ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಗುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು. ಈ ವೇಳೆ ಗ್ರಾಪಂ ಸದಸ್ಯ ಈಶ್ವರಗೌಡ ಅರಳಿಹೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು..
Top Stories
ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿ: ಗಣಪತಿ ಉಳ್ವೇಕರ
ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದ ಎಡಬ್ಲ್ಯುಎಸಿಎಸ್ (AWACS) ವಿಮಾನ ನಾಶವಾಗಿದ್ದನ್ನು ಒಪ್ಪಿಕೊಂಡ ಪಾಕ್ ನಿವೃತ್ತ ಏರ್ ಮಾರ್ಷಲ್..!
ಪ.ಜಾತಿ ಒಳ ಮೀಸಲಾತಿ ಸಮೀಕ್ಷೆ: ಅವಧಿ ವಿಸ್ತರಣೆ
ಜಿಲ್ಲೆಯಲ್ಲಿ “ಮುಂಗಾರು” ಸಮಸ್ಯೆಗಳನ್ನು ಎದುರಿಸಲು 24×7 ಸಿದ್ದವಾಗಿರಿ- ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಕಳ್ಳತನವಾಗಿದ್ದ ಬೈಕ್ ಪತ್ತೆ ಹಚ್ಚಿದ ಮುಂಡಗೋಡ ಪೊಲೀಸರು..! ಅಯ್ಯೊ ತಮ್ಮಾ ವಯಸ್ಸಲ್ಲದ ವಯಸ್ಸಲ್ಲಿ ಇಂತಾ ಕೆಲಸಾ ಬೇಕಿತ್ತಾ..?
ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?
ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು..!
ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ; ಬಿಬಿಎಂಪಿ..!
ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ..!
ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಮೂಲಕ ರೂ. 1095 ಕೋಟಿ ನೆರವು..!
ಗೋಕರ್ಣದಲ್ಲಿ ಡಿಜಿಟಲ್ ಪೊಲೀಸ್ ವ್ಯವಸ್ಥೆ : ಎಸ್ಪಿ ನಾರಾಯಣ್
ಮೇ.17 ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಜನಸ್ಪಂಧನ ಕಾರ್ಯಕ್ರಮ: ಕಾರ್ಯಕ್ರಮದ ಪ್ರಯೋಜನ ಪಡೆಯಿರಿ- ಜಿಲ್ಲಾಧಿಕಾರಿ
ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಒದಗಿಸಿ- ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..!
ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ..!
ಮುಂಗಾರಿನ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಸೂಚನೆ ಪಾಲಿಸಿ : ಸಿಡಿಲಿನಿಂದ ರಕ್ಷಿಸಿಕೊಳ್ಳಿ..!
ಮಕ್ಕಳ ಬೌದ್ಧಿಕ ಮತ್ತು ಕ್ರೀಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ..!
ವೈದ್ಯಕೀಯ ಸೇವೆಗೆ ಸದಾ ಸನ್ನದ್ದವಾಗಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ..!
ಮತ್ತೋರ್ವ ಅಪ್ಪು ಅಭಿಮಾನಿಯ ಆತ್ಮಹತ್ಯೆ..! ಪುಟ್ಟ ಮಗುವನ್ನೇ ಮರೆತ ಅಭಿಮಾನಿ..!!
ಚಿಕ್ಕಮಗಳೂರು: ನಟ ಪುನೀತ್ ಸಾವಿನಿಂದ ಮನನೊಂದು ಮತ್ತೋರ್ವ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ರಾಂಪುರದಲ್ಲಿ ನಡೆದಿದೆ. ಶರತ್ (30) ಆತ್ಮಹತ್ಯೆಮಾಡಿಕೊಂಡ ಅಭಿಮಾನಿಯಾಗಿದ್ದಾನೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುನೀತ್ ರಾಜಕುಮಾರ್ ವಿಧಿವಶರಾದ ಸುದ್ದಿ ತಿಲಕಿಯುತ್ತಿದ್ದಂತೆ ನಿನ್ನೆಯಿಂದಲೂ ಅಳುತ್ತಿದ್ದ ಶರತ್ಗೆ ಮನೆಯವರಿಂದ ಸಮಾಧಾನ ಹೇಳಿದ್ರೂ ನೋವು ಕಡೆ ನೆಯಾಗಿರಲಿಲ್ಲ ಟಿವಿ ನೋಡುತ್ತಿದ್ದವನು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು, ಹೋಟೆಲ್ಗಳಿಗೆ ಮರದ ಹೊಟ್ಟು ತುಂಬುವು ಕೆಲಸ ಮಾಡುತ್ತಿದ್ದ ಶರತ್ ಗೆ ಒಂದು ಪುಟ್ಟ ಮಗುವಿದ್ದು, ಸಧ್ಯ ಪತ್ನಿ ಎಂಟು ತಿಂಗಳ ಗರ್ಭೀಣಿಯಾಗಿದ್ದಾರೆ. ಚಿಕ್ಕ ಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರು ಹಾಗೂ ಹುನಗುಂದದಲ್ಲಿ ನಟ ಪುನೀತ್ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!
ಮುಂಡಗೋಡ: ತಾಲೂಕಿನ ಇಂದೂರು ಹಾಗೂ ಹುನಗುಂದ ಗ್ರಾಮಗಳಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಹುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು.
ಆಹಾರ ಇಲಾಖೆಯ ಕಚೇರಿ ಮೇಲೆ ಎಸಿಬಿ ದಾಳಿ.! ಅಧಿಕಾರಿಯನ್ನು ವಶಕ್ಕೆ ಪಡೆದ ಎಸಿಬಿ..!
ಧಾರವಾಡದಲ್ಲಿ ಎಸಿಬಿ ದಾಳಿಯಾಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಮೇಲೆ ದಾಳಿಯಾಗಿದ್ದು, ಸಾರ್ವಜನಿಕರಿಂದ ಹೆಚ್ಚು ಹಣ ತಗೆದುಕೊಳ್ಳುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆಹಾರ ಇಲಾಖೆಯ ಶಿರಸ್ತೇದಾರ ಶಿವಶಂಕರ ಹಿರೇಮಠ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಹೀಗಾಗಿ, ಶಿರಸ್ತೇದಾರ ಶಿವಶಂಕರ್ ಹಿರೇಮಠರನ್ನು ವಶಕ್ಕೆ ಪಡೆದಿರೋ ಎಸಿಬಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.
ಉತ್ತರ ಕನ್ನಡ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ..! ಡಾ.ಸುಮನ್ ಡಿ. ಪನ್ನೇಕರ್ ನೂತನ ಎಸ್ಪಿ..!!
ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ. ನೂತನ ಎಸ್ಪಿಯಾಗಿ ಡಾ.ಸುಮನ್ ಡಿ. ಪನ್ನೇಕರ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದ್ದು, ಶಿವ ಪ್ರಕಾಶ್ ದೇವರಾಜು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂ ಗೆ ಆಗಮಿಸಿದ ಪುನೀತ್ ಪುತ್ರಿ..!
ನಟ ಪುನೀತ್ ರಾಜಕುಮಾರ್ ಮಗಳು ಧೃತಿ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಿಂದ, ಕಂಠೀರವ ಸ್ಟೇಡಿಯಂನತ್ತ ಹೊರಟಿದ್ದಾರೆ. ದೇವನಹಳ್ಳಿ ಕೆಐಎ ಯಿಂದ ಅರೈವಲ್ ಬದಲಿಗೆ ಡಿಪಾರ್ಚರ್ ಮೂಲಕ ತೆರಳಿದ ಪುನೀತ್ ಮಗಳು ಧೃತಿ. ಈಗಾಗಲೇ ಕಂಠೀರವ ಸ್ಟೇಡಿಯಂ ತಲುಪಿದ್ದಾರೆ.
ಬೆಂಗಳೂರಿಗೆ ಬಂದಿಳಿದ ನಟ ಪುನೀತ್ ಪುತ್ರಿ ಧೃತಿ..!
ನಟ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಪುನೀತ್ ಪುತ್ರಿ ಧೃತಿ, ಬೆಂಗಳೂರಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪುನೀತ್ ಪುತ್ರಿ ಆಗಮನವಾಗಿದ್ದು, ಧೃತಿಯಿದ್ದ ಏರ್ ಇಂಡಿಯಾ 502 ವಿಮಾನ ಲ್ಯಾಂಡಿಂಗ್ ಆಗಿದೆ. ವಿಮಾನ ನಿಲ್ದಾಣದಿಂದ ಧೃತಿಯನ್ನ ಕರೆದುಕೊಂಡು ಹೋಗಲು ಪೊಲೀಸ್ ಬೆಂಗಾವಲು ವಾಹನಗಳು ಬಂದಿವೆ., ಇನ್ನು ಕೆಲವೇ ಕ್ಷಣದಲ್ಲಿ ವಿಮಾನ ನಿಲ್ದಾಣದ ಒಳಗಿನಿಂದ ಹೊರಬರಲಿರುವ ಪುನೀತ್ ಪುತ್ರಿ, ನೇರವಾಗಿ ಕಂಠೀರವ ಸ್ಟೇಡಿಯಂಗೆ ತೆರಳಲಿದ್ದಾರೆ.
ಮುಂಡಗೋಡಿನ ಸೂಕ್ಷ್ಮ ಸ್ಥಳಗಳಲ್ಲಿ ಶ್ವಾನ ದಳ ಪರಿಶೀಲನೆ, ಟಿಬೇಟಿಯನ್ ಕಾಲೋನಿಯಲ್ಲೂ ಕಟ್ಟೇಚ್ಚರ..!
ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗಿದೆ. ಹಾಗೇನೆ, ಟಿಬೇಟಿಯನ್ ಕಾಲೋನಿ ಸೇರಿದಂತೆ ತಾಲೂಕಿನ ಬಹುಮುಖ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ಕಟ್ಟೇಚ್ಚರ ವಹಿಸಿದೆ. ಎಚ್ಚರಿಸಿದ್ದೇ ಕುಮಟಾ ಕೇಸ್..! ಅಂದಹಾಗೆ, ಇದು ಮುಂಡಗೋಡ ತಾಲೂಕಿಗಷ್ಟೇ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಎಲ್ಲಡೆಯೂ ಕಟ್ಟೇಚ್ಚರ ವಹಿಸಲಾಗಿದೆ. ಯಾಕಂದ್ರೆ, ಕುಮಟಾದ ಕಾಲೇಜು ಆವರಣದಲ್ಲಿ ಇತ್ತಿಚೆಗಷ್ಟೇ ಬಾಂಬ್ ಮಾದರಿಯ ವಸ್ತು ಸಿಕ್ಕು ಆತಂಕ ತಂದಿಟ್ಟಿತ್ತು. ಹೀಗಾಗಿ ಪೊಲೀಸ್ ಇಲಾಖೆ ಜಿಲ್ಲಾಧ್ಯಂತ ಕಟ್ಟೇಚ್ಚರ ವಹಿಸಿದೆ ಅಂತಾ ತಿಳಿದು ಬಂದಿದೆ. ಟಿಬೇಟಿಯನ್ ಕಾಲೋನಿ..! ನಿಜ ಅಂದ್ರೆ, ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅಲ್ಲಿಯೂ ಸಹ ಇಂದು ಶ್ವಾನ ದಳ ತೀವ್ರ ತಪಾಸಣೆ ನಡೆಸಿತು. ಜೊತೆಗೆ ಬಾಂಬ್ ನಿಷ್ಕ್ರೀಯ ದಳದ ತಜ್ಞರು ಜೊತೆಯಲ್ಲಿದ್ದರು. ರಾಜ್ಯ, ಹೊರರಾಜ್ಯ, ಹೊರದೇಶಗಳಿಂದ ಜಿಲ್ಲೆಗೆ ಬರುವವರ ಮೇಲೆ ನಿಗಾ ಇಡಲಾಗಿದೆ...
ನಟ ಪುನೀತ್ ಅಂತ್ಯಕ್ರಿಯೆ ಇವತ್ತು ಅಲ್ಲ, ನಾಳೆ: ರಾಘವೇಂದ್ರ ರಾಜಕುಮಾರ್..!
ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನಿಸಲಾಗಿದೆ. ಹಾಗಂತ, ಪುನೀತ್ ಸಹೋದರ ನಟ ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ. ಇನ್ನು ನಟ ಪುನೀತ್ ಪುತ್ರಿ ದೃತಿ, ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸಿದ್ದಾರೆ. ಏರ್ ಇಂಡಿಯಾ 102 ವಿಮಾನದಲ್ಲಿ ದೆಹಲಿಗೆ ಆಗಮಿಸಿರೋ ದೃತಿ, ದೆಹಲಿಯಿಂದ 1.30 ರ ಏರ್ ಇಂಡಿಯಾ ವಿಮಾನ ಹತ್ತಿ, 502 ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4.15 ಕ್ಕೆಆಗಮಿಸೋ ಸಾಧ್ಯತೆ ಇದೆ. ಏರ್ಪೊಟ್ ನಿಂದ ನೇರವಾಗಿ ಕಂಠೀರವ ಸ್ಟುಡಿಯೋ ಕಡೆಗೆ ಪುನೀತ್ ಪುತ್ರಿ ತೆರಳುವ ಮಾಹಿತಿ ಸಿಕ್ಕಿದ್ದು. ಪುನೀತ್ ಪುತ್ರಿ ಆಗಮಿಸೋದು ಸಂಜೆಯಾಗುವ ಕಾರಣಕ್ಕೆ ನಾಳೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದು ಸಂಪ್ರದಾಯದ ಪ್ರಕಾರ ಅಂತ್ತಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮತ್ತೊಬ್ಬ “ಅಪ್ಪು” ಅಭಿಮಾನಿ ನೇಣಿಗೆ ಶರಣು..! ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ..! ಇದೇಲ್ಲಾ ಬೇಕಾ..?
ಬೆಳಗಾವಿ: ನಟ ಪುನೀತ್ ರಾಜಕುಮಾರ್ ವಿಧಿವಶವಾದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ರಾಹುಲ್ ಗಾಡಿವಡ್ಡರ ಎಂಬ ಯುವಕ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯಾಗಿದ್ದಾನೆ. ಪುನಿತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.