ಬೆಂಗಳೂರು : ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗುವ ಸಾಧ್ಯತೆಯಿದೆ. ಕೇರಳಕ್ಕೆ 31 ರಂದು ಪ್ರವೇಶಿಸಲಿರುವ ಮುಂಗಾರಿನಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 1 ರಂದು ನೈಋತ್ಯ ಮುಂಗಾರು ಕೇರಳ ರಾಜ್ಯ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 5 ರಂದು ಪ್ರವೇಶಿಸುವ ನಿರೀಕ್ಷೆ ಇದೆ.ರಾಜ್ಯದಲ್ಲಿ ಮೇ. 29 ರವರೆಗೆ ಮಳೆ ಮುಂದುವರೆಯಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಕೃಷಿ ಕಾಯಕಲ್ಲಿ ತೊಡಗಿಕೊಂಡಿದ್ದು, ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದಾರೆ.
Top Stories
Terrorist Death News: ಬೆಂಗಳೂರಿನ IISC ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ಡೇಂಜರಸ್ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ..!
Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..!
Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..!
Gold Price Today : ವೀಕೆಂಡ್ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬಂಗಾರ..!
IPL T20 News: ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋಯ್ತು ಐಪಿಎಲ್ ಪುನಾರಂಭದ ಪಂದ್ಯ! RCB ಪ್ಲೇ ಆಫ್ಗೆ ಎಂಟ್ರಿ, ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್
‘ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ..!
ರಾಜ್ಯದ 200 ಪೊಲೀಸ್ರಿಗೆ “ಡಿಜಿ & ಐಜಿಪಿ ಪ್ರಶಂಸಾ ಡಿಸ್ಕ್ 2024-25” ಪುರಸ್ಕಾರ ಘೋಷಣೆ..!
ಸೇನೆ ಬರ್ಲಿ ನೋಡ್ಕೊಳ್ತೇನೆ; ಎನ್ಕೌಂಟರಿನಲ್ಲಿ ಸಾಯುವ ಸ್ವಲ್ಪ ಮೊದಲು ತಾಯಿ ಜೊತೆ ಭಯೋತ್ಪಾದಕ ವೀಡಿಯೊ ಕರೆಯಲ್ಲಿ ಮಾತನಾಡಿದ ದೃಶ್ಯ ವೈರಲ್..!
ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಇರಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ..!
ಈಗ ಯೂ ಟರ್ನ್ ; ಪಾಕಿಸ್ತಾನ ಸೇನೆ ವಾಯುನೆಲೆಗಳ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪ್ರಧಾನಿ ಶೆಹಬಾಜ್ ಷರೀಫ್..!
ಪಾಕಿಸ್ತಾನ ಪರ ಬೇಹುಗಾರಿಕೆ, ಹರಿಯಾಣ ಮೂಲದ ಯೂಟ್ಯೂಬರ್ ಸೇರಿ 6 ಜನರ ಬಂಧನ..!
ಸಿಗರೇಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಸಾಫ್ಟ್ವೇರ್ ಉದ್ಯೋಗಿಯ ಮೇಲೆ ಕಾರು ಹರಿಸಿದ ಬೆಂಗಳೂರಿನ ವ್ಯಕ್ತಿ..!
ಭಾರತದ ವಿರುದ್ಧ ಪಾಕಿಸ್ತಾನದ ದಾಳಿಗಳಿಗೆ ಚೀನಾದ ಬೆಂಬಲ ; ಇಲ್ಲಿವೆ ಪ್ರಮುಖ ಪುರಾವೆಗಳು..!
ಜಿಲ್ಲಾ ಮಟ್ಟದ ಜನ ಸ್ಪಂದನ ಕಾರ್ಯಕ್ರಮದಲ್ಲಿ 104 ಅರ್ಜಿಗಳ ವಿಚಾರಣೆ, ಎಲ್ಲಾ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಿ: ಸಚಿವ ಮಂಕಾಳ ವೈದ್ಯ
ಜಿಲ್ಲೆಯ ಕಟ್ಟ ಕಡೆಯ ವ್ಯಕ್ತಿಯ ಪರವಾಗಿ ನಾನಿದ್ದೇನೆ; ಸಚಿವ ಮಂಕಾಳ ವೈದ್ಯ ಹೇಳಿಕೆ..!
ತಾಳಿ ಕಟ್ಟಿದ ಮರುಕ್ಷಣವೇ ಮದುಮಗನೇ ಹೆಣವಾದ, ಜಮಖಂಡಿಯಲ್ಲಿ ಹೃದಯ ವಿದ್ರಾವಕ ಘಟನೆ..!
ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರಗೆ ಪಾಕಿಸ್ತಾನದಿಂದ 14 ಕೋಟಿ ರೂ…’: ಪಾಕ್ ಭಯೋತ್ಪಾದನಾ ಯೋಜನೆಗಳ ಬಗ್ಗೆ ರಾಜನಾಥ ಸಿಂಗ್..!
ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ದಿನಸಿ ವಿತರಣೆ..! ಇದು ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್..!!
ಮುಂಡಗೋಡ-ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ಐದು ಕಾರ್ಮಿಕ ಕುಟುಂಬಗಳು ನರಳುತ್ತಿದ್ದ ಸುದ್ದಿ ಗುರುವಾರ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಪ್ರಸಾರವಾಗಿತ್ತು.. ಅಂತಹದ್ದೊಂದು ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ತಾಲೂಕಿನ ಹಲವು ಹೃದಯವಂತರು ಸ್ಪಂಧಿಸಿದ್ದಾರೆ.. ಟಿಬೇಟಿಯನ್ ಕರ್ಮಾ ಪೌಂಡೇಶನ್ ವತಿಯಿಂದ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದ ಆಂದ್ರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ.. ಅಂದಹಾಗೆ, ಗಾರೆ ಕೆಲಸಕ್ಕೆಂದು ಆಂದ್ರ ಪ್ರದೇಶದಿಂದ ಬಂದಿದ್ದ ಕುಟುಂಬ, ಲಾಕ್ ಡೌನ್ ಘೋಷಣೆಯಾದ ನಂತ್ರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು ಆಗದೇ ಮುಂಡಗೋಡಿನಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು.. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರೂ ಈ ಕಾರ್ಮಿಕರ ಕುಟುಂಬದಲ್ಲಿದ್ದು ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ.. ಪಟ್ಟಣದ ಹೊರ ವಲಯದ ಬಯಲಿನಲ್ಲಿ ಪುಟ್ಟ ಪುಟ್ಟ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಾರೆ.. ಹೀಗಾಗಿ ಗುರುವಾರ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಇಲ್ಲಿನ ಬಡ ಕುಟುಂಬಗಳ ಸಂಕಷ್ಟದ ಕುರಿತು ವರದಿ ಬಿತ್ತರಿಸಿತ್ತು.. ವರದಿಗೆ ಸ್ಪಂಧಿಸಿರೋ ಟಿಬೇಟಿಗರ ಕರ್ಮಾ ಪೌಂಡೇಶನ್ ಎಲ್ಲಾ ಕುಟುಂಬಗಳಿಗೂ ಅಗತ್ಯ...
ಹಳಿಯಾಳ: ಗುಂಡಳ್ಳಿ ಗ್ರಾಪಂ ವ್ಯಾಪ್ತಿಯ ತಾಂಡಾದಲ್ಲಿ ಮಾಸ್ಕ್ ಸ್ಯಾನಿಟೈಸರ್ ವಿತರಣೆ..!
ಹಳಿಯಾಳ: ತಾಲೂಕಿನ ಗುಂಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಜಮಾನ ತಾಂಡಾ ವಾರ್ಡಿನಲ್ಲಿ ಮಾಸ್ಕ್, ಸ್ಯಾನಿಟೈಸರ್, ದಿನನಿತ್ಯದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುನಿಲ್ ಹೆಗಡೆಯವರ ಸಲಹೆ ಮೇರೆಗೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಎಂ.ಪಾಟೀಲ್ ಹಾಗೂ ಪಂಚಾಯತಿ ಸದಸ್ಯೆ ಪುಷ್ಪಾ ಪಾಟೀಲ್ ವಾರ್ಡಿನ ಜನರಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಿಸಿದ್ರು.. ಅತಿಹೆಚ್ಚು ಕೂಲಿ ಕಾರ್ಮಿಕರು, ದಲಿತರು, ಲಂಬಾಣಿಗಳು ವಾಸಿಸುತ್ತಿರುವ ಗುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಜಮಾನ ತಾಂಡಾ ವಾರ್ಡಿನಲ್ಲಿ ಜನರಿಗೆ ವಿತರಿಸಿದ್ರು.. ಈ ಸಂದರ್ಭದಲ್ಲಿ ವಾರ್ಡಿನ ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗಳು, ವಾರ್ಡಿನ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು..
ಮುಂಡಗೋಡಿಗೆ ದೇಶಪಾಂಡೆಯವರ ಗಿಫ್ಟ್..! PPE ಕಿಟ್, ಔಷಧಿ, ಮಾಸ್ಕ್, ಅಂಬ್ಯುಲೆನ್ಸ್ ಹಸ್ತಾಂತರ..!
ಮುಂಡಗೋಡ-ತಹಶೀಲ್ದಾರ ಕಚೇರಿ ಆವರಣದಲ್ಲಿ ಇಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ, ಹಾಗೂ ಅವರ ಪುತ್ರ ಪ್ರಶಾಂತ್ ದೇಶಪಾಂಡೆ, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿಗೆ ಹಲವು ಸೌಲಭ್ಯಗಳನ್ನು ಒದಗಿಸಿದ್ರು.. ಮುಂಡಗೋಡ ತಾಲೂಕಿನ ತಹಶಿಲ್ದಾರ್ ಶ್ರೀಧರ್ ಮುಂದಲಮನಿಯವರ ಮೂಲಕ 500 ಔಷಧಿ ಕಿಟ್, ಹಾಗೂ 320 ಆಕ್ಸಿ ಮೀಟರ್, 500 n95 ಮಾಸ್ಕ್, 250 ಪಿಪಿಇ ಕಿಟ್ ಹಾಗೂ 1 ಉಚಿತ ಅಂಬ್ಯುಲೆನ್ಸ್ ವಾಹನ ಹಸ್ತಾಂತರಿಸಿದ್ರು.. ಈ ವೇಳೆ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಮುಖಂಡರಾದ, ಎಚ್. ಎಮ್. ನಾಯ್ಕ ದೀಪಕ್ ದೊಡ್ಡೂರು, ಪಟ್ಟಣ ಪಂಚಾಯತ್ ಸದಸ್ಯ ರಝಾಕ್ ಖಾನ್ ಫಠಾಣ, ಸಂತೋಷ ವಾಸನ್ ಧರ್ಮರಾಜ ನಡಗೇರಿ ಸೇರಿದಂತೆ ಹಲವರು ಹಾಜರಿದ್ದರು, ಇನ್ನು, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂಗನ ಬಸಯ್ಯ ತಾಲೂಕ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಈ ವೇಳೆ ಹಾಜರಿದ್ದು...
ಮುಂಡಗೋಡ: 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನ..!
ಮುಂಡಗೋಡ- ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದು 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು..! ಬೆಳಿಗ್ಗೆ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಯಾ ವ್ಯಾಪ್ತಿಯ ಗ್ರಾಮಗಳ 18 ವರ್ಷ ಮೇಲ್ಪಟ್ಟ ವಿಕಲಚೇತನರು ಲಸಿಕೆ ಪಡೆದರು.. ತಮ್ಮ ವಿಕಲಚೇತನದ ಗುರುತಿನ ಪ್ರಮಾಣಪತ್ರ, ಆಧಾರ್ ಕಾರ್ಡ್ ನೊಂದಿಗೆ ಬಂದು 18 ವರ್ಷ ಮೇಲ್ಪಟ್ಟ ವಿಕಲಚೇತನರು ಲಸಿಕೆ ಪಡೆದ್ರು.. ತಾಲೂಕಾಡಳಿತ ಶುಕ್ರವಾರದ ಇಡೀ ದಿನ ಮುಂಡಗೋಡ ತಾಲೂಕಿನಲ್ಲಿ ಕೋವಿಡ್ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ..
ಮುಂಡಗೋಡಿನಲ್ಲಿ ಆನ್ಲೈನ್ ವಂಚನೆ: RFO ಗೆ 72 ಸಾವಿರ ರೂ. ಪಂಗನಾಮ..!!
ಮುಂಡಗೋಡ: ಪಟ್ಟಣದ ವಲಯ ಅರಣ್ಯಾಧಿಕಾರಿ ಪರಮೇಶ್ವರ ದಾಸಪ್ಪ ಎಂಬುವವರಿಗೆ BSNL ಸಿಮ್ ಬ್ಲಾಕ್ ಆಗತ್ತೆ ಅಂತಾ ಸಂದೇಶ ಕಳುಹಿಸಿ, ಆನ್ಲೈನ್ ಖದೀಮರು ಬರೋಬ್ಬರಿ 72 ಸಾವಿರ ರೂಪಾಯಿ ವಂಚಿಸಿರೋ ಘಟನೆ ನಡೆದಿದೆ. ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಕುರಿತು ವಲಯ ಅರಣ್ಯಾಧಿಕಾರಿ, ಪರಮೇಶ್ವರ ದಾಸಪ್ಪ ದೂರು ದಾಖಲಿಸಿದ್ದಾರೆ.. ಹಿಂದಿ ಭಾಷೆಯಲ್ಲಿ ಸಂದೇಶ ಕಳುಹಿಸಿದ್ದ ವ್ಯಕ್ತಿ ಸದ್ಯದಲ್ಲಿಯೇ ನಿಮ್ಮ ಸಿಮ್ ಬ್ಲಾಕ್ ಆಗತ್ತೆ ಹೀಗಾಗಿ ಅಪಡೇಟ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ನಂತ್ರ ಕ್ವಿಕ್ ಆ್ಯಪ್ ಡೌನ್ ಲೋಡ್ ಮಾಡಿಸಿ ಓಟಿಪಿ ಪಡೆದಿದ್ದಾರೆ.. ಆ ಮೂಲಕ ಅವ್ರ ಅಕೌಂಟಿನಿಂದ ಬರೊಬ್ಬರಿ 72 ಸಾವಿರ ರೂಪಾಯಿ ಎಗರಿಸಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಆನಲೈನ್ ವಂಚಕರ ಹಾವಳಿ ಜೋರಾಗಿದ್ದು ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪಿಎಸ್ಐ ಬಸವರಾಜ್ ಮಬನೂರು ಎಚ್ಚರಿಸಿದ್ದಾರೆ..
ಮಾಜಿ ಪಪಂ ಸದಸ್ಯ ಎಂ.ಕೆ. ಪಠಾಣ್ ಸ್ಮರಣಾರ್ಥ ಮಾಸ್ಕ್, ಸ್ಯಾನಿಟೈಸರ್ ವಿತರಣೆ..!
ಮುಂಡಗೋಡ: ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಂ ಕೆ ಪಠಾಣ ಅವರು ನಿಧನರಾಗಿದ್ದು ಅವರ 20 ನೇ ದಿನದ ಪುಣ್ಯಸ್ಮರಣೆಯ ಅಂಗವಾಗಿ, ಗುರುವಾರ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಅವರ ಅಪಾರ ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರು ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದರು.! ಈ ಸಂದರ್ಭದಲ್ಲಿ ದಿವಂಗತ ಎಂ.ಕೆ.ಪಠಾಣ್ ರಿಗೆ 1 ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು..
ತಾಲೂಕಿಗೆ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸಿದ ಪ್ರಶಾಂತ್ ದೇಶಪಾಂಡೆ..!
ಮುಂಡಗೋಡ ತಾಲೂಕಿನ ಕೊರೋನಾ ಪೀಡಿತರ ಸಹಾಯಕ್ಕಾಗಿ ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಅಂಬ್ಯುಲೆನ್ಸ್ ವಾಹನ ನೀಡಿದ್ದಾರೆ.. ಸುಸಜ್ಜಿತ ವ್ಯವಸ್ಥೆ ಇರೋ ಅಂಬ್ಯುಲೆನ್ಸ್ ವಾಹನವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ನೀಡುತ್ತಿದ್ದಾರೆ.. ತಾಲೂಕಿನಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಚಿಕಿತ್ಸೆಗಾಗಿ ಕರೆದೊಯ್ಯಲು ಅಂಬ್ಯುಲೆನ್ಸ್ ಅವಶ್ಯಕತೆ ಹೆಚ್ಚಾಗಿದ್ದು, ಇದನ್ನರಿತ ಪ್ರಶಾಂತ್ ದೇಶಪಾಂಡೆ ಅಂಬ್ಯುಲೆನ್ಸ್ ವಾಹನ ನೀಡಿದ್ದು ಸಮಯೋಚಿತವಾಗಿದೆ ಅಂತಾ ಜನರ ಅಭಿಪ್ರಾಯವಾಗಿದೆ..
ಕಾರ್ಮಿಕರು ಹಾಗೂ ಕಂಪೆನಿಯವರು ಒಂದೇ ಸೈಕಲ್ ನ ಗಾಲಿಗಳಿದ್ದಂತೆ- ಶಿವರಾಮ್ ಹೆಬ್ಬಾರ್
ಬೆಂಗಳೂರು : ಕಾರ್ಮಿಕರು ಮತ್ತು ಕಂಪೆನಿಯವರು ಒಂದೇ ಸೈಕಲ್ ನ ಗಾಲಿಗಳಂತೆ ಕಾರ್ಯ ನಿರ್ವಹಿಸಿ, ಕೋವಿಡ್ ಮುಕ್ತ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕು ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕರೆ ನೀಡಿದ್ರು. ಬೆಂಗಳೂರಿನ CRDEI ಪ್ರೆಸ್ಟೀಜ್ ಗ್ರೂಫ್, ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ಹಾಗೂ ಬಿಬಿಎಂಪಿ ಇವರ ಸಹಭಾಗಿತ್ವದಲ್ಲಿ ಬೆಂಗಳೂರು ನಗರದಲ್ಲಿ ಕಟ್ಟಡ ಕಾರ್ಮಿಕರು ಕೆಲಸ ನಿರ್ವಹಿಸುವ ಅವರವರ ಸ್ಥಳಗಳಲ್ಲಿಯೇ, ಅವರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವ್ರು ಮಾತಾನಾಡುತ್ತಿದ್ರು. ಕಾರ್ಮಿಕರಿಗೆ ಸೌಲಭ್ಯಗಳ ಜೊತೆಗೆ ಆರೋಗ್ಯದ ಕುರಿತು ಕಾಳಜಿ ವಹಿಸಿದಾಗ ಹೊರರಾಜ್ಯದ ವಲಸೆ ಕಾರ್ಮಿಕರಿಗೂ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆದ್ದರಿಂದ, ಗುತ್ತಿಗೆದಾರರು ತಮ್ಮ ಬಳಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಲಸಿಕೆ ಕೊಡಿಸುವ ಮಹತ್ತರವಾದ ಜವಾಬ್ದಾರಿ ನಿರ್ವಹಿಸಬೇಕು ಎಂದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ ಕಾರ್ಮಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕಾರ್ಮಿಕರು ಮತ್ತು ಉದ್ಯೋಗದಾತರನ್ನು ಸಮಾನವಾಗಿ ಅಭಿವೃದ್ಧಿಯೆಡೆಗೆ ಸಮಾಜವನ್ನು ಕೊಂಡೊಯ್ಯುವಂತೆ ಕೋರಿದರು. ಈ...
ಹಾನಗಲ್ ಆಶಾ ಕಾರ್ಯಕರ್ತರಿಗೆ ತಲಾ 2 ಸಾವಿರ ಗೌರವಧನ ನೀಡಿದ ಶ್ರೀನಿವಾಸ್ ಮಾನೆ..!
ಹಾನಗಲ್- ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಕೋವಿಡ್ ಸಂದರ್ಭದಲ್ಲಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಹಾನಗಲ್ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತಲಾ 2000 ರೂ. ಗೌರವಧನ ನೀಡಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣದ ಹಂಗನ್ನೂ ತೊರೆದು ಕಾರ್ಯ ನಿರ್ವಹಿಸುತ್ತಿರೋ ಆಶಾ ಕಾರ್ಯಕರ್ತರಿಗೆ ಉತ್ತೇಜನ ನೀಡಲು ಶ್ರೀನಿವಾಸ್ ಮಾನೆ ಮುಂದೆ ಬಂದಿದ್ದಾರೆ.. ವಿಧಾನ ಪರಿಷತ್ ಸದಸ್ಯರಾಗಿರೋ ಶ್ರೀನಿವಾಸ್ ಮಾನೆ, ವೈಯಕ್ತಿಕವಾಗಿ ಅವರ ಸಂಬಳದಲ್ಲಿ, ಒಟ್ಟು 272 ಆಶಾ ಕಾರ್ಯಕರ್ತೆಯರಿಗೆ, ತಲಾ. 2000 ರೂ. ನಂತೆ ಒಟ್ಟು. ರೂ. 5 ಲಕ್ಷ 44 ಸಾವಿರ ರೂಪಾಯಿ ಹಣವನ್ನು ನೀಡಿದ್ದಾರೆ. ಇಂದು ಆಶಾ ಕಾರ್ಯಕರ್ತರಿಗೆ ಭೇಟಿಯಾಗಿ ಹಣವನ್ನು ಆಶಾ ಕಾರ್ಯಕರ್ತೆಯರ ಅಕೌಂಟ್ ಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆ ಮಾಡಿದ್ದಾರೆ..