Home ಹಾವೇರಿ

Category: ಹಾವೇರಿ

Post
ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!

ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ಪ್ರಕರಣ: ಮೂವರ ಜೀವಂತ ದಹನ, ಇನ್ನೂ ಹಲವರು ಸಾವು ಶಂಕೆ..!

 ಹಾವೇರಿ : ನಗರಕ್ಕೆ ಸಮೀಪದ ಅಲದಕಟ್ಟಿ ಗ್ರಾಮದಲ್ಲಿನ ಪಟಾಕಿ ದಾಸ್ತಾನು ಮಾಡಿದ್ದ ಗೋದಾಮಿಗೆ ಬೆಂಕಿ ತಗಲಿ ಭಾರೀ ಅನಾಹುತ ಸಂಭವಿಸಿದೆ. ಈ ವೇಳೆ ಮೂರು ಅಮೂಲ್ಯ ಜೀವಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ. ಈಗ್ಗೆ ಕೆಲವೇ ಹೊತ್ತಿನಲ್ಲಿ ಸಂಜೆ 5 ಗಂಟೆ ವೇಳೆಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಪರಿಶೀಲಿಸುವ ವೇಳೆ ಶೆಟರ್‍ಸ್ ಬಳಿ ಮೂವರ ಶವ ಕಂಡು ಬಂದಿವೆ. ಗೋದಾಮಿನಲ್ಲಿ ರ್‍ಯಾಕ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು. ಅದರ ಒಳಗೆ ಇನ್ನು...

Post
ತಡಸ ಬಳಿ ತಿಮ್ಮಾಪುರ ಕ್ರಾಸನಲ್ಲಿ ಭೀಕರ ಅಪಘಾತ, ಮದುವೆ ಆಗಬೇಕಿದ್ದ ಜೋಡಿ ಸ್ಥಳದಲ್ಲೇ ಸಾವು..!

ತಡಸ ಬಳಿ ತಿಮ್ಮಾಪುರ ಕ್ರಾಸನಲ್ಲಿ ಭೀಕರ ಅಪಘಾತ, ಮದುವೆ ಆಗಬೇಕಿದ್ದ ಜೋಡಿ ಸ್ಥಳದಲ್ಲೇ ಸಾವು..!

ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿ ನಸುಕಿನ ಜಾವ ಭೀಕರ ಅಪಘಾತವಾಗಿದೆ. ಲಾರಿ ಹಾಗೂ ಕಾರು ಮುಖಾಮುಕಿ ಡಿಕ್ಕಿಯಾದ ಪರಿಣಾಮ, ಇನ್ನೇನು ಮದುವೆ ಆಗಬೇಕೆಂಬ ಕನಸು ಹೊತ್ತಿದ್ದ ಜೋಡಿ ಸ್ಥಳದಲ್ಲೇ ದಾರುಣ ಸಾವು ಕಂಡಿದೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ. ಮನೋಹರ್ (38), ಪ್ರಿಯಾಂಕಾ(23) ಸಾವನ್ನಪ್ಪಿದ ದುರ್ದೈವಿಗಳು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿಯ NH4 ರಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನಿಂದ ಬಾಂಬೆಗೆ ಹೊರಟಿದ್ದ ಇವರ, ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತರು ಬೆಂಗಳೂರು...

Post
ತಡಸ ಕತ್ರಿ ಸಮೀಪದ ನೀರಲಗಿ ಕ್ರಾಸ್ ಬಳಿ ಕಾರ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು, ರಾ.ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ..!

ತಡಸ ಕತ್ರಿ ಸಮೀಪದ ನೀರಲಗಿ ಕ್ರಾಸ್ ಬಳಿ ಕಾರ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು, ರಾ.ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ..!

 ಶಿಗ್ಗಾವಿ ತಾಲೂಕಿನ ತಡಸ ಸಮೀಪದ ರಾ.ಹೆದ್ದಾರಿ 4 ರ ನೀರಲಗಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ರಸ್ತೆ ಬದಿ ನಿಂತಿದ್ದ ಇಬ್ಬರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ, ಅಪಘಾತದಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 4 ನ್ನು ತಡೆದು ಪ್ರತಿಭಟನೆ ನಡೆಸ್ತಿದಾರೆ. ಎನ್ ಎಮ್ ತಡಸ್ ನೀರಲಗಿ ಗ್ರಾಮದ ಚಿದಾನಂದ ನಿಂಗಪ್ಪ ಶೆರೆವಾಡ (55) ವಿರೂಪಾಕ್ಷಪ್ಪ ಕಾಳೆ(60) ಸ್ಥಳದಲ್ಲೇ ಸಾವು ಕಂಡ ದುರ್ದೈವಿಗಳಾಗಿದ್ದಾರೆ. ತಮ್ಮ ಗ್ರಾಮದಿಂದ ಬೆಳಿಗ್ಗೆ ಶಿಗ್ಗಾವಿಗೆ ತೆರಳಲು...

Post
ನಾಳೆ ಹಾವೇರಿಗೆ ಸಿಎಂ ಸಿದ್ದರಾಮಯ್ಯ, ಪ್ರಗತಿ ಪರಿಶೀಲನಾ ಸಭೆ ನಡೆಸಲಿರೋ ಸಿಎಂ..!

ನಾಳೆ ಹಾವೇರಿಗೆ ಸಿಎಂ ಸಿದ್ದರಾಮಯ್ಯ, ಪ್ರಗತಿ ಪರಿಶೀಲನಾ ಸಭೆ ನಡೆಸಲಿರೋ ಸಿಎಂ..!

ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಕೆಲವು ಕಡೆ ಹಾನಿಯಾದ ಹಿನ್ನಲೆಯಲ್ಲಿ, ನಾಳೆ ಮೊದಲ ಬಾರಿಗೆ ಏಲಕ್ಕಿ ನಾಡಿಗೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಕೃಷಿ,ಆರೋಗ್ಯ,ಆಹಾರ, ಮಳೆ-ಬೆಳೆ ಹಾನಿ ಹಾಗೂ ಶಿಕ್ಷಣ ಇಲಾಖೆಯ ಸಮಸ್ಯೆಗಳ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಿರೋ ಸಿಎಂ ಸಿದ್ದರಾಮಯ್ಯ, ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಹೀಗಾಗಿ, ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ರಿಂದ ಪೂರ್ವ ಭಾವಿ ಸಭೆ ನಡೆಯಿತು....

Post
ಎಮ್ಮೆ ಮೈ ತೊಳೆಯಲು ನೀರಿಗೆ ಇಳಿದಿದ್ದ ಯುವಕ ದಾರುಣ ಸಾವು..!

ಎಮ್ಮೆ ಮೈ ತೊಳೆಯಲು ನೀರಿಗೆ ಇಳಿದಿದ್ದ ಯುವಕ ದಾರುಣ ಸಾವು..!

ಹಾನಗಲ್: ತುಂಬಿ ಹರಿಯುತ್ತಿರೋ ಧರ್ಮಾ ನದಿಯಲ್ಲಿ ಎಮ್ಮೆ ಮೈತೊಳೆಯುವಾಗ ಕಾಲುಜಾತಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಯಮನಪ್ಪ ಬಂಡಿವಡ್ಡರ (24)ಮೃತ ಯುವಕನಾಗಿದ್ದಾನೆ. ಎಮ್ಮೆ ಮೇಯಿಸಲು ಜಮೀನಿಗೆ ತೆರಳಿದ್ದ ಮೃತ ಯಮನಪ್ಪ, ಮರಳಿ ವಾಪಸ್ಸು ಮನೆಗೆ ಬರುವಾಗ ಧರ್ಮಾ ನದಿಯಲ್ಲಿ ಎಮ್ಮೆ ಮೈ ತೊಳೆಯುವಾಗ ದುರಂತ ಸಂಭವಿಸಿದೆ. ಕಾಲು ಜಾರಿ ನದಿಗೆ ಬಿದ್ದಾಗ ಈಜು ಬಾರದೆ ಯುವಕ ಸಾವು ಕಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಆಡೂರು ಪೋಲಿಸರ ಭೇಟಿ ನೀಡಿ...

Post
ಲಂಚ ಪಡೆಯುತ್ತಿದ್ದ ವೇಳೆ, ಹಾವೇರಿ DDPI ಮೇಲೆ ಲೋಕಾಯುಕ್ತ ದಾಳಿ, DDPI ಅಂದಾನೆಪ್ಪ ಸೇರಿ ಇಬ್ಬರು ವಶಕ್ಕೆ..!

ಲಂಚ ಪಡೆಯುತ್ತಿದ್ದ ವೇಳೆ, ಹಾವೇರಿ DDPI ಮೇಲೆ ಲೋಕಾಯುಕ್ತ ದಾಳಿ, DDPI ಅಂದಾನೆಪ್ಪ ಸೇರಿ ಇಬ್ಬರು ವಶಕ್ಕೆ..!

ಹಾವೇರಿ: ಡಿಡಿಪಿಐ ಹಾಗೂ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಡಿಡಿಪಿಐ ಅಂದಾನೆಪ್ಪ ಒಡಿಗೇರಿ ಹಾಗೂ ಕೇಸ್ ವರ್ಕರ್ ದತ್ತಾತ್ರೆಯ್ ಕುಂಟೆಯವರನ್ನ ಲೋಕಾ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಮಹಮ್ಮದ್ ಗೌಸ್ ಎಂಬ ಶಿಕ್ಷಕ, ತಮ್ಮ ನಿವೃತ್ತಿ ವೇತನ ಸೌಲಭ್ಯ ಪಡೆಯಲು ಅಗತ್ಯ ದಾಖಲಾತಿಗಳನ್ನು ನೀಡಿದ್ದರು. ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲು ಕೋರಿದ್ದರು. ಅದಕ್ಕಾಗಿ ಡಿಡಿಪಿಐ 7 ಸಾವಿರ...

Post
ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಶಿಗ್ಗಾವಿಯಲ್ಲಿ ಜೈನರೂ ಸೇರಿ ವಿವಿಧ ಸಮಾಜಗಳಿಂದ ಪ್ರತಿಭಟನಾ ಮೆರವಣಿಗೆ..!

ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಶಿಗ್ಗಾವಿಯಲ್ಲಿ ಜೈನರೂ ಸೇರಿ ವಿವಿಧ ಸಮಾಜಗಳಿಂದ ಪ್ರತಿಭಟನಾ ಮೆರವಣಿಗೆ..!

 ಶಿಗ್ಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಶಿಗ್ಗಾವಿ ತಾಲೂಕಿನ ಜೈನ ಸಮಾಜದ ಬಾಂಧವರು, ಮಠಾಧೀಶರು ಹಾಗೂ ವಿವಿಧ ಸಮಾಜದ ಮುಖಂಡರು ಶಿಗ್ಗಾವಿಯಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪಟ್ಟಣದ ಮಹಾವೀರ ವೃತ್ತದಿಂದ ಹೊರಟ ಮೌನ ಪ್ರತಿಭಟನಾ ಮೆರವಣಿಗೆ, ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಾಗಿ ಬಂದಿತು, ನಂತರ ವಿರಕ್ತಮಠದ ಶ್ರೀ ಸಂಗನಬಸವ ಶ್ರೀಗಳು ಜೂನ ಮುನಿಶ್ರೀಯವರ ಭೀಕರ ಹತ್ಯೆಯನ್ನು ಖಂಡಿಸಿ ಮಾತನಾಡಿದ್ರು‌. ಸಮಾಜದಲ್ಲಿ ಶ್ರೀಗಳಿಗೆ, ಮಠಾಧೀಶರಿಗೆ ಸೂಕ್ತ ರಕ್ಷಣೆ ನೀಡುವಂತೆ...

Post
ಬಂಕಾಪುರ ಬಳಿ ಲಾರಿ, ಕಾರು ಮುಖಾಮುಕಿ ಡಿಕ್ಕಿ, ಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು..!

ಬಂಕಾಪುರ ಬಳಿ ಲಾರಿ, ಕಾರು ಮುಖಾಮುಕಿ ಡಿಕ್ಕಿ, ಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು..!

ಶಿಗ್ಗಾವಿ: ಲಾರಿ ಹಾಗೂ ಕಾರು ಮಧ್ಯೆ ಡಿಕ್ಕಿಯಾದ ಪರಿಣಾಮ ಮೆಡಿಕಲ್ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿಗ್ಗಾವಿ ತಾಲೂಕಿ‌ನ ಬಂಕಾಪುರ ಬಳಿಯ ತಂಬಾಕದ ಮನೆಯ ಹತ್ತಿರ ರಾ.ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಖಿಲ ಕುಂಬಾರ (27), ಎಂಬುವ ವಿದ್ಯಾರ್ಥಿ ಸಾವು ಕಂಡಿದ್ದು, ಬೆಳಗಾವಿಯಲ್ಲಿ ಎಂಡಿ ವಿದ್ಯಾಭ್ಯಾಸ ಮಾಡ್ತಾ ಇದ್ದ, ಬೆಂಗಳೂರಿನ ನಿವಾಸಿ ಎನ್ನಲಾಗಿದೆ. ಇಂದು ಬೆಳಗಾವಿ ಇಂದ ದಾವಣಗೆರೆ ಗೆ ಹೊರಟಿದ್ದ ವೇಳೆ, ಹೆದ್ದಾರಿಯ ಮೇಲೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜು ನಜ್ಜುಗುಜ್ಜಾಗಿದೆ. ಹೀಗಾಗಿ, ವಿದ್ಯಾರ್ಥಿ...

Post
ಬಸವನಕಟ್ಟಿ ಕರಡಿ ದಾಳಿ ಕೇಸ್: ಪ್ರತಿದಾಳಿ ಮಾಡಿ ಪತಿ ಹಾಗೂ ತಮ್ಮನ ಪ್ರಾಣ ಉಳಿಸಿದ ಸಬೀನಾ..! ಗಾಯಗೊಂಡವರ ಸ್ಥಿತಿ ಹೇಗಿದೆ ಗೊತ್ತಾ..?

ಬಸವನಕಟ್ಟಿ ಕರಡಿ ದಾಳಿ ಕೇಸ್: ಪ್ರತಿದಾಳಿ ಮಾಡಿ ಪತಿ ಹಾಗೂ ತಮ್ಮನ ಪ್ರಾಣ ಉಳಿಸಿದ ಸಬೀನಾ..! ಗಾಯಗೊಂಡವರ ಸ್ಥಿತಿ ಹೇಗಿದೆ ಗೊತ್ತಾ..?

 ಮುಂಡಗೋಡ ಸಮೀಪದ ಶಿಗ್ಗಾವಿ ತಾಲೂಕಿನ ಬಸವನಕಟ್ಟಿಯಲ್ಲಿ, ನಿನ್ನೆ ನಡೆದಿದ್ದ ಕರಡಿ ದಾಳಿಯಲ್ಲಿ ಗಾಯಗೊಂಡಿದ್ದವರು ಹುಬ್ನಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ಭೀಕರ ಕರಡಿ ದಾಳಿಯಿಂದ ತನ್ನ ಪತಿ ಹಾಗೂ ಸಹೋದರನನ್ನು ದಿಟ್ಟತನದಿಂದ ಹೋರಾಡಿ ರಕ್ಷಿಸಿಕೊಂಡ ಮಹಿಳೆ ಈಗ ಭಾರೀ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಅಂದಹಾಗೆ, ಬಸವನಕಟ್ಟಿ ಗ್ರಾಮದ ಸಬೀನಾ ಎಂಬುವ ಮಹಿಳೆ ನಿನ್ನೆ ಶನಿವಾರ ತನ್ನ ಪತಿ ಹಾಗೂ ಸಹೋದರನ ಜೊತೆ ಗದ್ದೆಗೆ ತೆರಳಿದ್ದರು. ಈ ವೇಳೆ ತನ್ನ ಮರಿಗಳೊಂದಿಗೆ ಬಂದಿದ್ದ ಕರಡಿ, ತನ್ನ ಮರಿಗಳಿಗೆ...

Post
ಕೋಣನಕೇರಿ ಸಮೀಪದ ಬಸವನಕಟ್ಟಿ ಗ್ರಾಮದಲ್ಲಿ ಮೂವರ ಮೇಲೆ ಕರಡಿ ದಾಳಿ, ಇಬ್ಬರಿಗೆ ಗಂಭೀರ ಗಾಯ..!

ಕೋಣನಕೇರಿ ಸಮೀಪದ ಬಸವನಕಟ್ಟಿ ಗ್ರಾಮದಲ್ಲಿ ಮೂವರ ಮೇಲೆ ಕರಡಿ ದಾಳಿ, ಇಬ್ಬರಿಗೆ ಗಂಭೀರ ಗಾಯ..!

ಶಿಗ್ಗಾವಿ: ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರ ಮೇಲೆ ಭೀಕರವಾಗಿ ಕರಡಿ ದಾಳಿ ಮಾಡಿದೆ. ಪರಿಣಾಮ ಇಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ. ಮುಂಡಗೋಡ ಸಮೀಪದ ಕೋಣನಕೇರಿ ರಸ್ತೆಯಲ್ಲಿರೋ ಬಸವನಕಟ್ಟಿ ಗ್ರಾಮದ ಬಸಿರಸಾಬ್ ಸವದತ್ತಿ ಹಾಗೂ ಶಬಿನಾಬಾನು ಸವದತ್ತಿ, ರಜಾಕ್ ನಾಲವತ್ತಿ ಎಂಬುವ ಮೂವರ ಮೇಲ ಕರಡಿ ದಾಳಿ ಮಾಡಿದೆ. ಶನಿವಾರ ಮದ್ಯಾಹ್ನ ಜಮೀನಿಗೆ ಕೆಲಸಕ್ಕೆ ಎಂದು ಹೋದ ವೇಳೆ ಕರಡಿ ದಾಳಿ ಮಾಡಿದ್ದು, ಗಾಯಗೊಂಡಿರೋ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ನಂತರ...

error: Content is protected !!