ಮುಂಡಗೋಡ: ತಾಲೂಕಿನ ಇಂದೂರಿನ ಹೊರವಲಯದ ಚರ್ಚ ಬಳಿ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಲಾರಿ ಚಾಲಕ, ಚರ್ಚ ಬಳಿ ಇರೋ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿದ್ಯುತ್ ಸಂಚಾರ ಇದ್ದಾಗಲೇ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.. ಇನ್ನು ಸ್ಥಳಕ್ಕೆ ಮುಂಡಗೋಡ 112 ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಬೇಟಿ ನೀಡಿ, ಪರಿಶೀಲಿಸಿದ್ದಾರೆ. ಘಟನೆಯ ಕಾತರಕ್ಕೆ ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ತಕ್ಷಣವೇ ಕಡಿತಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ..
Top Stories
Police News:ರಾಜ್ಯದ ಪ್ರಭಾರ ಡಿಜಿ-ಐಜಿಪಿಯಾಗಿ ಡಾ.ಎಂ.ಎ. ಸಲೀಂ ನೇಮಕ..!
Naxalar Encounter News:ನಕ್ಸಲ್ ಕಮಾಂಡರ್ ಸೇರಿದಂತೆ 26 ಮಂದಿ ನಕ್ಸಲರನ್ನು ಎನ್ಕೌಂಟರಿನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು..!
ED Raid News:ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಮೇಲೆ ಇಡಿ ದಾಳಿ..!
Business News :2024ರಲ್ಲಿ ಸತ್ಯ ನಾಡೆಲ್ಲಾ, ಪಿಚೈ ಹಿಂದಿಕ್ಕಿ ದಾಖಲೆಯ 1,157 ಕೋಟಿ ರೂ. ಪಡೆದ ಭಾರತೀಯ ಮೂಲದ ಟೆಸ್ಲಾ ಕಾರ್ಯನಿರ್ವಾಹಕ ಅಧಿಕಾರಿ..!
Achievement News: ಕನ್ನಡದ ಲೇಖಕಿ ಬಾನು ಮುಷ್ತಾಕ್ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಘೋಷಣೆ..!
Police Death News:ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿ ಬಿದ್ದ ಬಸ್ ; ಪೊಲೀಸ್ ಅಧಿಕಾರಿ ಸಾವು..!
ಛತ್ರಿ ಹಿಡಿದು ಸ್ಕೂಟಿ ಚಲಾಯಿಸುತ್ತಿದ್ದ ವಿದ್ಯಾರ್ಥಿ ಲಾರಿಗೆ ಡಿಕ್ಕಿ, ದುರ್ಮರಣ
Achievement News:ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ..!
Achievement News:ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ..!
Road Problem News:ಕಳಪೆ ರಸ್ತೆಗಳಿಂದ ‘ಯಾತನೆʼ ; ಬಿಬಿಎಂಪಿಗೆ ಬೆಂಗಳೂರು ವ್ಯಕ್ತಿಯಿಂದ ನೋಟಿಸ್ : 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ..!
ಜಿಲ್ಲೆಯಲ್ಲಿ ಕುಡಿಯುವ ನೀರು ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಿ : ZP Ceo ಈಶ್ವರ ಕಾಂದೂ
ವಿಕಸಿತ ಭಾರತದ ಮೂಲಕ ದೇಶದ ಅಭಿವೃದ್ದಿ: ಕಾರವಾರದಲ್ಲಿ ಕೇಂದ್ರ ಸಚಿವ ಶೇಖಾವತ್
ಚಿನ್ನದ ಬೆಲೆ ಒಂದೇ ದಿನ ₹2400 ಏರಿಕೆ, ಬೆಳ್ಳಿ ₹3000 ಜಿಗಿತ; ಆಭರಣ ಖರೀದಿದಾರರಿಗೆ ಬಿಗ್ ಶಾಕ್..!
ಮುಂಡಗೋಡ-ಶಿರಸಿ ರಸ್ತೆಯ ನಂದಿಪುರ ಬಳಿ, KSRTC ಬಸ್, ಖಾಸಗಿ ಬಸ್ ನಡುವೆ ಮುಖಾಮುಕಿ ಡಿಕ್ಕಿ, ಕೆಲವ್ರಿಗೆ ಗಾಯ..!
ಭಾರೀ ಮಳೆ: ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು: ಸಂಚಾರಕ್ಕೆ ಅಡಚಣೆ..!
ಉತ್ತರ ಕನ್ನಡ ಸೇರಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ, 4 ಜಿಲ್ಲೆಗಳಿಗೆ ರೆಡ್ ಅಲರ್ಟ್, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಣೆ..!
Car Fire News: ತಾರಿಹಾಳ ಟೋಲ್ ಬಳಿ ಧಗಧಗಿಸಿದ ಕಾರು; ಪ್ರಾಣಾಪಾಯದಿಂದ ಪಾರಾದ ಕುಟುಂಬ..!
ಮಳೆಗಾಲದ ವಿಪತ್ತು ಎದುರಿಸಲು ಸಜ್ಜುಗೊಂಡ ಹೆಸ್ಕಾಂ..!
ಹೋರಿ ಹಬ್ಬದ ಹುಚ್ಚು, ಪ್ರಾಣಕ್ಕಿಂತ ಹೆಚ್ಚು..!
ಇದು ಅಕ್ಷರಶಃ ಉತ್ತರ ಕರ್ನಾಟಕ ಮಂದಿಯ ರಣರೋಚಕ ಜವಾರಿ ಕ್ರಿಡೆ.. ಈ ಕ್ರಿಡೆಯಲ್ಲಿ ಲಕ್ಷ ಲಕ್ಷ ಆಭಿಮಾನಿಗಳ ಕಲರವ ಕೇಳತ್ತೆ.. ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಗಿ ಹುಚ್ಚೆದ್ದು ಕುಣಿಯೋ ಲಕ್ಷಾಂತರ ಅಭಿಮಾನಿಗಳ ಕೇಕೆ ಚಪ್ಪಾಳೆ ಇರತ್ತೆ.. ಅಲ್ಲಿ ಯಾವ ಬಿಂಕ ಬಿಗುಮಾನಗಳೂ ಇರಲ್ಲ. ಅಲ್ಲಿರೋದು ಅಪ್ಪಟ ಅಭಿಮಾನ ಮಾತ್ರ.. ಅಂದಹಾಗೆ ಅದು ಯಾವ ಕ್ರೀಡೆ ಅಂತಿರಾ.. ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.. ಹಬ್ಬದ ಹುಚ್ಚು..! ಹೌದು ಉತ್ತರ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹುಚ್ಚೇದ್ದು ಕುಣಿಸೋ ಕ್ರೀಡೆ ಅಂದ್ರೆ ಅದು ಹೋರಿ ಹಬ್ಬದ ಕ್ರೀಡೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಹೋರಿ ಹಬ್ಬದ ಹುಚ್ಚು ಯಾವ ಮಟ್ಟಿಗೆ ಇದೆ ಅಂದ್ರೆ ಒಂದು ಹಬ್ಬಕ್ಕೆ ಲಕ್ಷಾಂತರ ಅಭಿಮಾನಿಗಳು ತಾವು ಆರಾಧಿಸುವ ಹೋರಿಗಳನ್ನು ನೋಡಲು ಸಾಗರದಂತೆ ಹರಿದು ಬರ್ತಾರೆ.. ಹೇಗೆ ನಡಿಯತ್ತೆ ಸ್ಪರ್ಧೆ..? ಯಸ್, ಈ ಹೋರಿ ಹಬ್ಬದಲ್ಲಿ ಆಯೋಜಕರು 350 ಹೋರಿಗಳಿಗೆ ಮಾತ್ರ ಅವಕಾಶ ನೀಡುತ್ತಾರೆ.. ಹಾಗೆ ಆಯೋಜಿಸಿದ್ದ ಹಬ್ಬದಲ್ಲಿ 4 ಬೈಕ್ ಬಂಪರ್ ಬಹುಮಾನವಾಗಿ...
ಹಾವು ಕೊರಳಿಗೆ ಸುತ್ತಿಕೊಂಡು ಸೈಕಲ್ ಮೇಲೆ ತಿರುಗಾಡಿದ ಅಜ್ಜ..!
ಬೆಳಗಾವಿ: ಹಾವು ಅಂದ್ರೆ ಹರನೇ ನಡುಗಿದ್ನಂತೆ.. ಆದ್ರೆ ಇಲ್ಲೊಬ್ಬ ಅಜ್ಜ ತನ್ನ ಮನೆಲಿ ಬಂದಿದ್ದ ಹಾವನ್ನೇ ಶಿವನ ಅಪರಾವತಾರದಂತೆ ಹಿಡಿದು ಕೊರಳಿಗೆ ಸುತ್ತಿಕೊಂಡು ಸೈಕಲ್ ಹತ್ತಿ ತಿರುಗಾಡಿದ್ದಾನೆ. ಹೌದು, ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ನಡೆದಿದೆ. ಹಂಗರಕಾ ಗ್ರಾಮದ ಅಜ್ಜನೊಬ್ಬ ತನ್ನ ಮನೆಯಲ್ಲಿ ಬಂದಿದ್ದ ಹಾವುವಹಿಡಿದು ಕೊರಳಿಗೆ ಸುತ್ತಿಕೊಂಡಿದ್ದಾನೆ. ಹಾಗೆ ಕೊರಳಲ್ಲಿ ಅಉತ್ತಿಕೊಂಡು ಸೈಕಲ್ ಏರಿ ತನ್ನ ಗದ್ದೆಯ ಕಡೆ ನಡೆದಿದ್ದಾನೆ. ಹಾಗೆ ಹಾವು ಸುತ್ತಿಕೊಂಡು ಅಜ್ಜ ಬರ್ತಿದ್ದಂತೆ ಗ್ರಾಮದ ಮಂದಿಯೆಲ್ಲ ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಆದ್ರೆ ಈ ಅಜ್ಜ ಮಾತ್ರ ಯಾವುದೇ ಭಯ ಇಲ್ಲದೇ, ಹಾವನ್ನು ಸುತ್ತಿಕೊಂಡು ಗದ್ದೆಯಲ್ಲಿ ಬಿಟ್ಟು ಬಂದಿದ್ದಾನೆ. ಹಾವನ್ನು ಸಾಯಿಸದೇ ರಕ್ಷಣೆ ಮಾಡಿದ್ದಾನೆ.. ಹೇಗಿದೆ ಗೊತ್ತಾ ಹಾವು ಸುತ್ತಿಕೊಂಡು ಸೈಕಲ್ ಏರಿದ ಅಜ್ಜನ ಹಕೀಕತ್ತು..? ವಿಡಿಯೊ ಇದೆ. ನೋಡಲು ಇಲ್ಲಿ ಕ್ಲಿಕ್ ಮಾಡಿ..!! ಹಾವು ಕಂಡ ಕೂಡಲೇ ಕೊಲ್ಲಲು ಓಡಾಡುವ ಜನರ ಮದ್ಯೆ ಈ ಅಜ್ಜ ಉರಗ ಪ್ರೇಮ ತೋರಿಸಿದ್ದು ಶ್ಲಾಘನೀಯವಾಗಿದೆ..
ಚುಡಾಯಿಸಿದವನಿಗೆ ನಡುರಸ್ತೆಯಲ್ಲಿಯೇ ಧರ್ಮದೇಟು..!
ಬೆಳಗಾವಿ: ತನ್ನನ್ನು ಚುಡಾಯಿಸಿ, ಹಿಂಬಾಲಿಸುತ್ತಿದ್ದ ಕಾಮುಕನಿಗೆ ಮಹಿಳೆ ಚಪ್ಪಲಿ ಏಟು ನೀಡಿರುವ ಘಟನೆ ಬೆಳಗಾವಿ ಎಸ್ಪಿ ಕಚೇರಿ ಮುಂದಿನ ರಸ್ತೆಯಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಮರಳುವ ವೇಳೆಯಲ್ಲಿ ಕೆಲ ತಿಂಗಳಿಂದ ಹಿಂಬಾಲಿಸುತ್ತಿದ್ದನು. ಜತೆಗೆ ಸಿಳ್ಳೆ ಹೊಡೆಯುವ ಮೂಲಕ ಚುಡಾಯಿಸುತ್ತಿದ್ದನು. ಕೆಲವು ಬಾರಿ ಮನೆಯವರೆಗೂ ಸಹ ಬಂದು ಚುಡಾಯಿಸುತ್ತಿದ್ದು, ಹಲವು ಸಾರಿ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ. ಆದರೂ ಸಹ ತನ್ನನ್ನು ಹಿಂಬಾಲಿಸುವುದು ನಿಲ್ಲಿಸಿಲ್ಲ ಎಂದು ಮಹಿಳೆ ಆರೋಪಿಸಿ, ಚಪ್ಪಲಿ ಏಟು ನೀಡಿದ್ದಾಳೆ. ಚುಡಾಯಿಸಿದವನಿಗೆ ಆ ಮಹಿಳೆ ಬಿಸಿ ಬಿಸಿ ಕಜ್ಜಾಯ ಹೇಗೆ ಕೊಟ್ಲು ಗೊತ್ತಾ..! ವಿಡಿಯೊ ನೋಡಬೇಕು ಅಂದ್ರೆ ಇಲ್ಲಿ ಕ್ಲಿಕ್ ಮಾಡಿ..!! ಮಹಿಳೆ ಹಾಗೂ ಆಕೆಯ ಪತಿ ಕಾಮುಕನಿಗೆ ನಡುರಸ್ತೆಯಲ್ಲೇ ಚಪ್ಪಲಿ ಸೇವೆ ಮಾಡಿದ್ದಾರೆ. ಬಳಿಕ ರಸ್ತೆ ಸವಾರರು ಸಹ ಮಹಿಳೆ ಆರೋಪಿಸಿರುವುದನ್ನು ಕಂಡು ವ್ಯಕ್ತಿಗೆ ಥಳಿಸಿದ್ದರು. ಯಾವಾಗ ಸಾರ್ವಜನಿಕರು ಧರ್ಮದೇಟು ನೀಡಲು ಶುರುವಿಟ್ಟರೋ ಕಾಮುಕ ಅಲ್ಲಿಂದ ಕಾಲಿಕ್ಕಿತ್ತಿದ್ದಾನೆ.
ಉಗ್ರರ ಜೊತೆಗಿನ ಕಾಳಗದಲ್ಲಿ ಮಡಿದ ಉಕ್ಕಲಿಯ ವೀರಸೇನಾನಿ..! ಯೋಧನ ಹುಟ್ಟೂರಲ್ಲೀಗ ಬರೀ ಕಂಬನಿ, ಕಹಾನಿ..!!
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧನೊಬ್ಬ ಹುತಾತ್ಮರಾಗಿದ್ದಾರೆ. ಹೀಗಾಗಿ ಉಕ್ಕಲಿ ಗ್ರಾಮದಲ್ಲಿ ಈಗ ದುಃಖ ಮಡುಗಟ್ಟಿದೆ.. ಹುತಾತ್ಮ ಯೋಧನ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.. ಊರಿಗೇ ಊರೇ ಕಣ್ಣೀರಲ್ಲಿ.. ನಿಜ, ಉಕ್ಕಲಿ ಗ್ರಾಮದ ಜನರ ಹೃದಯ ಅಕ್ಷರಶಃ ಭಾರವಾಗಿದೆ. ಕಣ್ಣೇದುರೇ ಆಡಿ ಬೆಳೆದಿದ್ದ ಹುಡುಗ ದೇಶಸೇವೆಗಾಗಿ ಪ್ರಾಣವನ್ನೆ ಬಲಿ ಕೊಟ್ಟಿದ್ದಾನೆ. ಒಂದು ಕಡೆ ದೇಶಕ್ಕಾಗಿ ಹುತಾತ್ಮನಾದ ಯೋಧನ ಹೆಮ್ಮೆಯ ಆನಂದ ಭಾಷ್ಪ ಸುರಿಯುತ್ತಿದ್ದರೆ ಮತ್ತೊಂದೆಡೆ, ಆ ಯೋಧನ ಪುಟ್ಟ ಪುಟ್ಟ ಎರಡು ಕಂದಮ್ಮಗಳ ಮುಗ್ದ ಮುಖ ನೋಡಿ ಕಣ್ಣೀರು ತನ್ನಿಂದ ತಾನೇ ಹರಿಯುತ್ತಿದೆ. ಹೌದು, ಉಕ್ಕಲಿ ಗ್ರಾಮದ ಮೂವತ್ತೈದು ವರ್ಷ ವಯಸ್ಸಿನ ಕಾಶಿರಾಯ ಶಂಕ್ರಪ್ಪ ಬೊಮ್ಮನಳ್ಳಿ ಎಂಬುವ ವೀರಯೋಧ ಹುತಾತ್ಮನಾಗಿದ್ದಾನೆ ಹೇಗಾಯ್ತು..? ಜುಲೈ 1 ನೇ ತಾರೀಖಿನಂದು ರಾತ್ರಿ ಕರ್ತವ್ಯದಲ್ಲಿದ್ದ ವೇಳೆ, ಭಯೋತ್ಪಾದಕರೊಂದಿಗೆ ಗುಂಡಿನ...
ಇದು ಮುಂಡಗೋಡ ತಾಲೂಕಿನ ಇಂದಿನ ಕೊರೋನಾ ರಿಪೋರ್ಟ್..!
ಮುಂಡಗೋಡ: ತಾಲೂಕಿನಲ್ಲಿ ಇಂದು 1 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ತಾಲೂಕಿನಲ್ಲಿ ಒಟ್ಟೂ 23 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಯಾವುದೇ ಸೋಂಕಿತರು ಗುಣಮುಖರಾಗಿಲ್ಲ . ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲೂ ಯಾವುದೇ ಸೋಂಕಿತರು ದಾಖಲಾಗಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ಓಣಿಕೇರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ನೇಣಿಗೆ ಶರಣು..!
ಮುಂಡಗೋಡ;ತಾಲೂಕಿನ ಓಣಿಕೇರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ನೇಣಿಗೆ ಶರಣಾಗಿದ್ದಾನೆ. 38 ವರ್ಷದ ಗಿರೀಶ್ ಕೃಷ್ಣಮೂರ್ತಿ ಅರ್ಕಸಾಲಿ ಎಂಬುವ ಯುವಕನೇ ನೇಣಿಗೆ ಶರಣಾದವನಾಗಿದ್ದು, ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ಎಷ್ಟೇ ಚಿಕಿತ್ಸೆ ನೀಡಿದ್ರೂ ಗುಣಮುಖ ಆಗಿರಲಿಲ್ಲ. ಹೀಗಾಗಿ ಅದನ್ನೇ ಮನಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ ಅಂತಾ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಮುಂದೆ ವೀಕೆಂಡ್ ಕರ್ಫ್ಯೂ ಇರಲ್ಲ: ದೇವಸ್ಥಾನ, ಬಾರ್, ಮಾಲ್ ಓಪನ್..!
ಬೆಂಗಳೂರು: ಸೋಮವಾರ 5 ನೇ ತಾರೀಖಿನಿಂದ ದೇವಸ್ಥಾನ, ಮಾಲ್, ಬಾರ್ ಓಪನ್ ಆಗತ್ತೆ. ಇನ್ಮುಂದೆ ವೀಕೆಂಡ್ ಕರ್ಫ್ಯೂ ಇರಲ್ಲ ಅಂತಾ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇಂದು ಅನಲಾಕ್ ಸಂಬಂಧ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗಿದ್ದು, ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಸಾಪುರದಲ್ಲಿ ಸಾಲಬಾಧೆಯಿಂದ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ..!
ಮುಂಡಗೋಡ: ತಾಲೂಕಿನ ಬಸಾಪುರ ಗ್ರಾಮದಲ್ಲಿ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಗಂಗಾರಾಮ್ ಸಿಂಗ್ ಶಂಕರಸಿಂಗ್ ರಜಪೂತ (55) ಎಂಬುವವರೇ ಆತ್ಮಹತ್ಯೆಗೆ ಶರಣಾದ ರೈತನಾಗಿದ್ದು, ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ತಿಳಿದು ಬಂದಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ಮೇಲೆ ಬಂದಿರೋ ಆರೋಪಗಳೇಲ್ಲ ಸುಳ್ಳು, ಸುಳ್ಳು, ಸುಳ್ಳು..! ಕಬನೂರು ಗ್ರಾಪಂ ಅಧ್ಯಕ್ಷರ ಸ್ಪಷ್ಟನೆ..!!
ಶಿಗ್ಗಾವಿ:ತಾಲೂಕಿನ ಕಬನೂರ ಪಂಚಾಯತಿಯಲ್ಲಿ ಅಧ್ಯಕ್ಷರು ಮತ್ತು ಕೆಲ ಸದಸ್ಯರ ಸರ್ವಾಧಿಕಾರಿ ಧೋರಣೆ ಆರೋಪಕ್ಕೆ ಸಂಬಂಧಿಸಿದಂತೆ, ಆರೋಪಕ್ಕೆ ಒಳಗಾಗಿದ್ದ ಅಧ್ಯಕ್ಷ ದೇವೇಂದ್ರಪ್ಪ ಸೊರಟೂರ ಅವರು ಬೆಂಬಲಿಗ 6 ಜನ ಸದಸ್ಯರೊಡನೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲೆ ಬಂದಿದ್ದ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದು ಆರೋಪ ಮಾಡಿರುವ ಸದಸ್ಯರ ಒಪ್ಪಿಗೆಯಿಂದಲೇ ಎಲ್ಲವೂ ನಡೆದಿದೆ ಎಂದು ದಾಖಲೆ ಸಮೇತ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಅಧ್ಯಕ್ಷರ ಆಯ್ಕೆಯಲ್ಲಿ ಅಸಮಾಧಾನ ಗೊಂಡಿರುವ ಸದಸ್ಯರು ಹಾಗೂ ಅದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೋಟೆಪ್ಪ ಕಮ್ಮಾರ ಅವರು 3-4 ಸದಸ್ಯರನ್ನು ಗುಂಪು ಕಟ್ಟಿಕೊಂಡು ಗ್ರಾಮ ಪಂಚಾಯತಿಯ ಅಭಿವೃದ್ದಿಗೆ ಯೋಚಿಸಬೇಕಾದ ಅವರು ಕೇವಲ ಅಧ್ಯಕ್ಷ ಸ್ಥಾನ ದಕ್ಕಲಿಲ್ಲ ಎಂಬ ಹತಾಶೆ ಭಾವನೆಯಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಅಲ್ಲದೇ ಅಭಿವೃದ್ದಿ ಕಾರ್ಯಗಳಲ್ಲಿ ಪ್ರತಿಯೊಂದರಲ್ಲೂ ಸಹಕಾರ ನೀಡಿ ಸಭೆಗಳಲ್ಲಿ ಮಾಹಿತಿ ನೀಡಿದರೂ ವಯಕ್ತಿಕ ವೈಶಮ್ಯದಿಂದ ಆರೋಪ ಮಾಡ್ತಿದಾರೆ. ಜೊತೆಗೆ ಪಂಚಾಯತಿ ಆಡಳಿತದ ಮೇಲೆ ಹಿಡಿತ ಸಾಧಿಸುವ ಮತ್ತು ಹಲವಾರು ಕಾರಣಗಳಿಂದ ಕಮ್ಮಾರ ಅವರ ಕೆಲ...