Home ಹುಬ್ಬಳ್ಳಿ ಧಾರವಾಡ

Category: ಹುಬ್ಬಳ್ಳಿ ಧಾರವಾಡ

Post
ಗುಟ್ಕಾ ಕೊಡಿಸಲಿಲ್ಲ ಅಂತಾ ಕೊ‌ಂದೇ ಬಿಟ್ಟ ಗೆಳೆಯ, ಹುಬ್ಬಳ್ಳಿಯಲ್ಲಿ 5 ರೂ. ಗುಟ್ಕಾಗಾಗಿ ಮರ್ಡರ್..!

ಗುಟ್ಕಾ ಕೊಡಿಸಲಿಲ್ಲ ಅಂತಾ ಕೊ‌ಂದೇ ಬಿಟ್ಟ ಗೆಳೆಯ, ಹುಬ್ಬಳ್ಳಿಯಲ್ಲಿ 5 ರೂ. ಗುಟ್ಕಾಗಾಗಿ ಮರ್ಡರ್..!

ಹುಬ್ಬಳ್ಳಿ: ಆನಂದ ನಗರದಲ್ಲಿ ಗುಟ್ಕಾ ಕೊಡಿಸಲಿಲ್ಲ ಅಂತಾ ರೌಡಿಶೀಟರ್ ಒಬ್ಬ ಅಮಾಯಕ ವ್ಯಕ್ತಿಗೇ ಚಾಕು ಇರಿದು ಕೊಲೆ ಮಾಡಿದ್ದಾನೆ. ಆನಂದ ನಗರದ ಮೆಹಬೂಬ್ ಕಳಸ ಹಾಗೂ ಕೊಲೆ ಮಾಡಿ ಪರಾರಿಯಾಗಿರುವ ಗೌಸ್ ಎಂಬಾತ ಪರಸ್ಪರ ಪರಿಚಯಸ್ಥರು, ನಿನ್ನೆ ಕೂಡಾ ಇಬ್ಬರು ಮಂಜುನಾಥ ನಗರದ ಬಳಿ ಇರುವ ಕೊಡೆ ಬಾರ್ ನಲ್ಲಿ ಎಣ್ಣೆ ಹೊಡೆದಿದ್ದಾರೆ. ಬಾರ್ ನಿಂದ ಹೊರಬಂದ ನಂತರ ಗೌಸ್, ಮೆಹಬೂಬ್ ಗೇ ವಿಮಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾನೆ, ಆದ್ರೆ ಮೆಹಬೂಬ್ ವಿಮಲ್ ಕೊಡಿಸಲು ಹಿಂದೇಟು ಹಾಕಿದಾಗ,...

Post
ಭೀಕರ ರಸ್ತೆ ಅಪಘಾತ 8 ಜನರ ದುರ್ಮರಣ, 25 ಕ್ಕೂ ಹೆಚ್ಚು ಜನ್ರಿಗೆ ಗಾಯ, ಹಲವರ ಸ್ಥಿತಿ ಚಿಂತಾಜನಕ..!

ಭೀಕರ ರಸ್ತೆ ಅಪಘಾತ 8 ಜನರ ದುರ್ಮರಣ, 25 ಕ್ಕೂ ಹೆಚ್ಚು ಜನ್ರಿಗೆ ಗಾಯ, ಹಲವರ ಸ್ಥಿತಿ ಚಿಂತಾಜನಕ..!

ಹುಬ್ಬಳ್ಳಿ; ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆ ಸಾವಿನ ಹೆದ್ದಾರಿ ಎಂದು ಬಿಂಬಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯೂ ಆಗಿರೋ ಇಲ್ಲಿ, ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತೆ. ಈ ಹಿನ್ನೆಲೆಯಲ್ಲಿ ಇದನ್ನು ದಶ ಪಥ ರಸ್ತೆಯನ್ನಾಗಿಸೋಕೆ ಶಿಲನ್ಯಾಸ ನೆರವೇರಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ಇದೇ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲಾರಿಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಂಟು ಜನ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿದೆ. ಖಾಸಗಿ ಬಸ್ ಮತ್ತು...

Post
ಅನೈತಿಕ ಸಂಬಂಧಕ್ಕೆ ಅಡ್ಡಿ ಅಂತಾ ತಮ್ಮನನ್ನೇ ಕೊಂದ್ಲಾ ಪಾಪಿ ಅಕ್ಕ..? ನೂಲ್ವಿ ಗ್ರಾಮದಲ್ಲೊಂದು ಅಮಾನವೀಯ ಘಟನೆ..!!

ಅನೈತಿಕ ಸಂಬಂಧಕ್ಕೆ ಅಡ್ಡಿ ಅಂತಾ ತಮ್ಮನನ್ನೇ ಕೊಂದ್ಲಾ ಪಾಪಿ ಅಕ್ಕ..? ನೂಲ್ವಿ ಗ್ರಾಮದಲ್ಲೊಂದು ಅಮಾನವೀಯ ಘಟನೆ..!!

ಹುಬ್ಬಳ್ಳಿ: ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು 24 ಗಂಟೆಯಲ್ಲಿ ಬೇಧಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಸಹೋದರಿಯೇ ತನ್ನ ಪ್ರಿಯಕರನ ಜೊತೆ ಸೇರಿ ತಮ್ಮನನ್ನು ಕೊಲೆ ಮಾಡಿರುವುದು ಬಹಿರಂಗವಾಗಿದೆ. ಕಳೆದ ಎರಡು ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲೇ ಕೊಲೆ ಮಾಡಿದ...

Post
ಪೆಟ್ರೊಲ್ ಹಾಕಿಸಿಕೊಳ್ಳುವಾಗ ಬೈಕ್ ಗೆ ತಗುಲಿದ ಬೆಂಕಿ, ಬಂಕ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬಚಾವ್..!

ಪೆಟ್ರೊಲ್ ಹಾಕಿಸಿಕೊಳ್ಳುವಾಗ ಬೈಕ್ ಗೆ ತಗುಲಿದ ಬೆಂಕಿ, ಬಂಕ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬಚಾವ್..!

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ ಅವಘಡವಾಗಿದೆ. ಪೆಟ್ರೋಲ್ ಹಾಕಿಸಿಕೊಳ್ಳುವಾಗಲೇ ಬೈಕ್ ಗೆ ತಗುಲಿದ ಬೆಂಕಿಯಿಂದ, ಪೆಟ್ರೊಲ್ ಬಂಕ್ ನಲ್ಲಿ ಬೆಂಕಿ ಆವರಿಸಿಕೊಂಡಿದೆ. ಬೈಕ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಬಂಕ್ ನ ಸಿಬ್ಬಂದಿಗಳು ಸಮಯಪ್ರಜ್ಞೆಯಿಂದ ಬೆಂಕಿ ನಂದಿಸಿದ್ದಾರೆ. ಇದ್ರಿಂದ ಭಾರೀ ಬೆಂಕಿ ದುರಂತ ಅದೃಷ್ಟವಶಾತ್ ತಪ್ಪಿದೆ. ಘಟನೆಯ ಸಂಪೂರತಣ ದೃಷ್ಯ ಸಿಸಿಟಿಯಲ್ಲಿ ಸೆರೆಯಾಗಿದೆ‌‌.

Post
ಅಯ್ಯೋ ಕರ್ಮವೇ, ಎಂಥಾ ಕಾಲ ಬಂತಪ್ಪಾ..? ಪೊಲೀಸರೇ ಇಲ್ಲಿ ಗಾಂಜಾ ವ್ಯಾಪಾರಿಗಳಂತೆ..!

ಅಯ್ಯೋ ಕರ್ಮವೇ, ಎಂಥಾ ಕಾಲ ಬಂತಪ್ಪಾ..? ಪೊಲೀಸರೇ ಇಲ್ಲಿ ಗಾಂಜಾ ವ್ಯಾಪಾರಿಗಳಂತೆ..!

ಹುಬ್ಬಳ್ಳಿ: ಇದು ಅಕ್ಷರಶಃ ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಾನೂನನ್ನು ರಕ್ಷಣೆ ಮಾಡಬೇಕಿದ್ದವರೆ ಇಲ್ಲಿ ಕಾನೂನನ್ನೇ ಮರೆತಂತೆ ಕಾಣುತ್ತೆ.. ಗಾಂಜಾ ಗಮ್ಮತ್ತು ಇದೀಗ ಎಲ್ಲೆಡೆ ಜೋರಾಗಿದ್ದು ಅದನ್ನ ತಡೆಹಿಡಿಯಬೇಕಾದವರೆ ಇದೀಗ ಅವರೇ ಮಾರಾಟ ಮಾಡಿ ತಗಲಾಕ್ಕೊಂಡಿದಾರೆ. ಸಸ್ಪೆಂಡ್ ಆಗಿ ಆಗಿದ್ದಾರೆ. ವಾಣಿಜ್ಯ ನಗರಿ, ಛೋಟಾ ಮುಂಬೈ ಅಂತೆಲ್ಲ ಕರೆಸಿಕೊಳ್ಳುವ ಹುಬ್ಬಳ್ಳಿ, ಇದೀಗ ಗಾಂಜಾ ನಗರಿಯಾಗುವತ್ತ ಸಾಗುತ್ತಿದೆ.. ವಿದ್ಯಾರ್ಥಿಗಳು, ಯುವಕರ ಗುಂಪು ಸದ್ದಿಲ್ಲದೆ ಗಾಂಜಾ ಗಮ್ಮತ್ತಿಗೆ ಒಳಗಾಗುತ್ತಿದ್ದಾರೆ.. ಇದಕ್ಕೆ ಕಡಿವಾಣ ಹಾಕಬೇಕು. ಯುವಕರನ್ನು ಸರಿದಾರಿಗೆ ತರಬೇಕಾದ ಖಾಕಿಯೇ...

Post
ಸೈಕ್ಲಿಂಗ್ ಮಾಡುವಾಗಲೇ ಸಾವನ್ನಪ್ಪಿದ ಸೈಕ್ಲಿಸ್ಟ್..!

ಸೈಕ್ಲಿಂಗ್ ಮಾಡುವಾಗಲೇ ಸಾವನ್ನಪ್ಪಿದ ಸೈಕ್ಲಿಸ್ಟ್..!

ಹುಬ್ಬಳ್ಳಿಯ ಸೈಕ್ಲಿಸ್ಟ್ ಒಬ್ಬರು ಸೈಕ್ಲಿಂಗ್ ಮಾಡುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಿಗ್ಗಾಂವ ಸಮೀಪ ನಡೆದಿದೆ. ಬಸವಗೌಡ ಶಂಕರಗೌಡ ಶಿವಳ್ಳಿ (35) ಮೃತರಾಗಿದ್ದು, ಬಿವ್ಹಿಬಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಅಲ್ಲದೇ ಹಲವಾರು ವರ್ಷಗಳಿಂದ ಸೈಕ್ಲಿಸ್ಟ್ ಆಗಿದ್ದು, ವಿವಿಧ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಇಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಯೋಜಿಸಿದ್ದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಶಿಗ್ಗಾಂವ ಬಳಿ ಏಕಾಏಕಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ******************* ಜಾಹೀರಾತು

Post
ಕಲಘಟಗಿಯಲ್ಲಿ 2 ಕಿಮೀ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ, ಸಂತೋಷ ಲಾಡ್ ನೇತೃತ್ವ..!

ಕಲಘಟಗಿಯಲ್ಲಿ 2 ಕಿಮೀ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ, ಸಂತೋಷ ಲಾಡ್ ನೇತೃತ್ವ..!

ಕಲಘಟಗಿ: ಕೋವಿಡ್ ಆತಂಕದ ನಡುವೆಯೇ ಕಲಘಟಗಿಯಲ್ಲಿ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ 2 ಕಿಮೀ ಉದ್ದದ 9 ಅಡಿ ಅಗಲ ಇರುವ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು. ಮೆರವಣಿಗೆ ವೇಳೆ ಸಾವಿರಾರು ಜನರಿಂದ ರಾಷ್ಟ್ರಭಕ್ತಿಯ ಘೋಷಣೆಗಳು ಮೊಳಗಿದವು. ದೇಶಭಕ್ತಿಯ ಗೀತೆಗಳ ಮೂಲಕ, ಘೋಷಣೆ ಗಳ ಮೂಲಕ ವಿಶೇಷ ರಾಷ್ಟ್ರಧ್ವಜದ ಮೆರವಣಿಗೆ ನಡೆಸಲಾಯಿತು.

Post
ಬೈಕ್ ಅಪಘಾತ: ಕುಬಿಹಾಳ ಗ್ರಾಮ ಪಂಚಾಯತ ಪಿಡಿಓ ಸಾವು..!

ಬೈಕ್ ಅಪಘಾತ: ಕುಬಿಹಾಳ ಗ್ರಾಮ ಪಂಚಾಯತ ಪಿಡಿಓ ಸಾವು..!

ಹುಬ್ಬಳ್ಳಿ: ಬೈಕ್ – ಕಾರ್ ನಡುವೆ ಮುಖಾ-ಮುಖಿಯಾಗಿ ಪಿಡಿಓ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರೂರ ಬ್ರಿಡ್ಜ್ ಬಳಿ ನಡೆದಿದೆ. ಕುಂದಗೋಳ ತಾಲೂಕಿನ ಸಂಶಿ ನಿವಾಸಿಯಾದ ಪ್ರಭುಗೌಡ ಬಸನಗೌಡ ತೇಂಬದಮನಿ ಮೃತ ಪಿಡಿಓ ಆಗಿದ್ದಾರೆ. ಕುಬಿಹಾಳ ಗ್ರಾಮ ಪಂಚಾಯತಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಇವತ್ತು ಸಂಜೆ ಕೆಲಸ ಮುಗಿಸಿ ಊರ‌ ಕಡೆ ಹೋಗುವಾಗ ಎದುರಿಗೆ ಬಂದ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಎಸ್ ಡಿ ಎಂ ಆಸ್ಪತ್ರೆಗೆ ಸಾಗಿಸುವ ಮಧ್ಯೆ...

Post
ಟೂರ್ ಪ್ಲಾನ್ ಬದಲು, ನೇರವಾಗಿ ಉತ್ತರ ಕನ್ನಡಕ್ಕೆ ಬರಬೇಕಿದ್ದ ಸಿಎಂ ಹೋಗಿದ್ದೇಲ್ಲಿಗೆ..?

ಟೂರ್ ಪ್ಲಾನ್ ಬದಲು, ನೇರವಾಗಿ ಉತ್ತರ ಕನ್ನಡಕ್ಕೆ ಬರಬೇಕಿದ್ದ ಸಿಎಂ ಹೋಗಿದ್ದೇಲ್ಲಿಗೆ..?

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿಗೆ ನೂತನ ಸಿಎಂ ಆಗಮನವಾಗಿದ್ದು ಹುಬ್ಬಳ್ಳಿಯ ಭೇಟಿಗಾಗಿ ಬೊಮ್ಮಾಯಿ ಟೂರ್ ಪ್ಲಾನ್ ಬದಲಾಯಿಸಿದ್ದಾರೆ. ಬೆಂಗಳೂರಿನಿಂದ ನೇರವಾಗಿ ಉತ್ತರ ಕನ್ನಡ ಜಿಲ್ಲೆಗೆ ತೆರಳಬೇಕಿದ್ದ ಸಿಎಂ, ಹುಬ್ಬಳ್ಳಿಗೆ ಅಗಮಿಸುತ್ತಿದ್ದಂತೆಯೇ ಟೂರ್ ಪ್ಲಾನ್ ಬಹುತೇಕ ಬದಲಾಗಿದೆ. ಹುಬ್ಬಳ್ಳಿಯ ಕೇಶಕುಂಜ ಸೇರಿದಂತೆ, ಬೊಮ್ಮಾಯಿ ತಂದೆ ದಿ.S R ಪಾಟೀಲ ಸಮಾಧಿಗೆ ಭೇಟಿ ನೀಡಿದ ಸಿಎಂ, ಅಲ್ಲಿಂದ ನೇರವಾಗಿ ನಗರದಲ್ಲಿರೋ ರಂಭಾಪುರಿ ಮಠಕ್ಕೆ ಭೇಟಿ ನೀಡಿ...

Post
ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ದುರ್ಮರಣ.!

ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ದುರ್ಮರಣ.!

ಹುಬ್ಬಳ್ಳಿ: ಲಾರಿ ಹಾಗೂ ಆಟೋ ಮದ್ಯೆ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ, ಹುಬ್ಬಳ್ಳಿಯ ಹೊರಹೊಲಯದ ಗಬ್ಬೂರು ಬೈಪಾಸ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ವರೂರಿಗೆ ಹೊರಟಿದ್ದ ಆಟೋಗೆ, ಎದುರಿನಿಂದ ಬಂದ ಲಾರಿಯಿಂದ ಡಿಕ್ಕಿಯಾಗಿದೆ. ಹೀಗಾಗಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆದ್ರೆ, ಸಾವಿಗೀಡಾದ ವ್ಯಕ್ತಿಗಳ ಗುರುತು ಇನ್ನು ಪತ್ತೆಯಾಗಿಲ್ಲ. ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!