ಬೆಳ್ಳಂ ಬೆಳ್ಳಿಗ್ಗೆ ಹುಬ್ಬಳ್ಳಿಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ, ಕಾರು-ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ 5 ಜನ ಸ್ಥಳದಲ್ಲೇ ಕಂಡಿದ್ದಾರೆ. ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆಯ ಸಾಗರದವರು ಎನ್ನಲಾಗಿದೆ. ಶ್ವೇತ (29), ಅಂಜಲಿ(26), ಸಂದೀಪ್ (26) ವಿಠಲ್ (55) ಶಶಿಕಲಾ (40) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವ್ರು, ಹೋಟೆಲ್ ವ್ಯಾಪಾರಕ್ಕೆಂದು ಬಾಗಲಕೋಟೆಗೆ ಹೋಗಿದ್ದರು ಎನ್ನಲಾಗಿದೆ. ವಿಜಯಪುರ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದಾಗ, ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಬಸಕ್ಕೆ ಕಾರಿನಲ್ಲಿದ್ದ 5 ಜನ ಸ್ಥಳದಲ್ಲೇ ಸಾವು ಸಾವನಪ್ಪಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Top Stories
ಮೇ.17 ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಜನಸ್ಪಂಧನ ಕಾರ್ಯಕ್ರಮ: ಕಾರ್ಯಕ್ರಮದ ಪ್ರಯೋಜನ ಪಡೆಯಿರಿ- ಜಿಲ್ಲಾಧಿಕಾರಿ
ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಒದಗಿಸಿ- ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..!
ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ..!
ಮುಂಗಾರಿನ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಸೂಚನೆ ಪಾಲಿಸಿ : ಸಿಡಿಲಿನಿಂದ ರಕ್ಷಿಸಿಕೊಳ್ಳಿ..!
ಮಕ್ಕಳ ಬೌದ್ಧಿಕ ಮತ್ತು ಕ್ರೀಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ..!
ವೈದ್ಯಕೀಯ ಸೇವೆಗೆ ಸದಾ ಸನ್ನದ್ದವಾಗಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ..!
CBSE, SSLC ಫಲಿತಾಂಶ ಪ್ರಕಟ: ಮುಂಡಗೋಡ ಲೊಯೊಲಾ ಕೇಂದ್ರೀಯ ವಿದ್ಯಾಲಯ 100% ಫಲಿತಾಂಶದ ಸಾಧನೆ..! ಮಾನಸಿ ಸಿದ್ದಿ ಪ್ರಥಮ..!
ಕೊಲ್ಕೊತ್ತಾದ ಮೇಲೆ ದಾಳಿ ಮಾಡಿ ವಶ ಪಡಿಸಿಕೊಳ್ತಿವಿ, ಆತ್ಮಹತ್ಯಾ ಬಾಂಬ್, ತಾಲಿಬಾನಿ ಶೈಲಿಯ ದಾಳಿ ಮಾಡ್ತಿವಿ ಅಂತ ಅಂದವನು ಯಾರೀತ..?
ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು ‘ಸಹಾಯ’ ಮಾಡಿದ್ದೇವೆ..! ಕದನ ವಿರಾಮಕ್ಕೆ ನಾವೇ ಕಾರಣ ಅಂದ “ದೊಡ್ಡಣ್ಣ”
ಪ್ರಧಾನಿ ಮೋದಿ ಭಾಷಣ ಮುಗಿಸಿದ ಕೆಲವೇ ಹೊತ್ತಲ್ಲಿ ಜಲಂಧರ್ ಬಳಿ ಕಣ್ಗಾವಲು ಡ್ರೋನ್ ಹೊಡೆದುರುಳಿಸಿದ ಸೇನೆ ; ವಿದ್ಯುತ್ ಸ್ಥಗಿತ
ಭಾರತದ ವಾಯುದಾಳಿಗೆ ನಡುಗಿದ ನೂರ್ ಖಾನ್, ವಾಯುನೆಲೆ ಮೇಲಿನ ದಾಳಿ ನಂತರ ಬಂಕರ್ ನಲ್ಲಿ ಅಡಗಿದ ಪಾಕ್ ಸೇನಾ ಮುಖ್ಯಸ್ಥ
ಬೆಳಗಾವಿಯ ಸಂತಿ ಬಸ್ತವಾಡದ ಮಸೀದಿಯಲ್ಲಿನ ಕುರಾನ್ ಸುಟ್ಟು ಹಾಕಿದ ಕಿಡಿಗೇಡಿಗಳು, ಪ್ರತಿಭಟನೆ..!
ಕ್ಷುಲಕ ಕಾರಣಕ್ಕೆ ಬಾಲಕರ ಜಗಳ, ಕೊಲೆಯಲ್ಲಿ ಅಂತ್ಯ.. 9ನೇ ತರಗತಿ ಬಾಲಕನಿಗೆ ಚಾಕು ಇರಿದ 6ನೇ ತರಗತಿ ಬಾಲಕ..!
ಆಪರೇಶನ್ ಸಿಂಧೂರ | ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನ, ಚೀನಾ ನಿರ್ಮಿತ ಏರ್ ಡಿಫೆನ್ಸ್ ಧ್ವಂಸ : ಸೇನೆಯಿಂದ ವೀಡಿಯೊ ಬಿಡುಗಡೆ..!
ಕಾರವಾರದಲ್ಲಿ ವೈಮಾನಿಕ ದಾಳಿ, ಸಾವಿರಾರು ಮಂದಿಯ ರಕ್ಷಣೆ..! ಬಾಂಬ್ ದಾಳಿ, 37 ಜನ ಬಚಾವ್..!!
ತೀವ್ರ ಅಪೌಷ್ಠಿಕತೆಯಿಂದ ಕೂಡಿದ ಮಕ್ಕಳನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಿ : ಜಿಲ್ಲಾಧಿಕಾರಿ
ಪ್ರಸಕ್ತ ವರ್ಷದ “ಮಾನ್ಸೂನ್” ನಿಗದಿತ ಸಮಯಕ್ಕಿಂತಲೂ ಮುಂಚೇಯೇ ಆಗಮನ ಸಾಧ್ಯತೆ..!
ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು ಸಹಿತ ಗಾಳಿ ಮಳೆ ; ಮುನ್ಸೂಚನೆ
ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳೇ ಯೋಧರು : ಉಪ ರಾಷ್ಟ್ರಪತಿ ಜಗದೀಪ್ ಧನಕರ್
ಶಿರಸಿ: ಮಾನವ ಮತ್ತು ಜೀವ ಸಂಕುಲದ ಏಕೈಕ ಆವಾಸ ಸ್ಥಾನವಾಗಿರುವ ಭೂಮಿ ಮತ್ತು ಇಲ್ಲಿನ ಪ್ರಕೃತಿ ಸಂಪತ್ತನ್ನು ಸಂರಕ್ಷಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳು ಯೋಧರಾಗಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು. ಅವರು ಸೋಮವಾರ ಶಿರಸಿಯ ಅರಣ್ಯ ಕಾಲೇಜು ಆವರಣದಲ್ಲಿ ‘ದೇಶ ಕಟ್ಟುವಿಕೆಯಲ್ಲಿ ಅರಣ್ಯ ವಿಜ್ಞಾನದ ಪಾತ್ರ’ ವಿಷಯದ ಕುರಿತಾಗಿ ಅರಣ್ಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಪ್ರಕೃತಿಯು ನಮಗೆ ಎಲ್ಲವನ್ನು ನೀಡಿದೆ ಆದರೆ ಅದನ್ನು ದುರ್ಬಳಕೆ ಮಾಡಿಕೊಳ್ಳದೆ ನಮ್ಮ ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಬೇಕು, ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಈ ಪ್ರಕೃತಿಯು ಮಾನವನಿಗೆ ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳು ಮರ ಗಿಡಗಳು ಸೇರಿದಂತೆ ಎಲ್ಲಾ ಜೀವ ಸಂಕುಲಕ್ಕೆ ಸೇರಿದೆ , ಇಂದಿನ ಯುವ ಪೀಳಿಗೆ ಈ ಸತ್ಯದೊಂದಿಗೆ ಅಧ್ಯಯನ ನಡೆಸುತ್ತ, ಮುಂದಿನ ಪೀಳಿಗೆಗೂ ಅರಿವು ಮೂಡಿಸಬೇಕು ಎಂದರು. ನಮ್ಮ ದೇಶದಲ್ಲಿ ವೈದಿಕ ಯುಗದಿಂದಲೂ ಪರಿಸರ ಮತ್ತು ಅರ್ಥ ವ್ಯವಸ್ಥೆ ಪರಸ್ಪರ ಒಟ್ಟಾಗಿ ಸಾಗಿದೆ. ಭಾರತವು ಸಾಂಸ್ಕೃತಿಕವಾಗಿ ಸಿರಿವಂತವಾಗಿದೆ....
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಶಿರಸಿ; ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಶಿರಸಿ ಮತ್ತು ಸಿದ್ಧಾಪುರ ದಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ ಶಿರಸಿ ಮಾರಿಕಾಂಬ ಜಿಲ್ಲಾ ಕ್ರೀಡಾಂಗಣದ ಹೆಲಿಪ್ಯಾಡ್ ಗೆ ಬಂದಿಳಿದರು. ರಾಜ್ಯಪಾಲ ಥಾವರ ಚಂದ್ ಗೆಹಲೊಟ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್ ವೈದ್ಯ ಉಪರಾಷ್ಟ್ರಪತಿಗಳನ್ನು ಸ್ವಾಗತಿಸಿಕೊಂಡರು. ಶಿರಸಿಯಲ್ಲಿ ನಡೆದ ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪರಾಷ್ಟ್ರಪತಿ ಗಳು, ತಾಯಿಯ ಸ್ಮೃರಣೆಯಲ್ಲಿ ಒಂದು ವೃಕ್ಷ ದಡಿ, ಶಿರಸಿಯ ಅರಣ್ಯ ಕಾಲೇಜಿನ ಆವರಣದಲ್ಲಿ ತಮ್ಮ ದಿವಂಗತ ತಾಯಿ ಶ್ರೀಮತಿ ಕೇಸರಿ ದೇವಿ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು. ಇದೇ ವೇಳೆ ರಾಜ್ಯಪಾಲ ಥಾವರ ಚಂದ್ ಗೆಹಲೊಟ್, ಅವರು ತಮ್ಮ ತಾಯಿ ದಿವಂಗತ ಶ್ರೀಮತಿ ಸುಮನ್ ಬಾಯಿ ಹೆಸರಿನಲ್ಲಿ ಮತ್ತು ಗೌರವಾನ್ವಿತ ಉಪ ರಾಷ್ಟ್ರಪತಿ ಅವರ ಪತ್ನಿ ಶ್ರೀಮತಿ ಡಾ. ಸುದೇಶ್ ಧನಕರ್ ಅವರು ತಮ್ಮ ತಾಯಿ ದಿವಂಗತ ಶ್ರೀಮತಿ ಭಗವತಿ ದೇವಿ ಅವರ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು.
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ತಾಲೂಕಿನ ಅತ್ತಿವೇರಿ ಜಲಾಶಯದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಆಕಸ್ಮಿಕವಾಗಿ ಬಿದ್ದು ಸಾವು ಕಂಡಿರೋ ಘಟನೆ ನಡೆದಿದೆ. ಹುನಗುಂದ ಗ್ರಾಮದ ಅಂದಾನಯ್ಯ ಗದಗಯ್ಯ ಚಿಕ್ಕಮಠ(45) ಎಂಬುವವನೇ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿರೋ ವ್ಯಕ್ತಿಯಾಗಿದ್ದಾನೆ. ಶನಿವಾರ ಬೆಳಿಗ್ಗೆ ಮನೆಯಿಂದ ಹೋಗಿದ್ದ ಮೃತ ವ್ಯಕ್ತಿ, ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಹುಡುಕಾಡಿದ್ದರು. ಆದ್ರೆ, ರವಿವಾರ ಸಂಜೆ ವೇಳೆಗೆ ಅತ್ತಿವೇರಿ ಡ್ಯಾಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈತ ನೀರು ಕುಡಿಯಲು ಹೋಗಿ ಜಲಾಶಯದಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರಬಹುದು ಅಂತಾ ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಮುಂಡಗೋಡ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಆಗಿ ವಿನೋದ್ ರೆಡ್ಡಿ ಚಾರ್ಜ್ ತಕ್ಕೊಂಡು ನಾಲ್ಕೈದು ದಿನ ಆಗಿದೆ. ನಮ್ಮ ಹನ್ಮಂತ್ ಗುಡುಗುಂಟಿಯವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಹುತೇಕ ನಿರೀಕ್ಷೆಯಂತೆಯೇ ರೆಡ್ಡಿ ಸಾಹೇಬ್ರು ಬಂದು ಕೂತಿದ್ದಾರೆ. ನಿಜ ಅಂದ್ರೆ, ಸದ್ಯಕ್ಕಂತೂ, ಪಕ್ಕಾ ಎನರ್ಜೆಟಿಕ್ ಆಗಿರೋ ಹೊಸ ಕ್ರೈಂ ಪಿಎಸ್ಐ, ತಾಲೂಕಿನ ಕ್ರೈಮು ಗಳಿಗೆ ಕಡಿವಾಣ ಹಾಕಲು ಉತ್ಸುಕರಾದಂತೆ ಕಾಣ್ತಿದಾರೆ. ಇವ್ರು ಗಟ್ಟಿ ಹೆಜ್ಜೆ ಇಟ್ಟು ಬಂದ ಕಡೆಯಲ್ಲೇಲ್ಲಾ ಇವ್ರ ಪರವಾಗಿ ಒಂದಿಷ್ಟು ಒಳ್ಳೆಯ ಮಾತುಗಳೇ ಕೇಳಿ ಬರ್ತಿವೆ. ಆದ್ರೆ, ಮುಂದೆ ಏನಿದೆಯೋ ನಂಗಂತೂ ಗೊತ್ತಿಲ್ಲ. ನಮ್ಮ ಕ್ರೈಂ ಟೀಂ..! ಅಸಲು, ಮುಂಡಗೋಡ ಠಾಣೆಯ ಪಡಸಾಲೆಗೆ ಹೆಜ್ಜೆ ಇಟ್ಟ ಗಳಿಗೆಯಿಂದಲೇ ಕ್ರೈಂ ಟೀಂ ನ್ನು ಬಡಿದೆಬ್ಬಿಸಿರೋ ವಿನೋದ್ ರೆಡ್ಡಿ, ಒಂದಿಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿರೋದು ಸತ್ಯ. ಆದ್ರೆ, ಮುಂಡಗೋಡಿನಲ್ಲಿ ಕಳೆದ ಕೆಲ ವರ್ಷಗಳಿಂದಲೇ ಕಣ್ಣಿದ್ದರೂ ಕುರುಡು, ಕಾಲಿದ್ದರೂ ನಡೆಯಲು ಆಗದ ಸ್ಥಿತಿಯಲ್ಲಿರೋ ಕ್ರೈಂ ಟೀಂ ಗೆ ಗಟ್ಟಿಯಾಗಿ ಬೆನ್ನು ತಟ್ಟುವ ಕೈಗಳ ಕೊರತೆ ಇತ್ತು....
ಕಾರವಾರ ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ಪ್ರಶಸ್ತಿ
ಕಾರವಾರ: ಕಾರವಾರ ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ನಾಲ್ಕು ಪ್ರಶಸ್ತಿಗಳು ಲಭಿಸಿವೆ ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ಯ ರವರು ಹರ್ಷ ವ್ಯಕ್ತಪಡಿಸಿದ್ದಾರೆ. 2024-25 ಆರ್ಥಿಕ ವರ್ಷದಲ್ಲಿ ನಿವ್ವಳ ಖಾತೆಗಳ ಸಂಖ್ಯೆಯ ವಿಭಾಗದಲ್ಲಿ ಹಾಗೂ ಅಂಚೆ ಉಳಿತಾಯ ಯೋಜನೆಯ ವಿವಿಧ ಹೊಸ ಖಾತೆಯನ್ನು ತೆರೆಯುವ ವಿಭಾಗದಲ್ಲಿ ಕಾರವಾರ ಅಂಚೆ ವಿಭಾಗ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ಅಂಚೆ ಕಚೇರಿ ಉಳಿತಾಯ ಯೋಜನೆಯ ವಿವಿಧ ಹೊಸ ಖಾತೆಗಳನ್ನು ತೆರೆಯುವ ಉಪ ಅಂಚೆ ಕಚೇರಿಗಳ ವಿಭಾಗದಲ್ಲಿ ಹೊನ್ನಾವರ ಅಂಚೆ ಕಚೇರಿಯ ಅಂಚೆ ಪಾಲಕ ಎಮ್.ಎಸ್. ಗೊಂಡ ಅವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಕಾರವಾರ ವಿಭಾಗಕ್ಕೆ ಒಟ್ಟು 39,872 ಸಣ್ಣ ಉಳಿತಾಯ ಯೋಜನೆಗಳ ಖಾತೆಗಳನ್ನು ತೆರೆಯುವ ಗುರಿಗಳನ್ನು ನೀಡಲಾಗಿದ್ದು, ಎಲ್ಲಾ ಅಂಚೆ ಸಿಬ್ಬಂದಿಗಳ ಅವಿರತ ಪರಿಶ್ರಮದಿಂದ 88,331 ಸಣ್ಣ ಉಳಿತಾಯ ಖಾತೆಗಳನ್ನು ತೆರೆದು ಗುರಿಯನ್ನು ದಾಟಿ ಶೇಕಡಾ 221.54% ಗುರಿ ಸಾಧಿಸಿ ಕರ್ನಾಟಕ ವೃತ್ತ ಮಟ್ಟದಲ್ಲಿ ದ್ವಿತೀಯ...
ಉತ್ತರ ಕನ್ನಡದಲ್ಲಿ ಮೇ.5 ರಿಂದ ಪ.ಜಾತಿ ಸಮುದಾಯದ ಸಮೀಕ್ಷೆ : ಜಿಲ್ಲಾಧಿಕಾರಿ
ಕಾರವಾರ: ನ್ಯಾಯ ಮೂರ್ತಿ ಹೆಚ್.ಎನ್ ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ- 2025 ಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾದ್ಯಂತ ಮೇ.5 ರಿಂದ ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸಲು ಮನೆ ಮನೆ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಸಮೀಕ್ಷೆ ಕಾರ್ಯಕ್ಕೆ ಪ್ರತಿ ಮತಗಟ್ಟೆಗೆ ಒಬ್ಬರಂತೆ ಗಣತಿದಾರರು, ಪ್ರತಿ 10 ಗಣತಿದಾರರಿಗೆ ಒರ್ವ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮೇ.5 ರಿಂದ 17 ವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದು, ಮೇ.19 ರಿಂದ 21 ವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಯಲಿದೆ. ಗಣತಿದಾರರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳು ತಮ್ಮ ಆಧಾರ ಕಾರ್ಡ್, ಪಡಿತರ ಚೀಟಿ, ಮೊಬೈಲ್ ನಂಬರ್ ನೀಡಿ ಗಣತಿ ಕಾರ್ಯಕ್ಕೆ ಸಹಕರಿಸಬೇಕು. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ/ವಿವರಗಳಿಗಾಗಿ ಜಿಲ್ಲಾಧಿಕಾರಿಗಳ...
ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣ ಸಾವು..!
ಚಿಕ್ಕೋಡಿ: ಕೃಷಿ ಹೊಂಡದಲ್ಲಿ ಬಿದ್ದು ಮೂವರು ಬಾಲಕರು ಸಾವನ್ನಪ್ಪಿದ ದಾರುಣ ಘಟನೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸ್ನೇಹಿತರು ಸೇರಿಕೊಂಡು ಸುತ್ತಾಡಲು ಹೋದಾಗ ಕೃಷಿ ಹೊಂಡದಲ್ಲಿ ಮೂವರು ಬಾಲಕರು ಬಿದ್ದಿದ್ದಾರೆ. ಇಂಗಳಿ ಗ್ರಾಮದ ಪ್ರಥಮೇಶ ಕೆರಬಾ(13), ಅಥರ್ವ ಸೌಂದಲಗೆ (15), ಸಮರ್ಥ ಚೌಗಲೆ (13)ಮೃತಪಟ್ಟ ಬಾಲಕರಾಗಿದ್ದಾರೆ. ಇನ್ನು ತಿರುಗಾಡಲು ಹೊರಗೆ ಹೋದ ಬಾಲಕರು ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಆ ವೇಳೆ, ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರೋ ವಿಚಾರ ಸ್ಥಳೀಯರಿಂದ ತಿಳಿದಿದೆ. ಹೀಗಾಗಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಚಿಕ್ಕೋಡಿ ತಹಶಿಲ್ದಾರ ಭೇಟಿ ನೀಡಿದ್ದಾರೆ. ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದ್ದು, ಮಕ್ಕಳನ್ನ ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮುಂಡಗೋಡ ತಾಲೂಕಿಗೆ 65.3% ರಷ್ಟು SSLC ಫಲಿತಾಂಶ, ಮಳಗಿ ಪ್ರೌಢಶಾಲೆಯ ಭಾಗ್ಯಶ್ರೀ ಗೆ ಅತಿ ಹೆಚ್ಚು ಅಂಕ..!
ರಾಜ್ಯದಲ್ಲಿ SSLC ಫಲಿತಾಂಶ ಹೊರಬಿದ್ದಿದೆ. ಅದ್ರಂತೆ, ಮುಂಡಗೋಡ ತಾಲೂಕಿನಲ್ಲೂ SSLC ಫಲಿತಾಂಶ ಘೋಷಣೆ ಆಗಿದ್ದು, 65.3 ರಷ್ಟು ಶೇಕಡವಾರು ಫಲಿತಾಂಶ ತಾಲೂಕಿನ ಪಾಲಾಗಿದೆ. ಅದ್ರಲ್ಲಿ ಅತಿಹೆಚ್ಚು ಅಂಕ ಪಡೆದ ತಾಲೂಕಿನ ಮೂವರು ವಿದ್ಯಾರ್ಥಿಗಳ ಹೆಸರು ಇಲ್ಲಿದೆ. ತಾಲೂಕಿನ ಮಳಗಿ ಕೆಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ಸುರೇಶ್ ನಾಯ್ಕ್ 625 ಕ್ಕೆ 614 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇನ್ನು ಮುಂಡಗೋಡಿನ ಮೌಲಾನಾ ಆಜಾದ್ ಪ್ರೌಢಶಾಲೆಯ ವಿದ್ಯಾರ್ಥಿನಿ, ಪರ್ವೀನ್ ಕೌಸರ್ ಅಬ್ದುಲ್ ಕರೀಂ ನರೇಗಲ್, 625 ಕ್ಕೆ 611 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಹಾಗೆನೇ, ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ, ಸವಿತಾ ಶಿವಪ್ಪ ಮತ್ತಿಗಟ್ಟಿ, 625 ಕ್ಕೆ 604 ಅಂಕಗಳನ್ನು ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ತಾಲೂಕಿನಲ್ಲಿ ಈ ಬಾರಿ ಪರೀಕ್ಷೆಗೆ 554 ಗಂಡು, 697 ಹೆಣ್ಣು ಸೇರಿದಂತೆ ಒಟ್ಟು 1251 ಜನ ವಿದ್ಯಾರ್ಥಿಗಳು ಹಾಜರಾಗಿದ್ದರು. ಅದ್ರಲ್ಲಿ, 292 ಗಂಡು,...
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಲ್ಲಿ ಕೆಲಸದ ಸಮಯದಲ್ಲಿ ಬೃಹತ್ ಗಾತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ ಮಿಲ್ ನ ಬೃಹತ್ ಗಾತ್ರದ ಯಂತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಹಳೇ ದಾಂಡೇಲಿ ನಿವಾಸಿ ಅಬ್ದುಲ್ ಸಲೀಂ ಖಲಾಸಿ (55) ಸಾವನ್ನಪಿದ್ದ ವ್ಯಕ್ತಿ. ಮೃತ ವ್ಯಕ್ತಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ನಗರದ ಪೊಲೀಸ ಠಾಣೆಯ ಪಿಎಸ್‌ಐ ಅಮೀನಸಾಬ ಅತ್ತಾರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗುತ್ತಿಗೆದಾರ ಸಾಜಿದ್ ಪಠಾಣ್ ಹಾಗೂ ಮೇಲ್ವಿಚಾರಕ ಅಬ್ದುಲ್ ಖಾದರ ಪಠಾಣ ಇವರ ಮೇಲೆ ಮೃತನ ಹೆಂಡತಿ ಬಲಕಿಸ್ ಬಾನು ಖಲಾಸಿ ನಗರಠಾಣೆಯಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ 6 ನಂ ಮೆಷೀನ್ ನ 14 ನೇ ರೆಡಿಯೇಟರ್ ಹತ್ತಿರ ಕೆಲಸ ಸಮಯದಲ್ಲಿ ಯಾವುದೇ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿದರಿಂದ ನನ್ನ ಗಂಡ ಮೃತಪಟ್ಟಿದ್ದಾನೆ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.