ಮುಂಡಗೋಡ: ಪಟ್ಟಣದ ಹೊರ ವಲಯದಲ್ಲಿ ಇತ್ತಿಚೆಗೆ ಸಂಭವಿಸಿದ ಕಾರು ದುರಂತದಲ್ಲಿ ದಂಪತಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ಹೀಗಾಗಿ, ಅಪಘಾತಗಳಿಗೆ ಆಮಂತ್ರಣ ನೀಡುತ್ತಿದ್ದ ಅಮ್ಮಾಜಿ ಕೆರೆಯ ದಂಡೆಯ ಮೇಲೆ ಬೇಲಿ ಹಾಕಲಾಗಿದೆ. ಇಲ್ಲಿನ ಪಿಡಬ್ಲ್ಯೂಡಿ ಇಲಾಖೆ ಈಗಷ್ಟೆ ಎಚ್ಚೆತ್ತುಕೊಂಡಿದ್ದು ಕೆರೆಯ ದಂಡೆಯ ಮೇಲೆ ಕಟ್ಟಿಗೆಯ ಕಂಬಗಳನ್ನು ನಿಲ್ಲಿಸಿ ಅದಕ್ಕೆ ಕೆಂಪು ಪಟ್ಟಿಯನ್ನು ಕಟ್ಟಲಾಗಿದೆ. ಅಲ್ಲದೇ ಸಣ್ಣ ಸಣ್ಣ ಚೀಲಗಳನ್ನು ತುಂಬಿ ಇಡಲಾಗಿದೆ.. ಇದ್ರಿಂದ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸುವುದನ್ನು ಕೊಂಚ ತಪ್ಪಿಸಲು ಕ್ರಮ ಕೈಗೊಂಡಿದೆ.
Top Stories
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!
“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!
ನಿದ್ದೆಯಿಂದ ಎದ್ದ ಮುಂಡಗೋಡ PWD, ಅಮ್ಮಾಜಿ ಕೆರೆ ದಂಡೆಯ ಮೇಲೆ ಸುರಕ್ಷತಾ ಕ್ರಮ..!
ಮುಂಡಗೋಡ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವರ್ಧಂತಿ ಉತ್ಸವ..!
ಮುಂಡಗೋಡ: ಪಟ್ಟಣದ ಇಂದಿರಾನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಇಂದು ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಹಾಗೂ 18 ನೇ ವರ್ಧಂತಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ.. ಇಂದು ಬೆಳಗಿನಿಂದಲೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನಡಯುತ್ತಿವೆ. ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಲಿದೆ.. ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ಸಿದ್ದನಕೊಪ್ಪದ ಸ್ಪರ್ಧಾ ಹೋರಿಗೆ ಹುಟ್ಟುಹಬ್ಬದ ಸಂಭ್ರಮ..!
ಮುಂಡಗೋಡ: ತಾಲೂಕಿನ ಸಿದ್ದನಕೊಪ್ಪದಲ್ಲಿ ವಿಶೇಷ ಹುಟ್ಟುಹಬ್ಬ ಆಚರಿಸಲಾಗಿದೆ. ಸ್ಪರ್ಧಾ ಹೋರಿಗೆ ಜನ್ಮ ದಿನ ಆಚರಣೆ ಮಾಡಲಾಗಿದೆ.. ಹೋರಿಗೆ ವಿಶೇಷ ಅಲಂಕಾರ ಮಾಡಿ, ಕೇಕು ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ನೂರಾರು ಜನರು ಸೇರಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೋರಿಯ ಗುಣಗಾನ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಹೋರಿಯ ಮಾಲೀಕರು ಕುಣಿದು ಕುಪ್ಪಳಿಸಿದ್ರು.. ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.. ಈ ಸಂದರ್ಭದಲ್ಲಿ ಮಳಗಿಯ ಬಿಜೆಪಿ ಮುಖಂಡ ಸಂತೋಷ ಶೇಟ್ ರಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಕಂಚಿನ ಪುತ್ಥಳಿ ಸ್ಥಾಪನೆಗೆ ಲಕ್ಷ ರೂ. ದೇಣಿಗೆ..!
ಮುಂಡಗೋಡ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲು ಬಿಜೆಪಿ ಯುವ ಧುರೀಣ ಸಂತೋಷ ರಾಯ್ಕರ ಅವರು ಒಂದು ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಬಳಿಕ ಮಾತನಾಡಿದ ಸಂತೋಷ ರಾಯ್ಕರ, ಹಿಂದೂ ಧರ್ಮದ ರಕ್ಷಣೆಗಾಗಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪಿಸುವ ಮೂಲಕ ಅವರ ಆದರ್ಶ, ತತ್ವ ಸಿದ್ಧಾಂತ ಮತ್ತು ಇತಿಹಾಸವನ್ನು ಜನರಲ್ಲಿ ಮನವರಿಕೆ ಮಾಡಿಕೊಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ವತಿಯಿಂದ ಸಂತೋಷ ರಾಯ್ಕರ ಅವರನ್ನು ಗೌರವಿಸಲಾಯಿತು. ಟ್ರಸ್ಟ್ನ ಅಧ್ಯಕ್ಷ ಕಾಳೇಶ ಕ್ಯಾತ್ನಳ್ಳಿ, ಗಣಪತಿ ನಸರೇಕರ, ಅನಿಲ ಕಟ್ಟಿಮನಿ, ಮಹಾಂತೇಶ ಚಿಗಪ್ಪನವರ, ಫಕ್ಕೀರೇಶ ಮುಕ್ಕನಕಟ್ಟಿ, ಮಹಾಂತೇಶ ಕಾತಿ, ಮಾರುತಿ ಬೆಂಡಿಗೇರಿ, ಬಸವರಾಜ ಬೆಂಡಿಗೇರಿ, ಕೇಶವ ಬೆಂಡಿಗೇರಿ, ನಾರಾಯಣ ಗುರಪ್ಪನವರ, ಕರಿಯಣ್ಣ ಪಾಟೀಲ, ನಾರಾಯಣ ಕ್ಯಾಟ್ನಳ್ಳಿ, ಮಾರುತಿ ಬನವಾಸಿ, ಭಾಷಾ ಎಳವಟ್ಟಿ, ಖಾಸೀಮ್ ಅತ್ತಾರ ಉಪಸ್ಥಿತರಿದ್ದರು.
ಮುಂಡಗೋಡಿನಲ್ಲಿ ಟಿಬೇಟಿಗನ ಪರ್ಸು, ಮೊಬೈಲು ಕಿತ್ತು ಎಸ್ಕೇಪ್ ಆದ ಯುವಕ..! ಬೆನ್ನತ್ತಿ ಹಿಡಿದ ಜನ..!
ಮುಂಡಗೋಡ; ಪಟ್ಟಣದಲ್ಲಿ ಇಂದು ಯುವಕನೋರ್ವ ಟಿಬೇಟಿಯನ್ ವ್ಯಕ್ತಿಯ ಪರ್ಸ್ ಹಾಗೂ ಮೊಬೈಲ್ ಎಗರಿಸಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರ ಕೈಯಲ್ಲಿ ತಗಲಾಕ್ಕೊಂಡು ಪಜೀತಿ ಪಟ್ಟ ಘಟನೆ ನಡೆದಿದೆ. ಸೋಮವಾರ ಸಂತೆ ದಿನವಾದ ಕಾರಣ ಜನಜಂಗುಳಿ ಸೇರಿದ್ದು, ಇದೇ ವೇಳೆ ಪಟ್ಟಣದ ಅಕ್ಷಯ ಲಾಡ್ಜ್ ಬಳಿ, ಟಿಬೇಟಿಯನ್ ವ್ಯಕ್ತಿಯ ಪರ್ಸ್ ಮೇಲೆ ಕಣ್ಣಿಟ್ಟಿದ್ದ ಯುವಕ ಏಕಾಏಕಿ ಪರ್ಸ್ ಹಾಗೂ ಮೊಬೈಲ್ ಗೆ ಕೈ ಹಾಕಿ ಕಿತ್ತುಕೊಂಡಿದ್ದಾನೆ. ಹೀಗಾಗಿ, ತಕ್ಷಣವೇ ಎಚ್ಚೆತ್ತ ಟಿಬೇಟಿಗ ಚೀರಾಡಿದ್ದಾನೆ. ಹೀಗಾಗಿ, ಸಾರ್ವಜನಿಕರು ಪರ್ಸ್ ಕದ್ದೊಯ್ಯುತ್ತಿದ್ದ ಆರೋಪಿಯನ್ನು ತಕ್ಷಣವೇ ಹಿಡಿದಿದ್ದಾರೆ. ಒಂದೆರಡು ಧರ್ಮದೇಟು ನಿಡಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ, ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ..!
ಮುಂಡಗೋಡ: ತಾಲೂಕಿನ ಅಗಡಿ ಬಳಿ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ, ಕೆಲಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಆದ್ರೆ, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್, ರಸ್ತೆಗಳ ಗುಂಡಿಗಳಲ್ಲಿ ನಿಯಂತ್ರಣ ತಪ್ಪಿ ಬಿದ್ದಿತ್ತು ಎನ್ನಲಾಗಿದೆ. ಹೀಗಾಗಿ, ರಸ್ತೆಗಳ ಅವ್ಯವಸ್ಥೆಗೆ ಜನರು ಹಿಡಿಶಾಪ ಹಾಕುವಂತಾಗಿದೆ. ಅಂದಹಾಗೆ, ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಕಬ್ಬು ಸಾಗಿಸುತ್ತಿವೆ. ಈ ವೇಳೆ ರಸ್ತೆಗಳ ಗುಂಡಿಗಳಿಂದ ಇನ್ನಿಲ್ಲದ ಕಿರಿಕಿರಿಯಾಗುತ್ತಿದೆ. ಸಂಬಂದಪಟ್ಟ ಇಲಾಖೆ ಈ ಕಡೆ ಸ್ವಲ್ಪ ಗಮನ ಹರಿಸಲಿ ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.
ಅಮ್ಮಾಜಿ ಕೆರೆಗೆ ಕಾರು ಬಿದ್ದ ಕೇಸ್; ಮೃತರ ಅಂತಿಮ ದರ್ಶನ ಪಡೆದ ಸಚಿವ ಹೆಬ್ಬಾರ್..!
ಮುಂಡಗೋಡ : ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ಅರಶಿಣಗೇರಿ ಗ್ರಾಮದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ದಂಪತಿಗಳು ಮೃತಪಟ್ಟ ಅಹಿತಕರ ಘಟನೆ ಸಂಭವಿಸಿದ್ದು. ಘಟನೆ ಬಗ್ಗೆ ತಿಳಿದ ತಕ್ಷಣ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮುಂಡಗೋಡದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಪ್ರಮುಖರಾದ ಉಮೇಶ್ ಬಿಜಾಪುರ, ಕೆ.ಸಿ.ಗಲಭಿ, ಸಂಜೀವ್ ಪೀಶೆ ಹಾಗೂ ಪ್ರಮುಖರು ಹಾಜರಿದ್ದರು.
ಮುಂಡಗೋಡ ಅಮ್ಮಾಜಿ ಕೆರೆಯಲ್ಲಿ ಕಾರು ದುರಂತ, ವಿಧಿಯಾಟಕ್ಕೆ ಬಲಿಯಾದವರು ಅರಶಿಣಗೇರಿ ದಂಪತಿಗಳು..!
ಮುಂಡಗೋಡ: ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ದಂಪತಿಗಳಿಬ್ಬರೂ ದಾರುಣ ಸಾವು ಕಂಡಿದ್ದಾರೆ. ನಸುಕಿನ ಜಾವ ಸಂಭವಿಸಿರಬಹುದಾದ ಘಟನೆ ಅಂತಾ ಹೇಳಲಾಗ್ತಿರೋ ಅಪಘಾತ ನಡೆದಿರೊದೇ ವಿಚಿತ್ರ. ಅಷ್ಟಕ್ಕೂ ಈ ಸಾವು ಅನ್ನೋದು ಇಷ್ಟು ಸಲೀಸಾ ಅನ್ನೋದೇ ಬಹುದೊಡ್ಡ ವಾಸ್ತವ..! ಮೃತರು ದಂಪತಿಗಳು..! ಬೆಂಗಳೂರು ನೋಂದಣಿ ಹೊಂದಿರುವ ಮಾರುತಿ ಸ್ವಿಪ್ಟ್ ಕಾರು ಇದಾಗಿದ್ದು, ಮೂಲತಃ ಮುಂಡಗೋಡ ತಾಲೂಕಿನ ಅರಶಿಣಗೇರಿಯವರಾದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದಾರೆ. ಕರವಳ್ಳಿಯಲ್ಲಿ ಸಂಬಂಧಿಯೊಬ್ಬರು ಅಸು ನೀಗಿದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗಾಗಿ ಬೆಂಗಳೂರಿನಿಂದ ಕರವಳ್ಳಿಗೆ ಬರುತ್ತಿದ್ದರು ಎನ್ನಲಾಗಿದೆ. ಆದ್ರೆ ದಾರಿಮದ್ಯೆ ಇಂತಹದ್ದೊಂದು ದುರಂತ ಸಂಭವಿಸಿದೆ. ಇದು ವಿಚಿತ್ರ ಅಲ್ವಾ..? ಹಾಗೆ ನೋಡಿದ್ರೆ, ಅಮ್ಮಾಜಿ ಕೆರೆಯಲ್ಲಿ ಕಾರು ಬಿದ್ದ ಜಾಗ ನೋಡಿದಾಗ ವಿಚಿತ್ರ ಅನಿಸ್ತಿದೆ. ಕಾರು ಬಿದ್ದ ಜಾಗದಲ್ಲಿ ಅಬ್ಬಬ್ಬಾ ಅಂದ್ರೆ ನಾಲ್ಕು ಅಡಿಯಷ್ಟು ನೀರಿನ ಆಳವಿದೆ. ಹೀಗಾಗಿ ಕಾರು ಸಂಪೂರ್ಣವಾಗಿ ನೀರಲ್ಲಿ ಮುಳುಗೇ ಇಲ್ಲ. ಹೀಗಿದ್ದಾಗ್ಯೂ ಏಕಾ ಏಕಿ ಸಾವು ಸಂಭವಿಸುವಷ್ಟು ಘನಘೋರವಂತೂ ಅಲ್ಲವೇ ಅಲ್ಲ....
ಮುಂಡಗೋಡ ಬಳಿ ಭಾರೀ ಅಪಘಾತ, ಕೆರೆಯಲ್ಲಿ ಮುಳಗಿದ ಕಾರು, ಓರ್ವನ ಶವ ಪತ್ತೆ, ಹಲವರು ಸಿಲುಕಿರೋ ಶಂಕೆ..!
ಮುಂಡಗೋಡ ಪಟ್ಟಣದ ಹೊರವಲಯದ ಯಲ್ಲಾಪುರ ರಸ್ತೆಯ ಕೆರೆಯಲ್ಲಿ ಭಾರೀ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಕೆರೆಗೆ ನುಗ್ಗಿ, ಕಾರು ಸಂಪೂರ್ಣ ಮುಳಗಡೆಯಾಗಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು ಶವ ಕೆರೆಯಲ್ಲಿ ತೇಲಾಡುತ್ತಿತ್ತು, ಶವ ಹೊರ ತೆಗೆಯಲಾಗಿದೆ. ಇನ್ನು ಕಾರಲ್ಲಿ ಹಲವರು ಸಿಲುಕಿರೋ ಶಂಕೆ ವ್ಯಕ್ತವಾಗಿದೆ. ಕಾರು ಸಂಪೂರ್ಣವಾಗಿ ನೀರಲ್ಲಿ ಮುಳುಗಿದೆ. ಮೃತರು ಎಲ್ಲಿಯವರು, ಯಾವಾಗ ಘಟನೆ ಆಯ್ತು, ತಿಲಕಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, 108 ಅಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಶವ ಹೊರತೆಗೆಯುವ ಕಾರ್ಯ ಮಾಡಿದ್ದಾರೆ.
ನಂದಿಕಟ್ಟಾದ ತೋಟದ ಮನೆಯಲ್ಲಿ ಹೆಣವಾಗಿ ಬಿದ್ದ ಮಾಲೀಕ, ಸಾವಿನ ಸುತ್ತ ಹಲವು ಅನುಮಾನ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ತೋಟದ ಮನೆಯಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ. ನಂದಿಕಟ್ಟಾ ಗ್ರಾಮದ ಬಾಬು ನವಲೆನವರ್ ಎಂಬ ವ್ಯಕ್ತಿಯು ಅವರ ತೋಟದ ಮನೆಯಲ್ಲಿಯೇ ಹೆಣವಾಗಿ ಬಿದ್ದಿದ್ದಾನೆ. ಶನಿವಾರ ರಾತ್ರಿಯೇ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಮೃತನ ಬಾಯಲ್ಲಿ ರಕ್ತ ಬಂದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಧ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆಯ ನಂತರವಷ್ಟೇ ಅಸಲಿ ಸಂಗತಿ ಹೊರಬರುವ ಸಾಧ್ಯತೆ ಇದೆ.