ಕಳ್ಳತನವಾಗಿದ್ದ ಬೈಕ್ ಪತ್ತೆ ಹಚ್ಚಿದ ಮುಂಡಗೋಡ ಪೊಲೀಸರು..! ಅಯ್ಯೊ ತಮ್ಮಾ ವಯಸ್ಸಲ್ಲದ ವಯಸ್ಸಲ್ಲಿ ಇಂತಾ ಕೆಲಸಾ ಬೇಕಿತ್ತಾ..?

ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ, ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ್ದಾರೆ. ಪಟ್ಟಣದ ಅಂಬೇಡ್ಕರ ಓಣಿಯಲ್ಲಿ ಕಳುವಾಗಿದ್ದ ಬೈಕ್ ಪತ್ತೆ ಹಚ್ಚಿದ್ದಾರೆ.

ಅಂದಹಾಗೆ, ನಿನ್ನೆ ಗುರುವಾರ ಅಂಬೇಡ್ಕರ್ ಓಣಿಯ ತುಕರಾಮ ಭೀಮಣ್ಣ ಕೊರವರ ಎಂಬುವವರ ಮನೆಯ ಮುಂದಿನ ಅಂಗಳದಲ್ಲಿ ನಿಲ್ಲಿಸಿಟ್ಟಿದ್ದ ಬೈಕ್ ಕಳ್ಳತನ ಮಾಡಲಾಗಿತ್ತು. ದೂರು ದಾಖಲಿಸಿಕೊಂಡ ಮುಂಡಗೋಡ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.

ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!

ಬೈಕ್ ಕಳುವು ಮಾಡಿಕೊಂಡು ಹೋಗಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಕಳ್ಳತನ ಮಾಡಿದ ಮೋಟಾರ್ ಸೈಕಲ್ ನಂಬರ- ಕೆಎ-31/ಎಕ್ಸ್-7004 ನೇದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದಾರೆ‌

ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..!

ಈ ಪ್ರಕರಣದಲ್ಲಿ ಉತ್ತರ ಕನ್ನಡ ಎಸ್ಪಿ ಎಮ್. ನಾರಾಯಣ, ಅಡಿಶನಲ್ ಎಸ್ಪಿ ಕೃಷ್ಣಮೂರ್ತಿ ಜಿ‌. ಮತ್ತು ಜಗದೀಶ ನಾಯ್ಕ ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ್, ಕ್ರೈಂ ಪಿ,ಎಸ್.ಐ ವಿನೋದ ಎಸ್.ಕೆ. ಪಿಎಸ್ ಐ ಪರಶುರಾಮ ಮಿರ್ಜಿಗಿ, ಎ.ಎಸ್.ಐ ಶಂಕ್ರಪ್ಪ ರಾಠೋಡ ಹಾಗೂ ಸಿಬ್ಬಂದಿಗಳಾದ ಕೋಟೇಶ ನಾಗರವಳ್ಳಿ, ಮಹಾಂತೇಶ ಮುಧೋಳ ಹಾಗೂ ಸಂಜು ರಾಠೋಡ ತಿರುಪತಿ ಚೌಡಣ್ಣವರ ಹಾಗೂ ಬಸವರಾಜ ಒಡೆಯರ ಭಾಗವಹಿಸಿದ್ದರು.

error: Content is protected !!