ಶಿಗ್ಗಾವಿ:ತಾಲೂಕಿನ ಕಬನೂರ ಪಂಚಾಯತಿಯಲ್ಲಿ ಅಧ್ಯಕ್ಷರು ಮತ್ತು ಕೆಲ ಸದಸ್ಯರ ಸರ್ವಾಧಿಕಾರಿ ಧೋರಣೆ ಆರೋಪಕ್ಕೆ ಸಂಬಂಧಿಸಿದಂತೆ, ಆರೋಪಕ್ಕೆ ಒಳಗಾಗಿದ್ದ ಅಧ್ಯಕ್ಷ ದೇವೇಂದ್ರಪ್ಪ ಸೊರಟೂರ ಅವರು ಬೆಂಬಲಿಗ 6 ಜನ ಸದಸ್ಯರೊಡನೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲೆ ಬಂದಿದ್ದ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದು ಆರೋಪ ಮಾಡಿರುವ ಸದಸ್ಯರ ಒಪ್ಪಿಗೆಯಿಂದಲೇ ಎಲ್ಲವೂ ನಡೆದಿದೆ ಎಂದು ದಾಖಲೆ ಸಮೇತ ಸ್ಪಷ್ಟೀಕರಣ ನೀಡಿದ್ದಾರೆ.
ಕಳೆದ ಅಧ್ಯಕ್ಷರ ಆಯ್ಕೆಯಲ್ಲಿ ಅಸಮಾಧಾನ ಗೊಂಡಿರುವ ಸದಸ್ಯರು ಹಾಗೂ ಅದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೋಟೆಪ್ಪ ಕಮ್ಮಾರ ಅವರು 3-4 ಸದಸ್ಯರನ್ನು ಗುಂಪು ಕಟ್ಟಿಕೊಂಡು ಗ್ರಾಮ ಪಂಚಾಯತಿಯ ಅಭಿವೃದ್ದಿಗೆ ಯೋಚಿಸಬೇಕಾದ ಅವರು ಕೇವಲ ಅಧ್ಯಕ್ಷ ಸ್ಥಾನ ದಕ್ಕಲಿಲ್ಲ ಎಂಬ ಹತಾಶೆ ಭಾವನೆಯಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಅಲ್ಲದೇ ಅಭಿವೃದ್ದಿ ಕಾರ್ಯಗಳಲ್ಲಿ ಪ್ರತಿಯೊಂದರಲ್ಲೂ ಸಹಕಾರ ನೀಡಿ ಸಭೆಗಳಲ್ಲಿ ಮಾಹಿತಿ ನೀಡಿದರೂ ವಯಕ್ತಿಕ ವೈಶಮ್ಯದಿಂದ ಆರೋಪ ಮಾಡ್ತಿದಾರೆ.
ಜೊತೆಗೆ ಪಂಚಾಯತಿ ಆಡಳಿತದ ಮೇಲೆ ಹಿಡಿತ ಸಾಧಿಸುವ ಮತ್ತು ಹಲವಾರು ಕಾರಣಗಳಿಂದ ಕಮ್ಮಾರ ಅವರ ಕೆಲ ಸದಸ್ಯರು ಬಾಹ್ಯ ಕೆಲ ರಾಜಕಾರಿಣಿಗಳ ಕುಮ್ಮಕ್ಕಿನಿಂದ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ತಾಲೂಕಾ ಪಂಚಾಯತನ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರುಕಾಣಿಯವರು ಬೇಟಿ ನೀಡಿ ಮಾಹಿತಿ ಪಡೆದಿದ್ದು ಅವರೊಂದಿಗೆ ಆರೋಪ ಮಾಡಿರುವ ಸದಸ್ಯರು ಸಭೆಯಲ್ಲಿ ಚರ್ಚಿತ ವಿಷಯಗಳಿಗೆ ಅನುಮೋದನೆ ಜೊತೆಗೆ ಠರಾವುಗಳಿಗೆ ಸಹಿ ಮಾಡಿ ನಂತರ ಈ ರೀತಿಯ ಆರೋಪ ಮಾಡುವ ಕುರಿತು ಮಾಹಿತಿ ಪಡೆದಿದ್ದಾರೆ ಎಂದರು.
ಒಟ್ಟಾರೆ ಆರೋಪಗಳೆಲ್ಲವೂ ಸುಳ್ಳಾಗಿದ್ದು ಆರೋಪ ಮಾಡಿರುವ ವಿಷಯಗಳಾದ 15 ನೇ ಹಣಕಾಸಿನ ಯೋಜನೆಯಲ್ಲಿ ಎಸ್,ಟಿ ಸಮುದಾಯದವರಿಗೆ ಅನ್ಯಾಯ, ಅಭಿವೃದ್ದಿ ವಿಷಯದಲ್ಲಿ ರಾಜಕಾರಣ, ಸದಸ್ಯರ ಕಡೆಗಣನೆ, ಜೊತೆಗೆ ಸದಸ್ಯರ ಮಧ್ಯ ಸಾಮರಸ್ಯದ ಕೊರತೆ, ಗ್ರಾಪಂ ಅಧ್ಯಕ್ಷರಿಂದ ಜಾತಿ ನಿಂದನೆ ಮಾತುಗಳು, ಸದಸ್ಯ ಪತ್ನಿಯ ಮಾತುಗಳಿಗೆ ವಾಟರ್ ಮೇನ್ ಗಂಡನಿಗೆ ಮಾನಸಿಕ ಕಿರುಕುಳ, ಲೆಕ್ಕ ಕೇಳಿದರೆ ಜಗಳಕ್ಕೆ ಬರುವ ಅಧಿಕಾರಿಗಳು, 6 ಸದಸ್ಯರು ಸೇರಿ ಅಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ, ಎನ್.ಆರ್.ಇ.ಜಿ ಕಾಮಗಾರಿಯಲ್ಲಿ ಭಾರಿ ಹಗರಣ, ಸಭೆಯಲ್ಲಿ ಚರ್ಚಿಸುವ ವಿಷಯಗಳೇ ಬೇರೆ ಆಗುವ ಕಾಮಗಾರಿಗಳೇ ಬೇರೆ, ಸದಸ್ಯರ ಗಮನಕ್ಕೆ ತರದೆ ಬಿಲ್ ಪಾಸು ಮಾಡುವುದು, ಗ್ರಾಪಂ ವ್ಯಾಪ್ತಿ ಮೀರಿ ಕಾಮಗಾರಿಗಳನ್ನು ಮಾಡುತ್ತಿದ್ದಾರೆ ಅಲ್ಲದೇ ಅಧ್ಯಕ್ಷರು ಮತ್ತು ಅಧಿಕಾರಿಗಳು ಸಭೆ ನಡೆದಾಗ ಸಭೆಯ ಮದ್ಯಯೇ ಎದ್ದು ಹೋಗುವುದು ಸೇರಿದಂತೆ ಇತರೇ ಆರೋಪಗಳನ್ನ ಕಬನೂರ ಪಂಚಾಯತಿ ಕೆಲ ಸದಸ್ಯರು ಗಂಭೀರ ಆರೋಪಗಳನ್ನ ಸಂಪೂರ್ಣವಾಗಿ ಅಲ್ಲಗಳೆದು ದಾಖಲಾತಿ ಸಮೇತ ಸ್ಪಷ್ಟೀಕರ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಬಸವರಾಜ ಗುಂಡಣ್ಣವರ, ಪ್ರೇಮವ್ವ ನೀಲಗುರಿ, ಶೇಖರಗೌಡ ಪಾಟೀಲ, ರೇಷ್ಮಾ ಬೇಗಂ ನಧಾಫ್, ಬಸವರಾಜ ಬೆಟದೂರ ಹಾಗೂ ಅಭಿವೃದ್ದಿ ಬಯಸುವ ಕೆಲ ಗ್ರಾಮಸ್ಥರು ಇದ್ದರು.
ಹಾಗಾದ್ರೆ ಕಬನೂರು ಗ್ರಾಪಂ ಅಧ್ಯಕ್ಷರ ಸ್ಪಷ್ಟನೆ ಏನು..? ಇಲ್ಲಿದೆ ನೋಡಿ.. ಇಲ್ಲಿ ಕ್ಲಿಕ್ ಮಾಡಿ..