Gold Rate Today: ಇತ್ತೀಚೆಗೆ ಸ್ವಲ್ಪ ಪ್ರಮಾಣದಲ್ಲಿ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ಬುಧವಾರ ದಿಢಿರ್‌ ಏರಿಕೆ ಕಂಡಿದ್ದು, ಆಭರಣ ಖರೀದಿದಾರರಿಗೆ ಶಾಕ್‌ ನೀಡಿದೆ. 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ₹2400 ಏರಿಕೆಯಾಗಿದೆ. ಪ್ರಸ್ತುತ ಬೆಂಗಳೂರಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಸ್ವಲ್ಪ ಏರಿಳಿತದಿಂದ ಕೂಡಿತ್ತು. ಆದರೆ, ಇಂದು ಬುಧವಾರ ದಿಢೀರ್‌ ಏರಿಕೆಯಾಗಿದೆ. 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ಒಂದೇ ದಿನದಲ್ಲಿ ₹2400 ಏರಿಕೆಯಾಗಿದ್ದು, ಆಭರಣ ಖರೀದಿದಾರರಿಗೆ ಶಾಕ್‌ ನೀಡಿದೆ. ಬೆಳ್ಳಿ ಬೆಲೆ ಕೂಡ ದುಬಾರಿಯಾಗಿದ್ದು, ಪ್ರತಿ ಕೆಜಿಗೆ ₹3000 ಏರಿಕೆಯಾಗಿದೆ. ಪ್ರಸ್ತುತ ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಲ್ಲಿ ಇಂದಿನ ಚಿನ್ನದ ಬೆಲೆ..!
ಬೆಂಗಳೂರಲ್ಲಿ ನಿನ್ನೆ ಮಂಗಳವಾರ ಬಂಗಾರದ ಬೆಲೆಯಲ್ಲಿ ₹490 ಇಳಿಕೆಯಾಗಿತ್ತು. ಆದರೆ, ಇಂದು ಬುಧವಾರ 22 ಕ್ಯಾರೆಟ್ ಆಭರಣದ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ₹2200 ಏರಿಕೆಯಾಗಿ ₹89300ರಲ್ಲಿ ವಹಿವಾಟು ನಡೆಸುತ್ತಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ ₹2400 ಏರಿಕೆಯಾಗಿದ್ದು, ₹97420ರಲ್ಲಿ ವಹಿವಾಟು ನಡೆಸುತ್ತಿದೆ.

ಬೆಳ್ಳಿ ಬೆಲೆ ₹3000 ಏರಿಕೆ..!
ಬೆಳ್ಳಿ ಬೆಲೆ ನಿನ್ನೆ ಮಂಗಳವಾರ ಪ್ರತಿ ಕೆಜಿ ₹100 ಇಳಿಕೆಯಾಗಿತ್ತು. ಆದರೆ, ಇಂದು ಬುಧವಾರ ಬೆಂಗಳೂರಲ್ಲಿ ಪ್ರತಿ 1 ಕೆಜಿ ಬೆಳ್ಳಿ ಬೆಲೆಯಲ್ಲಿ ₹3000 ಏರಿಕೆಯಾಗಿದ್ದು, ಮತ್ತೆ ₹1 ಲಕ್ಷ ತಲುಪಿದೆ. ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 1.11 ಲಕ್ಷದಲ್ಲಿ ವಹಿವಾಟು ನಡೆಸುತ್ತಿವೆ. ಬೆಂಗಳೂರಿಗೆ ಹೋಲಿಸಿದರೆ, ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ ಹೆಚ್ಚಿದೆ.

error: Content is protected !!