Gold And Silver Prices:ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಮತ್ತೆ ಕುಸಿತದ ಟ್ರೆಂಡ್ನಲ್ಲಿವೆ. ಕಳೆದ ಎರಡು ದಿನದಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಗಳು ಇಂದು ಬುಧವಾರ ಸ್ಥಿರವಾಗಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆಗಳು ಭಾರೀ ಇಳಿಕೆ ಕಂಡಿವೆ. ಪ್ರಸ್ತುತ ಮೇ 28 ರಂದು ಬುಧವಾರ ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆ.
ಬೆಂಗಳೂರಲ್ಲಿ ಚಿನ್ನದ ಬೆಲೆ ಕಳೆದ ಎರಡು ದಿನದಿಂದಲೂ ಸತತವಾಗಿ ಇಳಿಕೆಯಾಗಿತ್ತು. ಕಳೆದ ಸೋಮವಾರ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹440 ಇಳಿಕೆಯಾಗಿತ್ತು. ನಿನ್ನೆ ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ₹ 160 ಇಳಿಕೆಯಾಗಿದೆ ಪ್ರತಿ 10 ಗ್ರಾಂಗೆ ₹97,480ಕ್ಕೆ ತಲುಪಿತ್ತು. 22 ಕ್ಯಾರೆಟ್ನ ಆಭರಣ ಚಿನ್ನದ ಬೆಲೆ ಕೂಡ ಕಳೆದ ಎರಡು ದಿನಗಳಲ್ಲಿ ₹550 ಇಳಿದಿದ್ದು, ಪ್ರತಿ 10 ಗ್ರಾಂಗೆ ₹89,350 ರಲ್ಲಿ ವಹಿವಾಟು ನಡೆಸುತ್ತಿದೆ. ಇಂದು ಬುಧವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದಿನ ಬೆಲೆಗಳೇ ಮುಂದುವರಿದಿವೆ.
ಬೆಳ್ಳಿ ಬೆಲೆ ಸ್ಥಿರ
ಮತ್ತೊಂದೆಡೆ, ಚಿನ್ನದ ಬೆಲೆಗಳು ಕಡಿಮೆಯಾಗುತ್ತಿದ್ದರೂ, ಬೆಳ್ಳಿ ಬೆಲೆಗಳು ಸ್ಥಿರವಾಗಿವೆ. ಇಂದು ಬುಧವಾರ ಬೆಂಗಳೂರಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ₹1 ಲಕ್ಷದಲ್ಲಿ ವಹಿವಾಟು ನಡೆಸುತ್ತಿದೆ. ಹೈದರಾಬಾದ್ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ₹1,11 ಲಕ್ಷದಲ್ಲಿ ವಹಿವಾಟು ನಡೆಸುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಕುಸಿತ.
ಅಂತಾರಾಷ್ಟ್ರೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಭಾರೀ ಕುಸಿತ ಕಾಣುತ್ತಿವೆ. ಅಮೆರಿಕವು ಯುರೋಪ್ ಒಕ್ಕೂಟದ ಮೇಲೆ ಶೇ.50 ರಷ್ಟು ಸುಂಕಗಳ ಅನುಷ್ಠಾನವನ್ನು ಮುಂದೂಡುವ ಘೋಷಣೆಯ ನಂತರ, ಚಿನ್ನದ ಬೆಲೆಯಲ್ಲಿ ಸುಮಾರು $ 100 ರಷ್ಟು ಕಡಿಮೆಯಾಗಿದೆ.
ಪ್ರಸ್ತುತ, ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್ಗೆ $ 3304 ಆಗಿದೆ. ಅದೇ ರೀತಿ, ಸ್ಪಾಟ್ ಬೆಳ್ಳಿ ದರವು ಔನ್ಸ್ಗೆ $ 33.28 ಆಗಿದೆ. ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯವು ಸ್ವಲ್ಪ ಕಡಿಮೆಯಾಗಿದ್ದು, ಪ್ರತಿಡಾಲರ್ ಎದುರು ₹85.388 ಕ್ಕೆ ವಹಿವಾಟು ನಡೆಸುತ್ತಿದೆ.
ಮೇಲೆ ತಿಳಿಸಿದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಾರುಕಟ್ಟೆ ಬೆಲೆಗಳಾಗಿದ್ದು, ಇದರಲ್ಲಿ ತೆರಿಗೆ , ಮೇಕಿಂಗ್ ಶುಲ್ಕ ಸೇರಿದಂತೆ ಇತರೆ ವೆಚ್ಚಗಳನ್ನು ಸೇರಿಸಿಲ್ಲ. ಚಿನ್ನ ಖರೀದಿಸುವ ಮೊದಲು ನಿಖರ ಬೆಲೆಗಳನ್ನು ತಿಳಿಯಲು ಆಭರಣ ಮಳಿಗೆಗೆ ಭೇಟಿ ನೀಡಿ.
ಭಾರತದಲ್ಲಿ ಯಾವಾಗಲೂ ಚಿನ್ನಕ್ಕೆ ಬೇಡಿಕೆ ಇದ್ದೇ ಇರುತ್ತದೆ. ವಿಶೇಷ ದಿನಗಳಲ್ಲಿ ಮತ್ತು ಮದುವೆಯ ಸೀಸನ್ಗಳಲ್ಲಿ ಚಿನ್ನದ ಬೇಡಿಕೆ ಇನ್ನಷ್ಟು ಹೆಚ್ಚುತ್ತದೆ. ಅದಕ್ಕಾಗಿಯೇ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರ ಎನಿಸಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳು ತೀವ್ರವಾಗಿ ಏರಿಕೆಯಾಗಿ ದಾಖಲೆಯ ಮಟ್ಟವನ್ನು ತಲುಪಿವೆ ಎಂದು ತಿಳಿದಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕ. ಪ್ರಪಂಚದಾದ್ಯಂತದ ದೇಶಗಳ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸುವ ಮೂಲಕ ವ್ಯಾಪಾರ ಅನಿಶ್ಚಿತತೆಗೆ ಬಾಗಿಲು ತೆರೆದಿದೆ. ಆದರೆ, ಅದರ ನಂತರ, ಸುಂಕಗಳ ಅನುಷ್ಠಾನವನ್ನು 90 ದಿನಗಳವರೆಗೆ ಮುಂದೂಡಿತು. ಇದರಿಂದಾಗಿ, ಚಿನ್ನದ ಬೆಲೆಗಳು ಕಡಿಮೆಯಾಗಿವೆ.
ಈಗ ಡೊನಾಲ್ಡ್ ಟ್ರಂಪ್ ಯುರೋಪಿಯನ್ ಒಕ್ಕೂಟದ ಮೇಲೆ ವಿಧಿಸಲು ಯೋಜಿಸಲಾಗಿದ್ದ ಶೇಕಡಾ 50 ರಷ್ಟು ಸುಂಕಗಳನ್ನು ಮುಂದೂಡುತ್ತಿರುವುದಾಗಿ ಘೋಷಿಸಿದ್ದಾರೆ. ಇದರಿಂದ ಮತ್ತೆ ಚಿನ್ನದ ಬೆಲೆಗಲು ಇಳಿಕೆಯಾಗುತ್ತಿವೆ.