ಮುಂಡಗೋಡಿಗೆ ಅಪರೂಪದ ಅತಿಥಿಯ ಆಗಮನ, ರಕ್ಷಣೆ..! ಮುಂಡಗೋಡ: ಪಟ್ಟಣದ BSNL ವಸತಿ ಸಮುಚ್ಛಯದ ಮಹಡಿ ಮೇಲೆ ಇಂದು ಅಪರೂಪದ ಅತಿಥಿಯೊಂದು ಆಗಮಿಸಿತ್ತು. BSNL ವಸತಿ ಸಮುಚ್ಚಯದ ಟೇರೇಸಿನ ಮೇಲೆ ಕಣಜ ಗೂಬೆ (Barn owl) ಪ್ರತ್ಯಕ್ಷವಾಗಿತ್ತು. ಅಪರೂಪದ ಈ ಪಕ್ಷಿಯನ್ನು ಕಂಡ ಸ್ಥಳೀಯರು ಆಶ್ಚರ್ಯಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರು. ಮಾಹಿತಿ ಪಡೆದು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಶ್ರೀಧರ ಬಜಂತ್ರಿ ಅಪರೂಪದ ಕಣಜ ಗೂಬೆಯನ್ನು ರಕ್ಷಿಸಿದ್ರು. ಹಾಗೆ ರಕ್ಷಿಸಿದ ಕಣಜ ಗೂಬೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಶಿವಪ್ಪ ಸಾಥ್ ನೀಡಿದ್ರು.
Top Stories
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
108 ಅಂಬ್ಯುಲೆನ್ಸ್ ನಲ್ಲೆ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!
ಮುಂಡಗೋಡ: ತಾಲೂಕಿನ ಕರವಳ್ಳಿ ಗ್ರಾಮದ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಗೆ ಅಂತಾ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಾಗಿದ್ದ ಕರವಳ್ಳಿಯ ಜ್ಯೋತಿ ಅಜಿತ್ ಕುಮಾರ್ ಕಾಂಬಳೆ ಎಂಬುವ ಮಹಿಳೆಗೆ ಪರೀಕ್ಷಿಸಿದ್ದ ವೈದ್ಯರು, ಹೇರಿಗೆ ನಂತರ ಮಗುವಿಗೆ NICU ಅವಶ್ಯಕತೆ ಇರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ರೆಫರ್ ಮಾಡಿದ್ರು. ಹೀಗಾಗಿ ಮುಂಡಗೋಡಿನ 108 ಅಂಬ್ಯುಲೆನ್ಸ್ ಮೂಲಕ ಹುಬ್ಬಳ್ಳಿಗೆ ಹೋಗುತ್ತಿದ್ದಾಗ, ಮಾರ್ಗಮದ್ಯೆ ಹೇರಿಗೆ ನೋವು ಹೆಚ್ಚಾದಾಗ ಅಂಬ್ಯುಲೆನ್ಸ್ ನಲ್ಲೇ ಸುರಕ್ಷಿತ ವಾಗಿ ಹೆರಿಗೆ ಮಾಡಿಸಲಾಗಿದೆ. ನಂತರ ಕಿಮ್ಸ್ ಗೆ ದಾಖಲಿಸಲಾಗಿದೆ. ತಾಯಿ ಮಗು ಇಬ್ಬರೂ ಆರೋಗ್ಯ ವಾಗಿದ್ದಾರೆ 108 ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರು, ಹಾಗೂ ಚಾಲಕ ಕೆಂಚೇಶ್ ಇ. ಎನ್. ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.
ಸಾಲಗಾಂವ್ ನಲ್ಲಿ ಕೋವಿಡ್ ಸ್ಫೋಟ, ತಾಲೂಕಿನಲ್ಲಿ ಇಂದು 24 ಪಾಸಿಟಿವ್..!
ಮುಂಡಗೋಡ: ತಾಲೂಕಿನಲ್ಲಿ ಇಂದು 24 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಅಂತಾ ಅರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸಾಲಗಾಂವ ಗ್ರಾಮ ಒಂಚಾಯತಿ ವ್ಯಾಪ್ತಿ ಒಂದರಲ್ಲೇ ಬರೋಬ್ಬರಿ 10 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಇನ್ನುಳಿದಂತೆ, ಮುಂಡಗೋಡ ಪಟ್ಟಣದಲ್ಲಿ-2, ಟಿಬೇಟಿಯನ್ ಕ್ಯಾಂಪ್ STS ಶಾಲೆಯ 5 ವಿದ್ಯಾರ್ಥಿಗಳು ಸೇರಿದಂತೆ- 6, ಕಾತೂರ- 1, ಇಂದೂರ- 2, ಪಾಳಾ- 1, ಕಲಕೇರಿ – 1, ಸಾಲಗಾಂವ್- 10 ರಾಮಾಪುರ 1 ಪ್ರಕರಣ ದೃಢಪಟ್ಟಿದೆ.
ಇದು 108 ಅಂಬ್ಯುಲೆನ್ಸ್ ಸಿಬ್ಬಂದಿಗಳ ಮನದಾಳ, ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ಹೇಳಿದ್ದಿಷ್ಟು..!
ಮುಂಡಗೋಡ: ಪಟ್ಟಣದ ನಿವೃತ್ತ ನೌಕರರ ಸಭಾಭವನದಲ್ಲಿ ಇಂದು 108 ಅಂಬ್ಯುಲೆನ್ಸ್ ನೌಕರರ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ರು. ರಾಜ್ಯ ಮಟ್ಟದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ್ರು. ಸರ್ಕಾರಕ್ಕೆ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿದ್ರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ್ ಹಳ್ಳೂರು ಮಾತನಾಡಿ, 2016 ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 150 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಹಾಗೆ ವಜಾ ಮಾಡಿರೋ ಸಿಬ್ಬಂದಿಗಳನ್ನು ಪುನಃ ಕರ್ತವ್ಯಕ್ಕೆ ನೇಮಕ ಮಾಡಿಕೊಳ್ಳಬೇಕು, ಅಲ್ದೇ, ಹಳೆಯ ಸಿಬ್ಬಂದಿಗಳ ವೇತನ ತಾರತಮ್ಯ ಸರಿಪಡಿಸಬೇಕು ಅಂತಾ ಅವ್ರು ಮನವಿ ಮಾಡಿದ್ರು. ಹೊಸ ಟೆಂಡರ್ ವಿಚಾರ..! ಇನ್ನೇನು ಕೆಲವೇ ದಿನಗಳಲ್ಲಿ ನೂತನ ಟೆಂಡರ್ ಕರೆಯಲಾಗುತ್ತದೆ. ಆ ಟೆಂಡರ್ ನಲ್ಲಿ ಈಗಿರುವ ಸಿಬ್ಬಂದಿಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಬೇರೆ ಸಿಬ್ಬಂದಿಗಳ ನಿಯೋಜನೆಗೆ ಮುಂದಾಗಬಾರದು ಅಂತಾ ರಾಜ್ಯಾಧ್ಯಕ್ಷ ಶ್ರೀಶೈಲ್ ಹಳ್ಳೂರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅರಿಯರ್ಸ್, ಇನ್ಕ್ರಿಮೆಂಟ್ ನೀಡಿ..! ಹಾಗೆಯೇ, ರಾಜ್ಯದ 108 ಆರೋಗ್ಯ ಕವಚ ಸಿಬ್ಬಂದಿಗಳಿಗೆ 2020-21 ರ ಅರಿಯರ್ಸ್, ಇನ್ಕ್ರಿಮೆಂಟ್ ನೀಡಲು ಒತ್ತಾಯಿಸಿದ...
ನಂದಿಕಟ್ಟಾದಲ್ಲಿ ನಾಯಿ ದಾಳಿಗೆ ಕೋತಿ ಮರಿ ಬಲಿ, ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಾಯಿಗಳ ದಾಳಿಗೆ ತುತ್ತಾಗಿ ಕೋತಿ ಮರಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಮರದ ಮೇಲೆ ಆಟವಾಡುತ್ತಿದ್ದ ಕೋತಿ ಮರಿ ಕೈ ತಪ್ಪಿ ಕೆಳಗೆ ಬಿದ್ದ ಕೂಡಲೇ ಅಲ್ಲೇ ಇದ್ದ ನಾಯಿಗಳ ಹಿಂಡು ದಾಳಿ ಮಾಡಿ ಕೋತಿ ಮರಿಯನ್ನು ಕೊಂದು ಹಾಕಿವೆ. ಹೀಗಾಗಿ ಗ್ರಾಮಸ್ಥರು ಸಾವನ್ನಪ್ಪಿದ ಕೋತಿ ಮರಿಗೆ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತಿಮ ಸಂಸ್ಕಾರ ನಡೆಸಿದ್ರು. ಈ ವೇಳೆ ಗ್ರಾಮದ ಹಲವರು ಭಾಗವಹಿಸಿದ್ದರು.
ಮುಂಡಗೋಡ ಲೊಯೋಲಾ ಬಳಿ ಮಹಿಳೆಗೆ ವಾಹನ ಡಿಕ್ಕಿ, ಸ್ಥಳದಲ್ಲೇ ಮಹಿಳೆ ಸಾವು..!
ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಶಾಲೆಯ ಹತ್ತಿರ ಭಾರೀ ದುರ್ಘಟನೆ ನಡೆದಿದೆ. ಪಾದಾಚಾರಿ ಮಹಿಳೆಯೋರ್ವಳಿಗೆ ಮಾರುತಿ ಇಕೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕರಗಿನಕೊಪ್ಪ ಗ್ರಾಮದ ಲೋಕವ್ವ ಧರ್ಮಣ್ಣ ಲಮಾಣಿ(50) ಅಪಘಾತದಲ್ಲಿ ಮೃತಪಟ್ಟ ಮಹಿಳೆಯಾಗಿದ್ದಾಳೆ. ಶಿರಸಿ ಕಡೆಯಿಂದ ಬರುತ್ತಿದ್ದ ಮಾರುತಿ ಇಕೊ ವಾಹನ, ಮುಂಡಗೋಡ ಕಡೆಯಿಂದ ಕಾಲ್ನಡಿಗೆಯಲ್ಲೇ ಬರುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಫುಲ್ ಟ್ರಾಫಿಕ್ ಜಾಮ್..! ಇನ್ನು ಅಪಘಾತ ಸಂಭವಿಸಿದ ನಂತರ ಶಿರಸಿ ರಸ್ತೆಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೀಗಾಗಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಸನವಳ್ಳಿ ಜಲಾಶಯದ ಬಳಿ ಸ್ಕೂಟಿ ಅಪಘಾತ, ಸವಾರನಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯದ ಹತ್ತಿರ ಅಪಘಾತವಾಗಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ಅಬ್ದುಲ್ ಗಫಾರ್(26) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಸನವಳ್ಳಿ ಜಲಾಶಯದ ಹತ್ತಿರ ಸ್ಕೂಟಿ ಸ್ಕಿಡ್ ಆಗಿರೋ ರೀತಿಯಲ್ಲಿ, ಗಂಭೀರ ಗಾಯಗೊಂಡು ಬಿದ್ದಿದ್ದ ಯುವಕನನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ 108 ಅಂಬ್ಯಲೆನ್ಸ್ ಗೆ ಕರೆ ಮಾಡಿದ್ದಾರೆ. ಹೀಗಾಗಿ, ಮುಂಡಗೋಡ 108 ಅಂಬ್ಯುಲೆನ್ಸ್ ನ ಧನರಾಜ್ ಬಳೂರು ಸೇರಿದಂತೆ ಸಿಬ್ಬಂದಿಗಳು, ಗಾಯಾಳುಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಇನ್ನು ಗಾಯಾಳು ಬಳಿ ಇದ್ದ ಬ್ಯಾಗ್ ಹಾಗೂ ಮೊಬೈಲ್ ಮುಂಡಗೋಡ ಪೊಲೀಸರಿಗೆ 108 ಸಿಬ್ಬಂದಿ ಹಸ್ತಾಂತರ ಮಾಡಿದ್ದಾರೆ.
ವರದಕ್ಷಿಣೆ ಕಿರುಕುಳ ಕೇಸ್; ಲಂಚ ಪಡೆದ ಇನ್ಸ್ ಪೆಕ್ಟರ್ ಸಸ್ಪೆಂಡ್..!
ಬೆಂಗಳೂರು: ಲಂಚ ಪಡೆದ ಆರೋಪದಡಿ ಮಡಿವಾಳ ಠಾಣೆ ಇನ್ಸ್ಪೆಕ್ಟರ್ ಸುನೀಲ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ. ವರದಕ್ಷಿಣೆ ಕಿರುಕುಳ ಸಂಬಂಧ ಆರೋಪಿ ಅಜಯ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ಕೋರ್ಟ್ಗೆ ಹಾಜರಾಗದ ಅಜಯ್ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈಯಿಂದ ಆರೋಪಿ ಅಜಯ್ನನ್ನು ವಾರೆಂಟ್ ಮೇಲೆ ಕರೆತಂದಿದ್ದ ಪೊಲೀಸರು ಹಣ ಪಡೆದು ಬಿಟ್ಟು ಕಳಿಸಿದ್ದರು ಎನ್ನಲಾಗಿದೆ. ಆದರೆ, ಆರೋಪಿ ಪೊಲೀಸರಿಗೆ ಲಂಚದ ರೂಪದಲ್ಲಿ ಹಣ ಕೊಡುವ ವಿಡಿಯೋ ಮಾಡಿ ಮೇಲಧಿಕಾರಿಗಳಿಗೆ ಕಳುಹಿಸಿದ್ದಾನೆ. ಈ ವಿಡಿಯೋ ಆಧರಿಸಿ ಡಿಸಿಪಿ ಶ್ರೀನಾಥ್ ಜೋಷಿ ಅವರಿಗೆ ಕಮಿಷನರ್ ಕಮಲ್ ಪಂತ್ ವರದಿ ಕೇಳಿದ್ದರು. ಡಿಸಿಪಿ ವರದಿ ಆಧರಿಸಿ ಕಮಲ್ ಪಂತ್ ಅವರು ಇನ್ಸ್ಪೆಕ್ಟರ್ ಸುನೀಲ್ ನಾಯಕ್ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ
ಸಂಸದ ಡಿ.ಕೆ. ಸುರೇಶ್ ವಿರುದ್ಧ ಮುಂಡಗೋಡ ಬಿಜೆಪಿಗರ ಆಕ್ರೋಶ, ಪ್ರತಿಭಟನೆ..!
ಮುಂಡಗೋಡ: ಪಟ್ಟಣದಲ್ಲಿ ಇಂದು ಇಲ್ಲಿನ ಬಿಜೆಪಿ ಕಾರ್ಯಕರ್ತರು ಡಿ.ಕೆ.ಸುರೇಶ್ ವಿರುದ್ಧ ಪ್ರತಿಭಟನೆ ಕೈಗೊಂಡ್ರು. ಕೆಡಿ- ಡಿಕೆ ಅಂತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು ರಾಮನಗರದಲ್ಲಿ ಡಿ.ಕೆ. ಸುರೇಶ್ ಹಾಗೂ ಸಚಿವ ಅಶ್ವಥ್ ನಾರಾಯಣ್ ನಡುವೆ ನಡೆದ ಮಾತಿನ ಚಕಮಿಕಿಯಲ್ಲಿ, ಡಿ.ಕೆ.ಸುರೇಶ್ ಗೂಂಡಾವರ್ತನೆ ತೋರಿಸಿದ್ದಾರೆ ಅಂತಾ ಆರೋಪಿಸಿ, ಈ ಸಂಬಂಧ ರಾಜ್ಯಾಧ್ಯಂತ ಇಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಅದ್ರಂತೆ ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಡಿ.ಕೆ.ಸುರೇಶ್ ಭಾವಚಿತ್ರ ಹಿಡಿದು ಧಿಕ್ಕಾರ ಕೂಗಿದ್ರು. ಈ ವೇಳೆ ತಾಲೂಕಿನ ಹಿರಿಯ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ರು.
ಮುಂಡಗೋಡಿನ ವ್ಯಕ್ತಿಯ ಅನುಮಾನಾಸ್ಪದ ಸಾವು, ಹಲವು ಶಂಕೆ..!
ಮುಂಡಗೋಡ; ವ್ಯಕ್ತಿಯೊಬ್ಬ ಅನುಮಾನಾಸ್ಪದ ಸಾವು ಕಂಡಿದ್ದಾನೆ. ಮುಂಡಗೋಡ ನಿವಾಸಿ ಮೆಹೆಬೂಬ್ ಸಾಬ್ ಜಮಖಂಡಿ(45) ಸಾವು ಕಂಡಿದ್ದಾನೆ. ತಾಲೂಕಿನ ಸುಳ್ಳಳ್ಳಿಯ ಬ್ರಿಡ್ಜ್ ಬಳಿ ಘಟನೆ ನಡೆದಿದ್ದು, ಬೈಕ್ ಮೇಲಿಂದ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಕಂಡು ಬಂದಿದೆ. ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.