ಗಬ್ಬು ನಾರುತ್ತಿದ್ದ ಬಾಚಣಕಿ ಅಂದಾನೆಪ್ಪನ ಶವ ಸುತ್ತಿ ಕಟ್ಟಿದ ಪಿಐ ರಮೇಶ ಹಾನಾಪುರ..! ಅಧಿಕಾರದ ಘಮಂಡಿಯಿಲ್ಲದ ಮಾನವೀಯ ಕಾರ್ಯಕ್ಕೆ ಜನರ ಮೆಚ್ಚುಗೆ..!

ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಚಣಕಿ ಗ್ರಾಮದ ಅಂದಾನೆಪ್ಪ ಅವರ ಶವ, ಕೊನೆಗೂ ಅದೇ ಗ್ರಾಮದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಅಸಲು, ಈ ಸಾವಿನ ಹಿಂದೆ ಹತ್ತಾರು ಅನುಮಾನದ ಪ್ರಶ್ನೆಗಳೂ ಎದ್ದಿವೆ. ಅದು ಬೇರೆ ಮಾತು.

ಶವ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಮುಂಡಗೋಡ ಪೊಲೀಸ್ ಠಾಣೆಯ ಪಿಐ ರಮೇಶ ಹಾನಾಪೂರ ಹಾಗೂ ಪೊಲೀಸ್ ಸಿಬ್ಬಂದಿ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಶಿರಸಿ ಡಿವೈಎಸ್ಪಿ, ಕಾರವಾರ ಎಸ್ಪಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದಾರೆ.

ಇಲ್ಲೊಂದು ವಿಶೇಷ ಸಂಗತಿ ಅಂದ್ರೆ, ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಶವವನ್ನು ಹೊರತರೋದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದ್ರೆ ಸಿಪಿಐ ರಮೇಶ ಹಾನಾಪೂರ ಅವರು ಬರೀ ಸಿಬ್ಬಂದಿಗೆ ಸೂಚನೆ ಕೊಟ್ಟು ನಿಲ್ಲಲಿಲ್ಲ. ಬದಲಾಗಿ ಖುದ್ದು ತಾವೇ ಸಿಬ್ಬಂದಿಗಳ ಜೊತೆ ಕೈಜೋಡಿಸಿ ಶವ ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾದರು.

 

ಒಬ್ಬ ಪೊಲೀಸ್ ಅಧಿಕಾರಿಯಾಗಿ ತಮ್ಮ ಜವಾಬ್ದಾರಿಯ ಜೊತೆಗೆ ಮಾನವೀಯತೆಯನ್ನೂ ಮೆರೆದ ಸಿಪಿಐ ಅವರ ಈ ನಡೆ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹುದ್ದೆ ದೊಡ್ಡದಿರಬಹುದು, ಅಧಿಕಾರ ಇರಬಹುದು… ಆದ್ರೆ ಕಷ್ಟದ ಸಮಯದಲ್ಲಿ ಜನರ ಜೊತೆ ನಿಂತು ಕೆಲಸ ಮಾಡೋ ಮನೋಭಾವವೇ ನಿಜವಾದ ಪೊಲೀಸ್ ಸೇವೆ ಅನ್ನೋದಕ್ಕೆ ಪಿಐ ರಮೇಶ ಹಾನಾಪೂರ ಅವರ ಈ ಕಾರ್ಯವೇ ಸಾಕ್ಷಿ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.