ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶುಕ್ರವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಜೋಯಿಡಾ ಹಾಗೂ ದಾಂಡೇಲಿ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಶುಕ್ರವಾರ ಅಗಷ್ಟ 2 ರಂದು ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದಿನ ಮಳೆಯ ಹಾನಿ..! ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 13 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಅಂಕೋಲ ದ 1, ಹೊನ್ನಾವರ ದ 9,ಜೋಯಿಡಾ ದ 1 ಮತ್ತು ಕುಮಟಾ ದ 1 ಸೇರಿದಂತೆ ಒಟ್ಟು 14 ಕಾಳಜಿ ಕೇಂದ್ರಗಳಲ್ಲಿ 550 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.
Top Stories
ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು..!
ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ; ಬಿಬಿಎಂಪಿ..!
ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ..!
ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ, ಮಟ್ಕಾ ದಂಧೆ ಹಾವಳಿ ಬಂದ್ ಮಾಡಿಸಿ- ಪೊಲೀಸ್ ಅಧಿಕಾರಿಗಳಿಗೆ ಡೀಸಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಮೂಲಕ ರೂ. 1095 ಕೋಟಿ ನೆರವು..!
ಗೋಕರ್ಣದಲ್ಲಿ ಡಿಜಿಟಲ್ ಪೊಲೀಸ್ ವ್ಯವಸ್ಥೆ : ಎಸ್ಪಿ ನಾರಾಯಣ್
ಮೇ.17 ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಜನಸ್ಪಂಧನ ಕಾರ್ಯಕ್ರಮ: ಕಾರ್ಯಕ್ರಮದ ಪ್ರಯೋಜನ ಪಡೆಯಿರಿ- ಜಿಲ್ಲಾಧಿಕಾರಿ
ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಒದಗಿಸಿ- ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..!
ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ..!
ಮುಂಗಾರಿನ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಸೂಚನೆ ಪಾಲಿಸಿ : ಸಿಡಿಲಿನಿಂದ ರಕ್ಷಿಸಿಕೊಳ್ಳಿ..!
ಮಕ್ಕಳ ಬೌದ್ಧಿಕ ಮತ್ತು ಕ್ರೀಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ..!
ವೈದ್ಯಕೀಯ ಸೇವೆಗೆ ಸದಾ ಸನ್ನದ್ದವಾಗಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ..!
CBSE, SSLC ಫಲಿತಾಂಶ ಪ್ರಕಟ: ಮುಂಡಗೋಡ ಲೊಯೊಲಾ ಕೇಂದ್ರೀಯ ವಿದ್ಯಾಲಯ 100% ಫಲಿತಾಂಶದ ಸಾಧನೆ..! ಮಾನಸಿ ಸಿದ್ದಿ ಪ್ರಥಮ..!
ಕೊಲ್ಕೊತ್ತಾದ ಮೇಲೆ ದಾಳಿ ಮಾಡಿ ವಶ ಪಡಿಸಿಕೊಳ್ತಿವಿ, ಆತ್ಮಹತ್ಯಾ ಬಾಂಬ್, ತಾಲಿಬಾನಿ ಶೈಲಿಯ ದಾಳಿ ಮಾಡ್ತಿವಿ ಅಂತ ಅಂದವನು ಯಾರೀತ..?
ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು ‘ಸಹಾಯ’ ಮಾಡಿದ್ದೇವೆ..! ಕದನ ವಿರಾಮಕ್ಕೆ ನಾವೇ ಕಾರಣ ಅಂದ “ದೊಡ್ಡಣ್ಣ”
ಪ್ರಧಾನಿ ಮೋದಿ ಭಾಷಣ ಮುಗಿಸಿದ ಕೆಲವೇ ಹೊತ್ತಲ್ಲಿ ಜಲಂಧರ್ ಬಳಿ ಕಣ್ಗಾವಲು ಡ್ರೋನ್ ಹೊಡೆದುರುಳಿಸಿದ ಸೇನೆ ; ವಿದ್ಯುತ್ ಸ್ಥಗಿತ
ಭಾರತದ ವಾಯುದಾಳಿಗೆ ನಡುಗಿದ ನೂರ್ ಖಾನ್, ವಾಯುನೆಲೆ ಮೇಲಿನ ದಾಳಿ ನಂತರ ಬಂಕರ್ ನಲ್ಲಿ ಅಡಗಿದ ಪಾಕ್ ಸೇನಾ ಮುಖ್ಯಸ್ಥ
ಬೆಳಗಾವಿಯ ಸಂತಿ ಬಸ್ತವಾಡದ ಮಸೀದಿಯಲ್ಲಿನ ಕುರಾನ್ ಸುಟ್ಟು ಹಾಕಿದ ಕಿಡಿಗೇಡಿಗಳು, ಪ್ರತಿಭಟನೆ..!
ಜಿಲ್ಲೆಯಲ್ಲಿ ಇಂದು ಗುರುವಾರ ಶಾಲಾ ಕಾಲೇಜುಗಳಿಗೆ ಮಳೆಯ ರಜೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ಗುರುವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ ಹಾಗೂ ಜೋಯಿಡಾ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ಇಂದು ಗುರುವಾರ ಅಗಷ್ಟ 1 ರಂದು ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಮಳೆಯ ಅಬ್ಬರ ಹಿನ್ನೆಲೆ, ಇಂದು ಬುಧವಾರ ಶಾಲಾ ಕಾಲೇಜುಗಳಿಗೆ ರಜೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧ್ಯಂತ ಅವಾಂತರಗಳು ಸೃಷ್ಟಿಯಾಗಿವೆ. ಹೀಗಾಗಿ, ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ಬುಧವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ಇಂದು ಬುಧವಾರ ದಿನಾಂಕ: 31 ರಂದು ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಯರೇಬೈಲಿನ ಬೇಡ್ತಿ ಹಳ್ಳದಲ್ಲಿ ಹೆಚ್ಚಾದ ನೀರಿನ ಪ್ರಮಾಣ, ತಹಶೀಲ್ದಾರ್ ಹಾಗೂ ಜಿಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ..!
ನಿರಂತರ ಮಳೆ ಹಿನ್ನೆಲೆಯಲ್ಲಿ, ಮುಂಡಗೋಡ ತಾಲೂಕಿನ ಯರೆಬೈಲು ಬೇಡ್ತಿ ಹಳ್ಳದಲ್ಲಿ ನೀರಿನ ಪ್ರಮಾಣ ಕೊಂಚ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಡಗೋಡ ತಹಶಿಲ್ದಾರ ಶಂಕರ್ ಗೌಡಿ ಹಾಗೂ ಜಿಪಂ ಇಂಜಿನಿಯರ್ ಪ್ರದೀಪ್ ಭಟ್ಟ ಯರೆಬೈಲಿನ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡ್ರು. ಇನ್ನು, ಸ್ಥಳೀಯರಿಗೆ ಈ ಬಗ್ಗೆ ಸೂಚನೆ ನೀಡಿದ ತಹಶೀಲ್ದಾರರು, ನೀರಿನ ಪ್ರಮಾಣ ಹೆಚ್ಚಾದರೆ ತಾಲೂಕಾಡಳಿತಕ್ಕೆ ಮಾಹಿತಿ ನೀಡುವಂತೆ ತಿಳಿಸಿದ್ರು. ದನಕರುಗಳನ್ನು ಹಳ್ಳದ ನೀರಲ್ಲಿ ಬಿಡದಂತೆ ಹಾಗೂ ಜನರು ಹಳ್ಳದಲ್ಲಿ ಇಳಿಯದಂತೆ ಸೂಚಿಸಿದ್ರು. ಸ್ಥಳೀಯ ಪಿಡಿಓ ಸೇರಿದಂತೆ ಹಲವರಿಗೆ ಎಚ್ಚರ ವಹಿಸಲು ಖಡಕ್ ಸೂಚನೆ ನೀಡಿದ್ರು.
ಶಿರಸಿ ನಗರ ಠಾಣೆ ASI ಅಶೋಕ್ ರಾಥೋಡ್ ಗೆ ಪದೋನ್ನತಿ, PSI ಆಗಿ ಚಿಕ್ಕಮಗಳೂರಿಗೆ ವರ್ಗಾವಣೆ..!
ಶಿರಸಿ ನಗರ ಠಾಣೆಯ ASI ಆಗಿ ಕಾರ್ಯನಿರ್ವಹಿಸುತ್ತಿದ್ದ, ಅಶೋಕ ರಾಥೋಡ ಇವರು ಪದೋನ್ನತಿಯೊಂದಿಗೆ PSI ಆಗಿ ಚಿಕ್ಕಮಗಳೂರಿನ ಜೈಪುರ್ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಈ ಮೊದಲು ಅಶೋಕ್ ರಾಥೋಡ್ ಮುಂಡಗೋಡ ಪೊಲೀಸ್ ಠಾಣೆಯಲ್ಲಿಯೂ ASI ಆಗಿ ಕಾರ್ಯನಿರ್ವಹಿಸಿದ್ದರು.
ಚಿಗಳ್ಳಿಯ ಸಂಗೂರಮಠರ ಮನೆಗೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಆರೋಗ್ಯ ವಿಚಾರಣೆ..!
ಮುಂಡಗೋಡ ತಾಲೂಕಿನ ಚಿಗಳ್ಳಿಗೆ ಇಂದು ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ ನೀಡಿದ್ರು. ಹಿರಿಯ ರಾಜಕೀಯ ಧುರೀಣ ಪಿ.ಎಸ್.ಸಂಗೂರ್ ಮಠ್ ಅವರ ನಿವಾಸಕ್ಕೆ ಭೇಟಿ ನೀಡಿದ ಹೆಬ್ಬಾರ್, ಸಂಗೂರಮಠರ ಆರೋಗ್ಯ ವಿಚಾರಿಸಿದ್ರು. ಈ ವೇಳೆ ಎಚ್.ಎಂ.ನಾಯ್ಕ್, ಸಿದ್ದಪ್ಪ ಹಡಪದ, ಫಣಿರಾಜ್ ಹದಳಗಿ, ಗುಡ್ಡಪ್ಪ ಕಾತೂರು ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ರು.
ಉತ್ತರ ಕನ್ನಡದ ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ರಾಜ್ಯ ಡಕಾಯಿತರ ಬಂಧನ..!
ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ಟೀಂ ನಿಜಕ್ಕೂ ಅದ್ಭುತ ಕಾರ್ಯ ಮಾಡಿದೆ. ದರೋಡೆಗೆ ಸಂಚು ರೂಪಿಸಿ ಬಸ್ ಹತ್ತಿ ಹೊರಟಿದ್ದ, ಇಬ್ಬರು ಖತರ್ನಾಕ್ ಅಂತರ್ ರಾಜ್ಯ ದರೋಡೆಕೋರರನ್ನ ಹೆಡೆಮುರಿ ಕಟ್ಟಿದ್ದಾರೆ. ಫಿಲ್ಡಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಕ್ರಿಮಿಗಳು ಮಾತ್ರ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಅನಮೋಡ್ ಚೆಕ್ ಪೊಸ್ಟ್..! ಅಂದಹಾಗೆ, ನಿನ್ನೆ ಶನಿವಾರ, ಅಂದ್ರೆ, ಜುಲೈ 27 ರಂದು ರಾಮನಗರದ ಅನಮೋಡ್ ಅಬಕಾರಿ ಚೆಕ್ ಪೊಸ್ಟ್ ನಲ್ಲಿ ಸಿಬ್ಬಂದಿಯವ್ರು ತಪಾಸಣೆ ಕಾರ್ಯ ಮಾಡ್ತಿರ್ತಾರೆ. ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುವ ಅಕ್ರಮಿಗಳ ಮೇಲೆ ಹದ್ದಿನ ಕಣ್ಣಿಟ್ಟಿರ್ತಾರೆ. ಈ ವೇಳೆ ಪೊಲೀಸ್ರನ್ನ ನೋಡಿ ಅದೊಂದಿಷ್ಟು ಜನ ಮೆಲ್ಲಗೇ ಕಾಲ್ಕಿಳೋಕೆ ಟ್ರೈ ಮಾಡ್ತಾ ಇರ್ತಾರೆ. ಹೀಗಾಗಿ ಅಲರ್ಟ್ ಆದ ಪೊಲೀಸ್ರು ಅವ್ರನ್ನ ಬೆನ್ನತ್ತಿ ಹೋಗಿದ್ದಾಗ ಅವ್ರೇಲ್ಲ ಕಾಡಿನಲ್ಲಿ ಪರಾರಿಯಾಗಿ ಬಿಡ್ತಾರೆ. ಅವ್ರು ನಾಲ್ಕು ಜನ..! ಹೀಗಾಗಿ, ರಾತ್ರಿಯಿಡಿ ಆಗಂತುಕರಿಗಾಗಿ ಕಣ್ಣಿಟ್ಟು ಕೂತಿದ್ದ ರಾಮನಗರ ಪೊಲೀಸರಿಗೆ ಕೊನೆಗೂ ಆ...
ಶಿರೂರು ಗುಡ್ಡ ಕುಸಿತ, ಶೋಧ ಕಾರ್ಯ ಸ್ಥಗಿತವಾಗಿಲ್ಲ, ಆದ್ರೆ ಸದ್ಯ ಕಾರ್ಯಾಚರಣೆ ಮಾಡಲು ಸಾಧ್ಯವಾಗ್ತಿಲ್ಲ- ಮಂಕಾಳು ವೈದ್ಯ
ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆ ಸದ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಗಿತವಾಗಿದೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದ್ರು. ಕಳೆದ 13 ದಿನಗಳಿಂದ ಕಾರ್ಯಾಚರಣೆ ನಡೆದಿದೆ. 8 ಜನರ ಶವ ಪತ್ತೆಯಾಗಿದೆ ಇನ್ನೂ ಮೂವರ ಶವ ಪತ್ತೆಯಾಗಬೇಕಿದೆ. ಆದ್ರೆ ,ಇದು ಅಂದಾಜು ಮಾತ್ರ ಇನ್ನೂ ಎಷ್ಟು ಜನರ ಶವ ಇದೆಯೋ ಗೊತ್ತಿಲ್ಲ. ನಾವು ಪ್ರಾಮಾಣಿಕವಾಗಿ ಕಾರ್ಯಾಚರಣೆ ಮಾಡಿದ್ದಿವಿ, ಇಲ್ಲಿನ ಶಾಸಕರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ನಾನೂ ಕೂಡ ಆರು ದಿನಗಳಿಂದ ಇಲ್ಲೇ ಇದ್ದಿನಿ. ಆರ್ಮಿ, ಅಗ್ನಿಶಾಮಕ ಸೇರಿ ಪರಿಣಿತ ತಂಡಗಳೂ ಕೂಡ ಕಾರ್ಯಾಚರಣೆ ಮಾಡಿವೆ. ಆದ್ರೆ ಇನ್ನೂ ಮೂವರ ಶವಗಳು ಪತ್ತೆಯಾಗಿಲ್ಲ. ಅದರ ಬಗ್ಗೆ ತುಂಬಾ ಬೇಸರವಿದೆ ಅಂತಾ ಮಂಕಾಳು ವೈದ್ಯ ಬೇಸರ ತೋಡಿಕೊಂಡ್ರು. ಇನ್ನು, ಪತ್ತೆಯಾದ ಎಂಟು ಶವಗಳ ಕುಟುಂಬಸ್ಥರಿಗೆ ಪರಿಹಾರದ ಹಣ ಈಗಾಗಲೇ ನೀಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಈಗಾಗಲೇ ನಾಪತ್ತೆಯಾದ ಮೂವರ ಕುಟುಂಬಗಳಿಗೂ ಪರಿಹಾರದ ಹಣ ನೀಡಲು ತಯಾರಾಗಿದ್ದೇವೆ...
“ಅಣಬೆ ಪಲ್ಯ, ಬಿಸಿ ರೊಟ್ಟಿ ಮಾಡಿ ಇಡ್ರಿ, ಬಂದು ಉಣ್ತಿನಿ” ಅಂತ ಹೇಳಿ ಹೋದ ಹುಡುಗ ಹೆಣವಾಗಿ ಬಿಟ್ಟ..! ಪಾಳಾ ಯುವಕನ ಆತ್ಮಹತ್ಯೆ ಹಿಂದೆ ಹಲವು ಅನುಮಾನ..?
ಮುಂಡಗೋಡ ತಾಲೂಕಿನ ಪಾಳಾದ ಹುಡುಗ ರವಿ ಅಕ್ಕಸಾಲಿ ಸಾವಿನ ಹಿಂದೆ ಅನುಮಾನ ಇದೆಯಾ..? ಹುಡೇಲಕೊಪ್ಪದ ಮಾವಿನ ಗಿಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ರವಿಯ ಸಾವಿನ ಸುತ್ತ ಹತ್ತಾರು ಪ್ರಶ್ನೆಗಳು ಎದ್ದಿವೆ. ವಯಸ್ಸಲ್ಲದ ವಯಸ್ಸಲ್ಲಿ ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದರ್ದಾದ್ರೂ ಏನಿತ್ತು ಅನ್ನೋದು ಕೆಲವರ ಪ್ರಶ್ನೆ..! ಅಣಬೆ ತಂದಿದ್ದ..! ಅಸಲು, ನಿನ್ನೆ ಇಡೀ ದಿನವೂ ಲವಲವಿಕೆಯಿಂದಲೇ ಇದ್ದ ರವಿ, ಮದ್ಯಾನ ಮನೆಗೆ ಕಾಡಿನಿಂದ ತಾಜಾ ಮಶರೂಮ್ (ಅಣಬೆ) ತಂದಿದ್ದ. ನಿಮಗೆ ಗೊತ್ತಿರಲಿ, ಉತ್ತರ ಕನ್ನಡದ ಕಾಡಲ್ಲಿ ಈ ಅಣಬೆಗಳು ಹೇರಳವಾಗಿ ಸಿಕ್ತವೆ. ಮಳೆಗಾಲ ಬಂತದ್ರೆ ಸಾಕು ಈ ಪಾಳಾ ಭಾಗದ ಕಾಡಲ್ಲಿ ನಿತ್ಯವೂ ಅಣಬೆಗಳಿಗಾಗಿ ಜನ ತಡಕಾಡುತಿರ್ತಾರೆ. ಹಾಗೆನೇ ರವಿ ಕೂಡ ಅಣಬೆಗಳನ್ನು ತಂದು ಖುಶಿಯಿಂದಲೇ ಮನೆಲಿ ರಾತ್ರಿ ಭರ್ಜರಿ ಊಟ ಮಾಡುವ ಆಸೆ ಇಟ್ಟುಕೊಂಡಿದ್ದ. ಹೀಗಾಗಿನೇ ಮನೆಲಿ ಅಡುಗೆ ಮಾಡಲು ಹೇಳಿದ್ದ. ರೊಟ್ಟಿ ಮಾಡಿಡಿ ಅಂದಿದ್ನಂತೆ..! ಇನ್ನು ಸಂಜೆ ಸುಮಾರು ಏಳು ಗಂಟೆಯ ಹೊತ್ತಿಗೆ ಬಿಸಿ ರೊಟ್ಟಿ ಮಾಡಿ ಇಡ್ರಿ...
ಶಿರೂರು ಗುಡ್ಡ ಕುಸಿತ: ನಾಪತ್ತೆಯಾದವರ ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ಅಂಕೋಲಾ : ಶಿರೂರು ಗುಡ್ಡಕುಸಿತವಾಗಿ ಇಂದಿಗೆ 13ದಿನಗಳು ಕಳೆದಿವೆ. ದುರಂತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ನಿರಂತರ 13 ದಿನಗಳಿಂದಲೇ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೆ 8 ಜನರ ಶವ ಹೊರ ತೆಗೆಯಲಾಗಿದ್ದು, ಇನ್ನುಳಿದ ಮೂವರಿಗಾಗಿ ನಿರಂತರ ಶೋಧ ನಡೆಸಿದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ ಅಂತಾ ಖುದ್ದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಮಾಹಿತಿ ನೀಡಿದ್ದಾರೆ. ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಲೋಕೇಶ್ ನಾಯ್ಕ ಹಾಗೂ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಚಾಲಕ ಅರ್ಜುನ್ಗಾಗಿ ತೀವ್ರ ಶೋಧ ನಡೆಸಲಾಗಿತ್ತು. ನಿನ್ನೆಯಿಂದ ಉಡುಪಿಯ ಪರಿಣಿತ ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನ ತಂದು ಗಂಗಾವಳಿ ನದಿಯಲ್ಲಿ ಶೋಧ ನಡೆಸಲಾಗಿತ್ತು. ಆದರೆ ಅದು ಎಷ್ಟೆ ಕಾರ್ಯಾಚರಣೆ ನಡೆಸಿದರೂ ಸಹ ನಾಪತ್ತೆ ಆದವರ ಹಾಗೂ ಲಾರಿ ಪತ್ತೆ ಆಗದೆ ಇರುವ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರೀಯಾ ತಿಳಿಸಿದ್ದಾರೆ.