ಕಾರವಾರ : ಮನೆಯಲ್ಲಿದ್ದ ಪತಿ ಹಾಗೂ ಪತ್ನಿಯ ಮೇಲೆ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಣಕೋಣ ಸಾಂತೇರಿ ದೇವಸ್ಥಾನದ ಸಮೀಪದ ಮನೆಯೊಂದರಲ್ಲಿ ನಡೆದಿದೆ. ಘಟನೆಯಲ್ಲಿ ವಿನಾಯಕ ನಾಯ್ಕ(58) ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ ಇನ್ನೂ ಆತನ ಪತ್ನಿ ವಿಶಾಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದಾಳೆ. ಇವರಿಬ್ಬರೂ ಪುಣೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇತ್ತಿಚೇಗೆ ಹಣಕೋಣದ ಸಾಂತೇರಿ ದೇವರ ಜಾತ್ರೆಗಾಗಿ ಊರಿಗೆ ಬಂದಿದ್ದು, ಕೆಲ ದಿನಗಳಿಂದ ಇಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗಿನ ಜಾವ 5ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ವಿನಾಯಕ ನಾಯ್ಕ ಮನೆಯ ಕೋಣೆಯಲ್ಲೇ ಪ್ರಾಣಬಿಟ್ಟಿದ್ದಾನೆ. ಇನ್ನೂ ಆತನ ಪತ್ನಿ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳಕ್ಕೆ ಚಿತ್ತಾಕುಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
Top Stories
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!
“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಭೀಕರ ದುರಂತ, ಟಿಪ್ಪರ್ ಅಡಿ ಸಿಲುಕಿ ಪಾದಾಚಾರಿಯ ದೇಹವೇ ಛಿದ್ರ, ಛಿದ್ರ..!
ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಕೊಲೆ ಕೇಸ್, ಪ್ರಮುಖ ಆರೋಪಿ ಪಿಂಟೂ ಸೇರಿ ನಾಲ್ವರ ಬಂಧನ..!
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಕಾನೂನು ಜಾರಿ, ಬಲವಂತದ ವಸೂಲಾತಿ, ಹಿಂಸೆ ನೀಡಿದ್ರೆ ಜಾಮೀನು ರಹಿತ ಕೇಸ್..!
ಉತ್ತರ ಕನ್ನಡದ ಹೆಮ್ಮೆ, ಹಾಡುಹಕ್ಕಿ, ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ..!
ಭೀಮಾತೀರದ ಡೆಡ್ಲಿ ಹಂತಕ ಬಾಗಪ್ಪ ಹರಿಜನ ಭೀಕರ ಹತ್ಯೆ| ಮನೆಯ ಬಳಿಯೇ ಕೊಚ್ಚಿ ಕೊಚ್ಚಿ ಕೊಂದ್ರು ಹಂತಕರು..!!
ಊಟ ಮಾಡಿ ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ರೂಲರ್.! ಇಬ್ಬರು ದಾರುಣ ಸಾವು
ಹಾವೇರಿ; ಊಟ ಮಾಡಿ ರಸ್ತೆಯ ಪಕ್ಕದಲ್ಲಿ ಮಲಗಿದವರ ಮೇಲೆ ರೋಡ್ ರೂಲರ್ ಹರಿದು ಇಬ್ಬರು ಕಾರ್ಮಿಕರ ಸಾವು ಕಂಡ ದಾರುಣ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನಲ್ಲಿ ನಡೆದಿದೆ. ಸಿದ್ದು(24), ಪ್ರೀತಮ್ ( 25) ರೂಲರ್ ಅಡಿಗೆ ಸಿಲುಕಿ ಸಾವು ಕಂಡ ದುರ್ಧೈವಿಗಳು. ಮೊಟೇಬೆನ್ನೂರಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು, ಮಾಧ್ಯಾಹ್ನದ ವೇಳೆ ಊಟ ಮಾಡಿ ರೂಲರ್ ಪಕ್ಕದಲ್ಲಿ ಮಲಗಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇಂದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಫಕ್ಕಿರೇಶ್ ತಾವರಗೇರಿ ಅವಿರೋಧ ಆಯ್ಕೆ..!
ಮುಂಡಗೋಡ ತಾಲೂಕಿನ ಇಂದೂರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಫಕ್ಕಿರೇಶ್ ತಾವರಗೇರಿ ಆಯ್ಕೆಯಾಗಿದ್ದಾರೆ. ಅಸಲು, ಫಕ್ಕಿರೇಶ್ ತಾವರಗೇರಿ ಅವಿರೋಧ ಆಯ್ಕೆ ಆಗಿರೋದು ವಿಶೇಷ. ಶಶಿಧರ್ ಪರವಾಪುರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಂದಹಾಗೆ, 16 ಸದಸ್ಯ ಬಲದ ಇಂದೂರು ಗ್ರಾಮ ಪಂಚಾಯತಿಯಲ್ಲಿ ನಾಲ್ಕನೇ ಅವಧಿಗೆ ಫಕ್ಕಿರೇಶ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗ್ತಿದಾರೆ. ವಿಚಿತ್ರ ಅಂದ್ರೆ ಈ ಹಿಂದೆ ಇದೇ ಗ್ರಾಮ ಪಂಚಾಯತಿಯಲ್ಲಿ ಪ್ರಾಬಲ್ಯ ಹೊಂದಿದ್ದ ಬಿಜೆಪಿ ಬೆಂಬಲಿತರು ಕೇವಲ ನಾಲ್ಕೇ ಸದಸ್ಯ ಬಲಕ್ಕೆ ಕುಸಿದಿದ್ದು, ಅಧ್ಯಕ್ಷ ಚುನಾವಣೆಯಲ್ಲಿ ನಾಮಪತ್ರ ಕೂಡ ಸಲ್ಲಿಸಿಲ್ಲ. ಹೀಗಾಗಿ, ಫಕ್ಕಿರೇಶ್ ತಾವರಗೇರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ನಿರಂತರ ಮಳೆ: ಕಲಕೇರಿಯಲ್ಲಿ ಮನೆ ಗೋಡೆ ಕುಸಿದು ಬಿದ್ದು ಮಹಿಳೆಗೆ ಗಾಯ..!ಕಿಮ್ಸ್ ಗೆ ರವಾನೆ.!
ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ತಾಲೂಕಿನ ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ.. ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದ ಅಟೆಲ್ ಸಾಬ್ ಅತ್ತಾರ್ ಎಂಬುವವರಿಗೆ ಸೇರಿದ ಮನೆಯ ಗೋಡೆ ನಿರಂತರ ಮಳೆಯ ಕಾರಣಕ್ಕೆ ಕುಸಿದು ಬಿದ್ದಿದೆ. ಪರಿಣಾಮ ಪಕ್ಕದ ಮನೆಯ ಸಾತವ್ವ ಭೀಮಣ್ಣ ಬೆಂಗಳೂರ (50) ಎಂಬುವ ಮಹಿಳೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಸದ್ಯ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಯ ಕಿಮ್ಸ್ ಗೆ ರವಾನಿಸಲಾಗಿದೆ. ಕಂದಾಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಶಿಧರ್.!
ಮುಂಡಗೋಡ ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಶಶಿಧರ್ ಪರವಾಪುರ ರಾಜೀನಾಮೆ ನೀಡಿದ್ದಾರೆ. ಶಿರಸಿ ಉಪವಿಭಾಗಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರೋ ಶಶಿಧರ್ ಮುಂದಿನ 15 ತಿಂಗಳ ಅವಧಿಗೆ ನೂತನ ಅಧ್ಯಕ್ಷರನ್ನು ನೇಮಿಸುವ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದಹಾಗೆ, ಕಳೆದ ಒಂದು ವರ್ಷದಿಂದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಶಿಧರ್ ಕಾರ್ಯನಿರ್ವಹಿಸಿದ್ದರು. ಒಳಗಿನ ಒಪ್ಪಂದದಂತೆ, ಒಂದು ವರ್ಷದ ನಂತರ ಅಧಿಕಾರ ಬಿಟ್ಟುಕೊಡುವ ಮಾತಾಗಿತ್ತು. ಹೀಗಾಗಿ, ಒಂದು ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಈ ವೇಳೆ, ಉಪಾಧ್ಯಕ್ಷ ಕಸ್ತೂರಿ ಹರಿಜನ, ಸದಸ್ಯರ ಕಲ್ಲಪ್ಪ ಸುಣಗಾರ್, ಫಕ್ಕಿರೇಶ್ ತಾವರಗೇರಿ, ರೇಣುಕಾ ಕುರಿ, ಪ್ರಭಾವತಿ ಇಂಗಳೆ ಮುಖಂಡರಾದ ಬಸವರಾಜ್ ಹೊಂಡದಕಟ್ಟಿ, ಅಂದಾನಿ ಸೂರಣ್ಣವರ್, ಮಲ್ಲಿಕಾರ್ಜುನ ಸುಣಗಾರ ಸೇರಿದಂತೆ ಹಲವರು ಹಾಜರಿದ್ದರು.
ಮುಂಡಗೋಡ ಸಂತೆ ಮಾರುಕಟ್ಟೆ ಬಳಿ ಶ್ರೀಗಂಧದ ಮರ ಕಳ್ಳತನಕ್ಕೆ ವಿಫಲ ಯತ್ನ..!
ಮುಂಡಗೋಡ ಪಟ್ಟಣದ ಸಂತೆ ಮಾರುಕಟ್ಟೆ ಹತ್ತಿರ ಶ್ರೀಗಂಧ ಮರ ಕಳ್ಳತನ ವಿಫಲ ಯತ್ನ ನಡೆದಿದೆ. ಎಸ್.ನಾರಾಯಣರಾವ್ ಎಂಬುವವರ ಮನೆ ಆವರಣದಲ್ಲಿ ಘಟನೆ ನಡೆದಿದ್ದು ಮರ ಕಡಿದು ಸಾಗಿಸಲಾಗದೇ ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ. ಅಂದಹಾಗೆ, ಇದೇ ಸ್ಥಳದಲ್ಲಿ ಈ ಹಿಂದೆಯೂ ಶ್ರೀಗಂಧದ ಮರಗಳ ಕಳ್ಳತನದ ವಿಫಲ ಯತ್ನಗಳು ನಡೆದಿತ್ತು. ಆದ್ರೆ, ಇವತ್ತು ನಡೆದಿರೋ ಘಟನೆ ಖಚಿತತೆಯಿಂದಲೇ ಕಳ್ಳರು ಬಂದು, ಇನ್ನೇನು ಸಾಗಿಸುವ ಹಂತದಲ್ಲಿ ಅರ್ದಕ್ಕೆ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತದೇ ಪ್ರಕರಣ ದಾಖಲಿಸಿಕೊಂಡು ಮುಂದಿನ “ಕಠಿಣ” ಕ್ರಮಕ್ಕೆ ಮುಂದಾಗಿದ್ದಾರೆ.
ಕಿರೇಸೂರ್ ಸಮೀಪ ಲಾರಿ ಕಾರ್ ಡಿಕ್ಕಿ ; ಒಂದೇ ಕುಟುಂಬದ ಮೂವರು ಸಾವು..!
ಹುಬ್ಬಳ್ಳಿ,: ತಾಲೂಕಿನ ಕಿರೆಸೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳಾದ ಜಾಫರ್ಸಾಬ್ (60), ಮೊಹ್ಮದ್ ಮುಸ್ತಫಾ (36), ಶೋಹೆಬ್ (6) ಮೃತ ದುರ್ದೈವಿಗಳು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಜಾಪರಸಾಬ್ ಓಮಿನ್ ಕಾರ್ನಲ್ಲಿ ಕುಟುಂಬದವರ ಜೊತೆ ಪಾರ್ಶವಾಯು ಔಷಧಿ ತರಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾ ಗ್ರಾಮದಲ್ಲಿನ ಸೇಂಟ್ ಮೇರಿ ಆಸ್ಪತ್ರೆಗೆ ಹೋಗಿದ್ದರು. ಔಷಧಿ ಪಡೆದು ಮರಳಿ ಊರಿಗೆ ಹೋಗುತ್ತಿದ್ದ ವೇಳೆ ರಾತ್ರಿ 10 ಗಂಟೆ ಸಮಾರಿಗೆ ಲಾರಿ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವೇಶ್ಯಾವಾಟಿಕೆ ಮಾಡಿಸುವವರಿಂದಲೂ, ಬಡ್ಡಿ ದಂಧೆಕೋರರಿಂದಲೂ ಪೊಲೀಸರು ಹಣ ವಸೂಲಿ ಮಾಡ್ತಾರೆ: ಶಾಸಕ ಬೆಲ್ಲದ
ಧಾರವಾಡ: ಹಣ ಕೊಟ್ಟು ವರ್ಗಾವಣೆ ಮಾಡಿಕೊಂಡು ಬಂದ ಪೊಲೀಸ್ ಅಧಿಕಾರಿಗಳು ಕಳ್ಳ, ಕಾಕರಿಂದ, ಬಡ್ಡಿ ದಂಧೆಕೋರರಿಂದ ಹಾಗೂ ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಪರಾಧ ಕೃತ್ಯಗಳು ಆಗಲು ಎರಡು ಕಾರಣಗಳಿವೆ. ಒಬ್ಬರು ಹುಟ್ಟುತ್ತಲೇ ಕ್ರೈಂ ಮಾಡಿಕೊಂಡು ಬಂದವರು ಮತ್ತೊಬ್ಬರು ಬಡ್ಡಿ ದಂಧೆಕೋರರಿಂದ ಕ್ರೈಂಗಳು ಆಗುತ್ತಿವೆ. ಬಡ್ಡಿ ದಂಧೆ ಮಾಡುವವರು ಫೈನಾನ್ಸ್ ಕಂಪೆನಿಯಿಂದ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಫೈನಾನ್ಸ್ ಕಂಪೆನಿಗಳು ಸರ್ಕಾರದಿಂದ ಇಂತಿಷ್ಟೆ ಬಡ್ಡಿ ವಸೂಲಿ ಮಾಡಬೇಕು ಎಂಬ ನಿಯಮ ಹೇರುತ್ತದೆ. ಆದರೆ, ಅವಳಿನಗರದಲ್ಲಿ ಕಾನೂನು ಬಾಹಿರ ಬಡ್ಡಿ ದಂಧೆ ನಡೆಯುತ್ತಿದೆ ಎಂದರು. ಪೊಲೀಸರು ಕೂಡ ಬಡ್ಡಿ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ. ದಂಧೆಕೋರರು ಬಡ್ಡಿ, ಚಕ್ರಬಡ್ಡಿ ಸಹಿತ ಸುಲಿಗೆ ಮಾಡುತ್ತಿದ್ದಾರೆ. ಸಾಲ ಕೊಟ್ಟವರು ಸಾಲ ವಸೂಲಿ ಮಾಡಲು ಅಟ್ಯಾಕ್ ಮಾಡುವ ಕೆಲಸಕ್ಕೆ ಇಳಿಯುತ್ತಾರೆ. ಡ್ರಗ್ಸ್ ಸೇವಿಸಿ ಕೊಲೆ, ಸುಲಿಗೆ ಮಾಡಲು ಇಳಿಯುತ್ತಿದ್ದಾರೆ ಎಂದರು. ಪೊಲೀಸ್...
ಮೀಟರ್ ಬಡ್ಡಿ ಮಾಫಿಯಾಗೆ ಬಲೆ ಬೀಸಿದ ಪೊಲೀಸ್ರು, 25 ಬಡ್ಡಿ ದಂಧೆಕೋರರ ಬಂಧನ..!
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ಭರ್ಜರಿ ಯುದ್ಧ ಸಾರಿದ್ದಾರೆ. ಪರಿಣಾಮ 25 ಮೀಟರ್ ಬಡ್ಡಿ ದಂಧೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ. ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಮೀಟರ್ ಬಡ್ಡಿ ಹಾವಳಿಯ ಬಗ್ಗೆ ನೋವು ತೋಡಿಕೊಂಡಿದ್ದರಲ್ಲದೇ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಪತ್ತೆಗೆ ಮುಂದಾಗಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ 7 ಪ್ರಕರಣ ದಾಖಲಿಸಿ 25 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧಾರವಾಡದ ಉಪನಗರ ಠಾಣೆ-2, ಶಹರ ಠಾಣೆ-2, ಪ್ರಕರಣ ವಿದ್ಯಾನಗರ ಠಾಣೆ-2 ಹಾಗೂ ಹುಬ್ಬಳ್ಳಿ ಬೆಂಡಿಗೇರಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿವೆ. ಬಂಧಿತರಿಂದ 10 ದ್ವಿಚಕ್ರ ವಾಹನಗಳು, 10 ಮೊಬೈಲ್, ಹರಿತವಾದ ಆಯುಧ, ಮೀಟರ್ ಬಡ್ಡಿ ದಂಧೆಯ ವಿವರ ನಮೂದಿಸಿದ ದಾಖಲೆಗಳು, ಬಾಂಡ್ ಗಳನ್ನು ಜಪ್ತು ಮಾಡಲಾಗಿದೆ...
ಕಾತೂರು ಅರಣ್ಯ ವಲಯದ RFO ಮಂಜುನಾಥ್ ನಾಯ್ಕ್ ಎತ್ತಂಗಡಿ, ವೀರೇಶ್ ಈಗ ನೂತನ RFO..!
ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ವಲಯದ RFO ಮಂಜುನಾಥ್ ನಾಯ್ಕ್ ರನ್ನು ವರ್ಗಾವಣೆ ಮಾಡಲಾಗಿದೆ. ಯಲ್ಲಾಪುರದ ಇಡಗುಂದಿ ಅರಣ್ಯ ವಲಯಕ್ಕೆ ನಿಯುಕ್ತಿ ಮಾಡಲಾಗಿದ್ದು ಇವ್ರ ಜಾಗಕ್ಕೆ ಅಂದ್ರೆ ಕಾತೂರು ಅರಣ್ಯ ವಲಯಕ್ಕೆ ವೀರೇಶ್ ಎಂಬುವವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.