ಮುಂಡಗೋಡಿನ ಕರಗಿನಕೊಪ್ಪದಲ್ಲಿ ಹಾಡಹಗಲೇ ಮಾಂಗಲ್ಯ ಸರ ದೋಚಿದ ಕಳ್ಳರು..! ಪಾನ್ ಶಾಪಿಗೆ ಗಿರಾಕಿ ಸೋಗಿನಲ್ಲಿ ಕಾರಲ್ಲಿ ಬಂದಿದ್ರಂತೆ ಖದೀಮರು..!

ಮುಂಡಗೋಡಿಗೆ ಎಂಟ್ರಿ ಕೊಡ್ತಾ ಸರಗಳ್ಳರ ಗ್ಯಾಂಗ್..? ಪಟ್ಟಣದ ಹೊರವಲಯದ, ಶಿರಸಿ ರಸ್ತೆಯ ಕರಗಿನಕೊಪ್ಪದಲ್ಲಿ ಸಂಜೆ ಪಾನ್ ಶಾಪಿನ ಮಹಿಳೆಯೋರ್ವಳ ಚಿನ್ನದ ಮಾಂಗ್ಯಲ್ಯ ಸರ ಎಗರಿಸಿದ್ದಾರೆ ಕಳ್ಳರು. ಪಾನ್ ಶಾಪಿನಲ್ಲಿ ನೀರಿನ ಬಾಟಲಿ ಕೇಳುವ ನೆಪದಲ್ಲಿ ಬಂದಿದ್ದ ಆಗಂತುಕರು, ನೀರಿನ ಬಾಟಲ್ ಖರಿಧಿಸಿ, ಗುಟಕಾ ಪಾನ್ ಮಸಾಲ ಕೇಳಿ ಮಹಿಳೆ ಕೊಡಲು ತಿರುಗಿದಾಗ ಏಕಾಏಕಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿ ಹರಿದುಕೊಂಡು ಹೋಗಿದ್ದಾರೆ.

ಬಿಳಿಯ ಕಾರಲ್ಲಿ ಬಂದಿದ್ರು, 4 ಜನ..!
ಶಿರಸಿ ಕಡೆಯಿಂದ ಬಿಳಿಯ ಕಾರಲ್ಲಿ ಬಂದಿದ್ದ ನಾಲ್ಕು ಜನರ ಕಳ್ಳರ ತಂಡ ಕೃತ್ಯ ಎಸಗಿದೆ‌. ಕರಗಿನಕೊಪ್ಪದ ಪಾನ್ ಶಾಪಿನ ಮಾಲೀಕ ಚಂದ್ರಶೇಖರ ಲಮಾಣಿಯವರ ಪತ್ನಿ ಗೀತಾ ಚಂದ್ರಶೇಖರ್ ಲಮಾಣಿ ಎಂಬುವವರೇ ಮಾಂಗಲ್ಯ ಸರ ಕಳೆದುಕೊಂಡವರಾಗಿದ್ದಾರೆ. ಸಂಜೆ ಪಾನ್ ಶಾಪಿಗೆ ನೀರಿನ ಬಾಟಲ್ ಕೇಳಿ, ನಂತರ ಗುಟಕಾ ಪಾನ್ ಮಸಾಲಾ ಕೇಳಿ ಕೊಡಲು ತಿರುಗಿದ್ದಾಗ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ.

2 ಲಕ್ಷ ಕಿಮ್ಮತ್ತಿನ ಸರ..!
ಬರೋಬ್ಬರಿ ಎರಡು ಲಕ್ಷ ಕಿಮ್ಮತ್ತಿನ 20 ಗ್ರಾಂ ಚಿನ್ನದ ಮಾಂಗಲ್ಯ ಸರ್ ಇದಾಗಿದ್ದು, ಘಟನೆಯಿಂದ‌ ಆತಂಕಕ್ಕೊಳಗಾದ ಮಹಿಳೆ ಭಯದಲ್ಲಿ ಚೀರಾಡಿದ್ದಾಗ, ತಕ್ಷಣವೇ ಅಲ್ಲಿದ್ದ ಕೆಲವು ಯುವಕರು ಕಾರನ್ನು ಬೈಕ್ ಮೂಲಕ ಬೆನ್ನತ್ತಿದ್ದಾರೆ. ಲಕ್ಕೊಳ್ಳಿ ಕ್ರಾಸ್ ಬಳಿ ಬರುತ್ತಿದ್ದಂತೆ ಲಕ್ಕೊಳ್ಳಿಯೆಡೆ ಕಾರು ಹೋಗಿದೆ ಅನ್ನೋ ಮಾಹಿತಿ ಬಂದಿದೆ. ಕಾರಿಗೆ ನಂಬರ್ ಪ್ಲೇಟ್ ಇಲ್ಲ ಎನ್ನಲಾಗ್ತಿದೆ. ಹೀಗಾಗಿ, ಈ ಖತರ್ನಾಲ ಟೀಂ ಇದೇ ಕೆಲಸಕ್ಕಾಗಿನೇ ಬಂದಿದ್ದು, ಅವ್ರೇಲ್ಲ ಪ್ರೊಫೇಶನಲ್ ಕಳ್ಳರು ಅನ್ನೋದು ಪಕ್ಕಾ ಆದಂತಾಗಿದೆ.

ಸದ್ಯ ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಧಾವಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.