ಶಿರಸಿ: ಭಯೋತ್ಪಾದನೆಯ ನಂಟಿನ ಜಾಲ ಭೇದಿಸಲು ಶಿರಸಿಗೆ ಬಂದಿಳಿದ ಎನ್ಐಎ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ದಾಸನಕೊಪ್ಪದ ಅಬ್ದುಲ್ ಸಕೂರ್ ಎನ್ಐಎ ವಶದಲ್ಲಿರುವ ಆರೋಪಿ. ಈತನು ಆನ್ ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟನಲ್ಲಿ ನಕಲಿ ದಾಖಲೆ ನೀಡಿರುವ ಆರೋಪವಿತ್ತು. ಈ ನಡುವೆ ದುಬೈನಿಂದ ಬಕ್ರೀದ್ ಹಬ್ಬಕ್ಕೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನಕೊಪ್ಪಕ್ಕೆ ಅಬ್ದುಲ್ ಸಕೂರ್ ಆಗಮಿಸಿದ್ದ. ಈ ವೇಳೆ ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಎನ್ಐಎ ತಂಡವು ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
Top Stories
ಮೇ.17 ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಜನಸ್ಪಂಧನ ಕಾರ್ಯಕ್ರಮ: ಕಾರ್ಯಕ್ರಮದ ಪ್ರಯೋಜನ ಪಡೆಯಿರಿ- ಜಿಲ್ಲಾಧಿಕಾರಿ
ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಒದಗಿಸಿ- ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..!
ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ..!
ಮುಂಗಾರಿನ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಸೂಚನೆ ಪಾಲಿಸಿ : ಸಿಡಿಲಿನಿಂದ ರಕ್ಷಿಸಿಕೊಳ್ಳಿ..!
ಮಕ್ಕಳ ಬೌದ್ಧಿಕ ಮತ್ತು ಕ್ರೀಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ..!
ವೈದ್ಯಕೀಯ ಸೇವೆಗೆ ಸದಾ ಸನ್ನದ್ದವಾಗಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ..!
CBSE, SSLC ಫಲಿತಾಂಶ ಪ್ರಕಟ: ಮುಂಡಗೋಡ ಲೊಯೊಲಾ ಕೇಂದ್ರೀಯ ವಿದ್ಯಾಲಯ 100% ಫಲಿತಾಂಶದ ಸಾಧನೆ..! ಮಾನಸಿ ಸಿದ್ದಿ ಪ್ರಥಮ..!
ಕೊಲ್ಕೊತ್ತಾದ ಮೇಲೆ ದಾಳಿ ಮಾಡಿ ವಶ ಪಡಿಸಿಕೊಳ್ತಿವಿ, ಆತ್ಮಹತ್ಯಾ ಬಾಂಬ್, ತಾಲಿಬಾನಿ ಶೈಲಿಯ ದಾಳಿ ಮಾಡ್ತಿವಿ ಅಂತ ಅಂದವನು ಯಾರೀತ..?
ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು ‘ಸಹಾಯ’ ಮಾಡಿದ್ದೇವೆ..! ಕದನ ವಿರಾಮಕ್ಕೆ ನಾವೇ ಕಾರಣ ಅಂದ “ದೊಡ್ಡಣ್ಣ”
ಪ್ರಧಾನಿ ಮೋದಿ ಭಾಷಣ ಮುಗಿಸಿದ ಕೆಲವೇ ಹೊತ್ತಲ್ಲಿ ಜಲಂಧರ್ ಬಳಿ ಕಣ್ಗಾವಲು ಡ್ರೋನ್ ಹೊಡೆದುರುಳಿಸಿದ ಸೇನೆ ; ವಿದ್ಯುತ್ ಸ್ಥಗಿತ
ಭಾರತದ ವಾಯುದಾಳಿಗೆ ನಡುಗಿದ ನೂರ್ ಖಾನ್, ವಾಯುನೆಲೆ ಮೇಲಿನ ದಾಳಿ ನಂತರ ಬಂಕರ್ ನಲ್ಲಿ ಅಡಗಿದ ಪಾಕ್ ಸೇನಾ ಮುಖ್ಯಸ್ಥ
ಬೆಳಗಾವಿಯ ಸಂತಿ ಬಸ್ತವಾಡದ ಮಸೀದಿಯಲ್ಲಿನ ಕುರಾನ್ ಸುಟ್ಟು ಹಾಕಿದ ಕಿಡಿಗೇಡಿಗಳು, ಪ್ರತಿಭಟನೆ..!
ಕ್ಷುಲಕ ಕಾರಣಕ್ಕೆ ಬಾಲಕರ ಜಗಳ, ಕೊಲೆಯಲ್ಲಿ ಅಂತ್ಯ.. 9ನೇ ತರಗತಿ ಬಾಲಕನಿಗೆ ಚಾಕು ಇರಿದ 6ನೇ ತರಗತಿ ಬಾಲಕ..!
ಆಪರೇಶನ್ ಸಿಂಧೂರ | ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನ, ಚೀನಾ ನಿರ್ಮಿತ ಏರ್ ಡಿಫೆನ್ಸ್ ಧ್ವಂಸ : ಸೇನೆಯಿಂದ ವೀಡಿಯೊ ಬಿಡುಗಡೆ..!
ಕಾರವಾರದಲ್ಲಿ ವೈಮಾನಿಕ ದಾಳಿ, ಸಾವಿರಾರು ಮಂದಿಯ ರಕ್ಷಣೆ..! ಬಾಂಬ್ ದಾಳಿ, 37 ಜನ ಬಚಾವ್..!!
ತೀವ್ರ ಅಪೌಷ್ಠಿಕತೆಯಿಂದ ಕೂಡಿದ ಮಕ್ಕಳನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಿ : ಜಿಲ್ಲಾಧಿಕಾರಿ
ಪ್ರಸಕ್ತ ವರ್ಷದ “ಮಾನ್ಸೂನ್” ನಿಗದಿತ ಸಮಯಕ್ಕಿಂತಲೂ ಮುಂಚೇಯೇ ಆಗಮನ ಸಾಧ್ಯತೆ..!
ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು ಸಹಿತ ಗಾಳಿ ಮಳೆ ; ಮುನ್ಸೂಚನೆ
ದಾಸನಕೊಪ್ಪದ ಕಾಡಲ್ಲಿ ಇಂದೂರು ಹುಡುಗನ ಭಯಾನಕ ಹತ್ಯೆ, ಖಾಸಾ ಗೆಳೆಯನಿಂದ್ಲೇ ಮರ್ಡರ್ ಆದ್ನಾ ಮಲ್ಲಪ್ಪ..?
ಇಂದೂರಿನ ಹುಡುಗನೊಬ್ಬ ಬನವಾಸಿಯ ಕಾಡಲ್ಲಿ ಭಯಾನಕವಾಗಿ ಹತ್ಯೆಯಾಗಿದ್ದಾನೆ.. ಟ್ರ್ಯಾಕ್ಟರ್ ಸಾಲದ ಕಂತು ತುಂಬು ಅಂತಾ ಹೇಳಲು ಹೋದವನು ಹೆಣವಾದ್ನಾ..? ನಂಬಿಗಸ್ಥನಿಂದಲೇ ದ್ರೋಹ ಕಂಡು ಬನವಾಸಿಯ ಕಾಡಲ್ಲಿ ಬೆಂದು ಹೋದ್ನಾ..?ಹೀಗೆ ಕೊಳೆತು ದುರ್ನಾತ ಬೀರುತ್ತಿರೊ ಹುಡುಗನ ಶವದ ಸುತ್ತ ಹಲವು ಪ್ರಶ್ನೆಗಳು ಏಳುತ್ತಿವೆ. ಅಸಲು, ಮಲ್ಲಪ್ಪನ ಖಾಸಾ ಗೆಳೆಯ ಆರೀಫನೇ ಮರ್ಡರ್ ಮಾಡಿದ್ನಾ..? ಗೊತ್ತಿಲ್ಲ. ಆದ್ರೆ, ಅಂತಹ ಅನುಮಾನಗಳು ಬನವಾಸಿ ಪೊಲೀಸರಿಗಿದೆ. ಯಸ್, ಶಿರಸಿ ತಾಲೂಕಿನ ದಾಸನಕೊಪ್ಪ ಸಮೀಪದ ದನಗನಹಳ್ಳಿಯ ಆರೀಫ್ ಹುಸೇನ್ ಬಾಳಂಬೀಡ (30) ಎಂಬಾತ, ಇಂದೂರಿನ ಮಲ್ಲಪ್ಪ ಕೆಂಚಗೊಣ್ಣವರ ಎಂಬುವವನನ್ನ ಅಮಾನುಷವಾಗಿ ಕೊಂದು ಹಾಕಿರೋ ಅನುಮಾನ ವ್ಯಕ್ತವಾಗಿದೆ. ಕಳೆದ ಜೂನ್ 11 ರಂದೇ ದನಗನಹಳ್ಳಿಯ ಕಾಡಿನ ನಡುವೆ ಇಂದೂರಿನ ಮಲ್ಲಪ್ಪ ಕೆಂಚಗೊಣ್ಣನವರ ಹೆಣವಾಗಿ ಬೆಂದು ಹೋಗಿದ್ದಾನೆ. ಆದ್ರೆ, ಹಾಗೆ ಹೆಣವಾಗಿ ಬರೋಬ್ಬರಿ ನಾಲ್ಕು ದಿನಗಳ ನಂತ್ರ ಶವ ಪತ್ತೆಯಾಗಿದೆ. ಮರ್ಡರ್ ಆದವನು ಮಲ್ಲಪ್ಪ..! ಅಂದಹಾಗೆ, ಆತನ ಹೆಸ್ರು ಮಲ್ಲಪ್ಪ ಕೆಂಚಗೊಣ್ಣವರ್, ಈಗಷ್ಟೇ 28 ರ ಆಸುಪಾಸಿನ ಹುಡುಗ. ಅಕ್ಷರಶಃ ಮುಗ್ದ...
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಬಾಚಣಕಿ ಸಮೀಪ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಬಾಚಣಕಿ ಸಮೀಪದ ಹುಬ್ಬಳ್ಳಿ ರಸ್ತೆಯಲ್ಲಿ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಅಂದಹಾಗೆ, ಖಾಕಿಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವನು ಯಲ್ಲಾಪುರದ ಮಚ್ಚಿಗಲ್ಲಿಯ 22 ವರ್ಷದ ರಿಹಾನ್ ಹಸನ್ ಶೇಖ್ ಎಂಬಾತ. ಬರೋಬ್ಬರಿ 2kg ಗಾಂಜಾ..! ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಯ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಯಲ್ಲಾಪುರದ ಮಚ್ಚಿಗಲ್ಲಿಯ ರಿಹಾನ್ ಹಸನ್ ಶೇಖ್, ಎಂಬುವವನೇ ಗಾಂಜಾ ಕೇಸಿನ ಆರೋಪಿಯಾಗಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವನಿಂದ ಬರೋಬ್ಬರಿ 2kg ತೂಕದ ಗಾಂಜಾ ವಶಪಡಿಸಿ ಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಏನಿಲ್ಲವೆಂದ್ರೂ 90 ಸಾವಿರ ರೂಪಾಯಿ. ಸಿಪಿಐ ರಂಗನಾಥ್ ನೀಲಮ್ಮನವರ್ ನೇತೃತ್ವದಲ್ಲಿ, ಪಿಎಸ್ಐ ಪರಶುರಾಮ್, ಕ್ರೈಂ ಪಿಎಸ್ ಐ ಹನ್ಮಂತಪ್ಪ ವಡಗುಂಟಿ, ಸಿಬ್ಬಂದಿಗಳಾದ ಮಂಜು ಚಿಂಚಲಿ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ್ ಮುಧೋಳ್, ಬಸವರಾಜ್ ಒಡೆಯರ್...
ರಾಜೀನಾಮೆ ಕೊಡಿ ಅಂದವ್ರಿಗೆ ಹೆಬ್ಬಾರ್ ಬೆಂಬಲಿಗರ ಖಡಕ್ ಉತ್ತರ..! ಅಷ್ಟಕ್ಕೂ ಈ ನೈತಿಕತೆ ಅದ್ಯಾರ ಸ್ವತ್ತು..?
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಗಳು, ಒದರಾಟಗಳ ಪರ್ವ ಶುರುವಾಗಿದೆ. ರೆಬೆಲ್ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಮುಗಿಬಿದ್ದಿರೋ ಬಿಜೆಪಿ ಪಾಳಯ, ರಾಜೀನಾಮೆ ಬೀಸಾಕುವಂತೆ ಕಂಡ ಕಂಡಲ್ಲಿ ಕಹಳೆ ಮೊಳಗಿಸಿದೆ. ಮೊನ್ನೆ ಜೂನ್ 11 ರಂದು ಮುಂಡಗೋಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಮುಂಡಗೋಡ ಮಂಡಳಕ್ಕೆ ಗುರುವಾರ, ಹೆಬ್ಬಾರ್ ಬೆಂಬಲಿಗರು ಠಕ್ಕರ್ ಕೊಟ್ಟಿದ್ದಾರೆ. ಪತ್ರಿಕಾಗೋಷ್ಟಿಯ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ನೈತಿಕತೆಯ ಪಾಠ ಮಾಡಿದ್ದಾರೆ. ಬಿಜೆಪಿ, ಪತ್ರಿಕಾಗೋಷ್ಠಿ ಮತ್ತು ಎಚ್ಚರಿಕೆ..! ಅಂದಹಾಗೆ, ಜೂನ್ 11 ರಂದು ಮುಂಡಗೋಡ ಬಿಜೆಪಿ ಮಂಡಳ ಅಧ್ಯಕ್ಷರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಒಂದು ವಾರದ ಗಡುವು ನೀಡಿ, ಒಂದುವೇಳೆ ರಾಜೀನಾಮೆ ನೀಡದೇ ಇದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ರು. ಹೀಗಾಗಿ, ಕೆರಳಿ ಕೆಂಡವಾಗಿರೋ ಹೆಬ್ಬಾರ ಪಡೆ, ಸ್ಥಳೀಯ ಬಿಜೆಪಿಗರ ವಿರುದ್ಧ ಮುಗಿ ಬಿದ್ದಿದೆ. ಅದ್ಯಾವ ನೈತಿಕತೆಯಿಂದ ರಾಜೀನಾಮೆ ಕೇಳ್ತಿರಿ ಅಂತಾ ವಾಗ್ದಾಳಿ ನಡೆಸಿದೆ....
ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೆಸ್ಟ್, ಕೊಲೆ ಕೇಸಲ್ಲಿ ಬಂಧಿಸಿದ ಪೊಲೀಸರು..!
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ ಆರಸ್ಟ್ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನರವರನ್ನ ಬಂಧಿಸಲಾಗಿದೆ. ಮೈಸೂರಿನಲ್ಲಿ ನಟ ದರ್ಶನರವರನ್ನು ಪೊಲೀಸರು ಬಂಧಿಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ಆರೆಸ್ಟ್ ಮಾಡಲಾಗಿದೆ ಅನ್ನೋ ಮಾಹಿತಿ ಬರ್ತಿದೆ.
ಅರಶಿಣಗೇರಿಯ ವ್ಯಕ್ತಿ, ಶಿಗ್ಗಾವಿ ತಾಲೂಕಿನ ಗದ್ದೆಯಲ್ಲಿ ಹೆಣವಾದ, ಈ ಸಾವಿನ ಸುತ್ತ ಅನುಮಾನದ ಹುತ್ತ..!
ಮುಂಡಗೋಡ: ಕೆಲಸಕ್ಕೆಂದು ಹೋಗಿದ್ದ ಅರಶಿಣಗೇರಿಯ ವ್ಯಕ್ತಿಯೋರ್ವ ಹೆಣವಾಗಿದ್ದಾನೆ. ಶಿಗ್ಗಾವಿ ತಾಲೂಕಿನ ಕುನ್ನೂರು ಬಳಿಯ ಮಮದಾಪುರ ತಾಂಡಾದ ಗದ್ದೆಯಲ್ಲಿ ಶವವಾಗಿದ್ದಾನೆ. ವಿದ್ಯುತ್ ಕಂಬ ಏರಿದ್ದವನಿಗೆ ವಿದ್ಯುತ್ ತಗುಲಿ ಸಾವಿಗೆ ಕಾರಣವಾಗಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಕುಟುಂಬಸ್ತರು ಈ ಸಾವಿನಲ್ಲಿ ಅನುಮಾನವಿದೆ ಅಂತಾ ಆರೋಪಿಸುತ್ತಿದ್ದಾರೆ. ಅಂದಹಾಗೆ, ಮೈಲಾರಗೌಡ ನಿಂಗನಗೌಡ ಪಾಟೀಲ್ (36), ಎಂಬುವವನೇ ಸಾವನ್ನಪ್ಪಿರೋ ವ್ಯಕ್ತಿಯಾಗಿದ್ದಾನೆ. ಈತ ನಿನ್ನೆ ಅಂದ್ರೆ ಬುಧವಾರ, ಅರಶಿಣಗೇರಿಯಿಂದ ಮಮದಾಪುರ ಬಳಿಯ ಗದ್ದೆಗೆ ಕೆಲಸಕ್ಕೆಂದು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಅದ್ಯಾವ ಕಾರಣಕ್ಕೊ ಏನೋ ವಿದ್ಯುತ್ ಕಂಬದ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಹೀಗಾಗಿ, ಈತನ ಸಾವಿನ ಬಗ್ಗೆ ಅರಶಿಣಗೇರಿಯ ವ್ಯಕ್ತಿಯ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 4 ನಂತರ ಜಿಪಂ, ತಾಪಂ ಚುನಾವಣೆ: ಸಿಎಂ ಸಿದ್ದರಾಮಯ್ಯ
ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ಪ್ರಕಟವಾದ ನಂತರ ಜಿಲ್ಲಾ ಪಂಚಾಯತ ಚುನಾವಣೆ ನಡೆಸುವಾದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ, ಬಿ ಬಿ ಎಮ್ ಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಕ್ಷೇತ್ರ ಪುನರವಿಂಗಡಣೆಯಾದ ಬಳಿಕ ಮೀಸಲಾತಿ ಪ್ರಕಟಿಸಲಾಗುವದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ ಪಲ್ಟಿ ನಾಲ್ವರು ಸ್ಥಳದಲ್ಲೇ ಸಾವು, 6 ಜನರಿಗೆ ಗಾಯ..!
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಭೀಕರ ಆಪಘಾತವಾಗಿದೆ, ಕಾರು ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದು ಬಿದ್ದ ಪರಿಣಾಮ, 4 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 6 ಜನರಿಗೆ ಗಾಯವಾಗಿದೆ. ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಹೋಗುತ್ತಿದ್ದಾಗ ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ಘಟನೆ ನಡೆದಿದ್ದು, ಎನ್ ಎಚ್ 4 ಪಿಬಿ ರಸ್ತೆಯಿಂದ ಕೆಳಗೆ ಸರ್ವಿಸ್ ರಸ್ತೆಗೆ ಕಾರ್ ಬಿದ್ದಿದೆ. ಘಟನೆಯಲ್ಲಿ, ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7), ಪವಿತ್ರಾ ಪ್ರಭುರಾಜ ಸಮಗಂಡಿ 28 ಸಾವು ಕಂಡಿದ್ದಾರೆ. ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ, ಗೀತಾ ಹೊನ್ನಪ್ಪ ಬಾರ್ಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ದಂಧೆ, ದೇಶಪಾಂಡೆ ನಗರದಲ್ಲಿ ಓರ್ವನನ್ನು ವಶಕ್ಕೆ ಪಡೆದ್ರಾ ಪೊಲೀಸ್ರು..?
ಮುಂಡಗೋಡಿನಲ್ಲಿ IPL ಬೆಟ್ಟಿಂಗ್ ಹಾವಳಿ ಜೋರಾಗಿದೆಯಾ..? ಸಂಜೆ ಮುಂಡಗೋಡ ಪೊಲೀಸರು ಪಟ್ಟಣದ ದೇಶಪಾಂಡೆ ನಗರದಲ್ಲಿ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಪೊಲೀಸರ ವಶದಲ್ಲಿರೋ ಆರೋಪಿಯಿಂದ ಎಷ್ಟು ಹಣ ವಶಕ್ಕೆ ಪಡೆಯಲಾಗಿದೆ..? ವಸ್ತುಗಳು ಏನೇನು..? ಎಲ್ಲ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಿದೆ. ಅಸಲು, ಈ ಕೇಸು ಪೊಲೀಸ್ ಠಾಣೆಯ ಟೇಬಲ್ಲಿನ ಮೇಲೆ ಖಡಕ್ಕಾದ ಪೈಲಾಗಿ ರೂಪಗೊಳ್ಳತ್ತೋ ಅಥವಾ ನಾಮಕೆವಾಸ್ತೆ ಚಕ್ಕಂಬಕ್ಕಳ ಹಾಕಿ ಕೂರೋ ವ್ಯವಸ್ಥೆನಾ ಕಾದು ನೋಡಬೇಕಿದೆ. ಗಣಪತಿ ಬಪ್ಪಾ ಮೊರಯಾ..!
ಇಸ್ಪೀಟು ಆಟದ ಅನುಮತಿಗೆ ಲಂಚ, ತಡಸ ಪೊಲೀಸ್ ಠಾಣೆ ಪಿಎಸ್ಐ ಲೋಕಾಯುಕ್ತ ಬಲೆಗೆ, ಜೊತೆಗೆ ಪೇದೆಯೂ ತಗಲಾಕ್ಕೊಂಡ..!
ಶಿಗ್ಗಾವಿ: ತಡಸಿನಲ್ಲಿ ಲೋಕಾಯುಕ್ತ ದಾಳಿಯಾಗಿದೆ. 2 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ತಡಸ ಪಿಎಸ್ ಐ ಹಾಗು ಪೇದೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡಾಗಿ ತಗಲಾಕೊಂಡಿದ್ದಾರೆ. ತಡಸ ಠಾಣೆ ಪಿಎಸ್ಐ ಶರಣ ಬಸಪ್ಪ, ಪೇದೆ ಸುರೇಶ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಂದಹಾಗೆ, ಗ್ಯಾಂಬಲಿಂಗ್ ಗೆ ಇಸ್ಪೀಟು ಆಟಕ್ಕೆ ಅನುಮತಿ ನೀಡಲು 2 ಲಕ್ಷ ರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಸ್ಪೀಟ್ ಆಡಿಸಲು, ಪ್ರಭಾಕರ ಎನ್ನುವವರಿಂದ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅದ್ರಲ್ಲಿ 2 ಲಕ್ಷ ರೂ ಲಂಚ ಪಡೆಯುವಾಗ ಬಲೆಗೆ ಕೆಡವಲಾಗಿದೆ.