ಶಿಗ್ಗಾವಿ: ಮೀನು ಹಿಡಿಯಲು ಹೋಗಿದ್ದ ಇಬ್ಬರು ವ್ಯಕ್ತಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಶಿಗ್ಗಾವಿ ಪಟ್ಟಣದ ಹಿರೇಕೆರೆಯಲ್ಲಿ ಮಂಗಳವಾರ ಸಂಜೆ ಜರುಗಿದೆ.
ಮೃತ ವ್ಯಕ್ತಿಗಳನ್ನ ಶಿಗ್ಗಾವಿ ಪಟ್ಟಣದ ಸಾಲಗೇರಿ ಓಣಿಯ ಹಜರತ ಅಲಿ ಇಬ್ರಾಹಿಂ ಮುಕ್ಕೇರಿ (27), ಅಕ್ಸರ್ ಹಿಮಾಮ್ ಖಾಸೀಮ್ ಸುಲ್ತಾನಖಾನವರ (35) ಎಂದು ಗುರುತಿಸಲಾಗಿದೆ. ಮೀನು ಹಿಡಿಯುವಾಗ ಆಯತಪ್ಪಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿಗಳ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದು ಮೃತ ವ್ಯಕ್ತಿಗಳ ಮೃತದೇಹಗಳು ಸಿಗಬೇಕಿದೆ. ಮೃತ ವ್ಯಕ್ತಿಗಳನ್ನ ಪಟ್ಟಣದ ಜನತೆ ತಂಡೋಪತಂಡವಾಗಿ ನೋಡಲು ಆಗಮಿಸುತ್ತಿರುವುದು ಕಂಡು ಬಂದಿದೆ.