ಬೆಳಗಾವಿ: ತನ್ನನ್ನು ಚುಡಾಯಿಸಿ, ಹಿಂಬಾಲಿಸುತ್ತಿದ್ದ ಕಾಮುಕನಿಗೆ ಮಹಿಳೆ ಚಪ್ಪಲಿ ಏಟು ನೀಡಿರುವ ಘಟನೆ ಬೆಳಗಾವಿ ಎಸ್ಪಿ ಕಚೇರಿ ಮುಂದಿನ ರಸ್ತೆಯಲ್ಲಿ ನಡೆದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಮರಳುವ ವೇಳೆಯಲ್ಲಿ ಕೆಲ ತಿಂಗಳಿಂದ ಹಿಂಬಾಲಿಸುತ್ತಿದ್ದನು. ಜತೆಗೆ ಸಿಳ್ಳೆ ಹೊಡೆಯುವ ಮೂಲಕ ಚುಡಾಯಿಸುತ್ತಿದ್ದನು. ಕೆಲವು ಬಾರಿ ಮನೆಯವರೆಗೂ ಸಹ ಬಂದು ಚುಡಾಯಿಸುತ್ತಿದ್ದು, ಹಲವು ಸಾರಿ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ. ಆದರೂ ಸಹ ತನ್ನನ್ನು ಹಿಂಬಾಲಿಸುವುದು ನಿಲ್ಲಿಸಿಲ್ಲ ಎಂದು ಮಹಿಳೆ ಆರೋಪಿಸಿ, ಚಪ್ಪಲಿ ಏಟು ನೀಡಿದ್ದಾಳೆ.
ಮಹಿಳೆ ಹಾಗೂ ಆಕೆಯ ಪತಿ ಕಾಮುಕನಿಗೆ ನಡುರಸ್ತೆಯಲ್ಲೇ ಚಪ್ಪಲಿ ಸೇವೆ ಮಾಡಿದ್ದಾರೆ. ಬಳಿಕ ರಸ್ತೆ ಸವಾರರು ಸಹ ಮಹಿಳೆ ಆರೋಪಿಸಿರುವುದನ್ನು ಕಂಡು ವ್ಯಕ್ತಿಗೆ ಥಳಿಸಿದ್ದರು. ಯಾವಾಗ ಸಾರ್ವಜನಿಕರು ಧರ್ಮದೇಟು ನೀಡಲು ಶುರುವಿಟ್ಟರೋ ಕಾಮುಕ ಅಲ್ಲಿಂದ ಕಾಲಿಕ್ಕಿತ್ತಿದ್ದಾನೆ.