ಮುಂಡಗೋಡ: ತಾಲೂಕಿನ ಹನುಮಾಪುರ ಕಾಳಿಕಾಮಠದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು ಕೊರೋನಾ ಪಾಸಿಟಿವ್ ಆಗಿ ತೀವ್ರ ಸಂಕಷ್ಟ ಅನುಭವಿಸಿದ್ರು. ತುಮಕೂರು, ರಾಣೇಬೆನ್ನೂರು ಸೇರಿದಂತೆ ಹಲವು ಕಡೆ ಚಿಕಿತ್ಸೆ ಪಡೆದಿದ್ರು. ಆನಂತರದಲ್ಲಿ ಶ್ರೀಗಳಿಗೆ, ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.. ಆದ್ರೆ ಚಿಕಿತ್ಸೆ ಪಲಕಾರಿಯಾಗದೇ ಶ್ರೀಗಳು ವಿಧಿವಶರಾದ್ರು ಅಂತಾ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಪಬ್ಲಿಕ್ ಫಸ್ಟ್ ಗೆ ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಮಾಜಿ ಶಾಸಕರು ಶ್ರೀಗಳ ಬಗ್ಗೆ ಹೇಳಿದ್ದಾದ್ರೂ ಏನು..? ಇಲ್ಲಿದೆ ನೋಡಿ..
Top Stories
Police News:ರಾಜ್ಯದ ಪ್ರಭಾರ ಡಿಜಿ-ಐಜಿಪಿಯಾಗಿ ಡಾ.ಎಂ.ಎ. ಸಲೀಂ ನೇಮಕ..!
Naxalar Encounter News:ನಕ್ಸಲ್ ಕಮಾಂಡರ್ ಸೇರಿದಂತೆ 26 ಮಂದಿ ನಕ್ಸಲರನ್ನು ಎನ್ಕೌಂಟರಿನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು..!
ED Raid News:ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಮೇಲೆ ಇಡಿ ದಾಳಿ..!
Business News :2024ರಲ್ಲಿ ಸತ್ಯ ನಾಡೆಲ್ಲಾ, ಪಿಚೈ ಹಿಂದಿಕ್ಕಿ ದಾಖಲೆಯ 1,157 ಕೋಟಿ ರೂ. ಪಡೆದ ಭಾರತೀಯ ಮೂಲದ ಟೆಸ್ಲಾ ಕಾರ್ಯನಿರ್ವಾಹಕ ಅಧಿಕಾರಿ..!
Achievement News: ಕನ್ನಡದ ಲೇಖಕಿ ಬಾನು ಮುಷ್ತಾಕ್ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಘೋಷಣೆ..!
Police Death News:ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿ ಬಿದ್ದ ಬಸ್ ; ಪೊಲೀಸ್ ಅಧಿಕಾರಿ ಸಾವು..!
ಛತ್ರಿ ಹಿಡಿದು ಸ್ಕೂಟಿ ಚಲಾಯಿಸುತ್ತಿದ್ದ ವಿದ್ಯಾರ್ಥಿ ಲಾರಿಗೆ ಡಿಕ್ಕಿ, ದುರ್ಮರಣ
Achievement News:ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ..!
Achievement News:ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ..!
Road Problem News:ಕಳಪೆ ರಸ್ತೆಗಳಿಂದ ‘ಯಾತನೆʼ ; ಬಿಬಿಎಂಪಿಗೆ ಬೆಂಗಳೂರು ವ್ಯಕ್ತಿಯಿಂದ ನೋಟಿಸ್ : 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ..!
ಜಿಲ್ಲೆಯಲ್ಲಿ ಕುಡಿಯುವ ನೀರು ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಿ : ZP Ceo ಈಶ್ವರ ಕಾಂದೂ
ವಿಕಸಿತ ಭಾರತದ ಮೂಲಕ ದೇಶದ ಅಭಿವೃದ್ದಿ: ಕಾರವಾರದಲ್ಲಿ ಕೇಂದ್ರ ಸಚಿವ ಶೇಖಾವತ್
ಚಿನ್ನದ ಬೆಲೆ ಒಂದೇ ದಿನ ₹2400 ಏರಿಕೆ, ಬೆಳ್ಳಿ ₹3000 ಜಿಗಿತ; ಆಭರಣ ಖರೀದಿದಾರರಿಗೆ ಬಿಗ್ ಶಾಕ್..!
ಮುಂಡಗೋಡ-ಶಿರಸಿ ರಸ್ತೆಯ ನಂದಿಪುರ ಬಳಿ, KSRTC ಬಸ್, ಖಾಸಗಿ ಬಸ್ ನಡುವೆ ಮುಖಾಮುಕಿ ಡಿಕ್ಕಿ, ಕೆಲವ್ರಿಗೆ ಗಾಯ..!
ಭಾರೀ ಮಳೆ: ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು: ಸಂಚಾರಕ್ಕೆ ಅಡಚಣೆ..!
ಉತ್ತರ ಕನ್ನಡ ಸೇರಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ, 4 ಜಿಲ್ಲೆಗಳಿಗೆ ರೆಡ್ ಅಲರ್ಟ್, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಣೆ..!
Car Fire News: ತಾರಿಹಾಳ ಟೋಲ್ ಬಳಿ ಧಗಧಗಿಸಿದ ಕಾರು; ಪ್ರಾಣಾಪಾಯದಿಂದ ಪಾರಾದ ಕುಟುಂಬ..!
ಮಳೆಗಾಲದ ವಿಪತ್ತು ಎದುರಿಸಲು ಸಜ್ಜುಗೊಂಡ ಹೆಸ್ಕಾಂ..!
ಹನುಮಾಪುರ ಕಾಳಿಕಾಮಠದ “ಶ್ರೀಗಳು” ಅಸ್ತಂಗತ..! ಗಣ್ಯರ ಸಂತಾಪ..!!
ಮುಂಡಗೋಡ ತಾಲೂಕಿನ ಹನುಮಾಪುರ ಕಾಳಿಕಾಮಠದ (ಹೀರೇಮಠ) ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಒಂದು ತಿಂಗಳಿಂದ ಅನಾರೋಗ್ಯ..! ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಇಂದು ಬೆಳಗಿನ ಜಾವ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆ ಉಸಿರೆಳೆದಿದ್ದಾರೆ. ಪ್ರತಿಷ್ಠಿತ ಮಠ..! ಮುಂಡಗೋಡ ತಾಲೂಕಿನ ಪ್ರತಿಷ್ಠಿತ ಕಾಳಿಕಾಮಠದಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಶ್ರೀಗಳು ಕೈಗೊಂಡಿದ್ರು. ಹೀಗಾಗಿ, ಶ್ರೀ ಮಠ ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಲ್ಲೂ ಅಪಾರ ಪ್ರಮಾಣದ ಭಕ್ತರನ್ನು ಹೊಂದಿತ್ತು. ಚೇತರಿಕೆ ಕಾಣಲೇ ಇಲ್ಲ..! ಮಠದ ಪರಮ ಭಕ್ತರಾಗಿದ್ದ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಸ್ವಾಮೀಜಿಗಳ ಚಿಕಿತ್ಸೆಗಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಆದ್ರೆ ಶ್ರೀಗಳ ಆರೋಗ್ಯ ಚೇತರಿಕೆ ಕಾಣದೇ ಕೊನೆ ಉಸಿರೆಳೆದಿದ್ದಾರೆ. ಸಂತಾಪ.. ಶ್ರೀಗಳ ನಿಧನಕ್ಕೆ ತಾಲೂಕಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಶಾಸಕ ವಿ.ಎಸ್. ಪಾಟೀಲ್...
ತವರಿಗೆ ಹೋದ ಪತ್ನಿ ವಾಪಸ್ ಬರಲೇ ಇಲ್ಲ: ಮನನೊಂದ ಪತಿ ಮಾಡಿಕೊಂಡಿದ್ದು ಮಾತ್ರ ದುರಂತ..!
ಮುಂಡಗೋಡ : ಅವನು ಹೆಂಡತಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ, ನೀನಿಲ್ಲದೇ ನಾನಿಲ್ಲ, ನನಗೆ ನೀನು; ನಿನಗೆ ನಾನು ಅಂತಿದ್ದ, ಆದ್ರೆ ಆತನ ಬಾಳಲ್ಲಿ ಅದು ಹಾಗಾಗಲೇ ಇಲ್ಲ. ಆದ್ರೆ, ತವರಿಗೆ ಹೋದ ತನ್ನ ಹೆಂಡ್ತಿ ವಾಪಸ್ ಬರಲೇ ಇಲ್ಲ ಅಂತಾ ಪತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವರಾಜ್ ಬರಮಣ್ಣ ಕುರಿಯವರ್ ಎಂಬುವವನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಈಗಷ್ಟೇ 36 ವರ್ಷಕ್ಕೆ ಕಾಲಿಟ್ಟಿದ್ದ, ಹೀಗಾಗಿ, ವಯಸ್ಸಲ್ಲದ ವಯಸ್ಸಲ್ಲೇ ದುರಂತ ಅಂತ್ಯ ಕಂಡಿದ್ದಾನೆ. ಅಂದಹಾಗೆ, ಈ ಘಟನೆ ನಡೆದಿರೋದು ಮುಂಡಗೋಡ ತಾಲೂಕಿನ ಚೌಡಳ್ಳಿಯಲ್ಲಿ. ದೀಪಾವಳಿಗೇ ಹೋದವಳು..! ಕುಟುಂಬಸ್ಥರು ದೂರಿನಲ್ಲಿ ದಾಖಲಿಸಿರೋ ಪ್ರಕಾರ, ಈತನ ಪತ್ನಿ ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ಅಂತಾ ತವರಿಗೆ ಹೋಗಿದ್ಲು. ಆ ನಂತರ, ವಾರ ಆಯ್ತು, ತಿಂಗಳಾಯ್ತು, ವರ್ಷವೇ ಆಗುತ್ತ ಬಂದ್ರೂ ಪತ್ನಿ ಮಾತ್ರ ಗಂಡನ ಮನೆ ಕಡೆ ಮುಖ ಮಾಡಲಿಲ್ಲವಂತೆ. ಹೀಗಾಗಿ ಪತ್ನಿ ಮರಳಿ ಬಾರದಿರೋ ಕಾರಣಕ್ಕೆ ಪತಿ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದಾನೆ. ಅವತ್ತು ಜುಲೈ 1 ಹಾಗೇ ಪತ್ನಿ...
ಇಂದೂರು ಜಿಪಂ ಕ್ಷೇತ್ರ: ಏನಿದು ಅಚ್ಚರಿ..? ಆ “ಯುವ ನಾಯಕ” ನಿಗೆ ಪಟ್ಟ ಕಟ್ಟಲು ಮುಹೂರ್ತ ಫಿಕ್ಸಾ..?
ಮುಂಡಗೋಡ: ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಚುನಾವಣೆ ಇನ್ನೂ ಘೋಷಣೆಯೇ ಆಗಿಲ್ಲ. ಕೇವಲ ಮೀಸಲಾತಿ ಮಾತ್ರ ಪ್ರಕಟವಾಗಿದೆ. ಆದ್ರೆ ಇಷ್ಟರೊಳಗೆ ಮುಂಡಗೋಡ ತಾಲೂಕಿನಾಧ್ಯಂತ ಇನ್ನಿಲ್ಲದ ರಾಜಕೀಯ ಚರ್ಚೆಗಳು ಶುರುವಾಗಿವೆ. ತಾಲೂಕಿನಲ್ಲಿರೋ ಮೂರು ಜಿಪಂ ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಪಡೆಯಲು “ಬಹುಪರಾಕ್” ಸಂಪ್ರದಾಯಗಳು ಚಾಲ್ತಿ ಪಡೆದುಕೊಂಡಿವೆ. ಎಲ್ಲವೂ ಟಿಕೆಟ್ ಗಾಗಿ..! ಅದ್ರಲ್ಲೂ, ಬಿಜೆಪಿ ಪಾಳಯದಲ್ಲಂತೂ ಈಗಾಗಲೇ ನಂಗೇ ಟಿಕೆಟ್ ಕೊಡಿ ಅಂತಾ ಸಚಿವರ ಎದುರು ಇನ್ನಿಲ್ಲದ ಒತ್ತಡಗಳನ್ನ ಹಾಕಲಾಗ್ತಿದೆ. ಕೆಲವೊಬ್ರು ಪ್ರತ್ಯಕ್ಷವಾಗಿ ಒತ್ತಡ ಹೇರುತ್ತಿದ್ರೆ, ಇನ್ನೂ ಕೆಲವರು ತಮ್ಮ ಪ್ರಾಭಲ್ಯದ ಕತೆ ಹೇಳಿ ಪರೋಕ್ಷವಾಗಿ ಸಚಿವರಿಗೆ ಸುದ್ದಿ ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ. ಇದು ಸ್ಪೋಟಕ ಚರ್ಚೆ..! ಈ ನಡುವೆಯೇ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ. ಬಿಜೆಪಿಯ ಯುವ ನಾಯಕರೋರ್ವರು ಇದೇ ಜಿಲ್ಲಾ ಪಂಚಾಯತಿ ಚುನಾವಣೆ ಮೂಲಕವೇ ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಡಲಿದ್ದಾರೆ....
ಚಲಿಸುತ್ತಿದ್ದ ಕಾರು ನೋಡ ನೋಡುತ್ತಿದ್ದಂತೆ ಬೆಂಕಿಗೆ ಆಹುತಿ..! ಕಾರಲ್ಲಿ ಇದ್ದವರ ಗತಿ ಏನಾಯ್ತು..?
ಹುಬ್ಬಳ್ಳಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಬ್ರಿಜಾ ಕಾರು ನಡುರಸ್ತೆಯಲ್ಲೇ ಹೊತ್ತಿ ಉರಿದು ಬೆಂಕಿಗೆ ಆಹುತಿಯಾದ ಘಟನೆ ಹುಬ್ಬಳ್ಳಿ-ಧಾರವಾಡ ರಸ್ತೆಯ ನವನಗರದ ಬಳಿ ನಡೆದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಿಂದ ಕೆಳಗಿಳಿದು ಇಬ್ಬರೂ ಪಾರಾಗಿದ್ದಾರೆ. ಸ್ಥಳಕ್ಕೆಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ ಇಂದಿನಿಂದ ಭಕ್ತರಿಗೆ ದರ್ಶನ ಭಾಗ್ಯ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ದೇವಸ್ಥಾನಗಳ ಬಾಗಿಲು ಓಪನ್ ಆಗ್ತಿವೆ. ಕಳೆದ ಎರಡು ತಿಂಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ದೇವಾಲಯಗಳು ಓಪನ್ ಆಗಲಿವೆ. ಶಿರಸಿ ಮಾರಿಕಾಂಬಾ, ಗೋಕರ್ಣ ಮಹಾಬಲೇಶ್ವರ, ಮುರ್ಡೆಶ್ವರ ದೇವಸ್ಥಾನ, ಇಡಗುಂಜಿ ಮಹಾಗಣಪತಿ ಸೇರಿದಂತೆ ಹಲವು ದೇವಾಲಯಗಳಲ್ಲಿ ಭಕ್ತರಿಗೆ ಇಂದಿನಿಂದ ದರ್ಶನ ಭಾಗ್ಯ ಸಿಗಲಿದೆ. ಜಿಲ್ಲೆಯಲ್ಲಿ ಇಂದು ಓಪನ್ ಆದ ದೇಗುಲಗಳನ್ನು ದರ್ಶನ ಮಡ್ಕೊಬೇಕಾ..? ಹಾಗಾದ್ರೆ ಈ ಕೆಂಪು ಅಕ್ಷರಗಳ ಮೇಲೆ ಜಸ್ಟ್ ಕ್ಲಿಕ್ ಮಾಡಿ..! ಶಿರಸಿ ಮಾರಿಕಾಂಬೆ ದರ್ಶನ ಭಾಗ್ಯ..! ಹಾಗೇನೆ, ಇಂದಿನಿಂದ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಾಲಯ ಭಕ್ತರಿಗೆ ಮುಕ್ತವಾಗಿದೆ. ಹಾಗೆಯೇ, ಶಿರಸಿಯ ಪ್ರಸಿದ್ಧ ದೊಡ್ಡ ಗಣಪತಿ ದೇವಾಲಯದಲ್ಲೂ ಕೂಡ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅದೇ ರೀತಿ ಕರ್ನಾಟಕದ ಏಕೈಕ ಕನ್ನಡ ತಾಯಿಯ ದೇಗುಲ, ಜಿಲ್ಲೆಯ ಸಿದ್ದಾಪುರದ ಭುವನಗಿರಿಯ ಭುವನೇಶ್ವರಿ ದೇಗುಲದಲ್ಲಿಯೂ...
ಮುಂಡಗೋಡಿನ “ಅನಾಸಾಗರ್” ಇಸ್ಮಾಯಿಲ್ ಇನ್ನು ನೆನಪು ಮಾತ್ರ..!
ಮುಂಡಗೋಡ: ಪಟ್ಟಣದಲ್ಲಿ ಪ್ಲೈವುಡ್ ಹಾಗೂ ಹಾರ್ಡವೇರ್ ಟ್ರೇಡರ್ಸ್ ನಡೆಸುತ್ತಿದ್ದ ಇಸ್ಮಾಯಿಲ್ ದೊಡ್ಮನಿ (40) ರವಿವಾರ ರಾತ್ರಿ ನಿಧನರಾಗಿದ್ದಾರೆ. ಅನಾಸಾಗರ್ ಅಂತಲೇ ತಾಲೂಕಿನಲ್ಲಿ ಖ್ಯಾತಿ ಪಡೆದಿದ್ದ ಇಸ್ಮಾಯಿಲ್, ಮುಂಡಗೋಡಿನಲ್ಲಿ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಾಸಾಗರ್, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತಿಚೆಗಷ್ಟೇ ಇಸ್ಮಾಯಿಲ್ ರವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಇಸ್ಮಾಯಿಲ್ ನಿಧನಕ್ಕೆ ಮುಂಡಗೋಡಿನ ಅಪಾರ ಸ್ನೇಹ ಬಳಗ ಸಂತಾಪ ಸೂಚಿಸಿದೆ.
ಹೊನ್ನಾವರದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆ, ಓರ್ವ ನಾಪತ್ತೆ, ಮೂವರ ರಕ್ಷಣೆ..!
ಹೊನ್ನಾವರ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆಯಾಗಿ ಓರ್ವ ಮೀನುಗಾರ ನಾಪತ್ತೆಯಾಗಿ, ಮೂವರನ್ನು ರಕ್ಷಿಸಿರೋ ಘಟನೆ ಹೊನ್ನಾವರದ ಕಾಸರಕೋಡು ಇಕೋ ಬೀಚ್ನಲ್ಲಿ ನಡೆದಿದೆ. ಉದಯ ದಾಮೋದರ ತಾಂಡೇಲ್ ಕಾಣೆಯಾದ ಮೀನುಗಾರನಾಗಿದ್ದು, ವಿಜಯ್ ಫರ್ನಾಂಡೀಸ್, ಶಂಕರ್ ತಾಂಡೇಲ್, ಕಾಮೇಶ್ವರ ತಾಂಡೇಲ್ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಇಂದು ಬೆಳಿಗ್ಗೆ ಮೀನುಗಾರಿಕೆಗಾಗಿ ತಮ್ಮ ಬೋಟ್ ಮೂಲಕ ಸಮುದ್ರಕ್ಕಿಳಿದಿದ್ದ ಮೀನುಗಾರರು, ವಾಪಸ್ಸಾಗುವಾಗ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮುಳುಗಡೆಯಾಗಿ ದುರಂತ ಸಂಭವಿಸಿದೆ. ಕಾಣೆಯಾದ ಮೀನುಗಾರನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತಾಲೂಕಿನಲ್ಲಿ ನಾಳೆ ಹಾಗೂ ನಾಡಿದ್ದು ನಡೆಯಬೇಕಿದ್ದ ಸಚಿವ ಹೆಬ್ಬಾರ್ ಕಾರ್ಯಕ್ರಮಗಳು ರದ್ದು..!
ಮುಂಡಗೋಡ: ತಾಲೂಕಿನಲ್ಲಿ ನಾಳೆ ಸೋಮವಾರ ದಿನಾಂಕ ಜು.5 ರಂದು ಮಧ್ಯಾಹ್ನ ಮುಂಡಗೋಡ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ನಾಡಿದ್ದು ಮಂಗಳವಾರ ಜು.6 ರಂದು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಸಚಿವ ಶಿವರಾಮ ಹೆಬ್ಬಾರ್ ರವರ ಸಾರ್ವಜನಿಕ ಕಾರ್ಯಕ್ರಮಗಳು ರದ್ದಾಗಿವೆ. ಅನಿವಾರ್ಯ ಕಾರಣಗಳಿಂದ ಸಚಿವ ಶಿವರಾಮ ಹೆಬ್ಬಾರ್ ಅವರು ತುರ್ತಾಗಿ ಬೆಂಗಳೂರಿನಲ್ಲಿ ಸಭೆಗೆ ಹಾಜರಾಗಬೇಕಾಗಿರುವುದರಿಂದ ನಾಳೆ ಮಧ್ಯಾಹ್ನದ ಹಾಗೂ ಮಂಗಳವಾರದ ಮುಂಡಗೋಡ ತಾಲೂಕಿನ ಎಲ್ಲಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಅಂತಾ ಸಚಿವರ ಆಪ್ತ ವಲಯ ಮಾಹಿತಿ ನೀಡಿದೆ.
ಮಾತೃ ಭೂಮಿಯ ಮಣ್ಣಲ್ಲಿ ಮಣ್ಣಾದ ವೀರಯೋಧ..! ಆ ಪುಟ್ಟ ಕಂದಮ್ಮಗಳ ಅಪ್ಪ ಇನ್ನು ನೆನಪು ಮಾತ್ರ..!!
ಉಕ್ಕಲಿ; ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಹುತಾತ್ಮ ಯೋಧನ ಅಂತ್ಯಸಂಸ್ಕಾರ ಉಕ್ಕಲಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.. ಉಗ್ರರ ಗುಂಡಿಗೆ ಎದೆಯೊಡ್ಡಿದ ವೀರಯೋಧನ ಪಾರ್ಥೀವ ಶರೀರ ಹುಟ್ಟೂರಿಗೆ..! ಮನೆ ಮಗನ ಪಾರ್ಥೀವ ಶರೀರ ಕಂಡ ಇಡೀ ಊರಿಗೇ ಊರೇ ಕಣ್ಣೀರಲ್ಲಿ..!! ನಿಜ, ಉಕ್ಕಲಿ ಗ್ರಾಮದ ಜನರ ಹೃದಯ ಇಂದು ಅಕ್ಷರಶಃ ಭಾರವಾಗಿತ್ತು. ಯಾಕಂದ್ರೆ ಕಣ್ಣೇದುರೇ ಆಡಿ ಬೆಳೆದಿದ್ದ ಹುಡುಗ ದೇಶಸೇವೆಗಾಗಿ ಪ್ರಾಣವನ್ನೆ ಬಲಿ ಕೊಟ್ಟಿದ್ದ. ಒಂದು ಕಡೆ ದೇಶಕ್ಕಾಗಿ ಹುತಾತ್ಮನಾದ ಯೋಧನ ಹೆಮ್ಮೆಯ ಆನಂದ ಭಾಷ್ಪ ಸುರಿಯುತ್ತಿದ್ದರೆ ಮತ್ತೊಂದೆಡೆ, ಆ ಯೋಧನ ಪುಟ್ಟ ಪುಟ್ಟ ಎರಡು ಕಂದಮ್ಮಗಳ ಮುಗ್ದ ಮುಖ ನೋಡಿ ಕಣ್ಣೀರು ತನ್ನಿಂದ ತಾನೇ ಹರಿಯುತ್ತಿತ್ತು.. ಹೌದು, ಉಕ್ಕಲಿ ಗ್ರಾಮದ ಮೂವತ್ತೈದು ವರ್ಷ ವಯಸ್ಸಿನ ಕಾಶಿರಾಯ ಶಂಕ್ರಪ್ಪ ಬೊಮ್ಮನಳ್ಳಿ ಎಂಬುವ ವೀರಯೋಧ...