Education news:
ಕಾರವಾರ: 2025-26 ನೇ ಸಾಲಿನಲ್ಲಿ 2 ವರ್ಷಗಳ ಐ.ಟಿ.ಐ/ ದ್ವಿತೀಯ ಪಿಯುಸಿ (ವಿಜ್ಞಾನ) ದ್ವಿತೀಯ ಪಿ.ಯು.ಸಿ (ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾತಂರ 2 ನೇ ವರ್ಷ/ 3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ಆಫ್ ಲೈನ್ ಮೂಲಕ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಅರ್ಜಿಯನ್ನು ಸರ್ಕಾರಿ ಪಾಲಿಟೆಕ್ನಿಕ್, ಕಾರವಾರ ಸಂಸ್ಥೆಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸಂಸ್ಥೆಗೆ ಜೂ.14 ರೊಳಗಾಗಿ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳ ಝೇರಾಕ್ಸ್ ಪ್ರತಿಯೊಂದಿಗೆ ಸಲ್ಲಿಸತಕ್ಕದ್ದು. ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಜೂ.16 ರಂದು ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.

ಇದನ್ನೂ ಓದಿ👉  ಶಿಗ್ಗಾವಿ: ಬಾಡ ಗ್ರಾಪಂ PDO ಕಚೇರಿ ಮತ್ತು ಮನೆಯ ಮೇಲೆ ಲೋಕಾ ದಾಳಿ..!

ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತು ನಿಗದಿತ ಶುಲ್ಕದೊಂದಿಗೆ ಜೂ.17 ಮತ್ತು 18 ರೊಳಗಾಗಿ ಪ್ರವೇಶ ಪಡೆಯತಕ್ಕದ್ದು.
ಸೀಟುಗಳು ಭರ್ತಿಯಾಗದೇ ಉಳಿಕೆಯಾಗಿದಲ್ಲಿ ಪ್ರಾಂಶುಪಾಲರ ಹಂತದಲ್ಲಿಯೇ ಅಂತಹ ಸೀಟುಗಳನ್ನು ಆಫ್‌ಲೈನ್ ಮೂಲಕ ಜೂ.19 ರಿಂದ 25 ರೊಳಗಾಗಿ ಹಂಚಿಕೆ ಮಾಡಲಾಗುವುದು.

ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಅರ್ಜಿ ಮತ್ತು ದಾಖಲಾತಿಗಳನ್ನು ಸಲ್ಲಿಸುವ ವಿಧಾನ ಮತ್ತು ಸಂಬAಧಿಸಿದ ಶುಲ್ಕ, ಲಗತ್ತಿಸಬೇಕಾದ ದಾಖಲೆಗಳು ಇತ್ಯಾದಿ ವಿವಿರಗಳನ್ನು ಸಂಸ್ಥೆಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ. ಅಥವಾ ಸಂಸ್ಥೆಯ ಪ್ರಿನ್ಸಿಪಾಲರ ದೂರವಾಣಿ ಸಂಖ್ಯೆ: 9448995682 ಹಾಗೂ ಕಚೇರಿಯ ದೂರವಾಣಿ ಸಂಖ್ಯೆ: 08382-226343 ಗಳಿಗೆ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ👉 ಇದು ಸನ್ಮಾನ್ಯ “PP ರಮೇಶಣ್ಣ”ನ ರಂಬಾ(ಪಾ) ರಾಡಿ..! ಆ ಪಪಂ ದಿನಗೂಲಿ ನೌಕರ ಇಷ್ಟೆಲ್ಲಾ ಮಾಡಿದ್ನಾ..?

ಪ್ರವೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್‌ಗಳಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧೀಕೃತ dtetech.karnataka.gov.in/kartechnical or dtek.karnataka.gov.in ವೆಬ್‌ಸೈಟ್ನ್ನು ಸಂಪರ್ಕಿಸುವAತೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಿನ್ಸಿಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!