ನಂದಿಕಟ್ಟಾದಲ್ಲಿ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ..!

ನಂದಿಕಟ್ಟಾದಲ್ಲಿ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ನಂದಿಕಟ್ಟಾ ಗ್ರಾಮದ ಮಂಜುನಾಥ್ ಎಂಬ ಯುವಕ ಕೆಲವರ್ಷಗಳಿಂದ ಎಗ್ ರೈಸ್ ಶಾಪ್ ನಡೆಸುತ್ತಿದ್ದ ನಿನ್ನೆ ಮಧ್ಯರಾತ್ರಿ ಕಳ್ಳರು ಕಳ್ಳತನ ಮಾಡಲು ಅಂಗಡಿಯ ಹಿಂದಿನ ಗೋಡೆಯನ್ನು ಒಡೆಯಲು ಯತ್ನಿಸಿದ್ದಾರೆ. ಆದ್ರೆ, ಅಂಗಡಿಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಟ್ರ್ಯಾಕ್ಟರ್ ಟೇಪ್ ರಿಕಾರ್ಡರ್ ತೆಗೆದಿರೋ ಕಳ್ಳರು ಅದನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಅಂಗಡಿ ಹಿಂದುಗಡೆ ಗೋಡೆಗೆ ಕನ್ನ ಹಾಕಿರೋ ಕಳ್ಳರು ರಂದ್ರ ಕೊರೆಯಲು ಟ್ರ್ಯಾಕ್ಟರಿನ ಕಬ್ಬಿಣದ ರಾಡ್ ಉಪಯೋಗಿಸಿದ್ದಾರೆ ಅನ್ನೋದು ಮೇಲ್ನೊಟಕ್ಕೆ ಕಾಣುತ್ತಿದೆ.

ಮುಂಡಗೋಡಿನ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಗೆಲುವಿನ ಸಂಭ್ರಮ..!

ಮುಂಡಗೋಡಿನ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಗೆಲುವಿನ ಸಂಭ್ರಮ..!

ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿಗರು ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು‌. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು. ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಶಿವರಾಮ್ ಹೆಬ್ಬಾರ್ ಪರವಾಗಿಯೂ ಘೋಷಣೆ ಕೂಗಿ ಸಂಭ್ರಮಿಸಿದ್ರು‌. ಈ ವೇಳೆ ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ರು.

ಮುಂಡಗೋಡಿನಲ್ಲಿ ಮತ್ತೆ ಮಟ್ಕಾ ಶುರು..? ಬರಗೆಟ್ಟವನ ಮಂತ್ಲಿ ಆಸೆಗೆ ದಕ್ಕಿದ್ದು ಎಷ್ಟು ಲಕ್ಷ..?

ಮುಂಡಗೋಡಿನಲ್ಲಿ ಮತ್ತೆ ಮಟ್ಕಾ ಶುರು..? ಬರಗೆಟ್ಟವನ ಮಂತ್ಲಿ ಆಸೆಗೆ ದಕ್ಕಿದ್ದು ಎಷ್ಟು ಲಕ್ಷ..?

ಮುಂಡಗೋಡ ತಾಲೂಕಿನ ಮಟ್ಕಾ ಪ್ರಿಯರಿಗೆ ಸಂತಸದ ಸುದ್ದಿಯಿದು. ಇನ್ನೇನು ಇವತ್ತಿನಿಂದ ಅಂದ್ರೆ ಸೋಮವಾರದಿಂದ ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಭರ್ಜರಿ ಶುಭಾರಂಭ ಮಾಡ್ತಿದೆಯಂತೆ. ಅಷ್ಟಕ್ಕೂ ಮಟ್ಕಾ ದಂಧೆಯ ಮಂತ್ಲಿ ಹಣದ ಕೈ ಬಿಸಿ ಇಲ್ಲದೇ ಈ ಛಳಿಗಾಲ ಸಾಗೋಕೆ ಸಾಧ್ಯವೇ ಇಲ್ಲ ಅಂತಾ ಅವನೊಬ್ಬ ಚಕ್ಕಂಬಕ್ಕಳ ಹಾಕ್ಕೊಂಡು ಡೀಲಿಗೆ ಕುಳಿತಿದ್ದನಂತೆ. ಅವನ ಪರಿಶ್ರಮದ ಫಲವಾಗೇ ಈಗ ಮತ್ತೆ ಮಟ್ಕಾ ಅನ್ನೋದು ಮನೆ ಮಾತಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ‌ಯಂತೆ. ಹೀಗೆ ಇತ್ಯಾದಿ ಇತ್ಯಾದಿಯಾಗಿ ಇಡೀ ಮುಂಡಗೋಡ ತಾಲೂಕಿನಲ್ಲಿ ಗುಲ್ಲೆದ್ದಿದೆ. ಗುಲ್ಲು ಅನ್ನೋದಕ್ಕಿಂತ ಅಲ್ಲೇ ಕೆಲಸ ಮಾಡೋ ಕೆಲವೊಂದಿಷ್ಟು ಪ್ರಾಮಾಣಿಕ ಬಡಪಾಯಿಗಳು ಎಲ್ಲೆಂದರಲ್ಲಿ ಹೇಳಿಕೊಂಡು ತಿರುಗಾಡ್ತಿದಾರೆ. ಇದ್ರೊಂದಿಗೆ ನಮ್ಮ ಜಿಲ್ಲೆಯ ನೂತನ, ದಕ್ಷ ಎಸ್ಪಿ ಡಾ. ಸುಮನಾ ಫನ್ನೇಕರ್ ಮೇಡಮ್ಮಿನ ಖಡಕ್ ಆದೇಶವೊಂದನ್ನ ಮುಂಡಗೋಡಿನಲ್ಲಿ ಗಪ್ ಚುಪ್ ಆಗಿ ಸಮಾಧಿ ಮಾಡಲಾಯ್ತಾ..? ಅನ್ನೋ ಪ್ರಶ್ನೆ ಎದ್ದಿದೆ. ಅವನೊಬ್ಬ..! ಅಸಲು, ಆತ ಈಗ ಇಡೀ ಠಾಣೆಯಲ್ಲೇ ಕಿಂಗ್ ಆಗಲು ಹೊರಟಿದ್ದಾನಂತೆ, ಅವನ ಇಶಾರೆಯಿಲ್ಲದೇ ಅಲ್ಲಿ ಏನಂದ್ರೆ ಏನೂ...

ಮತ್ತೊಂದು ಭೀಕರ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು, 10 ಕ್ಕೂ ಹೆಚ್ಚು ಜನರಿಗೆ ಗಾಯ..!

ಮತ್ತೊಂದು ಭೀಕರ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು, 10 ಕ್ಕೂ ಹೆಚ್ಚು ಜನರಿಗೆ ಗಾಯ..!

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಭೀಕರ ಸರಣಿ ಅಪಘಾತಕ್ಕೆ ಸ್ಥಳದಲ್ಲೇ ನಾಲ್ವರ ದುರ್ಮರಣವಾಗಿದೆ. 10 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಹಿರಿಯೂರು ಬಳಿಯ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ಘಟನೆ ನಡೆದಿದ್ದು. ಈರುಳ್ಳಿ ತುಂಬಿದ ಲಾರಿ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿಯಾಗಿದೆ. ಬಳಿಕ ಚಲಿಸುತ್ತಿದ್ದ ಕಾರಿಗೆ ನಿಯಂತ್ರಣ ತಪ್ಪಿ ಲಾರಿ ಡಿಕ್ಕಿಯಾಗಿದೆ. ಇನ್ನು, ಅಪಘಾತದ ರಭಸಕ್ಕೆ 2 ಲಾರಿಗಳು ಪಲ್ಟಿ ಹೊಡೆದಿವೆ. ಅಪಘಾತದಲ್ಲಿ ಲಕ್ಷಾಂತರ ಮೌಲ್ಯದ ಈರುಳ್ಳಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಮೃತ ನಾಲ್ವರ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರಿಂದ ಕ್ರೇನ್ ಮೂಲಕ ಲಾರಿಗಳ ತೆರವು ಕಾರ್ಯ ನಡೆದಿದೆ. ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿದ್ದಾರೆ.

ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕೋತಿಗಳ ಸಾಮ್ರಾಜ್ಯ..!

ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕೋತಿಗಳ ಸಾಮ್ರಾಜ್ಯ..!

ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನಿತ್ಯವೂ ಮಂಗಗಳ ತುಂಟಾಟ ಮಿತಿ ಮೀರಿದೆ.. ಯಾರ ಭಯವೂ ಇಲ್ಲದೇ ಮಂಗಗಳು ಇಲ್ಲಿ ಮಾಡೋ ಕೀಟಲೆಗಳು ಕೆಲವೊಮ್ಮೆ ಸಾರ್ವಜನಿಕರಿಗೆ ಫಜೀತಿ ತಂದಿಡುತ್ತಿವೆ. ಶಿವಾಜಿ ಸರ್ಕಲ್ ಬಳಿಯ ಬಿಲ್ಡಿಂಗ್ ಗಳ‌ ಮೇಲೆ ವಾನರ ಸೇನೆ ಜಿಗಿದಾಡುತ್ತಿವೆ. ವಿದ್ಯುತ್ ಲೈನ್ ಗಳು ಮಂಗಗಳ ಜಿಗಿದಾಟಕ್ಕೆ ಹರಿದು ಹೋಗುತ್ತಿವೆ‌. ಇನ್ನು ಸರ್ಕಲ್ ನಲ್ಲಿ ಕಟ್ಟಿರೋ ವಿವಿಧ ಬ್ಯಾನರ್ ಗಳನ್ನು ಹರಿದು ಹಾಕುತ್ತಿವೆ. ಹೀಗಾಗಿ, ಸಾರ್ವಜನಿಕರಿಗೆ ಮಂಗಗಳ ಕೀಟಲೆಗಳದ್ದೇ ಸಮಸ್ಯೆಯಾಗಿದೆ‌.

ನಂದಿಕಟ್ಟಾದಲ್ಲಿ ಮೆಕ್ಕೆಜೋಳ ಬೆಳೆದ ಅನ್ನದಾತರಿಗೆ ಸನ್ಮಾನ ಕಾರ್ಯ..

ನಂದಿಕಟ್ಟಾದಲ್ಲಿ ಮೆಕ್ಕೆಜೋಳ ಬೆಳೆದ ಅನ್ನದಾತರಿಗೆ ಸನ್ಮಾನ ಕಾರ್ಯ..

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಖಾಸಗಿ ಮೆಕ್ಕೆಜೋಳ ಬೀಜ ಬಿತ್ತಿ ಉತ್ತಮ‌ ಫಸಲು ಪಡೆದ ರೈತರಿಗೆ ಕಂಪನಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ತಮವಾಗಿ ಫಸಲು ಬೆಳೆದ ನಂದಿಕಟ್ಟಾದ ರೈತ ಶಿವಾಜಿ ರಾಧಾಪುರ ಹಾಗೂ ಹುಲಿಹೊಂಡ ಗ್ರಾಮದ ರೈತ ಸಿದ್ದಣ್ಣ ವಾಲೀಕಾರ್ ಗೆ ಸನ್ಮಾನಿಸಲಾಯಿತು. ಈ ವೇಳೆ ನಂದಿಕಟ್ಟಾ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು, ಮುಖಂಡರು ಭಾಗಿಯಾಗಿದ್ರು.

ಪೆಟ್ರೊಲ್ ಹಾಕಿಸಿಕೊಳ್ಳುವಾಗ ಬೈಕ್ ಗೆ ತಗುಲಿದ ಬೆಂಕಿ, ಬಂಕ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬಚಾವ್..!

ಪೆಟ್ರೊಲ್ ಹಾಕಿಸಿಕೊಳ್ಳುವಾಗ ಬೈಕ್ ಗೆ ತಗುಲಿದ ಬೆಂಕಿ, ಬಂಕ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬಚಾವ್..!

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ ಅವಘಡವಾಗಿದೆ. ಪೆಟ್ರೋಲ್ ಹಾಕಿಸಿಕೊಳ್ಳುವಾಗಲೇ ಬೈಕ್ ಗೆ ತಗುಲಿದ ಬೆಂಕಿಯಿಂದ, ಪೆಟ್ರೊಲ್ ಬಂಕ್ ನಲ್ಲಿ ಬೆಂಕಿ ಆವರಿಸಿಕೊಂಡಿದೆ. ಬೈಕ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಬಂಕ್ ನ ಸಿಬ್ಬಂದಿಗಳು ಸಮಯಪ್ರಜ್ಞೆಯಿಂದ ಬೆಂಕಿ ನಂದಿಸಿದ್ದಾರೆ. ಇದ್ರಿಂದ ಭಾರೀ ಬೆಂಕಿ ದುರಂತ ಅದೃಷ್ಟವಶಾತ್ ತಪ್ಪಿದೆ. ಘಟನೆಯ ಸಂಪೂರತಣ ದೃಷ್ಯ ಸಿಸಿಟಿಯಲ್ಲಿ ಸೆರೆಯಾಗಿದೆ‌‌.

ಗಬ್ಬೇದ್ದು ಹೋಗಿದೆ ಹುನಗುಂದ ಬಸವಣ್ಣ ಹೊಂಡ, ಪಿಡಿಓ ಸಾಹೇಬ್ರೇ ಒಂದಿಷ್ಟು ಗಮನಿಸಿ..!

ಗಬ್ಬೇದ್ದು ಹೋಗಿದೆ ಹುನಗುಂದ ಬಸವಣ್ಣ ಹೊಂಡ, ಪಿಡಿಓ ಸಾಹೇಬ್ರೇ ಒಂದಿಷ್ಟು ಗಮನಿಸಿ..!

ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರೇ ಒಮ್ಮೆಯಾದ್ರೂ ನೀವು ಗ್ರಾಮದಲ್ಲಿರೋ ಬಸವಣ್ಣ ದೇವರ ಹೊಂಡ ಕಣ್ತುಂಬ ನೋಡಿದ್ದೀರಾ..? ಅಧ್ಯಕ್ಷರೇ, ನೀವಾದ್ರೂ ಈ ಹೊಂಡದ ಅವ್ಯವಸ್ಥೆ, ಗಬ್ಬೇದ್ದು ಹೋಗಿರೋ ಪರಿಯನ್ನ ಕಂಡಿದ್ದೀರಾ.. ದಯವಿಟ್ಟು ಒಮ್ಮೆ ಬಂದು ದರ್ಶನ ಮಾಡ್ಕೊಳ್ಳಿ, ಹಾಗಂತ, ಬಸವಣ್ಣ ಹೊಂಡದ ಅಕ್ಕಪಕ್ಕದ ಜನ ಹಿಡಿಶಾಪ ಹಾಕ್ತಿದಾರೆ. ಆದ್ರೆ, ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರು ಮಾತ್ರ ಗಪ್ ಚುಪ್ ಆಗಿದ್ದಾರೆ. ಈಗ ಈ ದೃಷ್ಯದಲ್ಲಿ ನೀವು ನೋಡಿರೋ ಈ ಹೊಂಡ ಒಂದು ಕಾಲದಲ್ಲಿ ಇಡೀ ಊರಿನ ಜನರ ಆರಾಧ್ಯತೆಗೆ ಸಾಕ್ಷಿಯಾಗಿತ್ತು. ಈ ಹೊಂಡದ ನೀರು ಗೃಹಬಳಕೆಗೆ, ಜಾನುವಾರುಗಳಿಗೆ ಜೀವಜಲವಾಗಿತ್ತು. ಆದ್ರೆ, ಹುನಗುಂದ ಗ್ರಾಮ ಪಂಚಾಯತಿಯ ಬೇಜವಾಬ್ದಾರಿಗೆ ಈ ಹೊಂಡ ಈಗ ಈ ಸ್ಥಿತಿಗೆ ಬಂದು ತಲುಪಿದೆ. ಹೊಂಡದಲ್ಲಿ ಬರಪೂರ ನೀರಿದೆ. ಆದ್ರೂ ಕೂಡ ನೀರಿನ ದರ್ಶನವೇ ಅಗಲ್ಲ. ಯಾಕಂದ್ರೆ, ಇಡೀ ಹೊಂಡದಲ್ಲಿ ಗಿಡಗಂಟಿಗಳು, ಕಸದ ರಾಶಿ ಆವರಿಸಿಕೊಂಡಿದೆ. ಹೀಗಾಗಿ, ಪವಿತ್ರವಾಗಿದ್ದ ಹೊಂಡವೀಗ ಕೊಳಚೆ ಗುಂಡಿಯಂತಾಗಿದೆ. ರಾತ್ರಿಯಾದ್ರೆ ಭಯ..! ಇನ್ನು, ಈ...

ಮುಂಡಗೋಡ ತಾಲೂಕಿನಲ್ಲಿ ಶೇ‌. 99.53 ರಷ್ಟು ಶಾಂತಿಯುತ ಮತದಾನ..! ಭದ್ರತೆಯಲ್ಲಿ ಕಾರವಾರಕ್ಕೆ ಮತಪೆಟ್ಟಿಗೆ ರವಾನೆ..!!

ಮುಂಡಗೋಡ ತಾಲೂಕಿನಲ್ಲಿ ಶೇ‌. 99.53 ರಷ್ಟು ಶಾಂತಿಯುತ ಮತದಾನ..! ಭದ್ರತೆಯಲ್ಲಿ ಕಾರವಾರಕ್ಕೆ ಮತಪೆಟ್ಟಿಗೆ ರವಾನೆ..!!

ಮುಂಡಗೋಡ: ತಾಲೂಕಿನಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಯ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಶೇ. 99.53 ರಷ್ಟು ಮತದಾನವಾಗಿದೆ. ಗುಂಜಾವತಿ ಗ್ರಾಮ ಪಂಚಾಯತಿಯ ಓರ್ವ ಮಹಿಳಾ ಸದಸ್ಯೆ ಮತದಾನ ಮಾಡಿಲ್ಲ. ಈ ಕಾರಣದಿಂದ ಶೇ.100 ರಷ್ಟು ಮತದಾನವಾಗಿಲ್ಲ. ಬೆಳಗಿನಿಂದಲೂ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲೂ ಮತದಾರರು ಸಂಯಮದಿಂದಲೇ ಬಂದು ಮತದಾನ‌ ಮಾಡಿದ್ರು. ಬಹುತೇಕ ಮದ್ಯಾಹ್ನದಷ್ಟೊತ್ತಿಗೆ ಮತದಾನ ಸಂಪೂರ್ಣತೆಯ ಮಟ್ಟ ತಲುಪಿತ್ತು. ಕೆಲವು ಕಡೆ‌ ಮಾತ್ರ ಒಂದಿಷ್ಟು ತಡವಾಗಿ ಬಂದು ಮತದಾರರು ಮತದಾನ‌ ಮಾಡಿದ್ರು. ತಾಲೂಕಿನಲ್ಲಿ ಬಹುತೇಕ ಗ್ರಾಮ ಪಂಚಾಯತಿ ಸದಸ್ಯರುಗಳು ಆಯಾ ಗ್ರಾಮಗಳಲ್ಲಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಮತದಾನಕ್ಕೆ ತೆರಳಿದ್ದು ವಿಶೇಷವಾಗಿತ್ತು. ಮತಪೆಟ್ಟಿಗೆ ಕಾರವಾರಕ್ಕೆ..! ಇನ್ನು ಸಂಜೆಯ ವೇಳೆಗೆ ಸಂಪೂರ್ಣಗೊಂಡ ಮತದಾನ ಪ್ರಕ್ರಿಯೆಯನ್ನು ಅಧಿಕಾರಿಗಳು ಯಶಸ್ವಿಯಾಗಿ‌ ಮುಗಿಸಿದ್ರು. ನಂತರ ಮತಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ವಾಹನದಲ್ಲಿ ಕಾರವಾರಕ್ಕೆ ರವಾನಿಸಲಾಗಿದೆ. ಈ ವೇಳೆ ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ನೇತೃತ್ವದಲ್ಲಿ ಮತಪೆಟ್ಟಿಗೆಗಳನ್ನು ವಾಹನದಲ್ಲಿ ಭರ್ತಿ‌ಮಾಡಿ ಕಾರವಾರಕ್ಕೆ ರವಾನಿಸಲಾಗಿದೆ.

ಮತ್ತೆ ಮಳೆಯ ಆತಂಕ, ಫಸಲು ಕಟಾವಿಗೆ ಯಂತ್ರಗಳ ಮೊರೆ ಹೋದ ರೈತ..!

ಮತ್ತೆ ಮಳೆಯ ಆತಂಕ, ಫಸಲು ಕಟಾವಿಗೆ ಯಂತ್ರಗಳ ಮೊರೆ ಹೋದ ರೈತ..!

ಮುಂಡಗೋಡ: ತಾಲೂಕಿನಲ್ಲಿ ಮತ್ತೆ ಮಳೆಯ ಆತಂಕ ಶುರುವಾಗಿದೆ ಹೀಗಾಗಿ, ಅನ್ನದಾತರು ಫಸಲುಗಳ ರಕ್ಷಣೆಗೆ ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆಯ ಆತಂಕದ ನಡುವೆ ಭತ್ತದ ಕೊಯ್ಲಿಗೆ ಮುಂದಾಗಿದ್ದಾನೆ ರೈತ.. ಇನ್ನು, ಈ ಸಾರಿ ಮಳೆಯಲ್ಲಿ ಸಿಲುಕಿ ಸಂಪೂರ್ಣ ಹಾಳಾದ ಸ್ಥಿತಿಯಲ್ಲಿರೋ ಭತ್ತದ ಫಸಲು ಕಟಾವು ಮಾಡಲು ರೈತ ಭತ್ತ ಕಟಾವು ಮಾಡುವ ಯಂತ್ರಗಳ‌ ಮೊರೆ ಹೋಗಿದ್ದಾನೆ.. ಹೀಗಾಗಿ ತಾಲೂಕಿನೆಲ್ಲೆಡೆ ಈಗ ಭತ್ತ ಕಟಾವು ಮಾಡೋ ಯಂತ್ರಗಳ ಸದ್ದೇ ಕೇಳುತ್ತಿದೆ. ಸಮಯವೂ ಉಳಿಯತ್ತೆ ಕೆಲಸವೂ ಕಡಿಮೆಯಾಗತ್ತೆ ಅನ್ನೋ ಕಾರಣಕ್ಕೆ ರೈತರು ತಂತ್ರಗಳ ಮೊರೆ ಹೋಗಿದ್ದಾರೆ..

error: Content is protected !!