ಬೆಂಗಳೂರಿಗೆ ಬಂದಿಳಿದ ನಟ ಪುನೀತ್ ಪುತ್ರಿ ಧೃತಿ..!

ನಟ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಪುನೀತ್ ಪುತ್ರಿ ಧೃತಿ, ಬೆಂಗಳೂರಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪುನೀತ್ ಪುತ್ರಿ ಆಗಮನವಾಗಿದ್ದು, ಧೃತಿಯಿದ್ದ ಏರ್ ಇಂಡಿಯಾ 502 ವಿಮಾನ ಲ್ಯಾಂಡಿಂಗ್ ಆಗಿದೆ.

ವಿಮಾನ ನಿಲ್ದಾಣದಿಂದ ಧೃತಿಯನ್ನ ಕರೆದುಕೊಂಡು ಹೋಗಲು ಪೊಲೀಸ್ ಬೆಂಗಾವಲು ವಾಹನಗಳು ಬಂದಿವೆ., ಇನ್ನು ಕೆಲವೇ ಕ್ಷಣದಲ್ಲಿ ವಿಮಾನ ನಿಲ್ದಾಣದ ಒಳಗಿನಿಂದ ಹೊರಬರಲಿರುವ ಪುನೀತ್ ಪುತ್ರಿ, ನೇರವಾಗಿ ಕಂಠೀರವ ಸ್ಟೇಡಿಯಂಗೆ ತೆರಳಲಿದ್ದಾರೆ.

error: Content is protected !!