Dharwad Accident News:
ಧಾರವಾಡ: ಬೇಲೂರಿಗೆ ಬರುತ್ತಿದ್ದ ವೇಳೆಯಲ್ಲಿ, ಸ್ಕೂಟಿಯೊಂದು ನಿಂತ ಲಾರಿಗೆ ಡಿಕ್ಕಿ ಹೊಡೆದ ಘಟನೆ ನರೇಂದ್ರ ಬೈಪಾಸ್ ಬಳಿ ಸಂಭವಿಸಿದ್ದು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಸ್ಕೂಟಿಯಲ್ಲಿ ಛತ್ರಿ ಹಿಡಿದುಕೊಂಡು ಬರುತ್ತಿದ್ದ ಸಮಯದಲ್ಲಿ ದುರ್ಘಟನೆ ನಡೆದಿದೆ. ಮದಿಹಾಳದ ಪಿಜಿಯಲ್ಲಿ ಇರುತ್ತಿದ್ದ ವಿಶ್ವಾಸ ಎಂಬಾತ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಮತ್ತೋರ್ವ ಗಾಯಾಳುವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಕಸಿತ ಭಾರತದ ಮೂಲಕ ದೇಶದ ಅಭಿವೃದ್ದಿ: ಕಾರವಾರದಲ್ಲಿ ಕೇಂದ್ರ ಸಚಿವ ಶೇಖಾವತ್
ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.