Land Slide News:
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಮಳೆಯಿಂದ ಕುಮಟಾ ತಾಲ್ಲೂಕೀನ ಮೂರೂರು- ಮುಸುಗುಪ್ಪ ಬಳಿ ಗುಡ್ಡ ಕುಸಿದಿದೆ. ಪರಿಣಾಮ ರಸ್ತೆ ಮೇಲೆ ಕಲ್ಲು ಬಂಡೆ ಮಣ್ಣು ಬಿದ್ದಿದೆ‌. ರಸ್ತೆ ಸಂಚಾರ ಬಂದ್ ಆಗಿದೆ.

ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ಬೋಡಿ ಪರಿಶೀಲಿಸಿದ್ದು, ರಸ್ತೆಯಲ್ಲಿ ಬಿದ್ದಿರುವ ಕಲ್ಲು ಬಂಡೆ, ಮಣ್ಣು ತೆರವುಗೊಳಿಸಲು PWD ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ👉ಸ್ಕೂಟಿ ಹಾಗೂ ಬೈಕ್‌ನಡುವೆ ಮುಖಾಮುಕಿ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ..!

ಜನರಿಗೆ ಪರ್ಯಾಯವಾಗಿ ಮೂರೂರು-ಕುಮಟಾ ಹೈವೆ ರಸ್ತೆಯಿಂದ ಹೋಗಲು ದಾರಿ ಇರುತ್ತದೆ ಮತ್ತು ಹರ್ಕಡೆ-ಬಳಕೂರು ರಸ್ತೆಯಿಂದ ವಾಹನಗಳಿಗೆ ಹೋಗಲು ದಾರಿ ಮಾಡಿ ಕೊಡಲಾಗಿದೆ.

error: Content is protected !!