Home ಪೊಲೀಸ್ ಬೀಟ್

Category: ಪೊಲೀಸ್ ಬೀಟ್

Post
ಮುಂಡಗೋಡ ಗಾಂಧಿನಗರದಲ್ಲಿ ನೇಣಿಗೆ ಶರಣಾದ ಯುವಕ..!

ಮುಂಡಗೋಡ ಗಾಂಧಿನಗರದಲ್ಲಿ ನೇಣಿಗೆ ಶರಣಾದ ಯುವಕ..!

ಮುಂಡಗೋಡ: ಪಟ್ಟಣದ ಗಾಂಧಿನಗರದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ. ಗಾಂಧಿನಗರದ ದೇವಪುತ್ರ ಗೋರ್ನಾಳ (35) ಎಂಬ ಯುವಕನೇ ನೇಣಿಗೆ ಶರಣಾಗಿದ್ದು, ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಸನವಳ್ಳಿ ಮಾರಿಕಾಂಬೆಯ ಆಭರಣ ಕದ್ದಿದ್ದ ಚಾಲಾಕಿ ಅರೆಸ್ಟ್, ಅಷ್ಟಕ್ಕೂ ಕಳ್ಳತನದ ಆರೋಪಿ ಯಾರು ಗೊತ್ತಾ..?

ಸನವಳ್ಳಿ ಮಾರಿಕಾಂಬೆಯ ಆಭರಣ ಕದ್ದಿದ್ದ ಚಾಲಾಕಿ ಅರೆಸ್ಟ್, ಅಷ್ಟಕ್ಕೂ ಕಳ್ಳತನದ ಆರೋಪಿ ಯಾರು ಗೊತ್ತಾ..?

 ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಶ್ರೀಮಾರಿಕಾಂಬಾದೇವಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಕೇಸ್ ಕೂಡ ಬಟಾ ಬಯಲಾಗಿದೆ. ಮುಂಡಗೋಡ ಪೊಲೀಸರ ಖಡಕ್ ತನಿಖೆಯಲ್ಲಿ ಆ ಗ್ರಾಮದಲ್ಲೇ ಅಡಗಿ ಕುಳಿತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಹಾಗೂ ಪಿಎಸ್ ಐ ಬಸವರಾಜ್ ಮಬನೂರು ಕಳ್ಳತನದ ಕೇಸ್ ಬಯಲು ಮಾಡಿದ್ದಾರೆ. ಮಳ್ಳನಂತಿದ್ದ ಕಳ್ಳ..! ಅಸಲಿಗೆ, ಊರ ದೇವಿಯ ಆಭರಣವನ್ನೇ ಎಗರಿಸಿ ಮಳ್ಳನಂತೆ ಕುಳಿತಿದ್ದ, ಸನವಳ್ಳಿ ಗ್ರಾಮದ ಮಹಾಂತೇಶ್ ಅರ್ಜುನ್ ಆರೆಗೊಪ್ಪ ಎಂಬುವ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ....

Post
ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಬೈಕ್ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ..!

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಬೈಕ್ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೈಕ್ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಕಳ್ಳನನ್ನು ಹೆಡೆಮುರಿ ಕಟ್ಟಿದ್ದಾರೆ. ತಾಲೂಕಿನ ಕಾತೂರ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪದ ಅನಿಲ್ ಶಿವಪ್ಪ ಬಂಡಿವಡ್ಡರ ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಜೂನ್ 6.. ಅಂದಹಾಗೆ, ಜೂನ್ 6 ರಂದು ಕಾತೂರಿನ ಸಿರಾಜ್ ಬಾಷಾಸಾಬ್ ಬೊಮ್ಮನಳ್ಳಿ ಎಂಬುವವರ ಮನೆ...

Post
ಹುಬ್ಬಳ್ಳಿಯಲ್ಲಿ ಇಂದು ಪೊಲೀಸ್ “ಸೂಪರ್ ಕಾಪ್”ಗಳ ಕಾರ್ಯಾಗಾರ ಮತ್ತು ಸಮ್ಮೇಳನ..!

ಹುಬ್ಬಳ್ಳಿಯಲ್ಲಿ ಇಂದು ಪೊಲೀಸ್ “ಸೂಪರ್ ಕಾಪ್”ಗಳ ಕಾರ್ಯಾಗಾರ ಮತ್ತು ಸಮ್ಮೇಳನ..!

ಹುಬ್ಬಳ್ಳಿ: ಕರ್ನಾಟಕ ಸೂಪರ್ ಕಾಪ್ ವಾಟ್ಸಾಪ್ ಗ್ರೂಪ್ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳ ಕಾರ್ಯಾಗಾರ ಮತ್ತು ಪ್ರಥಮ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ ವಿದ್ಯಾನಗರದ ಜಿವಿಜಿ ಟೆಕ್ನಾಲಜಿ ಮತ್ತು ಇಂಜನೀಯರಿಂಗ್ ಕಾಲೇಜಿನ ಸಭಾಭವನದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲವು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಲವು ಬಗೆಯ ಅಪರಾಧಗಳ ಬೆನ್ನತ್ತಿ ಆರೋಪಿಗಳ ಹೆಡೆಮುರಿ ಕಟ್ಟುವ “ಸೂಪರ್ ಕಾಪ್” ಗಳಿಗೆ ಮತ್ತಷ್ಟು ಹುರಿದುಂಬಿಸುವ ಕಾರ್ಯಾಗಾರ ಇದಾಗಿದ್ದು, ಉತ್ಸುಕತೆಯಿಂದಲೇ ನೂರಾರು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

error: Content is protected !!