Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!

ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದಲ್ಲಿ ಅಪಘಾತವಾಗಿದೆ‌. ಮುಂಡಗೋಡಿನಿಂದ ಕಲಘಟಗಿ ಮಾರ್ಗವಾಗಿ ನಂದಿಕಟ್ಟಾ ಹೋಗುತ್ತಿದ್ದ ಬೈಕ್ ಸವಾರರಿಬ್ಬರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಪರಿಣಾಮ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ನಂದಿಕಟ್ಟಾ ಗ್ರಾಮದ ಹನುಮಂತ ಭೋವಿ ಮತ್ತು ಬಸವರಾಜ ಎಂಬುವವರೇ ಗಾಯಗೊಂಡವರಾಗಿದ್ದು. 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಮತ್ತು ಮಲ್ಲಪ್ಪ ಇವರು ಪ್ರಥಮ ಚಿಕಿತ್ಸೆ ನೀಡಿ ತಾಲ್ಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡಿನ ಹುಬ್ಬಳ್ಳಿ ರಸ್ತೆ ತುಂಬ ಯಮರೂಪಿ ಗುಂಡಿಗಳು, ಇನ್ನೇಷ್ಟು ಬಲಿ ಬೇಕು ಅಧಿಕಾರಿಗಳೇ..?

ಮುಂಡಗೋಡಿನ ಹುಬ್ಬಳ್ಳಿ ರಸ್ತೆ ತುಂಬ ಯಮರೂಪಿ ಗುಂಡಿಗಳು, ಇನ್ನೇಷ್ಟು ಬಲಿ ಬೇಕು ಅಧಿಕಾರಿಗಳೇ..?

 ಮುಂಡಗೋಡ; ಪಟ್ಟಣದ ಹುಬ್ಬಳ್ಳಿ ಶಿರಸಿ ರಸ್ತೆಯ ಅದ್ವಾನಗಳಿಂದಾಗಿ ಜನ ರೋಶಿ ಹೋಗಿದ್ದಾರೆ. ಅದ್ರಲ್ಲೂ ಹುಬ್ಬಳ್ಳಿ ರಸ್ತೆಯಲ್ಲಿ ಬಿದ್ದಿರೋ ಯಮರೂಪಿ ರಸ್ತೆ ಗುಂಡಿಗಳಿಂದ ಅದೇಷ್ಟೋ ಬಡಪಾಯಿಗಳ ಪ್ರಾಣಗಳೇ ಹಾರಿಹೋಗುತ್ತಿವೆ. ಹೀಗಿದ್ದಾಗಲೂ ಆ್ಯಟಲಿಸ್ಟ್ ಇಂತಹ ಯಮರೂಪಿ ಗುಂಡಿಗಳಿಗೆ ಮಣ್ಣು ಹಾಕಿ ಸಾರಿಸುವ ಕನಿಷ್ಟ ಖಬರ್ರೂ ಇಲ್ಲಿನ PWD ಇಲಾಖೆಯ ಅಧಿಕಾರಿಗಳಿಗೆ ಬಂದಂತಿಲ್ಲ. ಹೀಗಾಗಿ, ಈ ರಸ್ತೆಯಲ್ಲಿ ಓಡಾಡೋ ಜನ ನಿತ್ಯವೂ ಹಿಡಿಶಾಪ ಹಾಕ್ತಿದಾರೆ ಅಧಿಕಾರಿಗಳಿಗೆ. ಕುರುಡಾದ್ರಾ ಅಧಿಕಾರಿಗಳು..? ಅಸಲು, ಮುಂಡಗೋಡ ಪಟ್ಟಣದಿಂದ ಹುಬ್ಬಳ್ಳಿ ಕಡೆಗೆ ನೀವು ಹೊರಟ್ರೆ, ಜಸ್ಟ್...

Post
ಚಿಕ್ಕೋಡಿಯಲ್ಲಿ ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡ ತಾಲೂಕಾ ಜೈನ ಸಮಾಜದಿಂದ ಪ್ರತಿಭಟನಾ ಮೆರವಣಿಗೆ..!

ಚಿಕ್ಕೋಡಿಯಲ್ಲಿ ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡ ತಾಲೂಕಾ ಜೈನ ಸಮಾಜದಿಂದ ಪ್ರತಿಭಟನಾ ಮೆರವಣಿಗೆ..!

 ಮುಂಡಗೋಡ: ಚಿಕ್ಕೋಡಿಯಲ್ಲಿ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಮುಂಡಗೋಡ ತಾಲೂಕಿನ ಜೈನ ಸಮಾಜದ ಬಾಂಧವರು ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪಟ್ಟಣದ ಶಿರಸಿ ರಸ್ತೆಯಲ್ಲಿರೋ ಜಿನಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘಟನೆಯನ್ನು ಉಗ್ರವಾಗಿ ಖಂಡಿಸಿದ್ರು‌. ಮುನಿಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ರು. ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಮುನಿಗಳ‌ ಮೇಲಿನ ಭೀಕರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ...

Post
ಮುಂಡಗೋಡಿನ ಪತ್ರಕರ್ತ ಶಾಂತೇಶಕುಮಾರ್, ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿ ನಿಧಿ ಪುರಸ್ಕಾರಕ್ಕೆ ಆಯ್ಕೆ..!

ಮುಂಡಗೋಡಿನ ಪತ್ರಕರ್ತ ಶಾಂತೇಶಕುಮಾರ್, ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿ ನಿಧಿ ಪುರಸ್ಕಾರಕ್ಕೆ ಆಯ್ಕೆ..!

ಮುಂಡಗೋಡಿನ ಪತ್ರಕರ್ತ ಮಿತ್ರ ಶಾಂತೇಶಕುಮಾರ್ ಬೆನಕನಕೊಪ್ಪ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ‌ ನೀಡುವ ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿನಿಧಿ ಪುರಸ್ಕಾರಕ್ಕೆ‌ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಪತ್ರಿಕೆಯ ತಾಲೂಕಾ ವರದಿಗಾರರಾಗಿರೋ ಶಾಂತೇಶಕುಮಾರ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಪತ್ರಿಕಾ ಮಿತ್ರರಿಗೆ ಹರ್ಷ ತಂದಿದೆ. ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಯ ಐವರು ಪತ್ರಕರ್ತರು ಇಂತಹದ್ದೊಂದು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ‌ ಸಭೆಯಲ್ಲಿ ಜಿಲ್ಲಾ ಸಂಘದ...

Post
ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್  ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!

ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್ ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!

 ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾರವರ 88 ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಯಿತು. ಇಲ್ಲಿನ ಕ್ಯಾಂಪ್ ನಂಬರ್ ಒಂದರ ಬೌದ್ದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಅಂದಹಾಗೆ, ಇಲ್ಲಿನ ಟಿಬೇಟಿಯನ್ ಕಾಲೋನಿಯಲ್ಲಿ ಟಿಬೇಟಿಗರು ದಲೈ ಲಾಮಾರ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪ್ರತೀ ಮನೆ ಮನೆಗಳಲ್ಲೂ ದಲೈ ಲಾಮಾರವರ ಹುಟ್ಟುಹಬ್ಬದ ವಿಶೇಷ ಸಂಭ್ರಮಗಳು ನಡೆಯುತ್ತಿವೆ. ದೀರ್ಘಾಯುಷ್ಯ ಕೋರಿ ಪ್ರಾರ್ಥನೆಗಳು ನಡೆಯುತ್ತಿವೆ. ಅಲ್ಲದೇ, ಹಲವು ಸಾಮಾಜಿಕ, ಸಾಂಸ್ಕೃತಿಕ, ದಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

Post
ಶಕ್ತಿ ಯೋಜನೆ ಎಫೆಕ್ಟ್​; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ ಇದುವರೆಗೂ ಎಷ್ಟೇಲ್ಲ ಮಹಿಳೆಯರು ಪ್ರಯಾಣಿಸಿದ್ದಾರೆ ಗೊತ್ತಾ..?

ಶಕ್ತಿ ಯೋಜನೆ ಎಫೆಕ್ಟ್​; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ ಇದುವರೆಗೂ ಎಷ್ಟೇಲ್ಲ ಮಹಿಳೆಯರು ಪ್ರಯಾಣಿಸಿದ್ದಾರೆ ಗೊತ್ತಾ..?

ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯು ಒಂದಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇದೇ ತಿಂಗಳ 11 ರಂದು ಅಧಿಕೃತವಾಗಿ ಜಾರಿಗೊಳಿಸಿತು. ಅದರಂತೆ ಶಕ್ತಿ ಯೋಜನೆಯಡಿಯಲ್ಲಿ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನಲೆ ಎಲ್ಲಾ ಬಸ್​ಗಳು ಫುಲ್​ ಆಗಿ ಸಂಚರಿಸುತ್ತಿವೆ. ಈ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿದ್ದ ಮಹಿಳೆಯರು ದೇವಸ್ಥಾನ ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಸಂಚರಿಸಲು ಶುರು ಮಾಡಿದ್ದಾರೆ. ಅದರಂತೆ ವಾಯವ್ಯ ವಿಭಾಗಕ್ಕೆ...

Post
ಗುಂಜಾವತಿ ಕಟ್ಟಿಗೆ ಕಳ್ಳತನ ಕೇಸ್, ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು, ಅಷ್ಟಕ್ಕೂ ಶಿರಾಳಕೊಪ್ಪದ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?

ಗುಂಜಾವತಿ ಕಟ್ಟಿಗೆ ಕಳ್ಳತನ ಕೇಸ್, ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು, ಅಷ್ಟಕ್ಕೂ ಶಿರಾಳಕೊಪ್ಪದ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?

  ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ಕಳೆದ ಜೂನ್ 12 ರಂದು ಅರಣ್ಯಗಳ್ಳತನದ ವಿಫಲ ಯತ್ನ ಕೇಸ್ ಬಟಾ ಬಯಲಾಗಿದೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕೇಸಿಗೆ ಸಂಭಂಧಿಸಿದಂತೆ ಸದ್ಯ ಇಬ್ಬರು ಆರೋಪಿಗಳನ್ನ ವಾಹನ ಸಮೇತ ಅರಣ್ಯ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾಗಂತ, ಯಲ್ಲಾಪುರ ವಿಭಾಗದ ಡಿಎಫ್ ಓ ಶಶಿಧರ್ ಹೆಗಡೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶಿರಾಳಕೊಪ್ಪದ ಗ್ಯಾಂಗ್..? ಅಂದಹಾಗೆ, ಗುಂಜಾವತಿ ಅರಣ್ಯದಲ್ಲಿ ಕಟ್ಟಿಗೆ ಕಳ್ಳತನ ಪ್ರಕರಣದ ಮೂಲಕ, ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅದೊಂದು ಗ್ಯಾಂಗ್...

Post
ಚಿಗಳ್ಳಿಯಲ್ಲಿ ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ, ಕಿಮ್ಸ್ ಗೆ ರವಾನೆ..!

ಚಿಗಳ್ಳಿಯಲ್ಲಿ ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ, ಕಿಮ್ಸ್ ಗೆ ರವಾನೆ..!

ಮುಂಡಗೋಡ ತಾಲೂಕಿನ ಚಿಗಳ್ಳಿಯಲ್ಲಿ ಯುವಕನೊರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಅಂದಹಾಗೆ, ಫಕ್ಕಿರಸ್ವಾಮಿ ಪಾಂಡು ರಾಣೋಜಿ ಎಂಬುವವನೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಅಂತಾ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಠಾಣೆ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Post
ಶಿಗ್ಗಾವಿಯಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಮಹಿಳೆ ಶವ ಎಸೆದ, ಮುಂಡಗೋಡಿನ  ಆರೋಪಿಯೂ ಸೇರಿ ಐವರು ಅಂದರ್..!

ಶಿಗ್ಗಾವಿಯಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಮಹಿಳೆ ಶವ ಎಸೆದ, ಮುಂಡಗೋಡಿನ ಆರೋಪಿಯೂ ಸೇರಿ ಐವರು ಅಂದರ್..!

 ಕುಮಟಾ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಸಿಕ್ಕಿದ್ದ ಮಹಿಳೆಯ ಶವ ಕೇಸ್ ಖುಲ್ಲಂ ಖುಲ್ಲಾ ಆದಂತಾಗಿದೆ. ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರಿನಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಹೆಣ ಎಸೆದು ಹೋಗಿದ್ದ ಹಂತಕರನ್ನು ಕುಮಟಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಸಲು, ಇಲ್ಲಿ ಖುದ್ದು ಪತಿಯ ಸಹೋದರನೇ ತನ್ನ ತಾಯಿ, ಸಹೋದರಿ, ದೊಡ್ಡಮ್ಮಳ ಜೊತೆ ಸೇರಿಕೊಂಡು ತಮ್ಮನ ಪತ್ನಿಯನ್ನ ಕೊಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಹೀಗಾಗಿ, ಈ ಕೇಸಲ್ಲಿ ಈಗ ಮುಂಡಗೋಡ ತಾಲೂಕಿನ ಇಂದೂರಿನ ಓರ್ವ ಆರೋಪಿ ಸೇರಿ...

Post
ಕುಮಟಾ ದೇವಿಮನೆ ಘಟ್ಟದಲ್ಲಿ ಸಿಕ್ಕ ಮಹಿಳೆಯ ಹೆಣ ಶಿಗ್ಗಾವಿಯದ್ದು, ಅಷ್ಟಕ್ಕೂ ಆ ಹೆಣ ಸಾಗಿಸಿದ್ದು ಮುಂಡಗೋಡ ತಾಲೂಕಿನ ಆ ಕ್ರೂಸರ್ ಚಾಲಕನಾ..?

ಕುಮಟಾ ದೇವಿಮನೆ ಘಟ್ಟದಲ್ಲಿ ಸಿಕ್ಕ ಮಹಿಳೆಯ ಹೆಣ ಶಿಗ್ಗಾವಿಯದ್ದು, ಅಷ್ಟಕ್ಕೂ ಆ ಹೆಣ ಸಾಗಿಸಿದ್ದು ಮುಂಡಗೋಡ ತಾಲೂಕಿನ ಆ ಕ್ರೂಸರ್ ಚಾಲಕನಾ..?

ಕುಮಟಾ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಮಹಿಳೆಯ ಮರ್ಡರ್ ಗೂ ಮುಂಡಗೋಡ ತಾಲೂಕಿಗೂ ನಂಟಿನ ಗಂಟು ಬಿದ್ದಿದೆಯಂತೆ. ಮುಂಡಗೋಡ ಪಟ್ಟಣದಿಂದ ಕಲಘಟಗಿಗೆ ಹೋಗುವ ಮಾರ್ಗದಲ್ಲಿ ಜಸ್ಟ್ 10 ಕಿಮೀ ದಾಟಿದ್ರೆ ಸಿಗುವ ಊರಿನ ಚಾಲಕನೊಬ್ಬ ಮಹಿಳೆಯ ಮರ್ಡರ್ ಮಿಸ್ಟ್ರಿಯಲ್ಲಿ ತಗಲಾಕ್ಕೊಂಡಿದ್ದಾನಾ..? ಹಾಗಂತ ಅನುಮಾನ ಶುರುವಾಗಿದೆ. ಹೀಗಾಗಿ, ಮುಂಡಗೋಡ ಪೊಲೀಸರ ಸಹಕಾರದಲ್ಲಿ ಕುಮಟೆಯ ಖಾಕಿಗಳು ಆರೋಪಿಯ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಇನ್ನೇನು ಕನ್ಪರ್ಮ ಅನ್ನೋ ಕಾರಣ ಸಿಕ್ರೆ ಆತನ ಅರೆಸ್ಟ್ ಗ್ಯಾರಂಟಿ ಎನ್ನಲಾಗಿದೆ. ಹೀಗಾಗಿ, ಆ ಚಾಲಕನ ಬಗ್ಗೆ...

error: Content is protected !!