ಕುಮಟಾ- ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ವಸ್ತು ಬಾಂಬ್ ಅಲ್ಲ, ನಕಲಿ ಬಾಂಬ್ ಅಂತಾ ತನಿಖೆಯ ನಂತರ ಖಚಿತಗೊಂಡಿದೆ. ಪತ್ತೆಯಾದ ವಸ್ತು ನಕಲಿ ಬಾಂಬ್ ಆಗಿದ್ದು, ವಸ್ತುವಿನಲ್ಲಿ ಯಾವುದೇ ರೀತಿಯ ಸ್ಪೋಟಕ ಇರಲಿಲ್ಲ ಅಂತಾ, ವಸ್ತುವನ್ನ ಬಿಚ್ಚಿ ಪರಿಶೀಲನೆ ನಡೆಸಿದ ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ತಿಳಿಸಿದ್ದಾರೆ. ನಿನ್ನೆ ಸಂಜೆ ವೇಳೆ ಪತ್ತೆಯಾಗಿದ್ದ ಬಾಂಬ್ ಮಾದರಿ ವಸ್ತುವಿನಿಂದ ಕುಮಟಾ ಪಟ್ಟಣದಲ್ಲಿ ಭಾರೀ ಆತಂಕ ಎದುರಾಗಿತ್ತು. ನಿನ್ನೆಯಿಂದಲೂ ಸ್ಥಳದಲ್ಲೇ ಪೊಲೀಸ್ ತಂಡ ಬೀಡು ಬಿಟ್ಟಿದ್ದವು. ಎಸ್ಪಿ ಪ್ರಕಾಶ್ ದೇವರಾಜು ಸ್ಥಳಕ್ಕೆ ಭೇಟಿ ನೀಡಿದ್ದರು.
Top Stories
ದೇಶದಲ್ಲಿ ಮತ್ತೆ ಕೋವಿಡ್ ಆತಂಕ : ರಾಜ್ಯದಲ್ಲಿ 38 ಕೇಸ್, ಬೆಂಗಳೂರಲ್ಲೇ 32 ಸೋಂಕಿತರು..!
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಜಿಲ್ಲೆ ಸೇರಿ, ರಾಜ್ಯದಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್..!
ಮುಂಡಗೋಡಲ್ಲಿ ಮೊಳಗಿದ ದೇಶ ಭಕ್ತಿಯ ಘೋಷವಾಕ್ಯ..! “ಆಪರೇಷನ್ ಸಿಂಧೂರ” ವೀರ ಸೈನಿಕರಿಗೆ ಗೌರವದ ಬೆಂಬಲ..!
ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ
RCB ಕನಸು ಭಗ್ನಗೊಳಿಸಿದ ಸನ್ ರೈಸರ್ಸ್, ಇನ್ನೇನಿದ್ರೂ ಪಂಜಾಬ್ ಮೇಲೆ ಬೆಂಗಳೂರಿಗರ ಕಣ್ಣು..!
ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯಿಂದ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ..!
ದೆಹಲಿಯಲ್ಲಿ 23 ಕೋರೊನಾ ಕೇಸ್ ಗಳು ವರದಿ; ಭಯ ಬೇಡ, ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ
ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್, ಡೀಸಿ ಆದೇಶ..!
ಜಿಲ್ಲೆಯಲ್ಲಿನ ಸೇತುವೆಗಳ ದೃಡತೆ ಬಗ್ಗೆ ವರದಿ ನೀಡಿ, ಅನಾಹುತವಾದಲ್ಲಿ ಅಧಿಕಾರಿಗಳೇ ಹೊಣೆ-ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಎಚ್ಚರಿಕೆ..!
ಜಿಲ್ಲೆಯಲ್ಲಿ ಮೇ.27 ರ ವರೆಗೆ ರೆಡ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ರ ಅವಧಿ ವಿಸ್ತರಣೆ..!
ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದ ಮೂಲಕ ಸಮಸ್ಯೆಗಳಿಗೆ ತುರ್ತು ಸ್ಪಂದನೆ, ಮಳೆಯಿಂದ ನಿಮಗೂ ಸಮಸ್ಯೆ ಆದಲ್ಲಿ ತಕ್ಷಣವೇ ಇಲ್ಲಿ ಕರೆ ಮಾಡಿ..!
ಪಬ್ಲಿಕ್ ಫಸ್ಟ್ ನ್ಯೂಸ್: ಉತ್ತರ ಕನ್ನಡದ ಇಂದಿನ ಸಂಕ್ಷಿಪ್ತ ಸುದ್ದಿಗಳು
ಮುಂಡಗೋಡ ಸೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ..!
ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ನೇಮಕ..!
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ವಾಹನ ನಿಲ್ಲಿಸುವಂತಿಲ್ಲ, ನದಿಗೆ ಇಳಿಯುವಂತಿಲ್ಲ ಪ್ರತಿಬಂಧಕಾಜ್ಞೆ ಹೊರಡಿಸಿದ ಡಿಸಿ..!
ಮಳೆಗಾಲದಲ್ಲಿ ಜೀವಹಾನಿಯಾಗದಂತೆ ಗರಿಷ್ಠ ಮುನ್ನೆಚ್ಚರಿಕೆ ವಹಿಸಿ- ಅಧಿಕಾರಿಗಳಿಗೆ ಸಚಿವ ಮಂಕಾಳ ವೈದ್ಯ
ಕಡಿಮೆ CIBIL ಸ್ಕೋರ್ ಇದ್ದರೂ ₹3 ಲಕ್ಷದವರೆಗೆ ಸಾಲ ಪಡೆಯಬಹುದು; ಹೇಗೆ ಗೊತ್ತಾ..? ಮಾಹಿತಿ ಇಲ್ಲಿದೆ..!
ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ; ನಟ ಮಡೆನೂರು ಮನು ಬಂಧನ..!
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ನೀಡುವಂತೆ ಮನವಿ..!
ಮುಂಡಗೋಡ: ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕಾರ್ಯಕರ್ತರು, ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅನುಮತಿ ನೀಡಬೇಕೆಂದು, ಮುಂಡಗೋಡ ತಹಶೀಲ್ದಾರ್ ಮೂಲಕ ಮುಖ್ಯಂಮತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆಯಲ್ಲಿ ಅಯ್ಯಪ್ಪ ಬಜಂತ್ರಿ. ಶಿವಣ್ಣ ಕುಂದರಗಿ. ಪಿರಜ್ಜಾ ಸಾಗರ್. ಮಂಜುನಾಥ್ ಕುರುಬರ, ಕೃಷ್ಣ ಕುಂದರಗಿ. ನಿಗಪ್ಪ ಕುರಬರ, ಪ್ರಕಾಶ್ ಕೊರವರ್, ಕೈಲಾಶ್ ಗಜಕೋಷ್, ಸಂಕೇತ್ ಗೌಡರ್, ಶ್ರೀನಿವಾಸ್ ಹುಲಗೂರ್ ಸೇರಿ ಹಲವರು ಹಾಜರಿದ್ದರು.
ಕಾಲೇಜು ಆವರಣದಲ್ಲೇ ಬಾಂಬ್ ಮಾದರಿಯ ವಸ್ತು ಪತ್ತೆ, ಆತಂಕದಲ್ಲಿದೆ ತಾಲೂಕಿನ ಜನತೆ..!
ಕುಮಟಾ- ಕಾಲೇಜು ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾಗಿದೆ. ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜ್ ಹಿಂಬದಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಂಜೆ ವಾಯುವಿಹಾರಕ್ಕೆ ತೆರಳಿದ್ದವರ ಕಣ್ಣಿಗೆ ಬಿದ್ದಿದ್ದ ಬಾಂಬ್ ಮಾದರಿ ವಸ್ತು ಗಮನಿಸಿದ ಸ್ತಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸ್ ದೌಡಾಯಿಸಿ, ಪರಿಶೀಲನೆ ಕೈಗೊಂಡಿದ್ದಾರೆ. ಕಾಲೇಜು ಆವರಣದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಶ್ವಾನದಳ ಬೀಡು ಬಿಟ್ಟಿದೆ. ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡ ಆಗಮಿಸೋ ಸಾಧ್ಯತೆಯಿದೆ. ಬಾಂಬ್ ಮಾದರಿಯ ವಸ್ತು ಸಿಕ್ಕಿದ್ದು ಕುಮಟಾ ವ್ಯಾಪ್ತಿಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.
5 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ ಪಡೆದ ಪೊಲೀಸರು..!
ಶಿರಸಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೋಟಿ ಕೋಟಿ ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್( ತಿಮಿಂಗಿಲ ವಾಂತಿ) ವಶಕ್ಕೆ ಪಡೆದಿದ್ದಾರೆ. ಜೊತೆಗೆ ಇಬ್ಬರನ್ನು ಬಂದಿಸಿದ್ದಾರೆ. ಬೆಳಗಾವಿಯಿಂದ ತಂದು ಶಿರಸಿಯಲ್ಲಿ ಮಾರಾಟಕ್ಕೆ ಯತ್ನ ಮಾಡುತ್ತಿದ್ದ, ಪ್ರಮುಖ ಆರೋಪಿ ಬೆಳಗಾವಿಯ ಸಂತೋಷ್ ಕಾಮತ್ ಮತ್ತು ಶಿರಸಿಯ ರಾಜೇಶ್ ಪೂಜಾರಿಯನ್ನು ತಡರಾತ್ರಿ ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 5 ಕೋಟಿ ರೂಪಾಯಿ ಮೌಲ್ಯದ 5 ಕೆಜಿ, ನಿಷೇಧಿತ ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ ) ವಶಕ್ಕೆ ಪಡೆಯಲಾಗಿದೆ. ಅಂದಹಾಗೆ, ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಪ್ರಕರಣವಾಗಿದೆ.
ಅಗಡಿಯಲ್ಲಿ ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿ..!
ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಗರ್ಭಿಣಿಯೋರ್ವಳು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ, 108 ಅಂಬ್ಯಲೆನ್ಸ್ ಗೆ ಕರೆ ಮಾಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ 108 ಸಿಬ್ಬಂದಿಗಳು, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಮನೆಯ ಹತ್ತಿರ ಅಂಬ್ಯುಲೆನ್ಸ್ ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮನೀಡಿರೋ ಗೀತಾ ಪ್ರಭು ನಾಯಕ ಎಂಬ ಮಹಿಳೆ ಆರೋಗ್ಯವಾಗಿದ್ದಾರೆ. ಹೆರಿಗೆಯ ನಂತರ ಸೂಕ್ತ ಚಿಕಿತ್ಸೆಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ. ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಬಳೂರು ಹಾಗೂ ಚಾಲಕ ಕೆಂಚೇಶ್ ಈ ವೇಳೆ ಇದ್ದರು.
ಹಾನಗಲ್ ಕ್ಷೇತ್ರದಲ್ಲಿ ಗೆಲುವು ನಮ್ಮದೇ; ಸಚಿವ ಹೆಬ್ಬಾರ್ ವಿಶ್ವಾಸದ ನುಡಿ..!
ಶಿರಸಿ: ಹಾನಗಲ್ ನಲ್ಲಿ ನೂರಕ್ಕೆ ನೂರರಷ್ಟು ವಿಜಯ ನಮ್ಮದೇ ಅಂತಾ ಸಚಿವ ಹಾಗೂ ಹಾನಗಲ್ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಮ್ ಹೆಬ್ಬಾರ್ ವಿಶ್ವಾಸ ವ್ಯಕ್ತ ಪಡಿಸಿದ್ರು. ಶಿರಸಿಯಲ್ಲಿ ಮಾತನಾಡಿದ ಸಚಿವ ಹೆಬ್ಬಾರ್, ಹಲವಾರು ಜನ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ, ತಾವೇ ಗೆದ್ದು ಬಿಡ್ತೀವಿ ಅಂತ ಮಾತನಾಡುತ್ತಿದ್ದಾರೆ, ಆದ್ರೆ, 25 ಸಾವಿರದಷ್ಟು ದೊಡ್ಡ ಅಂತರದಲ್ಲಿ ಹಾನಗಲ್ ನಲ್ಲಿ ಬಿಜೆಪಿ ಜಯ ಸಾಧಿಸಲಿದೆ ಅಂತಾ ವಿಶ್ವಾಸದ ನುಡಿ ಹೇಳಿದ್ರು. ಹಾನಗಲ್ ಹಾಗೂ ಸಿಂದಗಿ ಸೇರಿ ಎರಡೂ ಕ್ಷೇತ್ರಗಳಲ್ಲಿ ನಾವು ಜಯ ಸಾಧಿಸ್ತೀವಿ, ಅದ್ರಲ್ಲೂ ಹಾನಗಲ್ ನಲ್ಲಿ ಹೆಚ್ಚು ಅಂತರದಿಂದ ಜಯ ಸಾಧಿಸುತ್ತೇವೆ ಅಂತಾ ಹೆಬ್ಬಾರ್ ತಿಳಿಸಿದ್ರು.
ಹಾನಗಲ್ ಉಪ ಕದನದಲ್ಲಿ ಮುಂಡಗೋಡ ಬಿಜೆಪಿಗರ ಪ್ರಚಾರ ಭರಾಟೆ..!
ಹಾನಗಲ್ ನಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಅನ್ನೋ ಪ್ರತಿಷ್ಟೆಯ ಜಿದ್ದಿಗೆ ಬಿದ್ದಿದ್ದಾರೆ. ಹೀಗಾಗಿ, ಇಡೀ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರಕ್ಕೆ ಕಾರ್ಯಪಡೆ ರಚಿಸಿದ್ದಾರೆ. ಅದ್ರಂತೆ, ಪಕ್ಕದ ಮುಂಡಗೋಡ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾನಗಲ್ ಉಪಚುನಾವಣೆಯ ಅಖಾಡಕ್ಕೆ ಇಳಿದು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ತಾಲೂಕಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಹಾನಗಲ್ ಕ್ಷೇತ್ರದ ಹಳ್ಳಿ, ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಮುಂಡಗೋಡ ಬಿಜೆಪಿಯ ಯುವ ಮೋರ್ಚಾ ತಾಲೂಕಾ ಘಟಕದ ಅಧ್ಯಕ್ಷ ಗಣೇಶ್ ಶಿರಾಲಿ, ಸಂಜೀವ ಪೀಸೆ, ಮಂಜುನಾಥ್ ಹಿರೇಮಠ, ಶಿವಯೋಗಿ ಕೂಡಲಮಠ ಸೇರಿದಂತೆ ಹಲವು ಯುವ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ರು.
ಸಿಎಟ್ ಟೈಯರ್ ಜಾಹೀರಾತಿಗೆ ಸಂಸದ ಅನಂತಣ್ಣನ ಆಕ್ರೋಶ..! ಕಂಪನಿ ಮಾಲೀಕಗೆ ಪತ್ರ ಬರೆದ ಹಿಂದು ಹುಲಿ..!!
ಶಿರಸಿ: ಸಿಎಟ್ ಟೈಯರ್ ಜಾಹೀರಾತಿಗೆ ಸಂಸದ ಅನಂತಕುಮಾರ್ ಹೆಗಡೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಾಹೀರಾತು ಪ್ರಶ್ನಿಸಿ ಸಿಎಟ್ ಟೈಯರ್ ಕಂಪನಿ ಮಾಲೀಕ ಅನಂತ ವರಧನ್ ಗೆ ಪತ್ರ ಬರೆದಿದ್ದಾರೆ. ಸಿಎಟ್ ಜಾಹೀರಾತಿನಲ್ಲಿ ಹಿಂದುಗಳ ಆಚರಣೆಗಳನ್ನು ನಟ ಅಮೀರ್ ಖಾನ್ ಹೀಯಾಳಿಸಿರುವ ಕುರಿತು ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಈ ಜಾಹಿರಾತಿನಲ್ಲಿ ಹಿಂದುಗಳ ಭಾವನೆಯನ್ನು ತುಳಿಯುವ ಕ್ಷುಲ್ಲಕ ಕುತಂತ್ರ ಎಂದು ಆರೋಪಿಸಿರುವ ಅನಂತಕುಮಾರ್ ಹೆಗಡೆ, ಆಮೀರ್ ಖಾನ್ ನಟಿಸಿರುವ ಜಾಹಿರಾತಿನಲ್ಲಿ ಹಿಂದುಗಳು ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ ಆದರೆ, ಅಮೀರ್ ಖಾನ್ ಪ್ರತಿಪಾದಿಸುವ ಮುಸ್ಲಿಂ ಧರ್ಮದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದು, ಬೆಳಿಗ್ಗೆ ಧ್ವನಿವರ್ಧಕ ಬಳಸುವುದರ ಬಗ್ಗೆ ಏಕೆ ಮೌನ..? ಎಂದು ಪ್ರಶ್ನಿಸಿದ ಅನಂತಕುಮಾರ್ ಹೆಗಡೆ ತಾವು ಬರೆದಿರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಕಿಮ್ಸ್ ಗೆ ದಾಖಲು..!
ಮುಂಡಗೋಡ: ವಿಷ ಸೇವಿಸಿದ ಮಹಿಳೆಯೋರ್ವಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಕೋಡಂಬಿಯಲ್ಲಿ ನಡೆದಿದೆ. ಪ್ರೇಮಾ ಕೃಷ್ಣಪ್ಪ ಕೊರಗರ್ ಎಂಬುವ ಗೃಹಿಣಿಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವಳಾಗಿದ್ದಾಳೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮುಂಡಗೋಡಿನ 108 ಅಂಬ್ಯುಲೆನ್ಸ್ ಸಿಬ್ಬಂದಿ, ತಾಲ್ಲೂಕು ಆಸ್ಪತ್ರೆ ಮುಂಡಗೋಡಿಂದ ಹುಬ್ಬಳ್ಳಿ ಕಿಮ್ಸ್ ಗೆ,108 ಅಂಬ್ಯುಲೆನ್ಸ್ ಮುಖಾಂತರ ದಾಖಲಿಸಿದ್ದಾರೆ. 108 ಅಂಬ್ಯುಲೆನ್ಸ್ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಸಿ. ಬಳೂರು, ಚಾಲಕ ಕೆಂಚೇಶ್ ಇ. ಎನ್ ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿದರು.. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಾಜಿ ಗ್ರಾಪಂ ಸದಸ್ಯ ಮರಿಯಪ್ಪ ಮೇತ್ರಿ ಹೃದಯಾಘಾತದಿಂದ ವಿಧಿವಶ, ಗ್ರಾಮಸ್ಥರ ಕಂಬನಿ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಮಾಜಿ ಗ್ರಾಮ ಪಂಚಾಯತ ಸದಸ್ಯ ಮರಿಯಪ್ಪ ಮೇತ್ರಿ ಹೃದಯಾಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ. ಮಂಗಳವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವ್ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ರೈತರ ಬೋರವೆಲ್ ರಿಪೇರಿ ಮಾಡುತ್ತಿದ್ದ ಮರಿಯಪ್ಪ ಮೇತ್ರಿ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.