Uttar Kannada Rain Damage:
ಕಾರವಾರ: ಉತ್ತರ ಕನ್ನಡದಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರೊ ಮಳೆ ಇನ್ನಿಲ್ಲದ ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಹಾನಿಗಳಿಗೂ ಕಾರಣವಾಗಿದೆ. ಅಂದಹಾಗೆ, ಇವತ್ತಿನವರೆಗೂ ಜಿಲ್ಲೆಯಲ್ಲಿ ಸುರಿದ ಮಳೆಯ ತಾಲೂಕಾವಾರು ಪ್ರಮಾಣ ಎಷ್ಟು..? ಹಾನಿಯ ವಿವರ ಏನು..? ಇಲ್ಲಿದೆ ಮಾಹಿತಿ.
ಮಳೆಯ ವಿವರ..!
ಅಂದಹಾಗೆ, ಜಿಲ್ಲೆಯಲ್ಲಿ ಮೇ 26 ಸೋಮವಾರ ಬೆಳಗ್ಗೆ 8.30 ರ ವರೆಗೆ, ಅಂಕೋಲಾದಲ್ಲಿ-17.6 ಮಿಮೀ, ಭಟ್ಕಳದಲ್ಲಿ- 17.6, ಹಳಿಯಾಳ-8.5 ಹೊನ್ನಾವರ -69.3, ಕಾರವಾರ -27, , ಕುಮಟಾ -13.2, ಮುಂಡಗೋಡ- 12, ಸಿದ್ದಾಪುರ- 39.2 , ಶಿರಸಿ -17.7 , ಸೂಪಾ- 14.9 ಯಲ್ಲಾಪುರ -12.9, ದಾಂಡೇಲಿಯಲ್ಲಿ- 14.1 ಮಿಲಿ ಮೀಟರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 21.7 ಮಿಮಿ ಮಳೆ ಸುರಿದಿದೆ.
ಹಾನಿಯ ವಿವರ..!
ಜಿಲ್ಲೆಯಲ್ಲಿ ಎಪ್ರಿಲ್ 2025 ನಿಂದ ಮೇ 26 ರ ಸಂಜೆ 5 ಗಂಟೆಯವರೆಗೆ ಮಳೆಯಿಂದಾಗಿ, 1 ಜೀವಹಾನಿ, 5 ಪಶು ಹಾನಿ, 4 ಮನೆಗಳಿಗೆ ಪೂರ್ಣಹಾನಿ, 132 ಮನೆಗಳಿಗೆ ಭಾಗಶ: ಸೇರಿದಂತೆ ಒಟ್ಟು 136 ಮನೆಗಳಿಗೆ ಹಾನಿಯಾಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾಡಳಿತ ಮಾಹಿತಿ ನೀಡಿದೆ.