ಮುಂಡಗೋಡಿನಲ್ಲಿ ಕಾಡು ಹಂದಿ ಮಾಂಸ ಮಾರಾಟಕ್ಕೆ ಯತ್ನ, 30 ಕೆಜಿಗೂ ಹೆಚ್ಚು ಮಾಂಸ ಜಪ್ತಿ..! ಓರ್ವ ಆರೋಪಿ ವಶಕ್ಕೆ, ಮತ್ತೋರ್ವ ಪರಾರಿಯಂತೆ ಹೌದಾ ಅರಣ್ಯಾಧಿಕಾರಿಗಳೇ..!?

​ಮುಂಡಗೋಡ ಪಟ್ಟಣದ ಗಾಂಧಿನಗರದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿ, ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರಂತೆ, ಪರಿಣಾಮ ಓರ್ವ ಆರೋಪಿ ಸಿಕ್ಕಿಬಿದ್ದಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ.

​ಪಟ್ಟಣದ ಗಾಂಧಿನಗರದ ಮನೆಯೊಂದರಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸ ಸಂಗ್ರಹಿಸಿ ಇಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕಾರ್ಯಾಚರಣೆ ವೇಳೆ ಮನೆಯಲ್ಲಿ ಅಂದಾಜು 30 ಕೆಜಿಗೂ ಹೆಚ್ಚು ಕಾಡು ಹಂದಿ ಮಾಂಸ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆಯಂತೆ. ದಾಳಿ ವೇಳೆ ಓರ್ವ ಆರೋಪಿ ಸಿಕ್ಕಿಬಿದ್ದಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆದ್ರೆ ಈ ಕಾರ್ಯಾಚರಣೆ ಬಗ್ಗೆ ಇನ್ನು ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.