ಅಂಕೋಲಾ ಬಸ್ ಸ್ಟ್ಯಾಂಡ್ನಲ್ಲಿ ನಡೆದ ಪಿಕ್ ಪಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಪಿಕ್ ಪಾಕೆಟ್ ಗ್ಯಾಂಗ್ನ ಆರು ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂದಹಾಗೆ, ಬಂಧಿತರೇಲ್ಲ ಹುಬ್ಬಳ್ಳಿಯ ಸೆಟಲ್ಮೆಂಟ್ ನವರು..!

ಪಿಕ್ ಪಾಕೆಟ್..!
ನವೆಂಬರ್ 18, 2026 ರಂದು ಆಟೋ ಚಾಲಕ, ಪ್ರದೀಪ ಎಂವುವವರು, ತಮ್ಮ ಕುಟುಂಬದೊಂದಿಗೆ ಕಾರವಾರಕ್ಕೆ ತೆರಳಲು ಅಂಕೋಲಾ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಹತ್ತುತ್ತಿದ್ದಾಗ, ಅವರ ಪ್ಯಾಂಟ್ ಕಿಸೆಯಲ್ಲಿದ್ದ ₹7,500 ಹಣವನ್ನು ಎಗರಿಸಲಾಗಿತ್ತು, ಈ ಸಂಬಂಧ ನವೆಂಬರ್ 19 ರಂದು ಅವರು ನೀಡಿದ ದೂರಿನ ಆಧಾರದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಗಳ ಬಂಧನ..!
ಪ್ರಕರಣದ ಬೆನ್ನತ್ತಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದ ಬಸ್ ಸ್ಟ್ಯಾಂಡ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಕಳವಾದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳು..!
ಹುಬ್ಬಳ್ಳಿಯ ರಾಘವೇಂದ್ರ ರತ್ನಾಕರ ಜಂಬುಂಡಿ (46), ಮಹೇಶ ಸಾತಪ್ಪ ಕಾಳೆ (34) ಅಣ್ಣಪ್ಪ ತಮಾರುತಿ ಮತ್ತಿಕಟ್ಟಿ (46) ರಾಘವೇಂದ್ರ ರಮೇಶ ನಾಗವೇಕರ (35),
ರಾಕೇಶ ಮಧುಕರ ಗುಂಜಾಳ (33), ಮಂಜುನಾಥ ಬಸವರಾಜ ದೊಡ್ಡನಿ (40) ಎಂಬುವವರೆ ಬಂಧಿತರಾಗಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸ್ ತಂಡಕ್ಕೆ ಶ್ಲಾಘನೆ..!
ಈ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಕಾರವಾರ ಉಪವಿಭಾಗದ ಡಿವೈಎಸ್ಪಿ ಕೆ.ಎಸ್. ಲೋಕಾಪುರ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಠಾಣೆಯ ಪಿಐ ಚಂದ್ರಶೇಖರ ಮಠಪತಿ ನೇತೃತ್ವದ ತನಿಖಾಧಿಕಾರಿ ವಿಶ್ವನಾಥ ನಿಂಗೋಳ್ಳಿ, ಪಿಎಸ್ಐ ಲತಾ ರಜಪೂತ, ಎಎಸ್ಐ ದೇವಿದಾಸ ಜಾಮೋಳೇಕರ ಹಾಗೂ ಸಿಬ್ಬಂದಿ ಪ್ರಶಾಂತ ನಾಯ್ಕ, ಮಹಾದೇವ ಸಿದ್ದಿ, ಶಫಿ ಶೇಖ್, ಶೋಭಾ ನಾಯ್ಕ, ಆಸೀಫ್ ಕುಂಕೂರ, ದೇವಪ್ಪಾ ಕಾಗನೂರು ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
