ಹಾನಗಲ್- ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಕೋವಿಡ್ ಸಂದರ್ಭದಲ್ಲಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಹಾನಗಲ್ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತಲಾ 2000 ರೂ. ಗೌರವಧನ ನೀಡಿದ್ದಾರೆ.
ಹಾನಗಲ್ಲ ತಾಲೂಕಿನಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣದ ಹಂಗನ್ನೂ ತೊರೆದು ಕಾರ್ಯ ನಿರ್ವಹಿಸುತ್ತಿರೋ ಆಶಾ ಕಾರ್ಯಕರ್ತರಿಗೆ ಉತ್ತೇಜನ ನೀಡಲು ಶ್ರೀನಿವಾಸ್ ಮಾನೆ ಮುಂದೆ ಬಂದಿದ್ದಾರೆ..
ವಿಧಾನ ಪರಿಷತ್ ಸದಸ್ಯರಾಗಿರೋ ಶ್ರೀನಿವಾಸ್ ಮಾನೆ, ವೈಯಕ್ತಿಕವಾಗಿ ಅವರ ಸಂಬಳದಲ್ಲಿ, ಒಟ್ಟು 272 ಆಶಾ ಕಾರ್ಯಕರ್ತೆಯರಿಗೆ, ತಲಾ. 2000 ರೂ. ನಂತೆ ಒಟ್ಟು. ರೂ. 5 ಲಕ್ಷ 44 ಸಾವಿರ ರೂಪಾಯಿ ಹಣವನ್ನು ನೀಡಿದ್ದಾರೆ. ಇಂದು ಆಶಾ ಕಾರ್ಯಕರ್ತರಿಗೆ ಭೇಟಿಯಾಗಿ ಹಣವನ್ನು ಆಶಾ ಕಾರ್ಯಕರ್ತೆಯರ ಅಕೌಂಟ್ ಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆ ಮಾಡಿದ್ದಾರೆ..