ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗಿದೆ. ಹಾಗೇನೆ, ಟಿಬೇಟಿಯನ್ ಕಾಲೋನಿ ಸೇರಿದಂತೆ ತಾಲೂಕಿನ ಬಹುಮುಖ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ಕಟ್ಟೇಚ್ಚರ ವಹಿಸಿದೆ.
ಎಚ್ಚರಿಸಿದ್ದೇ ಕುಮಟಾ ಕೇಸ್..!
ಅಂದಹಾಗೆ, ಇದು ಮುಂಡಗೋಡ ತಾಲೂಕಿಗಷ್ಟೇ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಎಲ್ಲಡೆಯೂ ಕಟ್ಟೇಚ್ಚರ ವಹಿಸಲಾಗಿದೆ. ಯಾಕಂದ್ರೆ, ಕುಮಟಾದ ಕಾಲೇಜು ಆವರಣದಲ್ಲಿ ಇತ್ತಿಚೆಗಷ್ಟೇ ಬಾಂಬ್ ಮಾದರಿಯ ವಸ್ತು ಸಿಕ್ಕು ಆತಂಕ ತಂದಿಟ್ಟಿತ್ತು. ಹೀಗಾಗಿ ಪೊಲೀಸ್ ಇಲಾಖೆ ಜಿಲ್ಲಾಧ್ಯಂತ ಕಟ್ಟೇಚ್ಚರ ವಹಿಸಿದೆ ಅಂತಾ ತಿಳಿದು ಬಂದಿದೆ.
ಟಿಬೇಟಿಯನ್ ಕಾಲೋನಿ..!
ನಿಜ ಅಂದ್ರೆ, ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅಲ್ಲಿಯೂ ಸಹ ಇಂದು ಶ್ವಾನ ದಳ ತೀವ್ರ ತಪಾಸಣೆ ನಡೆಸಿತು. ಜೊತೆಗೆ ಬಾಂಬ್ ನಿಷ್ಕ್ರೀಯ ದಳದ ತಜ್ಞರು ಜೊತೆಯಲ್ಲಿದ್ದರು. ರಾಜ್ಯ, ಹೊರರಾಜ್ಯ, ಹೊರದೇಶಗಳಿಂದ ಜಿಲ್ಲೆಗೆ ಬರುವವರ ಮೇಲೆ ನಿಗಾ ಇಡಲಾಗಿದೆ ಅಂತಾ ಮಾಹಿತಿ ಲಭ್ಯವಾಗಿದೆ.