ಮುಂಡಗೋಡಿನಲ್ಲಿ ಟಿಬೇಟಿಗನ ಪರ್ಸು, ಮೊಬೈಲು ಕಿತ್ತು ಎಸ್ಕೇಪ್ ಆದ ಯುವಕ..! ಬೆನ್ನತ್ತಿ ಹಿಡಿದ ಜನ..!

ಮುಂಡಗೋಡ; ಪಟ್ಟಣದಲ್ಲಿ ಇಂದು ಯುವಕನೋರ್ವ ಟಿಬೇಟಿಯನ್ ವ್ಯಕ್ತಿಯ ಪರ್ಸ್ ಹಾಗೂ ಮೊಬೈಲ್ ಎಗರಿಸಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರ ಕೈಯಲ್ಲಿ ತಗಲಾಕ್ಕೊಂಡು ಪಜೀತಿ ಪಟ್ಟ ಘಟನೆ ನಡೆದಿದೆ.

ಸೋಮವಾರ ಸಂತೆ ದಿನವಾದ ಕಾರಣ ಜನಜಂಗುಳಿ ಸೇರಿದ್ದು, ಇದೇ ವೇಳೆ ಪಟ್ಟಣದ ಅಕ್ಷಯ ಲಾಡ್ಜ್ ಬಳಿ, ಟಿಬೇಟಿಯನ್ ವ್ಯಕ್ತಿಯ ಪರ್ಸ್ ಮೇಲೆ ಕಣ್ಣಿಟ್ಟಿದ್ದ ಯುವಕ ಏಕಾಏಕಿ ಪರ್ಸ್ ಹಾಗೂ ಮೊಬೈಲ್ ಗೆ ಕೈ ಹಾಕಿ ಕಿತ್ತುಕೊಂಡಿದ್ದಾ‌ನೆ. ಹೀಗಾಗಿ, ತಕ್ಷಣವೇ ಎಚ್ಚೆತ್ತ ಟಿಬೇಟಿಗ ಚೀರಾಡಿದ್ದಾನೆ. ಹೀಗಾಗಿ, ಸಾರ್ವಜನಿಕರು ಪರ್ಸ್ ಕದ್ದೊಯ್ಯುತ್ತಿದ್ದ ಆರೋಪಿಯನ್ನು ತಕ್ಷಣವೇ ಹಿಡಿದಿದ್ದಾರೆ. ಒಂದೆರಡು ಧರ್ಮದೇಟು ನಿಡಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

error: Content is protected !!