ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಬಡ್ಡಿಗೇರಿ, ಗುಂಜಾವತಿ ನಡುವೆ ಕಾರು ಅಪಘಾತವಾಗಿದೆ. ಮದುವೆಗೆಂದು ಬಂದಿದ್ದ ಮಹಾರಾಷ್ಟ್ರ ಮೂಲದ ಕುಟುಂಬದ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಕಾರಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮಹಾರಾಷ್ಟ್ರ ಮೂಲದ ಕುಟುಂಬ ಇಂದು ಮುಂಡಗೋಡ ತಾಲೂಕಿನಲ್ಲಿ ಮದುವೆ ಇದ್ದ ಕಾರಣ, ಮದುವೆಗೆಂದು ಆಗಮಿಸಿತ್ತು. ಮದುವೆ ಮುಗಿಸಿಕೊಂಡು ಹೊರಡುವಾಗ ಬಡ್ಡಿಗೇರಿ ಸಮೀಪದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದೆ. ಹೀಗಾಗಿ, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಆದ್ರೂ ಅದೃಷ್ಟವಶಾತ್ ಕಾರಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!
“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!
ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಕೊಲೆ ಕೇಸ್, ಪ್ರಮುಖ ಆರೋಪಿ ಪಿಂಟೂ ಸೇರಿ ನಾಲ್ವರ ಬಂಧನ..!
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಕಾನೂನು ಜಾರಿ, ಬಲವಂತದ ವಸೂಲಾತಿ, ಹಿಂಸೆ ನೀಡಿದ್ರೆ ಜಾಮೀನು ರಹಿತ ಕೇಸ್..!
ಉತ್ತರ ಕನ್ನಡದ ಹೆಮ್ಮೆ, ಹಾಡುಹಕ್ಕಿ, ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ..!
ಮುಂಡಗೋಡ ಹೊರವಲಯದ APMC ಬಳಿಯ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..!
ಮುಂಡಗೋಡ ಪಟ್ಟಣದ ಹೊರವಲಯದ APMC ಹತ್ತಿರದ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ಕಾಡಿನಲ್ಲಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಕೊಳೆತು ನಾರುವ ಸ್ಥಿತಿಯಲ್ಲಿರೋ ಶವ, ಕನಿಷ್ಟ ಸುಮಾರು ಹತ್ತು ದಿನಗಳ ಹಿಂದೆ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೈನಳ್ಳಿ ಯುವಕನಿಂದ ಲವ್, ಸೆಕ್ಸ್, ದೋಖಾ ಆರೋಪ, ಆತನ ಮನೆ ಎದುರೇ ಧರಣಿ ಕುಳಿತ ಯುವತಿ..! ಅಷ್ಟಕ್ಕೂ ಏನಿದು ಘಟನೆ..?
ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ಯುವತಿಯೋರ್ವಳು ತನಗೆ ಅನ್ಯಾಯವಾಗಿದೆ ಅಂತಾ ಯುವಕನ ಮನೆಯೆದುರು ನಿನ್ನೆ ಸೋಮವಾರದಿಂದಲೂ ಸತ್ಯಾಗ್ರಹ ನಡೆಸ್ತಿದಾಳೆ. ಇಲ್ಲಿನ ಯುವಕನೊಬ್ಬ ನಂಗೆ ಪುಸಲಾಯಿಸಿ, ಪ್ರೀತಿಯ ಬಲೆ ಹೆಣೆದು, ಬಳಸಿಕೊಂಡು ಇವಾಗ ಮದುವೆ ಅಂತಾ ಮಾತಾಡಿದ್ರೆ ಆಗಲ್ಲ ಅಂತಾ ದ್ರೋಹ ಮಾಡ್ತಿದಾನೆ ಎಂದು ಅಲವತ್ತುಕೊಂಡಿದ್ದಾಳೆ.. ಘಟನೆ ಏನು..? ಯುವತಿ ಹೇಳೋ ಪ್ರಕಾರ, ಮೈನಳ್ಳಿ ಗ್ರಾಮದ ಅದೊಬ್ಬ ಯುವಕ, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಅದೇಂತದ್ದೋ ಟ್ರೇನಿಂಗ್ ಗೆ ಹೋದಾಗ, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಾಂಡೇಬಾಗೂರ್ ಗ್ರಾಮದ 19 ವರ್ಷದ ಯುವತಿಯೊಂದಿಗೆ ಸ್ನೇಹ ಬೆಳಸಿಕೊಳ್ತಾನೆ. ಆ ಸ್ನೇಹ ಮುಂದುವರೆದು ಪ್ರೀತಿಗೆ ತಿರುಗತ್ತೆ. ಆ ನಂತರದಲ್ಲಿ ಇಬ್ಬರೂ ನಾನಿನ್ನ ಬಿಡಲಾರೆ ಅಂತಾ ಜೊತೆ ಜೊತೆಯಾಗೇ ಬೆಂಗಳೂರಿಗೆ ಕೆಲಸಕ್ಕೆ ಅಂತ ಹೋಗಿರ್ತಾರೆ. ಅಲ್ಲಿಯೂ ಇವ್ರು ಒಂದೇ ರೂಮಿನಲ್ಲಿ ವಾಸ ಮಾಡಿರ್ತಾರೆ. ಹೀಗೆ ಬರೋಬ್ಬರಿ ಒಂದು ವರ್ಷಗಳ ಕಾಲ ನಡೆದ ಇವ್ರ ಪ್ರೇಮ, ಸರಸ ಸಲ್ಲಾಪ ಕಡೆ ಕಡೆಗೆ ಮದುವೆ ಮಾತಿಗೆ ಬಂದಾಗ ಯುವಕ ಬಿಲ್...
ಕಾತೂರಿನಿಂದ ಆಸ್ಪತ್ರೆಗೆಂದು ಮುಂಡಗೋಡಿಗೆ ಬಂದಿದ್ದ ವೃದ್ದೆ ನಾಪತ್ತೆ, ಕಂಡರೆ ತಕ್ಷಣವೇ ಮಾಹಿತಿ ನೀಡಲು ಮನವಿ..!
ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ವೃದ್ದೆಯೋರ್ವರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮುಂಡಗೋಡ ಪಟ್ಟಣಕ್ಕೆ ಬಂದವರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಿ ಅಂತಾ ಆಕೆಯ ಪುತ್ರ ಮನವಿ ಮಾಡಿದ್ದಾರೆ. ಕಾತೂರಿನ ಶಿವಕ್ಕ ಫಕ್ಕೀರಪ್ಪ ತಳವಾರ(65) ಎಂಬ ವೃದ್ದೆಯೇ ನಾಪತ್ತೆಯಾದವರು. ನಿನ್ನೆ ಮುಂಜಾನೆ 10 ಘಂಟೆಗೆ ಕಾತೂರನಿಂದ ಮುಂಡಗೋಡಿಗೆ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಆದ್ರೆ, ಆಸ್ಪತ್ರೆಗೆ ಅಂತಾ ಬಂದವರು ವಾಪಸ್ ಮನೆಗೆ ಹೋಗದೆ ಎಲ್ಲಿಯೊ ನಾಪತ್ತೆಯಾಗಿದ್ದು, ಕುಟುಂಬಸ್ಥರು ಎಲ್ಲ ಕಡೆ ಹುಡುಕುತ್ತಿದ್ದಾರೆ. ಆದ್ರೆ ಇದುವರೆಗೂ ವೃದ್ದೆಯ ಪತ್ತೆಯಾಗಿಲ್ಲ. ಹೀಗಾಗಿ, ಯಾರಿಗಾದ್ರೂ ಇವ್ರು ಕಂಡುಬಂದಲ್ಲಿ ತಕ್ಷಣವೇ ಆಕೆಯ ಪುತ್ರ ಲಕ್ಷ್ಮಣ ತಳವಾರ ಮೊಬೈಲ್ ಸಂಖ್ಯೆ 7259996999 ಹಾಗೂ ವಿಜಯ್- 9611888517 ಎಂಬುವರಿಗೆ ಕರೆ ಮಾಡಲು ವಿನಂತಿಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ನ್ಯಾಸರ್ಗಿ ಯುವಕ ಚಿಕಿತ್ಸೆ ಫಲಿಸದೇ ಸಾವು..!
ಮುಂಡಗೋಡ ಪಟ್ಟಣದ ಹೊರವಲಯದ ಅಯ್ಯಪ್ಪ ದೇವಸ್ಥಾನದ ಬಳಿ ನಿನ್ನೆ ನಡೆದಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರೋ ಮಾಹಿತಿ ಲಭ್ಯವಾಗಿದೆ. ನ್ಯಾಸರ್ಗಿ ಗ್ರಾಮದ ಕಿರಣ್ ಫಕ್ಕೀರಪ್ಪ ಮೇದಾರ್ (25) ಮೃತ ಬೈಕ್ ಸವಾನಾಗಿದ್ದಾನೆ. ನಿನ್ನೆ ರವಿವಾರ ರಾತ್ರಿ ನಡೆದಿದ್ದ ಬೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಗೆ ಸೂಕ್ತ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಕಿಮ್ಸ್ ನಲ್ಲಿ ಕಿರಣ್ ಮೃತಪಟ್ಟಿದ್ದಾನೆ ಅಂತಾ ಮೂಲಗಳು ತಿಳಿಸಿವೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮುಂಡಗೋಡ ಅಯ್ಯಪ್ಪ ದೇವಸ್ಥಾನದ ಬಳಿ ಭೀಕರ ಬೈಕ್ ಅಪಘಾತ ನ್ಯಾಸರ್ಗಿ ಯುವಕ ಗಂಭೀರ..!
ಮುಂಡಗೋಡ ಪಟ್ಟಣದ ಹೊರವಲಯದ ಅಯ್ಯಪ್ಪ ದೇವಸ್ಥಾನದ ಬಳಿ ಭೀಕರ ಬೈಕ್ ಅಪಘಾತವಾಗಿದೆ. ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾನೆ. ನ್ಯಾಸರ್ಗಿ ಗ್ರಾಮದ ಕಿರಣ್ ಫಕ್ಕೀರಪ್ಪ ಮೇದಾರ್ (25) ಗಂಭೀರ ಗಾಯಗೊಂಡಿರೊ ವ್ಯಕ್ತಿಯಾಗಿದ್ದಾನೆ. ಗಾಯಾಳುವನ್ನು ಸೂಕ್ತ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗೆ ಪ್ರಥಮ ಚಿಕಿತ್ಸೆ ಕೊಟ್ಟು 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಗ್ಗಾವಿ ಕ್ಷೇತ್ರ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹಲವು ಪ್ರಮುಖರು..!
ಶಿಗ್ಗಾವಿ: ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖ ಮುಖಂಡ ಶಿವಾನಂದ ರಾಮಗೇರಿ , ಎಮ್ ಎನ್ ಹೊನಕೇರಿ, ಶಿವು ಅಂಗಡಿ, ಕಾಳಪ್ಪ ಬಂಡಿ, ಶಿವಯೋಗಿ ಮುಕ್ಕಣ್ಣವರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರಖಾನ್ ಪಠಾಣ, ಕೆಪಿಸಿಸಿ ಸದಸ್ಯರಾದ ಸೋಮಣ್ಣ ಬೇವಿನಮರದ ಹಾಗೂ ಯುವ ನಾಯಕರಾದ ರಾಜು ಕುನ್ನೂರ ಅವರ ನೇತೃತ್ವದಲ್ಲಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಜೆ ಮುಲ್ಲಾ, ಸವಣೂರ ತಾಲೂಕ ಕುರುಬ ಸಮಾಜದ ಅಧ್ಯಕ್ಷರಾದ ರವಿ ಕರಿಗಾರ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
ಮೈನಳ್ಳಿ ಕಳಕೀಕಾರೆಯ ಪ್ರಭಾವಿ ಮುಖಂಡನ ತೋಟದ ಶೆಡ್ ಮೇಲೆ ಅರಣ್ಯಾಧಿಕಾರಿಗಳ ದಾಳಿ: ಸಿಕ್ಕಿದ್ದೇನು..? ನಡೆದದ್ದೇನು..?
ಮುಂಡಗೋಡ ತಾಲೂಕಿನ ಅರಣ್ಯ ಇಲಾಖೆಯಲ್ಲಿ ಇವತ್ತಿಗೂ ಪ್ರಾಮಾಣಿಕ, ಖಡಕ್ ಅಧಿಕಾರಿಗಳು ಫಿಲ್ಡಿನಲ್ಲಿ ಇದ್ದಾರೆ ಅನ್ನೋದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಪ್ರಭಾವಿಗಳ ದರ್ಪ ದೌಲತ್ತುಗಳ ನಡುವೆ ಅರಣ್ಯ ಇಲಾಖೆಯ ಅದೇಷ್ಟೋ ಸಂಪತ್ತು ಬರ್ಬಾದಾಗ್ತಿರೊ ಸಮಯದಲ್ಲಿ, ಅದೇಂತದ್ದೇ ಪ್ರಭಾವ ಇದ್ರೂ ತಮ್ಮ ನಿಯತ್ತಿನ ಕಾರ್ಯ ನಿರ್ವಹಿಸಿದ್ದಾರೆ ಇಲ್ಲಿನ ಅರಣ್ಯ ಅಧಿಕಾರಿಗಳು. ಅದಕ್ಕಾಗಿ ಅಂತವರಿಗೊಂದು ಹ್ಯಾಟ್ಸ್ ಅಪ್..! ಅದು ಮೈನಳ್ಳಿ ಭಾಗ..! ಅಂದಹಾಗೆ, ಮೈನಳ್ಳಿ ಭಾಗದ ಕಳಕಿಕಾರೆಯಲ್ಲಿ ಅರಣ್ಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅತಿಕ್ರಮಿತ ತೋಟದ ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಬೆಲೆಬಾಳುವ ಸಾಗವಾನಿ ಮರದ ತುಂಡುಗಳನ್ನು ವಶಕ್ಕೆ ಪಡಿಸಿ ಕೊಂಡಿದ್ದಾರೆ. ಈ ಮೂಲಕ ಇಲ್ಲಿನ ಅರಣ್ಯ ಅಧಿಕಾರಿಗಳು ಕೆಚ್ಚೆದೆ ತೋರಿಸಿದ್ದಾರೆ. ಜಪ್ಪಯ್ಯ ಅಂದ್ರೂ ಬಿಡಲಿಲ್ಲ..! ಮೈನಳ್ಳಿ ಭಾಗದಲ್ಲಿ ಪ್ರಭಾವಿ ಮುಖಂಡರೆನಿಸಿಕೊಂಡಿರೋ, ಕಳಕೀಕಾರೆಯ ದೇವು ಜಾನು ಪಾಟೀಲ್ ಎಂಬುವವರಿಗೆ ಸೇರಿದೆ ಎನ್ನಲಾದ ಅತಿಕ್ರಮಿತ ತೋಟದ ಶೆಡ್ ನಲ್ಲಿ ಅಕ್ರಮವಾಗಿ ಸಾಗವಾನಿ ಮರದ ತುಂಡುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಬಗ್ಗೆ ಖಚಿತ...
ಇಂದೂರಿನ 8 ನಂ. ಕ್ಯಾಂಪ್ ಕ್ರಾಸ್ ಬಳಿ ಪಾದಾಚಾರಿಗೆ ಅಪರಿಚಿತ ಬೈಕ್ ಡಿಕ್ಕಿ, ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಇಂದೂರ ಬಳಿಯ 8 ನಂಬರ್ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ಪಾದಾಚಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ಪಾದಾಚಾರಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಸಂಜು ಸುರಕೋಡ (35) ಗಂಭೀರ ಗಾಯಗೊಂಡಿರೋ ವ್ಯಕ್ತಿಯಾಗಿದ್ದಾನೆ. ರಾತ್ರಿ ವೇಳೆ ವೇಗವಾಗಿ ಬಂದಿರೋ ಅಪರಿಚಿತ ಬೈಕ್ ಪಾದಾಚಾರಿ ವ್ಯಕ್ತಿಗೆ ಡಿಕ್ಕಿಯಾಗಿದೆ ಅನ್ನೊ ಮಾಹಿತಿ ಬಂದಿದೆ. ಅಫಘಾತವಾದ ತಕ್ಷಣವೇ ಸ್ಥಳೀಯರು 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಗ್ಗಾವಿಯಲ್ಲಿ ಭರ್ಜರಿ ಪ್ರಚಾರ ಶುರು ಮಾಡಿದ JDS ಅಭ್ಯರ್ಥಿ ಶಶಿಧರ್ ಎಲಿಗಾರ್..!
ಶಿಗ್ಗಾವಿ: ಶಿಗ್ಗಾವಿ ಸವಣೂರ ಮತ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಅಬ್ಬರದ ಪ್ರಚಾರ ಶುರುವಾಗಿದೆ. JDS ಪಕ್ಷದ ಅಭ್ಯರ್ಥಿ ಶಶಿಧರ ಯಲಿಗಾರ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿವು ಓಟ್ ಹಾಕಿ ಆರಿಸಿಕಳುಹಿಸಿದ ಶಾಸಕ ಬೆಂಗಳೂರಲ್ಲಿ ಜಿವನ ಮಾಡೋರು ಬೇಕೊ.? ನಿಮ್ಮ ಜೊತೆ ಸದಾ ಸೇವೆ ಮಾಡುವ ಶಾಸಕ ಬೇಕೊ..? ಎಂದು ನೀವೇ ತಿರ್ಮಾನ ಮಾಡಿ ಓಟ್ ಹಾಕಿ ಅಂತಾ ಮನವಿ ಮಾಡಿದ್ರು. ಈ ಸಂದರ್ಭದಲ್ಲಿ ಹಲವರು ಜೆಡಿಎಸ್ ಪಕ್ಷಕ್ಕೆ ಸೇಪ೯ಡೆಗೊಂಡರು. ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಚಾರವನ್ನು ಯಶಸ್ವಿಗೊಳಿಸಿದರು. JDS ತಾಲೂಕ ಅಧ್ಯಕ್ಷರಾದ ಈರಣ್ಣ ನವಲಗುಂದ, ಉಪಾಧ್ಯಕ್ಷರು B.C. ಗುದ್ಲಿ ಶೆಟ್ಟರ್, ತಾಲೂಕ ಪ್ರದಾನ ಕಾರ್ಯದರ್ಶಿ ರಾಜು ಮಾಳೋದೆ, ಶಹರ ಘಟಕದ ಅಧ್ಯಕ್ಷರು ಸಂಜೀವ್ ಮಣ್ಣನ್ನವರ, ಬಂಕಾಪುರ ಶಹರ ಘಟಕದ ಅಧ್ಯಕ್ಷರು ರವಿ ಕುರಗೊಡಿ, ಹಾಗೂ ಹಲವಾರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು… ವರದಿ: ಮಂಜುನಾಥ್ ಪಾಟೀಲ್