ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾರವರ 88 ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಯಿತು. ಇಲ್ಲಿನ ಕ್ಯಾಂಪ್ ನಂಬರ್ ಒಂದರ ಬೌದ್ದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
ಅಂದಹಾಗೆ, ಇಲ್ಲಿನ ಟಿಬೇಟಿಯನ್ ಕಾಲೋನಿಯಲ್ಲಿ ಟಿಬೇಟಿಗರು ದಲೈ ಲಾಮಾರ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪ್ರತೀ ಮನೆ ಮನೆಗಳಲ್ಲೂ ದಲೈ ಲಾಮಾರವರ ಹುಟ್ಟುಹಬ್ಬದ ವಿಶೇಷ ಸಂಭ್ರಮಗಳು ನಡೆಯುತ್ತಿವೆ. ದೀರ್ಘಾಯುಷ್ಯ ಕೋರಿ ಪ್ರಾರ್ಥನೆಗಳು ನಡೆಯುತ್ತಿವೆ. ಅಲ್ಲದೇ, ಹಲವು ಸಾಮಾಜಿಕ, ಸಾಂಸ್ಕೃತಿಕ, ದಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.