ಬಳಲೆ ಹೋಬಳಿ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ಶಿರೂರು ಗ್ರಾಮ ವ್ಯಾಪ್ತಿಯ 147+300 ರಿಂದ ಕೋಡ್ಸಣಿ ಗ್ರಾಮದ ವ್ಯಾಪ್ತಿಯ 148+800 ಚೈನೆಜ್ ನಡುವೆ ಭಾರಿ ಗುಡ್ಡ ಕುಸಿತ ಉಂಟಾಗಿ 10 ಜನ ಮೃತಪಟ್ಟಿದ್ದು ಇಬ್ಬರು ಕಾಣೆಯಾಗಿದ್ದು, ಈ ಸ್ಥಳವು ಭೂಕುಸಿತ ಸೂಕ್ಷ್ಮ ಪ್ರದೇಶವಾಗಿರುತ್ತದೆ.

ಪ್ರಸ್ತುತ ವರ್ಷದ ಮಳೆಗಾಲವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ ಅಂಕೋಲಾ ರವರು ಸ್ಥಳ ಪರಿಶೀಲನೆ ಕೈಗೊಂಡ ಅವಧಿಯಲ್ಲಿ ಗುಡ್ಡದ ಕೆಲವು ಭಾಗಗಳಲ್ಲಿ ಮಣ್ಣು ಸಡಿಲುಗೊಂಡು ನೆಲಕ್ಕೆ ಉರುಳುತ್ತಿರುವುದು ಕಂಡುಬಂದಿದ್ದು, ಈ ವರ್ಷವು ಸಹ ಈ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಪ್ರಸ್ತುತ ಈ ಸ್ಥಳದಲ್ಲಿ ಹಲವಾರು ಟ್ರಕ್‌ಗಳು ಹಾಗೂ ಕೆಲ ಪ್ರವಾಸಿಗರು ಈ ಪ್ರದೇಶದಲ್ಲಿ ನಿಂತು ಫೋಟೋಗಳನ್ನು ತೆಗೆಯುವುದು ನದಿಯ ನೀರಿನಲ್ಲಿ ಸ್ನಾನ ಮಾಡುವುದು ಅಥವಾ ವಾಹನ ನಿಲ್ಲಿಸಿ ಅದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮುಂಗಾರು ಪೂರ್ವ ಮಳೆ ಪ್ರಾರಂಭಗೊಂಡಿರುವುದರಿಂದ ಹಾಗೂ ಹವಾಮಾನ ರೆಡ್ ಆಲರ್ಟ ಘೋಷಣೆ ಮಾಡಿರುವುದರಿಂದ ಮತ್ತು ಮುಂಗಾರು ಸಹ ಶೀಘ್ರದಲ್ಲಿ ಆರಂಭಗೊಳ್ಳುವುದರಿoದ ಅಂಕೋಲಾ ತಾಲೂಕಿನ ಬಳಲೆ ಹೋಬಳಿಯ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ಚೈನೇಜ್ 147+300 ರಿಂದ 148+800 ವರೆಗಿನ ರಾಷ್ಟ್ರೀಯ ಹೆದ್ದಾರಿ ಪ್ರದೇಶ ಹಾಗೂ ಅದರ ಮುಂಭಾಗದಲ್ಲಿ ಇರುವ ಗಂಗಾವಳಿ ನದಿಯ ವ್ಯಾಪ್ತಿಯನ್ನು ಆಪಾಯಕಾರಿ ವಲಯವೆಂದು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ಘೋಷಿಸಿ , ಈ ಭಾಗದ ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ಅಥವಾ ಸಾರ್ವಜನಿಕರು ನದಿಗೆ ಇಳಿಯುವುದು , ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವುದು, ಸ್ಥಳದಲ್ಲಿ ನಿಂತು ಭಾವಚಿತ್ರಗಳನ್ನು ತೆಗೆಯವುದು ಹಾಗೂ ಇತರೇ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಿ , ಪ್ರತಿಬಂಧಕಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಆದೇಶಿಸಿದ್ದಾರೆ.

error: Content is protected !!