ಗುಂಜಾವತಿ ಕಟ್ಟಿಗೆ ಕಳ್ಳತನ ಕೇಸ್, ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು, ಅಷ್ಟಕ್ಕೂ ಶಿರಾಳಕೊಪ್ಪದ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?



ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ಕಳೆದ ಜೂನ್ 12 ರಂದು ಅರಣ್ಯಗಳ್ಳತನದ ವಿಫಲ ಯತ್ನ ಕೇಸ್ ಬಟಾ ಬಯಲಾಗಿದೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕೇಸಿಗೆ ಸಂಭಂಧಿಸಿದಂತೆ ಸದ್ಯ ಇಬ್ಬರು ಆರೋಪಿಗಳನ್ನ ವಾಹನ ಸಮೇತ ಅರಣ್ಯ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾಗಂತ, ಯಲ್ಲಾಪುರ ವಿಭಾಗದ ಡಿಎಫ್ ಓ ಶಶಿಧರ್ ಹೆಗಡೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಶಿರಾಳಕೊಪ್ಪದ ಗ್ಯಾಂಗ್..?
ಅಂದಹಾಗೆ, ಗುಂಜಾವತಿ ಅರಣ್ಯದಲ್ಲಿ ಕಟ್ಟಿಗೆ ಕಳ್ಳತನ ಪ್ರಕರಣದ ಮೂಲಕ, ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅದೊಂದು ಗ್ಯಾಂಗ್ ಸಂಪೂರ್ಣ ಆ್ಯಕ್ಟಿವ್ ಆಗಿರೋ ಎಲ್ಲಾ ಸೂಚನೆ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಿಂದ ಖಾಯಂ ಆಗಿ ಮುಂಡಗೋಡ ಭಾಗದ ಕೆಲವು ಕಡೆ ನಿರಂತರ ಅರಣ್ಯಗಳ್ಳತನ ಮಾಡುತ್ತಿದ್ದಾರಾ..? ಅನ್ನೊ ಅನುಮಾನಕ್ಕೆ ಕಾರಣವಾಗಿದ್ದು, ಸದ್ಯ ಗುಂಜಾವತಿ ಕಟ್ಟಿಗೆ ಕಳ್ಳತನದ ವಿಫಲ ಯತ್ನದ ಕೇಸಿನಲ್ಲಿ ಶಿರಾಳಕೊಪ್ಪದ ಇಬ್ಬರು ಅಂದರ್ ಆಗಿದ್ದಾರೆ. ಶಿಖಾರಿಪುರ ತಾಲೂಕಿನ ಇನಾಮ್ ಮುತ್ತಳ್ಳಿ ಗ್ರಾಮದ ಕರೆಪ್ಪ ದುಗ್ಗಪ್ಪ ಹುಬ್ಬಳ್ಳಿ ಹಾಗೂ ಏಕಾಂತ್ ಲಕ್ಷಪ್ಪ ಹುಲ್ಲತ್ತಿ ಎಂಬುವವರು ಆರೆಸ್ಟ್ ಆಗಿದ್ದಾರೆ. ಅಸಲು, ಇನ್ನೂ ಈ ಕೇಸಲ್ಲಿ ಹಲವರು ಭಾಗಿಯಾಗಿದ್ದಾರೆ. ಆದ್ರೆ, ಅವ್ರೇಲ್ಲ ಇವಾಗ ಎಸ್ಕೇಪ್ ಆಗಿದ್ದಾರೆ. ಅವ್ರನ್ನ ಸದೆಬಡಿಯೋ ಕಾರ್ಯಾಚರಣೆ ಜಾರಿಯಲ್ಲಿದೆಯಂತೆ. ಹಾಗಂತ ಮುಂಡಗೋಡಿನಲ್ಲಿ ಯಲ್ಲಾಪುರ ಡಿಎಫ್ ಓ ಶಶಿಧರ್ ಹೆಗಡೆ ಮಾಹಿತಿ ನೀಡಿದ್ದಾರೆ.

ಅದು ವಿಫಲ ಯತ್ನ..!
ಹೌದು, ಜೂನ್ 12 ರ ರಾತ್ರಿ ಗುಂಜಾವತಿ ಸಮೀಪದ ಅರಣ್ಯದಲ್ಲಿ ಮೂರು ಬೆಲೆಬಾಳುವ ಮರಗಳನ್ನು ಕಡಿದು ಹಾಕಲಾಗಿತ್ತು. ಹಾಗೆ ಕಡಿದ ಮರಗಳ 12 ತುಂಡುಗಳನ್ನು ಸಾಗಿಸಲು ವಿಫಲ ಯತ್ನ ನಡೆದಿತ್ತು. ರಸ್ತೆಯಿಂದ ಕೇವಲ ಒಂದು ಕಿಮೀ ಅಂತರದ ಕಾಡಿನ ಒಳಗೆ ಇಂತಹದ್ದೊಂದು ಕಳ್ಳತನದ ಕೃತ್ಯ ನಡೆದಿತ್ತು. ಮರಗಳನ್ನು ಕಡಿದು ವಾಹನದಲ್ಲಿ ಭರ್ತಿ ಮಾಡಿಕೊಂಡು ಸಾಗಿಬಂದಿದ್ದ ಅರಣ್ಯಗಳ್ಳರು ದಾರಿಗುಂಟ ಕಟ್ಟಿಗೆ ತುಂಡುಗಳನ್ನು ಎಸೆದು ಬಂದಿದ್ರು. ಬಹುಶಃ ವಾಹಮ‌ಕೈ ಕೊಟ್ಟಿದ್ದರಿಂದಲೋ ಏನೋ ಕಡಿದ ಮಾಲು ಸಾಗಿಸಲು ಸಾಧ್ಯವಾಗದೇ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ, ಬರೀಗೈಯಲ್ಲೇ ವಾಪಸು ಹೋಗಿದ್ದರು‌. ಹೀಗಾಗಿ, ಇದೊಂದು ಪ್ರಕರಣ ಇಡೀ ಇಲಾಖೆಯ ಅಧಿಕಾರಿಗಳಿಗೆ ಒಂದಿಷ್ಟು ಸವಾಲಾಗಿತ್ತು.

ಖಡಕ್ ತನಿಖೆ..!
ಅಸಲು, ಮೂರೂ ಮರಗಳ‌ ಮಾರಣಹೋಮ‌ ಮಾಡಿ, ಮಾಲು ಸಾಗಿಸಲಾಗದೇ ಅಲ್ಲೇ ಬಿಟ್ಟು ಹೋದ ಕಳ್ಳರಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಲವು ಆಯಾಮಗಳಿಂದ ತನಿಖೆ ಕೈಗೊಂಡಿದ್ದರು. ಹೀಗಾಗಿ, ಈಗ ಕೇಸಿನ ಒಂದು ಹಂತದ ಯಶಸ್ಸು ಸಿಕ್ಕಾಗಿದೆ.

ಯಲ್ಲಾಪುರ DFO ಎಸ್.ಜಿ ಹೆಗಡೆ ರವರ ಮಾರ್ಗದರ್ಶನದಂತೆ, ACF ಎಸ್‌.ಎಂ ವಾಲಿ ನಿರ್ದೇಶನದಂತೆ RFO ಸುರೇಶ ಅರ್ಜುನ್ ಕುಳ್ಳೊಳ್ಳಿ, DyRFO ಶ್ರೀಶೈಲ್ ಎನ್ ಐನಾಪೂರ, ಫಕ್ಕೀರೇಶ ಸುಣಗಾರ, ಸಂತೋಷ ಕುರುಬರ, ಕುಮಾರಿ ಸುನಿತಾ ಬಿ.ಎಂ, ಶಂಕರ ಬಾಗೇವಾಡಿ, ಚಂದ್ರಕಾಂತ ಮುಕ್ತಿ ಹಾಗೂ ಗಸ್ತು ಅರಣ್ಯ ಪಾಲಕರಾದ ಶ್ರೀಧರ ಬಿ ಭಜಂತ್ರಿ, ದೇವರಾಜ ಜಿ ಆಡಿನ್, ಕಬ್ಬಿನ, ಮುಸ್ತಾಕಲಿ ಒಂಟಿ, ಮುತ್ತಣ್ಣ ಟಿ ಹಿರೇಕಣಗಿ, ಶಿವಪ್ಪ ಭೀಮರಾಯ ಹಾಗೂ ವಾಚರ್‌ಗಳಾದ ಅಶೋಕ ಮೇಲಿನಮನಿ, ಬಸವರಾಜ, ವಾಹನ ಚಾಲಕ ಶಿವಾನಂದ ಲಮಾಣಿ ಇವರುಗಳು ಭಾಗಿಯಾರುತ್ತಾರೆ.

error: Content is protected !!