ಕಲಘಟಗಿ ತಂಬೂರು ಕಾಡಿನಲ್ಲಿ ಅರಣ್ಯ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಾಡಾನೆ ದಾಳಿ, ಹಲವರಿಗೆ ಗಾಯ..!

ಕಲಘಟಗಿ ತಂಬೂರು ಕಾಡಿನಲ್ಲಿ ಅರಣ್ಯ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕಾಡಾನೆ ದಾಳಿ, ಹಲವರಿಗೆ ಗಾಯ..!

ಕಲಘಟಗಿ: ತಾಲ್ಲೂಕಿನ ತಂಬೂರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆ ವೇಳೆ ಆನೆಗಳು ದಿಡೀರನೆ ದಾಳಿ ಮಾಡಿದ ಘಟನೆ ನಡೆದಿದೆ. ಹಲವಾರು ದಿನಗಳಿಂದ 8 ಆನೆಗಳ ಹಿಂಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಆಲದಕಟ್ಟಿ, ತಂಬೂರ, ಸಂಗಮೇಶ್ವರ ಡಿಂಬವಳ್ಳಿ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಬಿಡು ಬಿಟ್ಟಿದ್ದ ಆನೆಗಳನ್ನು ಅರಣ್ಯ ಅಧಿಕಾರಿಗಳು ನಿರಂತರ ಕಾಡಿಗೆ ಅಟ್ಟಲು ಕಾರ್ಯಚರಣೆ ಮಾಡುತ್ತಿದ್ದ ವೇಳೆ ಅಧಿಕಾರಿಗಳ ಮೇಲೆ ದಾಳಿ ನಡೆಸಿವೆ. ಬಮ್ಮಿಗಟ್ಟಿ ವಲಯದ ಅಧಿಕಾರಿ ಉಮೇಶ್ ಕಡಿ, ಮೌನೇಶ ಲಿಂಗನಶೆಟ್ಟಿಕೊಪ್ಪ, ಸುರೇಶ ಅರವಳ್ಳಿ, ಪರಶುರಾಮ, ಕೃಷ್ಣ ಪಮ್ಮಾರ ಅವರಿಗೆ ಆನೆಯು ಕ್ವಾರಿಯಿಂದ ದಾಳಿ ಮಾಡಿದ್ದರಿಂದ ಗಾಯಗೊಂಡಿದ್ದಾರೆ. ಇನ್ನುಳಿದ ಸಿಬ್ಬಂದಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಎಲ್ಲ ಸಿಬ್ಬಂದಿಗಳನ್ನ ಸ್ಥಳೀಯ ಸರ್ಕಾರಿ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿಯಲ್ಲಿ ನಾಳೆ ಹಡಪದ ಅಪ್ಪಣ್ಣ ಸಮಾಜದಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ..!

ಬೆಳಗಾವಿಯಲ್ಲಿ ನಾಳೆ ಹಡಪದ ಅಪ್ಪಣ್ಣ ಸಮಾಜದಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ..!

ಮುಂಡಗೋಡ: ಹಡಪದ ಅಪ್ಪಣ್ಣ ಸಮಾಜದ ಬಾಂಧವರು ನಾಳೆ ಬೆಳಗಾವಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರೋ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಹಡಪದ ಅಪ್ಪಣ್ಣ ಸಮಾಜ ಬಾಂಧವರು ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಹಡಪದ ಅಪ್ಪಣ್ಣ ಸಮಾಜದ ಶ್ರೀಗಳು ಹಾಗೂ ಸುಕ್ಷೇತ್ರ ತಂಗಡಿಗಿ ಮಠದ ಪರಮಪೂಜ್ಯ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಾಳೆ ಸುವರ್ಣ ಗಾರ್ಡನ್ ಟೆಂಟ್ ನಂಬರ್ 6 ರಲ್ಲಿ ನಡೆಯುವ ಹಡಪದ ಸಮಾಜದ ಬೃಹತ್ ಹೋರಾಟಕ್ಕೆ ರಾಜ್ಯಾದ್ಯಂತ ಸಮಾಜಬಾಂಧವರು ಆಗಮಿಸುತ್ತಿದ್ದಾರೆ ಕಾರಣ ಮುಂಡಗೋಡ ತಾಲೂಕಿನ ಸಮಾಜದ ಬಾಂಧವರೂ ಭಾಗಿಯಾಗುವಂತೆ ಮುಖಂಡ ಸಿದ್ದು ಹಡಪದ ಮನವಿ ಮಾಡಿದ್ದಾರೆ.

ಹಾವು ಹಿಡಿಯಲು ಹೋದವನಿಗೆ ಕಚ್ಚಿದ ಹಾವು, ಪೋಸು ಕೊಡುತ್ತಿದ್ದವ ಆಸ್ಪತ್ರೆ ಪಾಲು..!

ಹಾವು ಹಿಡಿಯಲು ಹೋದವನಿಗೆ ಕಚ್ಚಿದ ಹಾವು, ಪೋಸು ಕೊಡುತ್ತಿದ್ದವ ಆಸ್ಪತ್ರೆ ಪಾಲು..!

ಯಾವೊಂದೂ ಮುಂಜಾಗ್ರತಾ ಕ್ರಮವಿಲ್ಲದೇ ಹಾವು ಹಿಡಿಯಲು ಹೋದ ವ್ಯಕ್ತಿಗೆ ಹಾವು ಕಚ್ಚಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸದಲ್ಲಿ ಘಟನೆ ನಡೆದಿದ್ದು, ರಾಜು ಕೌದಿ ಎಂಬ ವ್ಯಕ್ತಿಯೇ ಹಾವು ಕಚ್ಚಿಸಿಕೊಂಡಿದ್ದಾನೆ. ತಡಸ ಗ್ರಾಮದ ಇಟ್ಟಿಗೆ ಭಟ್ಟಿಯೊಂದರಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ಹಿಡಿಯಲು ಮುಂದಾಗಿದ್ದ ರಾಜೂ ಕೌದಿ, ಕೋಲಿನಿಂದ ಇಟ್ಟಿಗೆ ಅಡಿಯಲ್ಲಿದ್ದ ನಾಗರಹಾವನ್ನು ಗಾಸಿಗೊಳಿಸಿದ್ದ. ಕೋಲಿನಿಂದ ಹಾವಿನ ಹೆಡೆಗೆ ಗಟ್ಟಿಯಾಗಿ ಹಿಡಿದು, ಆ ನಂತರದಲ್ಲಿ ಕೈಯಿಂದ ಹಿಡಿದುಕೊಂಡಿದ್ದ. ಈ ವೇಳೆ ಹಾವು ಆತನ ಕೈಗೆ ಬಲವಾಗಿ ಕಚ್ಚಿದೆ. ಪರಿಣಾಮ ಸಧ್ಯ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಟ್ನಲ್ಲಿ, ಹಾವು ಹಿಡಿಯೊ ಸಾಹಸ ಮಾಡಲು ಹೋದ ವ್ಯಕ್ತಿ ಪೌರುಷ ತೋರಲು ಹೋಗಿ ಆಸ್ಪತ್ರೆ ಪಾಲಾಗಿದ್ದಾನೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಡಿ.22 ಕ್ಕೆ ಅರಣ್ಯ ಅತಿಕ್ರಮಣದಾರ ರಿಂದ “ಬೆಳಗಾವಿ ಚಲೋ”

ಡಿ.22 ಕ್ಕೆ ಅರಣ್ಯ ಅತಿಕ್ರಮಣದಾರ ರಿಂದ “ಬೆಳಗಾವಿ ಚಲೋ”

ಮುಂಡಗೋಡ: ತಾಲೂಕಿನ ವಿವಿಧ ಅರಣ್ಯ ಅತಿಕ್ರಮಣ ಪ್ರದೇಶಗಳ ಅತಿಕ್ರಮಣದಾರರು, ಇದೇ ಡಿ. 22 ಕ್ಕೆ ‘ಬೆಳಗಾವಿ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೀಗಾಗಿ ಇಂದು ಕಾರ್ಯಕ್ರಮದ ಪೂರ್ವಭಾವಿ ಸಭೆ ಮುಂಡಗೋಡಿನಲ್ಲಿ ಜರುಗಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಹಂತ, ಹಂತವಾಗಿ ಒಕ್ಕಲೆಸಲಾಗುವದು ಎಂಬ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ಅತಂತ್ರವಾಗಿರುವ ಆತಂಕದಲ್ಲಿ ಇರುವುದರಿಂದ, ಅರಣ್ಯವಾಸಿಗಳ ಪರ ಸರಕಾರ ನಿಲುವು ಪ್ರಕಟಿಸಬೇಕೆಂದು ಆಗ್ರಹಿಸಿ ಡಿ. 22 ರಂದು ‘ಬೆಳಗಾವಿ ಚಲೋ’ ಏರ್ಪಡಿಸಲಾಗಿದೆ ಅಂತಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್ ತಿಳಿಸಿದರು.

ನಂದಿಕಟ್ಟಾದಲ್ಲಿ ನಟ ಪುನೀತ್ ನೆನಪಲ್ಲಿ, ಮುಕ್ತ ಕಬಡ್ಡಿ ಪಂದ್ಯಾವಳಿ..!

ನಂದಿಕಟ್ಟಾದಲ್ಲಿ ನಟ ಪುನೀತ್ ನೆನಪಲ್ಲಿ, ಮುಕ್ತ ಕಬಡ್ಡಿ ಪಂದ್ಯಾವಳಿ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ದಿವಂಗತ ನಟ ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಪಂದ್ಯಾವಳಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಇನ್ನು ಕಬಡ್ಡಿ ಪಂದ್ಯಾವಳಿಗೆ ದೂರ ದೂರದ ಕಬಡ್ಡಿ ತಂಡಗಳು ಬಂದು ಭಾಗವಹಿಸಿವೆ. ಪ್ರಥಮ ಬಹುಮಾನವಾಗಿ 20 ಸಾವಿರ ರೂ. ಎರಡನೇ ಬಹುಮಾನವಾಗಿ 15 ಸಾವಿರ ರೂಪಾಯಿ ಮೂರನೇ ಬಹುಮಾನವಾಗೊ 10 ಸಾವಿರ ರೂಪಾಯಿ, ನಾಲ್ಕನೇ ಬಹುಮಾನವಾಗಿ 5 ಸಾವಿರ ರೂಪಾಯಿ ಇಡಲಾಗಿದೆ. ಇನ್ನು ಪದ್ಯಾವಳಿಯಲ್ಲಿ ಯಾರು ಬಹುಮಾನ ಪಡೆಯುತ್ತಾರೋ ಕಾದು ನೋಡಬೇಕಿದೆ.

ಅತ್ತಿವೇರಿಯಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆ ತೆರವು..!

ಅತ್ತಿವೇರಿಯಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆ ತೆರವು..!

ಮುಂಡಗೋಡ: ತಾಲೂಕಿನ ಅತ್ತಿವೇರಿ ದರ್ಗಾ ಹತ್ತಿರ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಯನ್ನು ಹುನಗುಂದ ಗ್ರಾಮ ಪಂಚಾಯತಿಯವರು ತೆರವುಗೊಳಿಸಿದ್ರು‌. ಅತ್ತಿವೇರಿ ಗ್ರಾಮದಲ್ಲಿ ಮನೆ ಹೊಂದಿದ್ದರೂ ಸರ್ಕಾರದ ಗಾಂವಠಾಣ ಜಾಗದಲ್ಲಿ ಮತ್ತೊಂದು ಮನೆ ನಿರ್ಮಿಸಿಕೊಂಡಿದ್ದ ವ್ಯಕ್ತಿಗೆ ಗ್ರಾಮ ಪಂಚಾಯತಿಯಿಂದ ನೋಟೀಸ್ ನೀಡಲಾಗಿತ್ತು. ನೋಟೀಸ್ ಮೂಲಕ ಮನೆ ತೆರವು ಮಾಡಲು ಸೂಚನೆ‌ ನೀಡಲಾಗಿತ್ತು. ಆದ್ರೂ ಸಹಿತ ಮನೆ ತೆರವು ಮಾಡಿಕೊಳ್ಳದ ಕಾರಣ ಇಂದು ಪೊಲೀಸರ ಸಹಾಯದೊಂದಿಗೆ ಅಕ್ರಮ ಮನೆ ತೆರವು ಮಾಡಲಾಯಿತು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಸೇರಿದಂತೆ ಸಿಬ್ಬಂದಿಗಳು ಅಕ್ರಮ ಮನೆ ತೆರವು ಕಾರ್ಯಾಚರಣೆ ಮಾಡಿದ್ರು.

ವಡಗಟ್ಟಾ ಬಳಿ ಬೈಕ್ ಗೆ ಅಡ್ಡ ಬಂದ ಕಾಡುಹಂದಿ, ಬೈಕ್ ಬಿದ್ದು, ಬೈಕ್ ಸವಾರನಿಗೆ ಗಾಯ..!

ವಡಗಟ್ಟಾ ಬಳಿ ಬೈಕ್ ಗೆ ಅಡ್ಡ ಬಂದ ಕಾಡುಹಂದಿ, ಬೈಕ್ ಬಿದ್ದು, ಬೈಕ್ ಸವಾರನಿಗೆ ಗಾಯ..!

ಮುಂಡಗೋಡ ತಾಲೂಕಿನ ವಡಗಟ್ಟಾ- ಹುನಗುಂದ ರಸ್ತೆಯಲ್ಲಿ ಬೈಕ್ ಗೆ ಕಾಡು ಹಂದಿ ಅಡ್ಡ ಬಂದ ಪರಿಣಾಮ ಬೈಕ್ ಬಿದ್ದು ಸವಾರನಿಗೆ ಗಾಯವಾದ ಘಟನೆ ನಡೆದಿದೆ‌. ಪ್ರಸಾದ್ ಕುಂಜು (51) ಎಂಬುವವರೇ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ ಹುನಗುಂದ ಹಾಗೂ ವಡಗಟ್ಟಾ ರಸ್ತೆಯಲ್ಲಿ ಬೈಕ್ ಮೇಲೆ ಬರುತ್ತಿರುವಾಗ ಘಟನೆ ನಡೆದಿದೆ. ಬೈಕ್ ಮೇಲಿಂದ ಬಿದ್ದು ಗಾಯಗೊಂಡು ಒದ್ದಾಡುತ್ತಿದ್ದ ವೇಳೆ ಗ್ರಾಮಸ್ಥರು ರಕ್ಷಿಸಿದ್ದಾರೆ. ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ‌. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಇಂದೂರಿನಲ್ಲಿ ಪರಿಷತ್ ಗೆಲುವಿಗೆ ಬಿಜೆಪಿಗರ ಸಂಭ್ರಮ..!

ಇಂದೂರಿನಲ್ಲಿ ಪರಿಷತ್ ಗೆಲುವಿಗೆ ಬಿಜೆಪಿಗರ ಸಂಭ್ರಮ..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲೂ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಪಡೆಯುತ್ತಿದ್ದಂತೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ‌ ಮಾಡಿದ್ರು. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು..ಈ ವೇಳೆ ಗ್ರಾಮದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ಹುನಗುಂದ ಗ್ರಾಮದಲ್ಲೂ ಬಿಜೆಪಿಗರ ಸಂಭ್ರಮ..!

ಹುನಗುಂದ ಗ್ರಾಮದಲ್ಲೂ ಬಿಜೆಪಿಗರ ಸಂಭ್ರಮ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲೂ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಪಡೆಯುತ್ತಿದ್ದಂತೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ‌ ಮಾಡಿದ್ರು. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು..ಈ ವೇಳೆ ಗ್ರಾಮದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು..

ಅರಶಿಣಗೇರಿ ಕಾಲುವೆ ಕಾಮಗಾರಿ ಕಳಪೆ, ದುರಸ್ಥಿ ಮಾಡುವಂತೆ ರೈತರ ಆಗ್ರಹ..!

ಅರಶಿಣಗೇರಿ ಕಾಲುವೆ ಕಾಮಗಾರಿ ಕಳಪೆ, ದುರಸ್ಥಿ ಮಾಡುವಂತೆ ರೈತರ ಆಗ್ರಹ..!

ಮುಂಡಗೋಡ: ತಾಲೂಕಿನ ಅರಶಿಣಗೇರಿ ಕೆರೆಯ ಕಾಲುವೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕಾಗಿ ರೈತರು ಮನವಿ ಮಾಡ್ತಿದಾರೆ. ಅರಶಿಣಗೇರಿ, ಅಗಡಿ ಹುನಗುಂದ ಗ್ರಾಮಗಳ ರೈತರ ಜೀವನಾಡಿಯಾಗಿರೋ ಅರಶಿಣಗೇರಿ ಕೆರೆಯ ಕಾಲುವೆಯನ್ನು ಈಗಾಗಲೇ ದುರಸ್ಥಿ ಕಾರ್ಯ ಮಾಡಿರೋ ಚಿಕ್ಕ ನೀರಾವರಿ ಇಲಾಖೆ ಅರ್ದಮರ್ದ ಕೆಲಸ ಮಾಡಿ ಹೋಗಿದ್ದಾರೆ ಅಲ್ಲದೇ ಹಾಗೆ ಮಾಡಿರೋ ಕೆಲಸವನ್ನೂ ಕಳಪೆಯಾಗಿ ಮಾಡಿದ್ದಾರೆ. ಹೀಗಾಗಿ ಈ ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕಾಲುವೆಯ ದುರಸ್ತಿ ಮಾಡಿ, ಕಾಮಗಾರಿ ನಡೆಸಬೇಕು ಅಂತಾ ರೈತರು ಆಗ್ರಹಿಸಿದ್ದಾರೆ..

error: Content is protected !!