ಮುಂಡಗೋಡಿನ ಪತ್ರಕರ್ತ ಮಿತ್ರ ಶಾಂತೇಶಕುಮಾರ್ ಬೆನಕನಕೊಪ್ಪ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ‌ ನೀಡುವ ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿನಿಧಿ ಪುರಸ್ಕಾರಕ್ಕೆ‌ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಪತ್ರಿಕೆಯ ತಾಲೂಕಾ ವರದಿಗಾರರಾಗಿರೋ ಶಾಂತೇಶಕುಮಾರ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಪತ್ರಿಕಾ ಮಿತ್ರರಿಗೆ ಹರ್ಷ ತಂದಿದೆ.

ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಯ ಐವರು ಪತ್ರಕರ್ತರು ಇಂತಹದ್ದೊಂದು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ‌ ಸಭೆಯಲ್ಲಿ ಜಿಲ್ಲಾ ಸಂಘದ ಸದಸ್ಯರಾದ ಐವರು ಪತ್ರಕರ್ತರನ್ನು ಅಂತಿಮಗೊಳಿಸಲಾಗಿದೆ. ಉದಯವಾಣಿ ಪತ್ರಿಕೆಯ ವರದಿಗಾರ ಜೊಯಿಡಾದ ಸಂದೇಶ ದೇಸಾಯಿ, ಪ್ರಜಾವಾಣಿ ಪತ್ರಿಕೆಯ ವರದಿಗಾರ ಕುಮಟಾದ ಎಂ.ಜಿ. ನಾಯ್ಕ, ಹೊಸದಿಗಂತ ಪತ್ರಿಕೆಯ ವರದಿಗಾರ್ತಿ ಯಲ್ಲಾಪುರದ ಪ್ರಭಾವತಿ ಜಯರಾಜ ಗೋವಿ ಹಾಗೂ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಭಟ್ಕಳದ ರಾಘವೇಂದ್ರ ಹೆಬ್ಬಾರ ಇವರುಗಳ ವರದಿ ಮತ್ತು ವಿಶೇಷ ಲೇಖನವನ್ನು ಪರಿಗಣಿಸಿ ಜಿ.ಎಸ್. ಹೆಗಡೆ ಅಜ್ಜೀಬಳ ದತ್ತಿನಿಧಿ ಪುರಸ್ಕಾರಕ್ಕೆ ಆಯ್ಕೆಗೊಳಿಸಲಾಗಿದೆ.

ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರದಲ್ಲಿ ಜಿ.ಎಸ್. ಹೆಗಡೆ ಅಜ್ಜೀಬಳ ಪುರಸ್ಕಾರ ನೀಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಬ್ಲಿಕ್ ಫಸ್ಟ್ ನ್ಯೂಸ್ ಟೀಂ ನಿಂದ ಶಾಂತೇಶಕುಮಾರ್ ಬೆನಕನಕೊಪ್ಪರಿಗೆ ಅಭಿನಂದನೆಗಳು.

error: Content is protected !!