ಮುಂಡಗೋಡ-ಶಿರಸಿ ರಸ್ತೆಯ ನಂದಿಪುರ ಬಳಿ, KSRTC ಬಸ್, ಖಾಸಗಿ ಬಸ್ ನಡುವೆ ಮುಖಾಮುಕಿ ಡಿಕ್ಕಿ, ಕೆಲವ್ರಿಗೆ ಗಾಯ..!

Accident News: ಮುಂಡಗೋಡ ತಾಲೂಕಿನ ಶಿರಸಿ ರಸ್ತೆಯ ನಂದಿಪುರ ಬಳಿ VRL ಖಾಸಗಿ ಬಸ್ ಹಾಗೂ KSRTC ಬಸ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಹಲವರಿಗೆ ಗಾಯವಾದ ಘಟನೆ ನಡೆದಿದೆ.

ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ KSRTC ಬಸ್, ಶಿರಸಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಮುಖಾಮುಕಿ ಡಿಕ್ಕಿಯಾಗಿವೆ. ಹೀಗಾಗಿ, ರಸ್ತೆ ಸಂಚಾರಕ್ಕೂ ಅಡಚಣೆಯಾಗಿದೆ.

ಓರ್ವ ವೃದ್ದೆಯ ಕೈಗೆ ಗಂಭೀರ ಗಾಯವಾಗಿದೆ ಅನ್ನೊ ಮಾಹಿತಿ ಇದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!