ಕಾರವಾರ: ಗೌರವಾನ್ವಿತ ನ್ಯಾಯ ಮೂರ್ತಿ ಹೆಚ್.ಎನ್ ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ- 2025 ಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾದ್ಯಂತ ಮೇ.5 ರಿಂದ ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸಲು ಮನೆ ಮನೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಆಯೋಗದ ನಿರ್ದೇಶನದಂತೆ ಮೇ. 25 ರವರೆಗೆ ಮನೆ ಮನೆ ಸಮೀಕ್ಷೆ ಕಾರ್ಯವನ್ನು ವಿಸ್ತರಿಸಲಾಗಿದೆ ಹಾಗೂ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕಾರ್ಯವನ್ನು ಮೇ.26 ರಿಂದ 28 ರವರೆಗೆ ಮರು ನಿಗಧಿಪಡಿಸಲಾಗಿದೆ. ಗಣತಿದಾರರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳು ತಮ್ಮ ಆಧಾರ ಕಾರ್ಡ್, ಪಡಿತರ ಚೀಟಿ, ಮೊಬೈಲ್ ನಂಬರ್ ನೀಡಿ ಗಣತಿ ಕಾರ್ಯಕ್ಕೆ ಸಹಕರಿಸಬೇಕು. ಜಿಲ್ಲೆಯಲ್ಲಿ “ಮುಂಗಾರು” ಸಮಸ್ಯೆಗಳನ್ನು ಎದುರಿಸಲು 24×7 ಸಿದ್ದವಾಗಿರಿ- ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ/ವಿವರಗಳಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಕಂಟ್ರೋಲ್...
Top Stories
ಮೋದಿ ಟೀಂ ಇಂಡಿಯಾ ಮಂತ್ರ : ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟವಲ್ಲ..!
ಪಾಕ್ ಉಗ್ರವಾದಕ್ಕೆ 4 ದಶಕದಲ್ಲಿ 20000 ಭಾರತೀಯರು ಬಲಿ!
ಜಪಾನ್ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ..!
ಬೆಂಗಳೂರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ ವ್ಯಕ್ತಿ ಸಾವು..!
ಸ್ಕೂಟಿ ಹಾಗೂ ಬೈಕ್ನಡುವೆ ಮುಖಾಮುಕಿ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ..!
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮೊದಲೇ RCB ತಂಡಕ್ಕೆ ಸಂತಸದ ಸುದ್ದಿ ಸಿಕ್ಕಿದೆ..!
ಬೈಲಹೊಂಗಲದಲ್ಲಿ 3 ವರ್ಷದ ಪುಟ್ಟ ಕಂದಮ್ಮನನ್ನ ಮಲತಂದೆಯೇ ಮುಗಿಸಿಬಿಟ್ಟ..!
ಕಾಳಿ ನದಿಯಲ್ಲಿ ಕಾಲುಜಾರಿಬಿದ್ದು ಯುವಕ ನಾಪತ್ತೆ, ನದಿಯ ಹಿನ್ನಿರಿನಲ್ಲಿ ಯುವಕನಿಗೆ ಶೋಧ ಕಾರ್ಯ..!
ಮತ್ತೆ ಕೋಡಿ ಮಠದ ಶ್ರೀಗಳು ನುಡಿದ್ರು ಸ್ಪೋಟಕ ಭವಿಷ್ಯ..!
ವಾಡಿಕೆಗಿಂತ ಒಂದು ವಾರ ಮೊದಲೇ ಕೇರಳಕ್ಕೆ ಆಗಮಿಸಿದ ನೈಋತ್ಯ ಮುಂಗಾರು ಮಳೆ..!
ದೇಶದಲ್ಲಿ ಮತ್ತೆ ಕೋವಿಡ್ ಆತಂಕ : ರಾಜ್ಯದಲ್ಲಿ 38 ಕೇಸ್, ಬೆಂಗಳೂರಲ್ಲೇ 32 ಸೋಂಕಿತರು..!
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಜಿಲ್ಲೆ ಸೇರಿ, ರಾಜ್ಯದಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್..!
ಮುಂಡಗೋಡಲ್ಲಿ ಮೊಳಗಿದ ದೇಶ ಭಕ್ತಿಯ ಘೋಷವಾಕ್ಯ..! “ಆಪರೇಷನ್ ಸಿಂಧೂರ” ವೀರ ಸೈನಿಕರಿಗೆ ಗೌರವದ ಬೆಂಬಲ..!
ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ
RCB ಕನಸು ಭಗ್ನಗೊಳಿಸಿದ ಸನ್ ರೈಸರ್ಸ್, ಇನ್ನೇನಿದ್ರೂ ಪಂಜಾಬ್ ಮೇಲೆ ಬೆಂಗಳೂರಿಗರ ಕಣ್ಣು..!
ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯಿಂದ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ..!
ದೆಹಲಿಯಲ್ಲಿ 23 ಕೋರೊನಾ ಕೇಸ್ ಗಳು ವರದಿ; ಭಯ ಬೇಡ, ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ
ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್, ಡೀಸಿ ಆದೇಶ..!
ಜಿಲ್ಲೆಯಲ್ಲಿನ ಸೇತುವೆಗಳ ದೃಡತೆ ಬಗ್ಗೆ ವರದಿ ನೀಡಿ, ಅನಾಹುತವಾದಲ್ಲಿ ಅಧಿಕಾರಿಗಳೇ ಹೊಣೆ-ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಎಚ್ಚರಿಕೆ..!
ಜಿಲ್ಲೆಯಲ್ಲಿ “ಮುಂಗಾರು” ಸಮಸ್ಯೆಗಳನ್ನು ಎದುರಿಸಲು 24×7 ಸಿದ್ದವಾಗಿರಿ- ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಕಾರವಾರ: ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಕಂಡು ಬರಬಹುದಾದ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು 24×7 ಸನ್ನದ್ದರಾಗಿರುವಂತೆ ಹಾಗೂ ಎಲ್ಲಾ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು. ಅವರು ಶುಕ್ರವಾರ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಸಿದ್ದತೆ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಗಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಎಲ್ಲಾ ತಹಸೀಲ್ದಾರ್ ಕಚೇರಿಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ 24×7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಚರಣೆ ಕೇಂದ್ರದಲ್ಲಿ ಪೊಲೀಸ್, ಅಗ್ನಿಶಾಮಕ, ಅರಣ್ಯ, ಹೆಸ್ಕಾಂ, ಬಿ.ಎಸ್.ಎನ್.ಎಲ್ ಕಚೇರಿಯ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ತಿಳಿಸಿದರು.. ಈ ಹಿಂದಿನ ಅವಧಿಯಲ್ಲಿ ಅರಗಾ, ಚೆಂಡಿಯಾ, ತೋಡೂರು, ಮುದಗಾ, ಬಿಣಗಾ ಪ್ರದೇಶಗಳಲ್ಲಿನ ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ...
ಕಳ್ಳತನವಾಗಿದ್ದ ಬೈಕ್ ಪತ್ತೆ ಹಚ್ಚಿದ ಮುಂಡಗೋಡ ಪೊಲೀಸರು..! ಅಯ್ಯೊ ತಮ್ಮಾ ವಯಸ್ಸಲ್ಲದ ವಯಸ್ಸಲ್ಲಿ ಇಂತಾ ಕೆಲಸಾ ಬೇಕಿತ್ತಾ..?
ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ, ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ್ದಾರೆ. ಪಟ್ಟಣದ ಅಂಬೇಡ್ಕರ ಓಣಿಯಲ್ಲಿ ಕಳುವಾಗಿದ್ದ ಬೈಕ್ ಪತ್ತೆ ಹಚ್ಚಿದ್ದಾರೆ. ಅಂದಹಾಗೆ, ನಿನ್ನೆ ಗುರುವಾರ ಅಂಬೇಡ್ಕರ್ ಓಣಿಯ ತುಕರಾಮ ಭೀಮಣ್ಣ ಕೊರವರ ಎಂಬುವವರ ಮನೆಯ ಮುಂದಿನ ಅಂಗಳದಲ್ಲಿ ನಿಲ್ಲಿಸಿಟ್ಟಿದ್ದ ಬೈಕ್ ಕಳ್ಳತನ ಮಾಡಲಾಗಿತ್ತು. ದೂರು ದಾಖಲಿಸಿಕೊಂಡ ಮುಂಡಗೋಡ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..! ಬೈಕ್ ಕಳುವು ಮಾಡಿಕೊಂಡು ಹೋಗಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಕಳ್ಳತನ ಮಾಡಿದ ಮೋಟಾರ್ ಸೈಕಲ್ ನಂಬರ- ಕೆಎ-31/ಎಕ್ಸ್-7004 ನೇದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದಾರೆ ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..! ಈ ಪ್ರಕರಣದಲ್ಲಿ ಉತ್ತರ ಕನ್ನಡ ಎಸ್ಪಿ ಎಮ್. ನಾರಾಯಣ, ಅಡಿಶನಲ್ ಎಸ್ಪಿ ಕೃಷ್ಣಮೂರ್ತಿ ಜಿ. ಮತ್ತು ಜಗದೀಶ ನಾಯ್ಕ ಶಿರಸಿ ಡಿವೈಎಸ್ಪಿ...
ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?
ದೋಹಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್ ಸಿಇಒ ಟಿಮ್ ಕುಕ್ ಅವರ ಜೊತೆ ನೇರ ಸಂಭಾಷಣೆ ನಡೆಸಿದ್ದು, ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುವ ಉದ್ದೇಶವನ್ನು ಹೊರತುಪಡಿಸಿ, ಭಾರತದಲ್ಲಿ ಆಪಲ್ ಉತ್ಪಾದನಾ ಹೆಜ್ಜೆಗುರುತನ್ನು ವಿಸ್ತರಿಸುವುದು ಬೇಡ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. “ಭಾರತದಲ್ಲಿ ನೀವು ನಿರ್ಮಾಣ ಮಾಡುವುದರ ಬಗ್ಗೆ ನಮಗೆ ಆಸಕ್ತಿ ಇಲ್ಲ, ಅವರು ತಮ್ಮನ್ನು ತಾವು ನೋಡಿಕೊಳ್ಳಬಹುದು ಎಂದು ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಹೇಳಿದ್ದೆವು” ಎಂದು ಟ್ರಂಪ್ ಮೇ 15 ರಂದು ಕತಾರ್‌ನ ದೋಹಾದಲ್ಲಿ ನಡೆದ ವ್ಯವಹಾರ ಕಾರ್ಯಕ್ರಮದಲ್ಲಿ (business event) ಹೇಳಿದರು ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು..! ಟಿಮ್ ಕುಕ್ ಅವರೊಂದಿಗೆ “ಸಣ್ಣ ಸಮಸ್ಯೆ” ಇದೆ. “ಅವರು ನನ್ನ ಸ್ನೇಹಿತ, ನಾನು ಅವರಿಗೆ ಹೇಳಿದೆ, ನಾನು ನಿಮ್ಮನ್ನು ತುಂಬಾ ಚೆನ್ನಾಗಿ ನಡೆಸಿಕೊಳ್ಳುತ್ತಿದ್ದೇನೆ. ನೀವು $500 ಬಿಲಿಯನ್ ಗಳಿಸುತ್ತೀರಿ, ಆದರೆ...
ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು..!
ಬೆಂಗಳೂರು: ಖ್ಯಾತ ಜ್ಯೋತಿಷಿ ಆನಂದ ಗುರೂಜಿ ಅವರಿಗೆ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆನಂದ ಗುರೂಜಿ ವಿಡಿಯೋ ಮತ್ತು ಜಮೀನು ಖರೀದಿಯ ಬಗ್ಗೆ ಕೋರ್ಟ್‌ನಿಂದ ತಡೆಯಾಜ್ಞೆ ತಂದರೂ ಬೆದರಿಕೆ ಹಾಕಲಾಗಿದೆ. ಅವರ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ಆನಂದ ಗುರೂಜಿ ಬೆಂಗಳೂರಿನ ಚಿಕ್ಕಜಾಲ ಠಾಣೆಗೆ ದೂರು ನೀಡಿದ್ದಾರೆ. ಆನಂದ್ ಗುರೂಜಿ ದೂರಿನ ಮೇರೆಗೆ ಪೊಲೀಸರು ಇಬ್ಬರ ವಿರುದ್ಧ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕೃಷ್ಣಮೂರ್ತಿ ಹಾಗೂ ದಿವ್ಯಾ ವಸಂತ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಆನಂದ ಗುರೂಜಿ ಅವರು ವೀಡಿಯೊ ಹಾಗೂ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದು, ಆದರೂ, ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿ, ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೇ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ...
ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ; ಬಿಬಿಎಂಪಿ..!
ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ(BBMP) ಸ್ವಾಧೀನಾನುಭವ ಪ್ರಮಾಣ ಪತ್ರ( Occupancy certificates) ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕುರಿತು ಬಿಬಿಎಂಪಿ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನಲ್ಲಿ ವಿದ್ಯುತ್ ಸಂಪರ್ಕಕ್ಕೆ ಕೋರಿ ಸುಮಾರು 66,400 ಅರ್ಜಿಗಳು ಬಂದಿವೆ. ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ನೀಡಿರುವ ಆದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, ನೀರು ಸರಬರಾಜು / ಒಳಚರಂಡಿ ಸಂಪರ್ಕ ನೀಡುವಂತೆ ಆದೇಶಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಪ್ರಿಂಕೋರ್ಟ್ ಆದೇಶ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕೋರಿರುವ ಕಟ್ಟಡಗಳಿಗೆ ಬಿಬಿಎಂಪಿಯಿಂದ ‘ಎ’ ಖಾತಾ ಅಥವಾ ‘ಬಿ’ ಖಾತಾ ಪಡೆಯಲಾಗಿರುವ ಬಗ್ಗೆ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿರುವ ಬಗ್ಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ, ಪೂರ್ಣತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವ,...
ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ..!
ಮಂಗಳೂರು : ಕೆಲವು ದಿನಗಳ ಹಿಂದೆ ಬಜ್ಪೆಯಲ್ಲಿ ಬರ್ಬರವಾಗಿ ಕೊಲೆಯಾದ ಸುಹಾಸ ಶೆಟ್ಟಿ ಹತ್ಯೆ (Suhas Shetty) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಳವಾರಿನ ಅಜರುದ್ದೀನ್ ಆಲಿಯಾಸ್ ಅಜರ್ ಆಲಿಯಾಸ್ ಅಜ್ಜು(29), ಬಜ್ಪೆ ನಿವಾಸಿ ಅಬ್ದುಲ್ ಖಾದರ್ ಆಲಿಯಾಸ್ ನೌಫಲ್(24), ವಾಮಂಜೂರಿನ ನೌಷದ್ ಆಲಿಯಾಸ್ ಚೊಟ್ಟೆ ನೌಷದ್(39) ಎಂದು ಗುರುತಿಸಲಾಗಿದೆ. ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..! ಮೇ 1ರಂದು ಮೊಹಮ್ಮದ್ ಫಾಝಿಲ್ ಕೊಲೆ ಪ್ರಕರಣದ ಆರೋಪಿ ಸುಹಾಸ ಶೆಟ್ಟಿಯನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಕೊಚ್ಚಿ ಕೊಲೆಗೈದಿದ್ದರು. ಘಟನೆಗೆ ಸಂಬಂಧಿಸಿಂದಂತೆ ಮಂಗಳೂರು ಪೊಲೀಸರು ಈಗಾಗಲೇ 8 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳ ಪೈಕಿ ಅಜರುದ್ದೀನ್ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ನೌಷದ್ ಎಂಬವರನ್ನು ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ....
ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಕಾರವಾರ- ಜಿಲ್ಲೆಯಲ್ಲಿ ಐ.ಪಿ.ಎಲ್ ಬೆಟ್ಟಿಂಗ್, ಅನಧಿಕೃತ ಲಾಟರಿ/ಮಟ್ಕಾ ಹಾವಳಿಯ ಪ್ರಕರಣಗಳು ನಡೆಯದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು. ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿ ನಿಯಂತ್ರಣ ಪ್ಲೆಯಿಂಗ್ ಸ್ಕ್ವಾಡ್‌ನ 2024-25 ನೇ ಸಾಲಿನ ನಾಲ್ಕನೆಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ..! ಪ್ರಸಕ್ತ ತ್ರೈಮಾಸಿಕದಲ್ಲಿ ಒಟ್ಟು 31 ಮಟ್ಕಾ ಪ್ರಕರಣಗಳಲ್ಲಿ 86 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿರುವ ಬಗ್ಗೆ ಹಾಗೂ ಯಾವುದೇ ಅನಧಿಕೃತ ಲಾಟರಿ ಹಾವಳಿ ಪ್ರಕರಣಗಳು ದಾಖಲಾಗದೇ ಇರುವ ಬಗ್ಗೆ ಮಾಹಿತಿ ಪಡೆದು, ಜಿಲ್ಲೆಯನ್ನು ಸಂಪೂರ್ಣ ಅನಧಿಕೃತ ಲಾಟರಿ/ಮಟ್ಕಾ ಹಾವಳಿ ಮುಕ್ತ ವಲಯವನ್ನಾಗಿ ಮಾಡಲು ಪ್ಲೈಯಿಂಗ್ ಸ್ಕ್ಯಾಡ್‌ನ ಸದಸ್ಯರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಪೋಲಿಸ್ ನಿರೀಕ್ಷಕರಾದ ನಿತ್ಯಾನಂದ ಪಂಡಿತ್, ವಾಣಿಜ್ಯ ತೆರಿಗೆ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಮೂಲಕ ರೂ. 1095 ಕೋಟಿ ನೆರವು..!
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.2000 ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.99.91 ರಷ್ಟು ಸಾಧನೆ ಮಾಡಿದ್ದು, ಇದುವರೆಗೆ 1095.03 ಕೋಟಿ ರೂ ಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಹಿಳೆಯನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿರುವ 3,61,481 ಪಡಿತರ ಚೀಟಿಗಳಿದ್ದು, ಅವುಗಳಲ್ಲಿ ತೆರಿಗೆ ಪಾವತಿದಾರರು, ಮರಣ ಹೊಂದಿರುವವರು, ಯೋಜನೆ ನಿರಾಕರಿಸಿರುವವರು, ವಲಸೆ ಹೋಗಿರುವ ಕಾರಣದಿಂದ 25,676 ಮಂದಿ ಗೃಹಲಕ್ಷ್ಮೀ ಯೋಜನೆಗೆ ಅನರ್ಹರಾಗಿದ್ದು , ಬಾಕಿ ಉಳಿದ ಅರ್ಹ 3,35,805 ಪಡಿತರ ಚೀಟಿಗಳಲ್ಲಿ 3,35,498 ಮಂದಿಯನ್ನು ಯೋಜನೆಗೆ ಯಶಸ್ವಿಯಾಗಿ ನೋಂದಾಯಿಸಿ ಶೇ.99.91 ಸಾಧನೆ ಮಾಡಲಾಗಿದೆ. ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..! ಗೃಹಲಕ್ಷ್ಮಿ ಯೋಜನೆಗೆ ಅನರ್ಹರಾಗಿರುವವರಲ್ಲಿ 10,377 ಮಂದಿ ಆದಾಯ ತೆರಗೆ ಮತ್ತು ಜಿ.ಎಸ್.ಟಿ ಪಾವತಿದಾರರು, 4875 ಮಂದಿ ಮರಣ ಹೊಂದಿರುವವರು, 7503 ಮಂದಿ ವಲಸೆ...
ಗೋಕರ್ಣದಲ್ಲಿ ಡಿಜಿಟಲ್ ಪೊಲೀಸ್ ವ್ಯವಸ್ಥೆ : ಎಸ್ಪಿ ನಾರಾಯಣ್
ಕಾರವಾರ: ಗೋಕರ್ಣ ಪ್ರವಾಸಿ ತಾಣದಲ್ಲಿ ಸಾರ್ವಜನಿಕರ ಮತ್ತು ಪ್ರವಾಸಿಗರ ಸೂಕ್ತ ರಕ್ಷಣೆಗೆ ಮತ್ತು ಇಲ್ಲಿ ಯಾವುದೇ ಅಪರಾಧ ಪ್ರಕ್ರಿಯೆ ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ಈ ಹಿಂದೆ ಇದ್ದ ಸಿಸಿ ಕ್ಯಾಮೆರಾ ಜೊತೆ ಇನ್ನೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿ ಡಿಜಿಟಲ್ ಪೊಲೀಸ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಎಂ. ನಾರಾಯಣ್ ಹೇಳಿದರು. ಅವರು ಬುಧವಾರ ಗೋಕರ್ಣದಲ್ಲಿ , ಸಾರ್ವಜನಿಕರ ಮತ್ತು ಪ್ರವಾಸಿಗರ ಸುರಕ್ಷತೆ ಹಾಗೂ ಜಾಗೃತಿಗಾಗಿ ಪೊಲೀಸ್ ಮಾಹಿತಿ ಕೇಂದ್ರ, ಸಿಸಿ ಕ್ಯಾಮರಾಗಳು, ಜಾಗೃತಿ ಫಲಕಗಳು ಹಾಗೂ ಪೊಲೀಸ್ ಚೌಕಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೇ.17 ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಜನಸ್ಪಂಧನ ಕಾರ್ಯಕ್ರಮ: ಕಾರ್ಯಕ್ರಮದ ಪ್ರಯೋಜನ ಪಡೆಯಿರಿ- ಜಿಲ್ಲಾಧಿಕಾರಿ ಗೋಕರ್ಣವು ನೈಸರ್ಗಿಕ ಕಡಲ ತೀರಗಳು, ಕಡಿಮೆ ಜೀವನದ ವೆಚ್ಚ, ರಮಣೀಯ ಪರಿಸರ ವೈವಿದ್ಯಮಯವನ್ನು ಹೊಂದಿದ್ದು, ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಪ್ರತಿ ವಷÀð 1.5 ಲಕ್ಷ ಪ್ರವಾಸಿಗರು ಆಗಮಿಸುತ್ತಾರೆ ಮತ್ತು 8 ರಿಂದ 10 ವಿದೇಶಿಗರು ಪ್ರತಿ...