ಗರ್ಭ ಮತ್ತು ಪ್ರಸವ ಪೂರ್ವ ಅಕ್ರಮ ಲಿಂಗ ಪತ್ತೆ ನಡೆಯದಂತೆ ಜಾಗೃತೆ ವಹಿಸಿ: ಜಿಲ್ಲಾಧಿಕಾರಿ..!

ಗರ್ಭ ಮತ್ತು ಪ್ರಸವ ಪೂರ್ವ ಅಕ್ರಮ ಲಿಂಗ ಪತ್ತೆ ನಡೆಯದಂತೆ ಜಾಗೃತೆ ವಹಿಸಿ: ಜಿಲ್ಲಾಧಿಕಾರಿ..!

Karwar Health News: ಕಾರವಾರ; ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಅಕ್ರಮವಾಗಿ ಗರ್ಭ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಪ್ರಕರಣಗಳು ನಡೆಯದಂತೆ ನಿರಂತರವಾಗಿ ನಿಗಾವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ ಸಕ್ಷಮ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದನ್ನೂ ಓದಿ👉ನಿಶ್ಚಿತ ಠೇವಣಿಗಿಂತಲೂ ಹೆಚ್ಚು ಆದಾಯ ನೀಡುವ ಪೋಸ್ಟ್ ಆಫೀಸ್‌ ಯೋಜನೆಗಳಿವು; ಇಲ್ಲಿದೆ ಪೂರ್ಣ ವಿವರ..! ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 77 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಆರೋಗ್ಯ ಅಧಿಕಾರಿಗಳು ದಿಢೀರ್ ದಾಳಿಗಳನ್ನು ನಡೆಸಿ, ಈ ಸೆಂಟರ್‌ಗಳು ಕಾನೂನು ಪ್ರಕಾರ ಎಲ್ಲಾ ಆದೇಶಗಳನ್ನು ಪಾಲಿಸಿ, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಪಾಸಣೆ ನಡೆಸಬೇಕು, ಈ ಎಲ್ಲಾ ಕೇಂದ್ರಗಳಿಗೆ ಪ್ರತೀ ಕೇಂದ್ರಗಳಿಗೆ ವಾರ್ಷಿಕ ಕನಿಷ್ಠ 4 ಬಾರಿ ಭೇಟಿ ನೀಡಿ ತಪಾಸಣೆ ನಡೆಸಬೇಕು, ತಪಾಸಣಾ ವರದಿಯಲ್ಲಿ ತಪಾಸಣೆಯ ಸಂಪೂರ್ಣ ವಿವರಗಳನ್ನು ದಾಖಲಿಸಬೇಕು ಎಂದರು....

ಸೊಳ್ಳೆಗಳು ಕೆಲವು ವ್ಯಕ್ತಿಗಳತ್ತ ಮಾತ್ರ ಹೆಚ್ಚು ಆಕರ್ಷಿತವಾಗುತ್ತವೆ ಯಾಕೆ ? ಅಧ್ಯಯನ ಹೇಳುವುದು ಏನೆಂದರೆ..!

ಸೊಳ್ಳೆಗಳು ಕೆಲವು ವ್ಯಕ್ತಿಗಳತ್ತ ಮಾತ್ರ ಹೆಚ್ಚು ಆಕರ್ಷಿತವಾಗುತ್ತವೆ ಯಾಕೆ ? ಅಧ್ಯಯನ ಹೇಳುವುದು ಏನೆಂದರೆ..!

Mosquito News:ಸೊಳ್ಳೆಗಳು ಎಲ್ಲರಿಗೂ ತೊಂದರೆ ಕೊಡುತ್ತವೆ, ಆದರೆ ಕೆಲವು ಜನರತ್ತ ಇತರರಿಗಿಂತ ಹೆಚ್ಚಾಗಿ ಅವುಗಳು ಆಕರ್ಷಣೆಗೆ ಒಳಗಾಗುತ್ತವೆ. ಈ ಸೊಳ್ಳೆಗಳು ಯಾವುದೇ ಚರ್ಮದಲ್ಲಿನ ರಕ್ತವನ್ನು ಹೀರಲು ತಮ್ಮ ಸೂಜಿಯಂತಹ ಪ್ರೋಬೊಸೈಸ್‌ಗಳನ್ನು ಬಳಸುತ್ತವೆ. ಆದರೆ ಕೆಲವರತ್ತ ಸೊಳ್ಳೆಗಳಿಗೆ ಹೆಚ್ಚು ಬರುವುದೇಕೆ..? ಇದರ ಹಿಂದಿನ ವಿಜ್ಞಾನವೇನು? ಅದು ವಾಸನೆಯೊಂದಿಗೆ ಏನಾದರೂ ಸಂಬಂಧ ಹೊಂದಿರಬಹುದೇ ಎಂಬ ಪ್ರಶ್ನೆಗೆ ಸಂಶೋಧನೆಯೊಂದು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದೆ. ಜರ್ನಲ್ ಸೆಲ್‌ನಲ್ಲಿ ಪ್ರಕಟವಾದ ರಾಕ್‌ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು 2022 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ತಮ್ಮ ಚರ್ಮದ ಮೇಲೆ ಹೆಚ್ಚಿನ ಮಟ್ಟದ ಕೆಲವು ಆಮ್ಲಗಳನ್ನು ಹೊಂದಿರುವ ವ್ಯಕ್ತಿಗಳತ್ತ ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆಗಳು 100 ಪಟ್ಟು ಹೆಚ್ಚು ಆಕರ್ಷಿತವಾಗುತ್ತವೆ. ಈ ಸೊಳ್ಳೆಯಿಂದ ಡೆಂಗ್ಯೂ, ಚಿಕೂನ್‌ಗುನ್ಯಾ, ಹಳದಿ ಜ್ವರ ಮತ್ತು ಜಿಕಾ ಮುಂತಾದ ರೋಗಗಳ ಹರಡುತ್ತವೆ. ಅಧ್ಯಯನಕ್ಕಾಗಿ, ಸಂಶೋಧಕರು ತೋಳುಗಳ ಮೇಲೆ ನೈಲಾನ್ ಸ್ಟಾಕಿಂಗ್ಸ್ ಬಳಸಿ ಜನರ ಚರ್ಮದಿಂದ ನೈಸರ್ಗಿಕ ಪರಿಮಳವನ್ನು ಸಂಗ್ರಹಿಸಿದರು. ನಂತರ, ಅವುಗಳನ್ನು ಎರಡು ಇಂಚಿನ ತುಂಡುಗಳಾಗಿ ಕತ್ತರಿಸಿ ಸೊಳ್ಳೆಗಳು...

18 ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವೆ ; ಸ್ಪೀಕರ್‌..!

18 ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವೆ ; ಸ್ಪೀಕರ್‌..!

Political News:ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭಾನುವಾರ ಹೇಳಿದ್ದಾರೆ. 18 ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಭಾನುವಾರ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ ಮತ್ತು ಮಸೂದೆಯ ಪ್ರತಿಗಳನ್ನು ಹರಿದು ಅವರ ಮೇಲೆ ಎಸೆದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಇದೀಗ ಬಿಜೆಪಿ ಶಾಸಕ ಅಮಾನತು ಆದೇಶವನ್ನು ಹಿಂಪಡೆಯಲು ಸಭೆಯಲ್ಲಿ ತೀರ್ಮಾನವಾಗಿದೆ. ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಲ್ಲಿಸಿದ್ದರು. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಶಾಸಕರ ಅಮಾನತು ಆದೇಶವನ್ನ ಹಿಂಪಡೆಯಲಾಗಿದೆ. 18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಈಗ ಶಾಸಕರ ಅಮಾಮತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಆ ಸಮಯದಲ್ಲಿ ದುರ್ನಡತೆ...

ನಿರಂತರ ಮಳೆ ಹಿನ್ನೆಲೆ: ಕುಮಟಾದ ಮುರೂರು-ಮುಸಗುಪ್ಪ ಬಳಿ ಗುಡ್ಡ ಕುಸಿತ, ಸಂಚಾರ ಬಂದ್..!

Land Slide News: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಮಳೆಯಿಂದ ಕುಮಟಾ ತಾಲ್ಲೂಕೀನ ಮೂರೂರು- ಮುಸುಗುಪ್ಪ ಬಳಿ ಗುಡ್ಡ ಕುಸಿದಿದೆ. ಪರಿಣಾಮ ರಸ್ತೆ ಮೇಲೆ ಕಲ್ಲು ಬಂಡೆ ಮಣ್ಣು ಬಿದ್ದಿದೆ‌. ರಸ್ತೆ ಸಂಚಾರ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ಬೋಡಿ ಪರಿಶೀಲಿಸಿದ್ದು, ರಸ್ತೆಯಲ್ಲಿ ಬಿದ್ದಿರುವ ಕಲ್ಲು ಬಂಡೆ, ಮಣ್ಣು ತೆರವುಗೊಳಿಸಲು PWD ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ👉ಸ್ಕೂಟಿ ಹಾಗೂ ಬೈಕ್‌ನಡುವೆ ಮುಖಾಮುಕಿ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ..! ಜನರಿಗೆ ಪರ್ಯಾಯವಾಗಿ ಮೂರೂರು-ಕುಮಟಾ ಹೈವೆ ರಸ್ತೆಯಿಂದ ಹೋಗಲು ದಾರಿ ಇರುತ್ತದೆ ಮತ್ತು ಹರ್ಕಡೆ-ಬಳಕೂರು ರಸ್ತೆಯಿಂದ ವಾಹನಗಳಿಗೆ ಹೋಗಲು ದಾರಿ ಮಾಡಿ ಕೊಡಲಾಗಿದೆ.

ನಿಶ್ಚಿತ ಠೇವಣಿಗಿಂತಲೂ ಹೆಚ್ಚು ಆದಾಯ ನೀಡುವ ಪೋಸ್ಟ್ ಆಫೀಸ್‌ ಯೋಜನೆಗಳಿವು; ಇಲ್ಲಿದೆ ಪೂರ್ಣ ವಿವರ..!

ನಿಶ್ಚಿತ ಠೇವಣಿಗಿಂತಲೂ ಹೆಚ್ಚು ಆದಾಯ ನೀಡುವ ಪೋಸ್ಟ್ ಆಫೀಸ್‌ ಯೋಜನೆಗಳಿವು; ಇಲ್ಲಿದೆ ಪೂರ್ಣ ವಿವರ..!

Post Scheme News :ಯಾವುದೇ ರಿಸ್ಕ್ ಇಲ್ಲದೆ ನಿಯಮಿತವಾಗಿ ಆದಾಯ ಬಯಸುವವರು ಸಾಮಾನ್ಯವಾಗಿ ನಿಶ್ಚಿತ ಠೇವಣಿ(FD)ಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ, ಅಂಚೆ ಕಚೇರಿಯ ಈ ಯೋಜನೆಗಳು FD ಗಿಂತಲೂ ಹೆಚ್ಚಿನ ಆದಾಯ ನೀಡುತ್ತವೆ. ಪೋಸ್ಟ್ ಆಫೀಸ್ ಟೈಮ್ ಠೇವಣಿ ( Post Office Time Deposit- POTD) ಮೊದಲನೆಯದು ಪೋಸ್ಟ್ ಆಫೀಸ್ ಟೈಮ್ ಠೇವಣಿ (ಟಿಡಿ) ಖಾತೆ, ಇದನ್ನು ನೀವು 1 ರಿಂದ 5 ವರ್ಷಗಳವರೆಗೆ ತೆರೆಯಬಹುದು. ಇದರಲ್ಲಿ, 1 ರಿಂದ 3 ವರ್ಷಗಳ ಅವಧಿಗೆ 6.9% ಬಡ್ಡಿ ಮತ್ತು 5 ವರ್ಷಗಳವರೆಗಿನ ಠೇವಣಿಗೆ 7.5% ವರೆಗೆ ಬಡ್ಡಿ ಲಭ್ಯವಿದೆ. ಇದರ ವಿಶೇಷ ಲಕ್ಷಣವೆಂದರೆ ಇದು ಸಂಪೂರ್ಣವಾಗಿ ಸರ್ಕಾರಿ ಖಾತರಿಯ ಹೂಡಿಕೆಯಾಗಿದ್ದು, ಈ ಕಾರಣದಿಂದಾಗಿ ಇದನ್ನು FD ಗಿಂತ ಉತ್ತಮ ಮತ್ತು ಅಷ್ಟೇ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ👉 ಪಮೋದಿ ಟೀಂ ಇಂಡಿಯಾ ಮಂತ್ರ : ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟವಲ್ಲ..! ಮಾಸಿಕ ಆದಾಯ ಯೋಜನೆ (post...

ಮೋದಿ ಟೀಂ ಇಂಡಿಯಾ ಮಂತ್ರ : ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟವಲ್ಲ..!

ಮೋದಿ ಟೀಂ ಇಂಡಿಯಾ ಮಂತ್ರ : ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟವಲ್ಲ..!

ನವದೆಹಲಿ: ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಟೀಂ ಇಂಡಿಯಾ ರೀತಿ ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟಕರವಲ್ಲ. ರಾಜ್ಯಗಳು ‘1 ರಾಜ್ಯ, 1 ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳ’ ಪರಿಕಲ್ಪನೆಯ ಅಡಿ ತಮ್ಮ ರಾಜ್ಯದ ಕನಿಷ್ಠ ಒಂದು ಪ್ರವಾಸಿ ಸ್ಥಳವನ್ನಾದರೂ ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ರಾಜ್ಯಗಳು ವಿಕಸಿತವಾದಾಗ ದೇಶ ವಿಕಸಿತವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯಲ್ಲಿ ಶನಿವಾರ ಮಾತನಾಡಿದರು. ‘2024ರ ವಿಕಸಿತ ಭಾರತಕ್ಕೆ ವಿಕಸಿತ ರಾಜ್ಯ’ ಈ ಬಾರಿಯ ಆಯೋಗದ ಸಭೆಯ ಮುಖ್ಯ ವಿಷಯವಾಗಿತ್ತು. ಇದನ್ನೂ ಓದಿ👉ಮತ್ತೆ ಕೋಡಿ ಮಠದ ಶ್ರೀಗಳು ನುಡಿದ್ರು ಸ್ಪೋಟಕ ಭವಿಷ್ಯ..!‌ ರಾಜ್ಯಗಳು ವಿಕಸಿತವಾಗಲಿ..! ‘ದೇಶದಲ್ಲಿ ಅಭಿವೃದ್ಧಿಗೆ ವೇಗ ನೀಡುವ ಅಗತ್ಯವಿದ್ದು, ಈಗಾಗಲೇ ನಾವು ಅದರ ವೇಗ ಹೆಚ್ಚಿಸಿದ್ದೇವೆ. ವಿಕಸಿತ ಭಾರತ ಎಲ್ಲಾ ಭಾರತೀಯರ ಗುರಿ. ಪ್ರತಿ ರಾಜ್ಯವೂ ವಿಕಸಿತವಾದಾಗ ಭಾರತದ ವಿಕಾಸ ಸಾಧ್ಯವಾಗುತ್ತದೆ. ವಿಕಸಿತ ಭಾರತವು 140 ಕೋಟಿ ಭಾರತೀಯರ ಆಕಾಂಕ್ಷೆ’ ಎಂದರು.

ಪಾಕ್‌ ಉಗ್ರವಾದಕ್ಕೆ 4 ದಶಕದಲ್ಲಿ 20000 ಭಾರತೀಯರು ಬಲಿ!

ಪಾಕ್‌ ಉಗ್ರವಾದಕ್ಕೆ 4 ದಶಕದಲ್ಲಿ 20000 ಭಾರತೀಯರು ಬಲಿ!

Pak terror:ಸಿಂಧು ಜಲ ಒಪ್ಪಂದಕ್ಕೆ ಬದ್ಧವಾಗಿ ಭಾರತವು ಪಾಕಿಸ್ತಾನಕ್ಕೆ ನೀರು ಕೊಟ್ಟರೂ ಕಳೆದ 4 ದಶಕಗಳಲ್ಲಿ 20 ಸಾವಿರ ಭಾರತೀಯರನ್ನು ಭಯೋತ್ಪಾದನೆ ಮೂಲಕ ಕೊಂದಿದೆ. ಈ ಮೂಲಕ ಕೃತಘ್ಞತೆ ಮೆರೆದಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ವಾಗ್ದಾಳಿ ನಡೆಸಿದ್ದಾರೆ. ವಿಶ್ವಸಂಸ್ಥೆ: ‘ಸಿಂಧು ಜಲ ಒಪ್ಪಂದಕ್ಕೆ ಬದ್ಧವಾಗಿ ಭಾರತವು ಪಾಕಿಸ್ತಾನಕ್ಕೆ ನೀರು ಕೊಟ್ಟರೂ ಕಳೆದ 4 ದಶಕಗಳಲ್ಲಿ 20 ಸಾವಿರ ಭಾರತೀಯರನ್ನು ಭಯೋತ್ಪಾದನೆ ಮೂಲಕ ಕೊಂದಿದೆ. ಈ ಮೂಲಕ ಕೃತಘ್ಞತೆ ಮೆರೆದಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಕೋವಿಡ್‌ ಸೋಂಕಿತ ವ್ಯಕ್ತಿ ಸಾವು..! ಶುಕ್ರವಾರ ರಾತ್ರಿ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, ‘ಭಾರತವು 65 ವರ್ಷಗಳ ಹಿಂದೆ ಉತ್ತಮ ನಂಬಿಕೆಯಿಂದ ಸಿಂಧು ಜಲ ಒಪ್ಪಂದವನ್ನು ಮಾಡಿಕೊಂಡಿತ್ತು. ಬಳಿಕ ಭಾರತದ ಮೇಲೆ 3 ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಪಾಕಿಸ್ತಾನ ವಿಶ್ವಾಸದ್ರೋಹ ಎಸಗಿದೆ. ಕಳೆದ...

ಜಪಾನ್‌ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ..!

ಜಪಾನ್‌ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ..!

Economy News: ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ ಭಾರತವು ಒಂದು ಸ್ಥಾನ ಮೇಲೇರಿದೆ. ಭಾರತ ಈಗ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಶನಿವಾರ ಹೇಳಿದ್ದಾರೆ.ದೇಶದ ಜಿಡಿಪಿ $4 ಟ್ರಿಲಿಯನ್ ಗಡಿಯನ್ನು ತಲುಪಿದೆ, ಈಗ ಭಾರತವು ಅಮೆರಿಕ, ಚೀನಾ ಮತ್ತು ಜರ್ಮನಿಗಿಂತ ಹಿಂದಿದೆ. ನೀತಿ ಚಿಂತಕರ ಚಾವಡಿಯ 10 ನೇ ಆಡಳಿತ ಮಂಡಳಿ ಸಭೆಯ ನಂತರ ಮಾತನಾಡಿದ ಸುಬ್ರಹ್ಮಣ್ಯಂ, ದೇಶೀಯ ಸುಧಾರಣೆಗಳ ಸಂಯೋಜನೆ ಮತ್ತು ಭಾರತದ ಪರವಾಗಿ ಹೆಚ್ಚು ಹೆಚ್ಚು ಒಲವು ತೋರುತ್ತಿರುವ ಜಾಗತಿಕ ವಾತಾವರಣವೇ ಈ ಏರಿಕೆಗೆ ಕಾರಣ ಎಂದು ಹೇಳಿದ್ದಾರೆ. “ನಾವು ಈಗ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ನಾವು $4 ಟ್ರಿಲಿಯನ್ ಆರ್ಥಿಕತೆಯನ್ನು ತಲುಪಿದ್ದೇವೆ” ಎಂದು ಅವರು ವರದಿಗಾರರಿಗೆ ತಿಳಿಸಿದರು. “ಅಮೆರಿಕ, ಚೀನಾ ಮತ್ತು ಜರ್ಮನಿ ಮಾತ್ರ ನಮ್ಮ ಮುಂದಿವೆ. ನಾವು ನಮ್ಮ ಹಾದಿಯಲ್ಲಿಯೇ ಮುಂದುವರಿದರೆ, ನಾವು ಕೇವಲ 2.5 ರಿಂದ 3 ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು”...

ಬೆಂಗಳೂರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಕೋವಿಡ್‌ ಸೋಂಕಿತ ವ್ಯಕ್ತಿ ಸಾವು..!

ಬೆಂಗಳೂರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಕೋವಿಡ್‌ ಸೋಂಕಿತ ವ್ಯಕ್ತಿ ಸಾವು..!

Covid Death News:ಬೆಂಗಳೂರಿನಲ್ಲಿ ತೀವ್ರ ಕೊಮೊರ್ಬಿಡಿಟಿಯಿಂದ ಬಳಲುತ್ತಿದ್ದ 84 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಅವರ ಕೋವಿಡ್ -19 ಪರೀಕ್ಷೆಯ ಫಲಿತಾಂಶಗಳು ಶನಿವಾರ ಪಾಸಿಟಿವ್ ಬಂದಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಕೊಮೊರ್ಬಿಡಿಟಿಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮೇ 13 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಅವರು ಮೇ 17 ರಂದು ನಿಧನರಾದರು. ಅವರು ಜೀವಂತವಾಗಿದ್ದಾಗ ಅವರಿಗೆ ನಡೆಸಲಾದ ಕೋವಿಡ್ -19 ಪರೀಕ್ಷೆಯ ಫಲಿತಾಂಶಗಳು ಶನಿವಾರ ಬಂದಿದ್ದು, ಪಾಸಿಟಿವ್ ಎಂದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತ ಠೇವಣಿಗಿಂತಲೂ ಹೆಚ್ಚು ಆದಾಯ ನೀಡುವ ಪೋಸ್ಟ್ ಆಫೀಸ್‌ ಯೋಜನೆಗಳಿವು; ಇಲ್ಲಿದೆ ಪೂರ್ಣ ವಿವರ..! ಆರೋಗ್ಯ ಇಲಾಖೆಯ ಪ್ರಕಾರ, ಬೆಂಗಳೂರಿನಲ್ಲಿ 32 ಸೇರಿದಂತೆ ರಾಜ್ಯದಲ್ಲಿ 38 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಕಳೆದ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. “ಯಾರೂ ಭಯಬೀತರಾಗುವ ಅಗತ್ಯವಿಲ್ಲ, ರಾಜ್ಯ ಸರ್ಕಾರವು ಜಾಗರೂಕವಾಗಿದೆ ಮತ್ತು ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಅಗತ್ಯವಿರುವ...

ಸ್ಕೂಟಿ ಹಾಗೂ ಬೈಕ್‌ನಡುವೆ ಮುಖಾಮುಕಿ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ..!

ಸ್ಕೂಟಿ ಹಾಗೂ ಬೈಕ್‌ನಡುವೆ ಮುಖಾಮುಕಿ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ..!

Crime News:ದಾಂಡೇಲಿಯ ಅಂಬೆವಾಡಿಯ ರೈಲು ನಿಲ್ದಾಣದ ಹತ್ತಿರ ಬರ್ಚಿ ರಸ್ತೆಯಲ್ಲಿ ಬೈಕ್ ಮತ್ತು ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮಕ್ಕಳು ಸೇರಿ ಒಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬರ್ಚಿ ಮಾರ್ಗವಾಗಿ ದಾಂಡೇಲಿಗೆ ಬರುತ್ತಿದ್ದ ಬೈಕ್ ಸವಾರ ಹಾಗೂ ದಾಂಡೇಲಿಯಿಂದ ಮೌಳಂಗಿ ಕಡೆ ಹೋಗುತ್ತಿದ್ದ ಸ್ಕೂಟಿ ಸವಾರ ಇಬ್ಬರ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಕಾರಣ ಬೈಕ್ ನಲ್ಲಿದ್ದ ನಾಲ್ವರಿಗೆ ಸ್ಥಳದಲ್ಲಿ ಗಂಭೀರ ಗಾಯಗಳಾಗಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಸಾರ್ವಜನಿಕರು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಇಮ್ತಿಯಾಜ್ ಪಟೇಲ್, ಆಸೀಫ್ ಪಟೇಲ್, ಹಾಗು ಸಿಮ್ರಾನ್ ಪಟೇಲ್ ಗೆ ಧಾರವಾಡಕ್ಕೆ ಕಳಿಸಲಾಗಿದೆ. ಭೀಮರಾವ್ ಕೆಂಭಾವಿ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

error: Content is protected !!