Uttar Kannada Rain Damage: ಕಾರವಾರ: ಉತ್ತರ ಕನ್ನಡದಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರೊ ಮಳೆ ಇನ್ನಿಲ್ಲದ ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಹಾನಿಗಳಿಗೂ ಕಾರಣವಾಗಿದೆ. ಅಂದಹಾಗೆ, ಇವತ್ತಿನವರೆಗೂ ಜಿಲ್ಲೆಯಲ್ಲಿ ಸುರಿದ ಮಳೆಯ ತಾಲೂಕಾವಾರು ಪ್ರಮಾಣ ಎಷ್ಟು..? ಹಾನಿಯ ವಿವರ ಏನು..? ಇಲ್ಲಿದೆ ಮಾಹಿತಿ. ಮಳೆಯ ವಿವರ..! ಅಂದಹಾಗೆ, ಜಿಲ್ಲೆಯಲ್ಲಿ ಮೇ 26 ಸೋಮವಾರ ಬೆಳಗ್ಗೆ 8.30 ರ ವರೆಗೆ, ಅಂಕೋಲಾದಲ್ಲಿ-17.6 ಮಿಮೀ, ಭಟ್ಕಳದಲ್ಲಿ- 17.6, ಹಳಿಯಾಳ-8.5 ಹೊನ್ನಾವರ -69.3, ಕಾರವಾರ -27, , ಕುಮಟಾ -13.2, ಮುಂಡಗೋಡ- 12, ಸಿದ್ದಾಪುರ- 39.2 , ಶಿರಸಿ -17.7 , ಸೂಪಾ- 14.9 ಯಲ್ಲಾಪುರ -12.9, ದಾಂಡೇಲಿಯಲ್ಲಿ- 14.1 ಮಿಲಿ ಮೀಟರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 21.7 ಮಿಮಿ ಮಳೆ ಸುರಿದಿದೆ. ಹಾನಿಯ ವಿವರ..! ಜಿಲ್ಲೆಯಲ್ಲಿ ಎಪ್ರಿಲ್ 2025 ನಿಂದ ಮೇ 26 ರ ಸಂಜೆ 5 ಗಂಟೆಯವರೆಗೆ ಮಳೆಯಿಂದಾಗಿ, 1 ಜೀವಹಾನಿ, 5 ಪಶು...
Top Stories
ಉತ್ತರ ಕನ್ನಡಲ್ಲಿ ಐಟಿಐ ಪ್ರವೇಶಕ್ಕೆ ಆಫ್ಲೈನ್ ಅರ್ಜಿ ಆಹ್ವಾನ..!
ಪತ್ನಿಯ ತಲೆ ಕಡಿದುಕೊಂಡು ಪೊಲೀಸ್ ಠಾಣೆಗೆ ಬಂದ ಪತಿರಾಯ..!
ಕೃಷಿ ಉದ್ಯಮಿ ಮತ್ತು ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ..!
ಕ್ರೀಡಾಭಿಮಾನಿಗಳ ಸಾವು : ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ..!
ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಭಾರೀ ಇಳಿಕೆ : ಶನಿವಾರ 10 ಗ್ರಾಂ ಬಂಗಾರದ ಬೆಲೆ ₹1,630 ಕುಸಿತ..!
ಕರ್ನಾಟಕದಲ್ಲಿ ಜೂನ್ 10 ರಿಂದ ಮತ್ತೆ ಭಾರಿ ಮಳೆ ಮುನ್ಸೂಚನೆ ; ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ..!
ಬೆಂಗಳೂರು ಕಾಲ್ತುಳಿತ ಘಟನೆ : ವಿರಾಟ್ ಕೊಹ್ಲಿ ವಿರುದ್ದವೂ ದೂರು ದಾಖಲು ; ವರದಿ..!
ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಆರ್ಥಪೂರ್ಣವಾಗಿರಲಿ : ಜಿಲ್ಲಾಧಿಕಾರಿ.
ಶಿಗ್ಗಾವಿ ಗರುಡಾ ಹೊಟೇಲ್ ಬಳಿ ಡಿವೈಡರ್ ಮೇಲೆ ಹತ್ತಿ, ಗುಂಡಿಗೆ ಬಿದ್ದ KSRTC ಬಸ್, 10 ಜನರಿಗೆ ಗಾಯ..!
ಬಾಚಣಕಿ ಬಳ್ಳಿಗಟ್ಟಿ ಕೆರೆ ದಡದಲ್ಲಿ “ವಿಶ್ವ ಪರಿಸರ ದಿನಾಚರಣೆ”
ಜಿಲ್ಲೆಯಲ್ಲಿ ಬಕ್ರೀದ್ ಆಚರಣೆ ಶಾಂತಿಯುತ, ಸೌಹಾರ್ದಯುವಾಗಿರಲಿ; ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಜೂನಿನಲ್ಲೇ ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 20ನೇ ಕಂತು; ಫಲಾನುಭವಿಗಳ ಇ-ಕೆವೈಸಿ ಕಡ್ಡಾಯ..!
2027 ಮಾರ್ಚ್ 1ರಿಂದ ಜನಗಣತಿ ಆರಂಭ; ಜೊತೆಗೆ ಜಾತಿ ಗಣತಿಯೂ ಆರಂಭ..!
ಮುಂಡಗೋಡ ಡಿಗ್ರಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ, “ವೃಕ್ಷ ಬಂಧನ” ಕಾರ್ಯಕ್ರಮ..!
RCB ತಂಡದಿಂದ ಐಪಿಎಲ್ 2025 ಟ್ರೋಫಿ ಹಿಂಪಡೆದ BCCI..! ಯಾಕೆ ಗೊತ್ತಾ..?
RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ, ಸಿದ್ದಾಪುರದ ಮಹಿಳೆಯೂ ಬಲಿ..!
RCB ವಿಜಯೋತ್ಸವ, ಕುಣಿದು ಕುಪ್ಪಳಿಸುತ್ತಿದ್ದಾಗಲೇ ಹೃದಯಾಘಾತ, ಅಭಿಮಾನಿ ಸಾವು..!
ತಮ್ಮ ಮಗನನ್ನೇ ಕಚ್ಚಿ ಕೊಂದಿದ್ದ ವಿಷ ಸರ್ಪವನ್ನು ಜೋಪಾನವಾಗಿ ಹಿಡಿದು ಕಾಡಿಗೆ ಬಿಟ್ಟ ಕುಟುಂಬ..!
ಹೆಬ್ಬಾರ್ ಜನ್ಮದಿನ: ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಕೈ ಕಾರ್ಯಕರ್ತರು..!
ಪ್ಲೇಆಫ್ ಪಂದ್ಯಕ್ಕೂ ಮೊದಲೇ ಅಗ್ರಸ್ಥಾನಕ್ಕೆ ತಲುಪಿದ RCB..! ಐಪಿಎಲ್ನಲ್ಲಿ ಮೊದಲ ತಂಡವಾಗಿ ದಾಖಲೆ ಬರೆದ ಬೆಂಗಳೂರು ಟೀಂ..!
IPL RCB Team: ಐಪಿಎಲ್ 18ನೇ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಪ್ಲೇಆಫ್ಗೆ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಳೆ ತನ್ನ ಕೊನೆಯ ಲೀಗ ಹಂತದ ಪಂದ್ಯವನ್ನು ಆಡಲಿದೆ. ಇದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಪ್ಲೇಆಫ್ ಪಂದ್ಯಗಳನ್ನು ಆಡಲಿದೆ. ಈ ಬಾರಿ ಟ್ರೋಫಿ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಆರ್ಸಿಬಿ ಕೂಡ ಒಂದಾಗಿರುವ ಕಾರಣ ತಂಡದ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ. ಏತನ್ಮಧ್ಯೆ, ಪ್ಲೇಆಫ್ ಪಂದ್ಯಗಳಿಗೂ ಮುಂಚಿತವಾಗಿ ಬೆಂಗಳೂರು ತಂಡ ಹೊಸ ದಾಖಲೆ ಬರೆದಿದೆ. ಇದರೊಂದಿಗೆ, ಈ ಸಾಧನೆ ಮಾಡಿದ ಮೊದಲ ಐಪಿಎಲ್ ಫ್ರಾಂಚೈಸಿ ಎನಿಸಿಕೊಂಡಿದೆ. ಆರ್ಸಿಬಿ ತಂಡವು ಇಲ್ಲಿಯವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲವಾದರೂ, ತಂಡಕ್ಕೆ ಅಭಿಮಾನಿಗಳ ಕೊರತೆಯೇನು ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ದಾಖಲೆ ಬರೆದ RCB..! ಹೌದು, ಇನ್ಸ್ಟಾಗ್ರಾಮ್ನಲ್ಲಿ (RCB Instagram) ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತಂಡವಾಗಿ ಚರಿತ್ರೆ ಸೃಷ್ಟಿಸಿದೆ. ಇದರೊಂದಿಗೆ ಐದು ಬಾರಿ ಚಾಂಪಿಯನ್ಸ್ ತಂಡಗಳಾದ ಮುಂಬೈ ಇಂಡಿಯನ್ನು ಮತ್ತು...
ಅಲೆಗಳ ಅಬ್ಬರ; ಮುರ್ಡೇಶ್ವರ ಕಡಲಲ್ಲಿ ಪ್ರವಾಸಿಗರಿಗೆ ನೋ ಎಂಟ್ರಿ..!
Murdeshwara Rain News:ಭಟ್ಕಳ: ಮುರ್ಡೇಶ್ವರ ಸಮುದ್ರದಲ್ಲಿ ಅಲೆಗಳ ಅಬ್ಬರ ಮಧ್ಯೆಯೂ ಪ್ರವಾಸಿಗರು ಈಜಾಡಲು ಸಮುದ್ರಕ್ಕಿಳಿಯತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮುದ್ರಕ್ಕೆ ಹೋಗುವ ದಾರಿಯನ್ನು ಬಂದ್ ಮಾಡಿ ಪೊಲೀಸ್ ಕಾವಲು ಹಾಕಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ 2 – 3 ದಿನಗಳ ಕಾಲ ಭಾರೀ ವೇಗದಲ್ಲಿ ಗಾಳಿ ಬೀಸುವ ಹಾಗೂ ಮಳೆಯಾಗುವ ಸಂಭವ ಇದೆ. ಸಮುದ್ರದಲ್ಲಿ ಅಲೆಗಳು ಎತ್ತರಕ್ಕೆ ಏರುವ ಕಾರಣ ಮೀನುಗಾರಿಕೆಗೆ ಹಾಗೂ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆಯ ಪ್ರಕಟಣೆ ಹೊರಡಿಸಿತ್ತು. ಇದನ್ನೂ ಓದಿ:👉ಉತ್ತರ ಕನ್ನಡದಲ್ಲಿ ಮಳೆ ಮತ್ತು ಹಾನಿಯ ವಿವರ, ಮುಂಡಗೋಡ ಸೇರಿ ತಾಲೂಕಾವಾರು ಸಂಪೂರ್ಣ ಮಾಹಿತಿ ಇದು..! ಮುರ್ಡೇಶ್ವರದಲ್ಲಿ ಮಾತ್ರ ಇದ್ಯಾವುದೂ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಮೋಜು- ಮಸ್ತಿಗಿಳಿದಿದ್ದರು. ಜಿಲ್ಲೆಯ ಮಾಜಾಳಿಯಿಂದ ಗೊರಟೆಯ ತನಕ ಸಮುದ್ರದಲ್ಲಿ ಮೀನುಗಾರಿಕೆ ಹಾಗೂ ಸಮುದ್ರದಲ್ಲಿಯ ಎಲ್ಲ ಚಟುವಟಿಕೆ ರದ್ದು ಮಾಡುವಂತೆ ಜಿಲ್ಲಾಡಳಿತ ಆದೇಶ ನೀಡಲಾಗಿದ್ದರು ಸಹ ಮುರ್ಡೇಶ್ವರದಲ್ಲಿ ಕೆಲವು ಪ್ರವಾಸಿಗರು ಸಮುದ್ರಕ್ಕೆ ಇಳಿದು ಮೋಜು-...
ಜೂನ್ 1ರಿಂದ ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ; ಪ್ರವೇಶ ಶುಲ್ಕ ನಿಗದಿ..!
Tourism News:ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸಭೆಯ ಸಭಾಂಗಣದ ವೀಕ್ಷಣೆಗೆ (vidhana soudha tour) ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯಿಂದ ಗೈಡೆಡ್ ಟೂರ್ಗೆ (Guided tour) ಚಾಲನೆ ನೀಡಲಾಗಿದ್ದು, ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧದ ಗೈಡೆಡ್ ಟೂರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಬೆಳಗ್ಗೆ 8ರಿಂದ ಸಂಜೆ 5 ಗಂಟೆ ವರೆಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಸಮಯ ಹಾಗೂ ಶುಲ್ಕ (Fees) ನಿಗದಿ ಮಾಡಲಾಗಿದೆ. ಜೂನ್ 1ರಿಂದ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದೆ. ವಯಸ್ಕರಿಗೆ 16 ವರ್ಷ ಮೇಲ್ಪಟ್ಟ ವಯಸ್ಕರಿಗೆ 50 ರೂ. ಶುಲ್ಕ ನಿಗದಿಪಡಿಸಲಾಗಿದೆ. 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಇದಕ್ಕಾಗಿ https://kstdc.co/activities ವೆಬ್ಸೈಟ್ ನಲ್ಲಿ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಕೊಳ್ಳಬೇಕು. 30 ಜನರನ್ನು ಒಳಗೊಂಡ ಗ್ರೂಪ್ನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗುತ್ತದೆ. ಒಂದು ಗ್ರೂಪ್ಗೆ 90 ನಿಮಿಷಗಳ ಅವಧಿ ಇರಲಿದ್ದು, ಒಂದು ದಿನಕ್ಕೆ 300...
ರಸ್ತೆ ಸಂಚಾರ ಮತ್ತು ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಿ: ಅಮೀತ್ ಸಿಂಗ್..!
Police News Karwar: ಕಾರವಾರ: ರಸ್ತೆ ಸಂಚಾರ ಮತ್ತು ಸುರಕ್ಷತಾ ನಿಯಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು ಅಮೀತ್ ಸಿಂಗ್ ಹೇಳಿದರು. ಅವರು ಸೋಮವಾರ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಜಾಗೃತಿ ಕೆಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅವುಗಳನ್ನು ತಡೆಯುವ ನಿಟ್ಟಿನಲ್ಲಿ, ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಜಾಗೃತೆಯಿಂದ ವಾಹನ ಚಾಲಾಯಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದ್ದು, ಸಂಚಾರ ಜಾಗೃತಿ ಕೇಂದ್ರಕ್ಕೆ ಸಾರ್ವಜನಿಕರನ್ನು ಕರೆತಂದು ಮಾಹಿತಿ ಮತ್ತು ಅರಿವು ಮೂಡಿಸಬೇಕು. ರಸ್ತೆ ಸಂಚಾರ ನಿಯಮಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮವನ್ನು ಮಾಡಬೇಕು. ಸಾಮಾಜಿಕ ಜಾಲತಾಣ, ಟಿವಿ, ಪತ್ರಿಕೆಗಳಲ್ಲಿ ಇದರ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದರು. ಇದನ್ನೂ ಓದಿ👉ನಕಲಿ ಕ್ಲಿನಿಕ್ ಮತ್ತು ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ :...
ನಕಲಿ ಕ್ಲಿನಿಕ್ ಮತ್ತು ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ..!
Fake doctor News: ಕಾರವಾರ: ಜಿಲ್ಲೆಯ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ನಕಲಿ ಕ್ಲಿನಿಕ್ಗಳು ಮತ್ತು ವೈದ್ಯರ ವಿರುದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಕೆಪಿಎಂಇ ಅಡಿಯಲ್ಲಿ ನೋದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದನ್ನೂ ಓದಿ👉ರಸ್ತೆ ಸಂಚಾರ ಮತ್ತು ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಿ: ಅಮೀತ್ ಸಿಂಗ್..! ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ 3 ಕ್ಲಿನಿಕ್ಗಳ ಮೇಲೆ ಈಗಾಗಲೇ FIR ದಾಖಲಿಸಲಾಗಿದ್ದು, 14 ಕ್ಲಿನಿಕ್ಗಳನ್ನು ಮುಚ್ಚಿಸಲಾಗಿದೆ, 17 ನಕಲಿ ಕ್ಲಿನಿಕ್ಗಳಿಗೆ ನೋಟಿಸ್ ನೀಡಲಾಗಿದ್ದು, ಇದರಲ್ಲಿ ಸೂಕ್ತ ದಾಖಲೆ ನೀಡಿದ ಕ್ಲಿನಿಕ್ಗಳನ್ನು ಮುಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಅಗತಯವಿದ್ದಲ್ಲಿ ಈ ಕಾರ್ಯಕ್ಕೆ ಪೊಲೀಸ್ ನೆರವು ಪಡೆಯುವಂತೆ ಸೂಚಿಸಿದರು. ಇದನ್ನೂ ಓದಿ👉ಗರ್ಭ ಮತ್ತು ಪ್ರಸವ ಪೂರ್ವ ಅಕ್ರಮ ಲಿಂಗ ಪತ್ತೆ ನಡೆಯದಂತೆ ಜಾಗೃತೆ ವಹಿಸಿ: ಜಿಲ್ಲಾಧಿಕಾರಿ..! ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ...
ಗರ್ಭ ಮತ್ತು ಪ್ರಸವ ಪೂರ್ವ ಅಕ್ರಮ ಲಿಂಗ ಪತ್ತೆ ನಡೆಯದಂತೆ ಜಾಗೃತೆ ವಹಿಸಿ: ಜಿಲ್ಲಾಧಿಕಾರಿ..!
Karwar Health News: ಕಾರವಾರ; ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಅಕ್ರಮವಾಗಿ ಗರ್ಭ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಪ್ರಕರಣಗಳು ನಡೆಯದಂತೆ ನಿರಂತರವಾಗಿ ನಿಗಾವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ ಸಕ್ಷಮ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದನ್ನೂ ಓದಿ👉ನಿಶ್ಚಿತ ಠೇವಣಿಗಿಂತಲೂ ಹೆಚ್ಚು ಆದಾಯ ನೀಡುವ ಪೋಸ್ಟ್ ಆಫೀಸ್ ಯೋಜನೆಗಳಿವು; ಇಲ್ಲಿದೆ ಪೂರ್ಣ ವಿವರ..! ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 77 ಸ್ಕ್ಯಾನಿಂಗ್ ಸೆಂಟರ್ಗಳಿಗೆ ಆರೋಗ್ಯ ಅಧಿಕಾರಿಗಳು ದಿಢೀರ್ ದಾಳಿಗಳನ್ನು ನಡೆಸಿ, ಈ ಸೆಂಟರ್ಗಳು ಕಾನೂನು ಪ್ರಕಾರ ಎಲ್ಲಾ ಆದೇಶಗಳನ್ನು ಪಾಲಿಸಿ, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಪಾಸಣೆ ನಡೆಸಬೇಕು, ಈ ಎಲ್ಲಾ ಕೇಂದ್ರಗಳಿಗೆ ಪ್ರತೀ ಕೇಂದ್ರಗಳಿಗೆ ವಾರ್ಷಿಕ ಕನಿಷ್ಠ 4 ಬಾರಿ ಭೇಟಿ ನೀಡಿ ತಪಾಸಣೆ ನಡೆಸಬೇಕು, ತಪಾಸಣಾ ವರದಿಯಲ್ಲಿ ತಪಾಸಣೆಯ ಸಂಪೂರ್ಣ ವಿವರಗಳನ್ನು ದಾಖಲಿಸಬೇಕು ಎಂದರು....
ಸೊಳ್ಳೆಗಳು ಕೆಲವು ವ್ಯಕ್ತಿಗಳತ್ತ ಮಾತ್ರ ಹೆಚ್ಚು ಆಕರ್ಷಿತವಾಗುತ್ತವೆ ಯಾಕೆ ? ಅಧ್ಯಯನ ಹೇಳುವುದು ಏನೆಂದರೆ..!
Mosquito News:ಸೊಳ್ಳೆಗಳು ಎಲ್ಲರಿಗೂ ತೊಂದರೆ ಕೊಡುತ್ತವೆ, ಆದರೆ ಕೆಲವು ಜನರತ್ತ ಇತರರಿಗಿಂತ ಹೆಚ್ಚಾಗಿ ಅವುಗಳು ಆಕರ್ಷಣೆಗೆ ಒಳಗಾಗುತ್ತವೆ. ಈ ಸೊಳ್ಳೆಗಳು ಯಾವುದೇ ಚರ್ಮದಲ್ಲಿನ ರಕ್ತವನ್ನು ಹೀರಲು ತಮ್ಮ ಸೂಜಿಯಂತಹ ಪ್ರೋಬೊಸೈಸ್ಗಳನ್ನು ಬಳಸುತ್ತವೆ. ಆದರೆ ಕೆಲವರತ್ತ ಸೊಳ್ಳೆಗಳಿಗೆ ಹೆಚ್ಚು ಬರುವುದೇಕೆ..? ಇದರ ಹಿಂದಿನ ವಿಜ್ಞಾನವೇನು? ಅದು ವಾಸನೆಯೊಂದಿಗೆ ಏನಾದರೂ ಸಂಬಂಧ ಹೊಂದಿರಬಹುದೇ ಎಂಬ ಪ್ರಶ್ನೆಗೆ ಸಂಶೋಧನೆಯೊಂದು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದೆ. ಜರ್ನಲ್ ಸೆಲ್ನಲ್ಲಿ ಪ್ರಕಟವಾದ ರಾಕ್ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು 2022 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ತಮ್ಮ ಚರ್ಮದ ಮೇಲೆ ಹೆಚ್ಚಿನ ಮಟ್ಟದ ಕೆಲವು ಆಮ್ಲಗಳನ್ನು ಹೊಂದಿರುವ ವ್ಯಕ್ತಿಗಳತ್ತ ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆಗಳು 100 ಪಟ್ಟು ಹೆಚ್ಚು ಆಕರ್ಷಿತವಾಗುತ್ತವೆ. ಈ ಸೊಳ್ಳೆಯಿಂದ ಡೆಂಗ್ಯೂ, ಚಿಕೂನ್ಗುನ್ಯಾ, ಹಳದಿ ಜ್ವರ ಮತ್ತು ಜಿಕಾ ಮುಂತಾದ ರೋಗಗಳ ಹರಡುತ್ತವೆ. ಅಧ್ಯಯನಕ್ಕಾಗಿ, ಸಂಶೋಧಕರು ತೋಳುಗಳ ಮೇಲೆ ನೈಲಾನ್ ಸ್ಟಾಕಿಂಗ್ಸ್ ಬಳಸಿ ಜನರ ಚರ್ಮದಿಂದ ನೈಸರ್ಗಿಕ ಪರಿಮಳವನ್ನು ಸಂಗ್ರಹಿಸಿದರು. ನಂತರ, ಅವುಗಳನ್ನು ಎರಡು ಇಂಚಿನ ತುಂಡುಗಳಾಗಿ ಕತ್ತರಿಸಿ ಸೊಳ್ಳೆಗಳು...
18 ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವೆ ; ಸ್ಪೀಕರ್..!
Political News:ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭಾನುವಾರ ಹೇಳಿದ್ದಾರೆ. 18 ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಭಾನುವಾರ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ ಮತ್ತು ಮಸೂದೆಯ ಪ್ರತಿಗಳನ್ನು ಹರಿದು ಅವರ ಮೇಲೆ ಎಸೆದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಇದೀಗ ಬಿಜೆಪಿ ಶಾಸಕ ಅಮಾನತು ಆದೇಶವನ್ನು ಹಿಂಪಡೆಯಲು ಸಭೆಯಲ್ಲಿ ತೀರ್ಮಾನವಾಗಿದೆ. ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಲ್ಲಿಸಿದ್ದರು. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಶಾಸಕರ ಅಮಾನತು ಆದೇಶವನ್ನ ಹಿಂಪಡೆಯಲಾಗಿದೆ. 18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಈಗ ಶಾಸಕರ ಅಮಾಮತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಆ ಸಮಯದಲ್ಲಿ ದುರ್ನಡತೆ...
ನಿರಂತರ ಮಳೆ ಹಿನ್ನೆಲೆ: ಕುಮಟಾದ ಮುರೂರು-ಮುಸಗುಪ್ಪ ಬಳಿ ಗುಡ್ಡ ಕುಸಿತ, ಸಂಚಾರ ಬಂದ್..!
Land Slide News: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಮಳೆಯಿಂದ ಕುಮಟಾ ತಾಲ್ಲೂಕೀನ ಮೂರೂರು- ಮುಸುಗುಪ್ಪ ಬಳಿ ಗುಡ್ಡ ಕುಸಿದಿದೆ. ಪರಿಣಾಮ ರಸ್ತೆ ಮೇಲೆ ಕಲ್ಲು ಬಂಡೆ ಮಣ್ಣು ಬಿದ್ದಿದೆ. ರಸ್ತೆ ಸಂಚಾರ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ಬೋಡಿ ಪರಿಶೀಲಿಸಿದ್ದು, ರಸ್ತೆಯಲ್ಲಿ ಬಿದ್ದಿರುವ ಕಲ್ಲು ಬಂಡೆ, ಮಣ್ಣು ತೆರವುಗೊಳಿಸಲು PWD ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ👉ಸ್ಕೂಟಿ ಹಾಗೂ ಬೈಕ್ನಡುವೆ ಮುಖಾಮುಕಿ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ..! ಜನರಿಗೆ ಪರ್ಯಾಯವಾಗಿ ಮೂರೂರು-ಕುಮಟಾ ಹೈವೆ ರಸ್ತೆಯಿಂದ ಹೋಗಲು ದಾರಿ ಇರುತ್ತದೆ ಮತ್ತು ಹರ್ಕಡೆ-ಬಳಕೂರು ರಸ್ತೆಯಿಂದ ವಾಹನಗಳಿಗೆ ಹೋಗಲು ದಾರಿ ಮಾಡಿ ಕೊಡಲಾಗಿದೆ.