ಕಲಘಟಗಿ: ತಾಲ್ಲೂಕಿನ ತಂಬೂರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆ ವೇಳೆ ಆನೆಗಳು ದಿಡೀರನೆ ದಾಳಿ ಮಾಡಿದ ಘಟನೆ ನಡೆದಿದೆ.
ಬಮ್ಮಿಗಟ್ಟಿ ವಲಯದ ಅಧಿಕಾರಿ ಉಮೇಶ್ ಕಡಿ, ಮೌನೇಶ ಲಿಂಗನಶೆಟ್ಟಿಕೊಪ್ಪ, ಸುರೇಶ ಅರವಳ್ಳಿ, ಪರಶುರಾಮ, ಕೃಷ್ಣ ಪಮ್ಮಾರ ಅವರಿಗೆ ಆನೆಯು ಕ್ವಾರಿಯಿಂದ ದಾಳಿ ಮಾಡಿದ್ದರಿಂದ ಗಾಯಗೊಂಡಿದ್ದಾರೆ. ಇನ್ನುಳಿದ ಸಿಬ್ಬಂದಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಎಲ್ಲ ಸಿಬ್ಬಂದಿಗಳನ್ನ ಸ್ಥಳೀಯ ಸರ್ಕಾರಿ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.