ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರಗೆ ಪಾಕಿಸ್ತಾನದಿಂದ 14 ಕೋಟಿ ರೂ…’: ಪಾಕ್ ಭಯೋತ್ಪಾದನಾ ಯೋಜನೆಗಳ ಬಗ್ಗೆ ರಾಜನಾಥ ಸಿಂಗ್..!

ನವದೆಹಲಿ:ಪಾಕಿಸ್ತಾನ ಸರ್ಕಾರವು “ತನ್ನ ನಾಗರಿಕರಿಂದ ಸಂಗ್ರಹಿಸಿದ ತೆರಿಗೆಯನ್ನು ಖರ್ಚು ಮಾಡಿ ಘೋಷಿತ ಭಯೋತ್ಪಾದಕ ಮಸೂದ್ ಅಜರ್‌ಗೆ 14 ಕೋಟಿ ರೂ.ಗಳನ್ನು ನೀಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ ಹಾಗೂ” ಯೋಜನೆಗಳ ಬಗ್ಗೆ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಿದ ಹಾಗೂ 2019 ರ ಪುಲ್ವಾಮಾ ಮತ್ತು 2016 ರ ಉರಿ ದಾಳಿಯ ಹಿಂದಿನ ನಿಷೇಧಿತ ಜೈಶ್-ಎ-ಮೊಹಮ್ಮದ್ ಗುಂಪಿನ ಮುಖ್ಯಸ್ಥ ಮಸೂದ್ ಅಜರಗೆ ಭಾರತವು ನಾಶಪಡಿಸಿದ ಭಯೋತ್ಪಾದಕ ಶಿಬಿರಗಳ ಮೂಲ ಸೌಕರ್ಯಗಳನ್ನು ಪುನರ್‌ ನಿರ್ಮಿಸಲು ನೀಡುತ್ತಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 22 ರಂದು ಪಾಕ್ ಮೂಲದ ಮತ್ತೊಂದು ಭಯೋತ್ಪಾದಕ ಗುಂಪು ದಿ ರೆಸಿಸ್ಟೆನ್ಸ್‌ ಫೋರ್ಸ್‌ (ಟಿಆರ್‌ಎಫ್‌) ನಡೆಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತವು ಆಪರೇಷನ್ ಸಿಂಧೂರ ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿ ನಾಶಪಡಿಸಿದ ಭಯೋತ್ಪಾದಕ ಮೂಲಸೌಕರ್ಯವನ್ನು ಪಾಕಿಸ್ತಾನ ಪುನರ್ನಿರ್ಮಿಸಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ. ಈ ಪುನರ್ನಿರ್ಮಾಣಕ್ಕೆ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪಡೆಯುವ $2.1 ಶತಕೋಟಿಯನ್ನು ಬಳಸಿಕೊಳ್ಳುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

“ಜೈಶ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದರೂ, ಪಾಕಿಸ್ತಾನವು ನಾಗರಿಕರಿಂದ ಸಂಗ್ರಹಿಸಿದ ತೆರಿಗೆಯನ್ನು ಖರ್ಚು ಮಾಡಿ ಆತನಿಗೆ 14 ಕೋಟಿ ರೂ.ಗಳನ್ನು ನೀಡಲಿದೆ. ಮುರಿಡ್ಕೆ ಮತ್ತು ಬಹಾವಲ್ಪುರದಲ್ಲಿ ಲಷ್ಕರ್ ಮತ್ತು ಜೈಶ್‌ನ ಭಯೋತ್ಪಾದಕ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು ಪಾಕ್ ಸರ್ಕಾರ ಆರ್ಥಿಕ ನೆರವು ನೀಡುವುದಾಗಿ ಹೇಳಿದೆ” ಎಂದು ರಾಜನಾಥ ಸಿಂಗ್ ಗುಜರಾತ್‌ನ ಭುಜ್‌ನಲ್ಲಿರುವ ಮಿಲಿಟರಿ ನೆಲೆಯಲ್ಲಿ ಸೈನಿಕರಿಗೆ ಹೇಳಿದ್ದಾರೆ.

ಭಾರತವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಚಟುವಟಿಕೆಯನ್ನು ಪ್ರಾಯೋಜಿಸಿದ ಆರೋಪ ಹೊತ್ತಿರುವ ಪಾಕಿಸ್ತಾನ ಸರ್ಕಾರಕ್ಕೆ ಐಎಂಎಫ್ ಬೇಲ್‌ಔಟ್‌ಗಳ ಕುರಿತು ಭಾರತವು ಆಕ್ಷೇಪ ಎತ್ತಿದ ನಂತರ ರಕ್ಷಣಾ ಸಚಿವರ ಈ ತೀಕ್ಷ್ಣ ಹೇಳಿಕೆಗಳು ಬಂದಿವೆ. “ಪಾಕ್‌ಗೆ ಐಎಂಎಫ್‌ ನೀಡುವ ಯಾವುದೇ ಹಣಕಾಸು ನೆರವು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತದೆ.

ಐಎಂಎಫ್ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು” ಎಂದು ರಾಜನಾಥ ಸಿಂಗ್‌ ಒತ್ತಾಯಿಸಿದರು.
ಕಳೆದ ವಾರ ಭಾರತವು ಪಾಕ್‌ಗೆ $2.3 ಬಿಲಿಯನ್ ಮೌಲ್ಯದ ಹೊಸ ಸಾಲಗಳನ್ನು ವಿಸ್ತರಿಸುವ ಐಎಂಎಫ್‌ನ ಪ್ರಸ್ತಾಪವನ್ನು ವಿರೋಧಿಸಿತು. ಪಾಕಿಸ್ತಾನವು ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಹಣಕಾಸು ಒದಗಿಸಲು ಹಣವನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಭಾರತ ಎಚ್ಚರಿಸಿದೆ.

error: Content is protected !!