“ಆಕಾಶದತ್ತ ಚಿಗರಿತು ಬೇರು ಮುತ್ತಾತಲೇ ಪರಾಕ್” ದೇವರಗುಡ್ಡ ಮಾಲತೇಶ ಸ್ವಾಮಿಯ ಕಾರ್ಣಿಕ

ಆಕಾಶದತ್ತ ಚಿಗರಿತು ಬೇರು ಮುತ್ತಾತಲೇ ಪರಾಕ್” ಇದು ಪ್ರಸಕ್ತ ವರ್ಷದ ದೇವರಗುಡ್ಡ ಮಾಲತೇಶ ಸ್ವಾಮಿಯ ಕಾರ್ಣಿಕ..

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಸ್ವಾಮಿಯ ದೈವ ವಾಣಿ ಕಾರ್ಣಿಕ ಶುಕ್ರವಾರ ಸಂಜೆ ಜರುಗಿತು.

ನಾಗಪ್ಪಜ್ಜ ಉರ್ಮಿ 21 ಅಡಿ ಬಿಲ್ಲನ್ನು ಏರಿ “ಆಕಾಶದತ್ತ ಚಿಗರಿತು ಬೇರು ಮುತ್ತಾತಲೇ ಪರಾಕ್” ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ವಿಜಯದಶಮಿಯ ಮುನ್ನಾದಿನ ಕ್ಷೇತ್ರ ದೇವರಗುಡ್ಡದಲ್ಲಿ ಗೊರವಯ್ಯ ಕಾರ್ಣಿಕ ನುಡಿಯುವ ಸಂಪ್ರದಾಯವಿದೆ.
“ದಸರಾ ಸಂದರ್ಭದಲ್ಲಿ ಕಾರ್ಣಿಕ ನುಡಿಯುವ ನಾಗಪ್ಪ ಉರ್ಮಿ 21 ಅಡಿ ಬಿಲ್ಲನ್ನು ಏರಿ ಆಯುಧಪೂಜೆಯ ದಿನದಂದು ಭವಿಷ್ಯ ನುಡಿದಿರುತ್ತಾರೆ. “ಆಕಾಶದತ್ತ ಚಿಗರಿತು ಬೇರು ಮುತ್ತಾತಲೇ ಪರಾಕ್” ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಪ್ರತೀ ವರ್ಷ ನಿಜಾಂಶವನ್ನು ತಿಳಿಸುವಂತಹ ಭವಿಷ್ಯವಾಣಿ ಇದಾಗಿರುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಈ ವರ್ಷದ ಕಾರ್ಣಿಕವು ಉತ್ತಮವಾಗಿದ್ದು, ಭವಿಷ್ಯವಾಣಿಯನ್ನು ರೈತಾಪಿ ವರ್ಗದ ಪರವಾಗಿ ವಿಶ್ಲೇಷಿಸಲಾಗುತ್ತಿದೆ.

error: Content is protected !!